Aloe Vera juice: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರ ಪ್ರಯೋಜನಗಳು
May 01, 2022 08:41 AM IST
ಅಲೋವೆರಾ ಜ್ಯೂಸ್
- ಅಲೋವೆರಾ ಅಥವಾ ಲೋಳೆಸರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ರಾಮಬಾಣವಾಗಿದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
ಅಲೋವೆರಾ, ಪುರಾತನ ಔಷಧೀಯ ಸಸ್ಯ, ಅದರ ಚಿಕಿತ್ಸಕ ಗುಣಲಕ್ಷಣಗಳಿಗಾಗಿ ಜಗತ್ತಿನಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಈಜಿಪ್ಟಿನ ರಾಣಿಯರಾದ ನೆಫೆರ್ಟಿಟಿ ಮತ್ತು ಕ್ಲಿಯೋಪಾತ್ರ ಇದನ್ನು ತಮ್ಮ ಸೌಂದರ್ಯಕ್ಕಾಗಿ ಬಳಸುತ್ತಿದ್ದರು ಮತ್ತು ಹಿಂದಿನ ಕಾಲದಲ್ಲಿ ಸೈನಿಕರ ಗಾಯಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತಿತ್ತು.
ಅಲೋವೆರಾ ವಿಟಮಿನ್, ಖನಿಜಗಳು, ಕಿಣ್ವಗಳು, ಸಪೋನಿನ್ಗಳು ಮತ್ತು ಅಮೈನೋ ಆಮ್ಲಗಳಿಂದ ತುಂಬಿರುತ್ತದೆ. ಇದು ವಿಟಮಿನ್ ಎ, ಸಿ, ಇ, ಫೋಲಿಕ್ ಆಸಿಡ್, ಕೋಲೀನ್‌ನ ಉಗ್ರಾಣವಾಗಿದೆ ಮತ್ತು ಹಲವಾರು ಜೀರ್ಣಕಾರಿ, ತ್ವಚೆ, ಹಲ್ಲಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕ್ಯಾಲ್ಸಿಯಂ, ಕ್ರೋಮಿಯಂ, ತಾಮ್ರ, ಸೆಲೆನಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವನ್ನು ಸಹ ಹೊಂದಿದೆ.
ನೈಸರ್ಗಿಕ ಅಲೋವೆರಾ ಜ್ಯೂಸ್ ದೇಹಕ್ಕೆ ತುಂಬಾ ಒಳ್ಳೆಯದು. ಇದು ವಿವಿಧ ಜೀವಸತ್ವಗಳಿಂದ ತುಂಬಿರುತ್ತದೆ. ಹಾಗಾಗಿ ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇಷ್ಟು ಉಪಯುಕ್ತವಾಗಿರುವ ಅಲೋವೆರಾ ಜ್ಯೂಸ್ ಅನ್ನು ಹೇಗೆ ಮಾಡುವುದೆಂದು ತಿಳಿಯೋಣ ಬನ್ನಿ
ಲೋಳೆಸರದ ಸಿಪ್ಪೆ ತೆಗೆದು ಅದರ ಜೆಲ್ ಅನ್ನು ಹಿಂಡಿ, ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿದರೆ ಅಲೋವೆರಾ ಜ್ಯೂಸ್ ರೆಡಿ. ಇದು ಪಾಲಿಫಿನಾಲ್ಸ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ದೇಹವನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಪರಿಣಾಮವಾಗಿ ತೂಕ ಇಳಿಸಿಕೊಳ್ಳಬಹುದು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಜೀರ್ಣಕಾರಿ ಸಮಸ್ಯೆ ಇರುವವರಿಗೆ ಈ ಜ್ಯೂಸ್ ಉತ್ತಮವಾಗಿದೆ. ಏಕೆಂದರೆ ಇದು ಹೊಟ್ಟೆಯಲ್ಲಿನ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಪೋಷಿಸಲು ಸಹಾಯ ಮಾಡುವ ಕೆಲವು ವಸ್ತುಗಳನ್ನು ಒಳಗೊಂಡಿದೆ. ಪರಿಣಾಮವಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
- ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಕುಡಿಯುವುದು ತೂಕವನ್ನು ಕಳೆದುಕೊಳ್ಳಲು, ನಿಮ್ಮ ದೇಹದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಮತ್ತು ಕರುಳಿನ ಕಾರ್ಯವನ್ನು ಸರಾಗಗೊಳಿಸುವ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಲೋವೆರಾ ಜ್ಯೂಸ್ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
- ಮಲಬದ್ಧತೆಯಿಂದ ಬಳಲುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಸಮಸ್ಯೆಯು ಸುಲಭವಾಗಿ ಕಡಿಮೆಯಾಗುತ್ತದೆ
- ದೇಹ ತುಂಬಾ ಒಣಗಿರುವವರಿಗೆ ಈ ಜ್ಯೂಸ್ ತುಂಬಾ ಒಳ್ಳೆಯದು. ಈ ರಸವು ಸ್ನಾಯುಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿತ್ಯವೂ ಈ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.
- ಮಧುಮೇಹದಿಂದ ಬಳಲುತ್ತಿರುವವರಿಗೂ ಈ ಜ್ಯೂಸ್ ಬಹಳ ಉಪಯುಕ್ತ. ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಅಲೋವೆರಾ ಮಧುಮೇಹವನ್ನು ನಿರ್ವಹಿಸುವಲ್ಲಿ ಸಹ ಬಹಳ ಸಹಾಯಕವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
- ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಅಲೋವೆರಾ ಜ್ಯೂಸ್ ತುಂಬಾ ಉಪಯುಕ್ತವಾಗಿದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹಲ್ಲು ಮತ್ತು ವಸಡಿನ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅಲೋವೆರಾ ಒಸಡುಗಳಲ್ಲಿನ ಉರಿಯೂತ ಅಥವಾ ಯಾವುದೇ ಇತರ ಹಲ್ಲಿನ ಸೋಂಕಿನ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ.
ವಿಭಾಗ