logo
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿಯ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವಾಗ ಈ ಪೂಜಾ ಸಾಮಗ್ರಿಗಳನ್ನು ಮರೆಯದೇ ತೆಗೆದುಕೊಂಡು ಹೋಗಿ

ನವರಾತ್ರಿಯ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವಾಗ ಈ ಪೂಜಾ ಸಾಮಗ್ರಿಗಳನ್ನು ಮರೆಯದೇ ತೆಗೆದುಕೊಂಡು ಹೋಗಿ

Suma Gaonkar HT Kannada

Oct 03, 2024 02:01 PM IST

google News

ಪೂಜಾಸಾಮಗ್ರಿಗಳಲ್ಲಿ ಮುಖ್ಯವಾಗಿ ಏನೇನಿರಬೇಕು

    • ನೀವು ನವರಾತ್ರಿಗೆ ದೇವಿ ದೇವಸ್ಥಾನಕ್ಕೆ ಹೋಗುವಾಗ ಕೆಲವು ಪೂಜಾಸಾಮಗ್ರಿಗಳನ್ನು ಮರೆಯದೇ ತೆಗೆದುಕೊಂಡು ಹೋಗಿ. ನೀವು ದೇವಸ್ಥಾನದಲ್ಲೇ ಪೂಜೆ ಇಟ್ಟುಕೊಂಡರೆ ಅವಶ್ಯವಾಗಿ ಈ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಾವಿಲ್ಲಿ ಬೇಕಾಗುವ ಎಲ್ಲಾ ಸಾಮಗ್ರಿಗಳ ಒಂದು ಪಟ್ಟಿ ನೀಡಿದ್ದೇವೆ ಗಮನಿಸಿ. 
 ಪೂಜಾಸಾಮಗ್ರಿಗಳಲ್ಲಿ ಮುಖ್ಯವಾಗಿ ಏನೇನಿರಬೇಕು
ಪೂಜಾಸಾಮಗ್ರಿಗಳಲ್ಲಿ ಮುಖ್ಯವಾಗಿ ಏನೇನಿರಬೇಕು

ನವರಾತ್ರಿಯಂದು ದೇವಿಯ ಆಶಿರ್ವಾದ ಪಡೆಯಲು ವಿಶೇಷ ಪೂಜೆ ಪುನಸ್ಕಾರಗಳನ್ನು ಭಕ್ತಾದಿಗಳು ಇಟ್ಟುಕೊಳ್ಳುತ್ತಾರೆ. ಆಗ ದೇವಸ್ಥಾನಕ್ಕೆ ಹೋಗುವಾಗ ಕೆಲವು ಸಾಮಗ್ರಿಗಳನ್ನು ಮರೆಯದೇ ತೆಗೆದುಕೊಂಡು ಹೋಗಬೇಕಾಗುತ್ತದೆ. ನವರಾತ್ರಿಯು ಈಗಾಗಲೇ ಆರಂಭವಾಗಿದೆ. ಇಂದು ಪೂಜೆಯ ಮೊದಲ ದಿನವಾದ್ದರಿಂದ ಕಲಶ ಸ್ಥಾಪನೆ ಮಾಡಿ ಪೂಜೆ ಆರಂಭಿಸಲಾಗುತ್ತದೆ. ಪ್ರತಿ ವರ್ಷ ಒಂಭತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡ ಪದ್ದತಿಯಾಗಿದೆ. 

ನೀವು ದೇವಸ್ಥಾನಕ್ಕೆ ಹೋಗುವಾಗ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದ ಕೆಲವು ಸಾಮಗ್ರಿಗಳಿವೆ. ಅವುಗಳನ್ನು ನೀವು ಮರೆತು ದೇವಸ್ಥಾನಕ್ಕೆ ಹೋದರೆ ಮತ್ತೆ ಪುನಃ ಮನೆಗೆ ಬಂದು ಅಥವಾ ಹತ್ತಿರದ ಅಂಗಡಿಯಲ್ಲಿ ಕೊಳ್ಳಬೇಕಾಗಿ ಬರಬಹುದು ಗಮನಿಸಿ. ನಾವಿಲ್ಲಿ ಆ ಎಲ್ಲಾ ಸಾಮಗ್ರಿಗಳ ಪಟ್ಟಿಯನ್ನು ನೀಡಿದ್ದೇವೆ. 

ಹೂವುಗಳು
ದೀಪ
ಎಣ್ಣೆ
ಬತ್ತಿ
ಹಣ್ಣು
ತೆಂಗಿನ ಕಾಯಿ
ಊದುಬತ್ತಿ
ಅರಶಿನ
ಕುಂಕುಮ
ಕರ್ಪೂರ
ಅಕ್ಕಿ 
ಬಳೆ
ಕಾಡಿಗೆ
ವಸ್ತ್ರ
ನೈವೇದ್ಯ (ನಿಮ್ಮ ಮನೆಯಲ್ಲಿ ಮಾಡಿದ ಸಿಹಿ)

ಇದನ್ನೂ ಓದಿ: ನವರಾತ್ರಿಯ ದಿನದಂದೂ ಮನೆಮುಂದೆ ಬಿಡಿಸಿ ಬಣ್ಣ ಬಣ್ಣದ ರಂಗೋಲಿ, ದಸರಾ ಹಬ್ಬದ ಅಲಂಕಾರಕ್ಕೆ ಇಲ್ಲಿದೆ ಒಂದಿಷ್ಟು ಐಡಿಯಾ

ನೀವು ಪೂಜೆ ಮಾಡುವವರಾಗಿದ್ದರೆ ಮಡಿ ವಸ್ತ್ರ ಧರಿಸಿ, ಸ್ನಾನ ಮಾಡಿಕೊಂಡು ಶುದ್ಧವಾಗಿ ದೇವಸ್ಥಾನಕ್ಕೆ ಹೋಗಬೇಕು. ನವರಾತ್ರಿ ದುರ್ಗಾಮಾತೆಯನ್ನು ಪೂಜಿಸುವ ಹಬ್ಬ. ಈ ಸಮಯದಲ್ಲಿ ನೀವು ದುರ್ಗಾಮಾತೆಯನ್ನು ಆರಾಧಿಸಿದರೆ ಒಳಿತಾಗುತ್ತದೆ. ಬಹಳ ಹಿಂದಿನಿಂದಲೂ ಈ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ನವರಾತ್ರಿಯಿಂದ ವಿಜಯದಶಮಿವರೆಗೆ 10 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. 

ಮನೆಮುಂದೆ ರಂಗೋಲಿ ಬಿಡಿಸಿ

ನೀವು ನವರಾತ್ರಿಯಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿರುತ್ತೀರಿ. ಈ ತಯಾರಿಯ ಭಾಗವಾಗಿ ರಂಗೋಲಿಯೂ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ. ನೀವೂ ನಿಮ್ಮ ಮನೆಯಲ್ಲಿ ಬಣ್ಣಬಣ್ಣಗಳಿಂದ ಕೂಡಿದ ಅಂದದ ರಂಗೋಲಿ ಚಿತ್ರಿಸಿ. 

ಕಬ್ಬಿಣ ಖರೀದಿಸಬೇಡಿ
ನವರಾತ್ರಿಯ ಸಂದರ್ಭದಲ್ಲಿ ನೀವು ಮಾಡಬಾರದ ಕೆಲವು ಸಂಗತಿಗಳಿವೆ. ಅದೇನೆಂದರೆ ನೀವು ಕಬ್ಬಿಣವನ್ನು ಖರೀದಿ ಮಾಡಬೇಡಿ. ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿನ್ನಬೇಡಿ. ಮಾಂಸಾಹಾರ ತಿನ್ನಬೇಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ