logo
ಕನ್ನಡ ಸುದ್ದಿ  /  ಜೀವನಶೈಲಿ  /  Junk Food: ಜಂಕ್ ಫುಡ್ ನೋಡಿದಾಗ ಬಾಯಲ್ಲಿ ನೀರೂರುವುದು ಯಾಕೆ ಗೊತ್ತಾ?

Junk Food: ಜಂಕ್ ಫುಡ್ ನೋಡಿದಾಗ ಬಾಯಲ್ಲಿ ನೀರೂರುವುದು ಯಾಕೆ ಗೊತ್ತಾ?

HT Kannada Desk HT Kannada

Sep 17, 2022 10:29 PM IST

google News

ಜಂಕ್ ಫುಡ್

    • ಪ್ರತಿ 5-6 ವರ್ಷಗಳಿಗೊಮ್ಮೆ ನಿಮ್ಮ ರುಚಿಯ ಅಭಿರುಚಿ ಬದಲಾಗುತ್ತವೆ. ಇದೇ ಕಾರಣದಿಂದ ಜನರು ಹೊಸ ರುಚಿಗಳನ್ನು ಬಯಸುತ್ತಾರೆ. ಹೀಗಾಗಿ ಜಂಕ್ ಫುಡ್ ಹೆಚ್ಚು ಗಮನ ಸೆಳೆಯುತ್ತವೆ. 
ಜಂಕ್ ಫುಡ್
ಜಂಕ್ ಫುಡ್

ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈ‌, ಚಿಪ್ಸ್, ಐಸ್ ಕ್ರೀಂ... ಇವುಗಳನನ್ನು ನೋಡಿದ ತಕ್ಷಣ ಬಾಯಿಯಲ್ಲಿ ನೀರು ಬರುತ್ತದೆ. ಮನಸ್ಸು ನಿಯಂತ್ರಣಕ್ಕೆ ಸಿಗುವುದಿಲ್ಲ. ಅದನ್ನು ತಿಂದೇಬಿಡಬೇಕೆಂದು ಮನಸ್ಸು ಹೇಳುತ್ತದೆ. ಹೆಚ್ಚಿನ ಜನರು ಆರೋಗ್ಯಕರ ಆಹಾರಕ್ಕಿಂತ ಹೆಚ್ಚಾಗಿ ಈ ಜಂಕ್ ಫುಡ್‌ಗಳನ್ನು ಅತಿಯಾಗಿ ತಿನ್ನಲು ಬಯಸುತ್ತಾರೆ. ಇದರ ರುಚಿ ಮತ್ತು ಕಣ್ಣಿಗೆ ಆಹ್ಲಾದಕರವಾಗಿ ಕಾಣುವುದೇ ಈ ಆಕರ್ಷಣೆಗೆ ಕಾರಣ ಎಂದು ಭಾವಿಸಲಾಗಿದೆ. ಅವರಿಗೆ ಹಸಿವಾಗಲಿ, ಇಲ್ಲದಿರಲಿ. ಇಂತಹ ಆಹಾರ ಕಂಡರೆ ಹೊಟ್ಟೆಯಲ್ಲಿನ ಚೈತನ್ಯ ಇಮ್ಮಡಿಯಾಗುತ್ತದೆ. ಹೀಗಾಗಿ ಅವುಗಳನ್ನು ತಿಂದು ಬಿಡುತ್ತಾರೆ. ಅವು ರುಚಿಯಾಗಿರುವುದರಿಂದ ಅವುಗಳನ್ನು ಹೆಚ್ಚಾಗಿ ತಿನ್ನುತ್ತಾರೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಮಾತ್ರ ಕಾರಣವಲ್ಲ. ಪೌಷ್ಟಿಕಾಂಶದ ಕೊರತೆಯ ಹೊರತಾಗಿ, ಅದಕ್ಕೆ ಇತರ ವೈಜ್ಞಾನಿಕ ಕಾರಣಗಳೂ ಇವೆ.

ಪ್ರತಿ 5-6 ವರ್ಷಗಳಿಗೊಮ್ಮೆ ನಿಮ್ಮ ರುಚಿಯ ಅಭಿರುಚಿ ಬದಲಾಗುತ್ತವೆ ಎಂದು ನಿಮಗೆ ತಿಳಿದಿದೆಯೇ? ಇದೇ ಕಾರಣದಿಂದ ಜನರು ಹೊಸ ರುಚಿಗಳನ್ನು ಬಯಸುತ್ತಾರೆ. ಹೀಗಾಗಿ ಜಂಕ್ ಫುಡ್ ಹೆಚ್ಚು ಗಮನ ಸೆಳೆಯುತ್ತವೆ. ಏಕೆಂದರೆ ಇದರ ರುಚಿ ನಾಲಿಗೆಗೆ ಉತ್ತಮವಾಗಿರುತ್ತದೆ. ಹಾಗಿದ್ರೆ ಆಗಾಗ ಜಂಕ್ ಫುಡ್ ತಿನ್ನಲು ನೀವು ಏಕೆ ಬಯಸುತ್ತೀರಿ ಎಂಬುದನ್ನು ಇಲ್ಲಿ ತಿಳಿಯಿರಿ.

ನಿದ್ರಾಹೀನತೆಯಿಂದ ಇಂತಹ ಆಸೆ ಜಾಸ್ತಿ

ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಮತ್ತೊಂದೆಡೆ ಇ‌ನ್ನೂ ಕೆಲವರು ಅತಿಯಾಗಿ ನಿದ್ದೆ ಮಾಡುತ್ತಾರೆ. ಇದು ಹೆಚ್ಚಿನ ಆಹಾರದ ಕಡುಬಯಕೆಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಸುಮಾರು 9 ಗಂಟೆಗಳ ಕಾಲ ಮಲಗುವವರು ಮತ್ತು ಕೇವಲ 4 ಗಂಟೆಗಳ ಕಾಲ ನಿದ್ರಿಸುವ ಜನರ ಮೆದುಳಿನ ಚಟುವಟಿಕೆಯನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಜನರು ಕಡಿಮೆ ನಿದ್ರೆ ಮಾಡಿದಾಗ, ಅವರ ಮೆದುಳು ಪಿಜ್ಜಾ ಮತ್ತು ಐಸ್ ಕ್ರೀಂಅನ್ನು ನೋಡಿದಾಗ ಸಂತೋಷದ ಸಂಕೇತಗಳನ್ನು ಕಳುಹಿಸುತ್ತಾರೆ. ಇದರಿಂದ ಅವರಿಗೆ ಜಂಕ್ ಫುಡ್ ಕಂಡರೆ ತಿನ್ನುವ ಆಸೆಯಾಗುತ್ತದೆ.

ಒತ್ತಡ

ನಾವು ಒತ್ತಡದಲ್ಲಿದ್ದಾಗ, ನಮ್ಮ ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಅಂತಹ ಸಮಯದಲ್ಲಿ ನಾವು ಕೊಬ್ಬು ಮತ್ತು ಸಕ್ಕರೆಯಂಶ ಹೆಚ್ಚಿರುವ ಆಹಾರವನ್ನು ಸೇವಿಸಲು ಬಯಸುತ್ತೇವೆ. ಅದಕ್ಕಾಗಿಯೇ ಜನರು ಜಂಕ್ ಫುಡ್ ಕಡೆಗೆ ಒಲವು ತೋರುತ್ತಾರೆ. ಸಕ್ಕರೆ ಮೆದುಳಿನಲ್ಲಿನ ಒತ್ತಡದ ಸಂಕೇತವಾದ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ.

ಬೇಗನೆ ತಿನ್ನುತ್ತೇವೆ

ಜನರು ಕನಿಷ್ಠ 32 ಬಾರಿ ಆಹಾರವನ್ನು ಅಗಿಯಲು ಮತ್ತು ನುಂಗಲು ವೈದ್ಯರು ಶಿಫಾರಸು ಮಾಡುತ್ತಾರೆ. ಆಗ ಮಾತ್ರ ಆಹಾರ ಬೇಗನೆ ಜೀರ್ಣವಾಗುತ್ತದೆ. ಆದರೆ ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಕೇವಲ 5ರಿಂದ 10 ನಿಮಿಷದಲ್ಲಿ ಊಟ ಮುಗಿಸುವ ಪ್ರಯತ್ನ ಮಾಡುತ್ತಾರೆ. ಬಹುತೇಕ ಎಲ್ಲರೂ ಇದೇ ರೀತಿ ಆಹಾರ ಸೇವಿಸುತ್ತಾರೆ. ತುಂಬಾ ಬೇಗ ತಿನ್ನುವುದರಿಂದ ಮೆದುಳಿಗೆ ತಪ್ಪು ಸಂಕೇತಗಳನ್ನು ಕಳುಹಿಸಬಹುದು. ಹೀಗಾಗಿ ಅತಿಯಾಗಿ ತಿನ್ನಲು ಪ್ರೋತ್ಸಾಹಿಸುತ್ತದೆ.

ಹಾರ್ಮೋನ್ ಅಸಮತೋಲನ

ಮುಟ್ಟಿನ ಸಮಯದಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳು ಸಂಪೂರ್ಣ ಅವ್ಯವಸ್ಥೆಯಾಗಿರಬಹುದು. ಮೆದುಳು ಮತ್ತು ದೇಹದ ನಡುವಿನ ಸಮನ್ವಯದ ಕೊರತೆಯಿಂದಾಗಿ, ಲೆಪ್ಟಿನ್ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನುಗಳು ಕೆಲ ಬಯಕೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಜಂಕ್ ಫುಡ್ ತಿನ್ನುವ ಬಯಕೆ ಉಂಟಾಗುತ್ತದೆ.

ನೀರು ಮತ್ತು ಪೋಷಕಾಂಶಗಳ ಕೊರತೆ

ಕೆಲವೊಮ್ಮೆ ನಮಗೆ ಬಾಯಾರಿಕೆಯಾದಾಗ ನಮ್ಮ ಮನಸ್ಸು ಅದನ್ನು ಹಸಿವಿನ ಸಂಕೇತವೆಂದು ಅರ್ಥೈಸುತ್ತದೆ. ನಾವು ಸಾಕಷ್ಟು ನೀರು ಕುಡಿಯದಿದ್ದರೂ ಅಥವಾ ನಮ್ಮ ಊಟದಲ್ಲಿ ಪ್ರೋಟೀನ್ ಕೊರತೆಯಿದ್ದರೂ, ಹಸಿವಿನ ಸಂಕಟವು ನಮ್ಮನ್ನು ಜಂಕ್ ಫುಡ್‌ನತ್ತ ವಾಲುವಂತೆ ಮಾಡುತ್ತದೆ. ಪೌಷ್ಟಿಕಾಂಶದ ಕೊರತೆಯು ಆಹಾರದ ಕಡುಬಯಕೆಗೆ ಕಾರಣವಾಗಬಹುದು. ಮೆಗ್ನೀಸಿಯಮ್ ಕೊರತೆಯು ಚಾಕೊಲೇಟ್‌ಗಳು, ಬೀಜಗಳು ಅಥವಾ ಬೀನ್ಸ್ ತಿನ್ನುವುದನ್ನು ಸೂಚಿಸುತ್ತದೆ. ಕ್ರೋಮಿಯಂ, ರಂಜಕದ ಕೊರತೆಯು ನಿಮಗೆ ಸಕ್ಕರೆಯನ್ನು ತಿನ್ನಲು ಪ್ರೋತ್ಸಾಹಿಸುತ್ತದೆ. ಅಂತೆಯೇ, ಸೋಡಿಯಂ ಕೊರತೆಯು ಉಪ್ಪುಸಹಿತ ಫ್ರೆಂಚ್ ಫ್ರೈಗಳಂತಹ ಕರಿದ ಆಹಾರಗಳ ಕಡುಬಯಕೆಗೆ ಕಾರಣವಾಗಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ