logo
ಕನ್ನಡ ಸುದ್ದಿ  /  ಜೀವನಶೈಲಿ  /  Navaratri 2022: ನವರಾತ್ರಿಗೆ ಟಾಪ್‌ ಕನ್ನಡ ಭಜನೆಗಳು ಮತ್ತು ಸ್ತೋತ್ರಗಳು, ಓದಿ, ಆಲಿಸಿ, ಪಠಿಸಿ ಭಕ್ತಿಪರವಶರಾಗಿ

Navaratri 2022: ನವರಾತ್ರಿಗೆ ಟಾಪ್‌ ಕನ್ನಡ ಭಜನೆಗಳು ಮತ್ತು ಸ್ತೋತ್ರಗಳು, ಓದಿ, ಆಲಿಸಿ, ಪಠಿಸಿ ಭಕ್ತಿಪರವಶರಾಗಿ

Praveen Chandra B HT Kannada

Sep 25, 2022 06:23 AM IST

google News

Navaratri 2022: ನವರಾತ್ರಿಗೆ ಟಾಪ್‌ ಕನ್ನಡ ನವರಾತ್ರಿ ಭಜನೆಗಳು ಮತ್ತು ಸ್ತೋತ್ರಗಳು, ಓದಿ, ಆಲಿಸಿ, ಪಠಿಸಿ ಭಕ್ತಿಪರವಶರಾಗಿ (PTI Photo/Swapan Mahapatra)

    • Navaratri 2022: ಎಲ್ಲರಲ್ಲಿಯೂ ದಸರಾ ಸಂಭ್ರಮ ಮನೆ ಮಾಡಿದೆ. ಶಾಲಾ ಮಕ್ಕಳಿಗೆ ರಜೆ ಘೋಷಣೆಯಾಗಿದೆ. ಉದ್ಯೋಗಿಗಳೂ ವಿವಿಧ ರಜೆ ಹೊಂದಾಣಿಕೆ ಮಾಡಿಕೊಂಡು ದಸರಾ ರಜೆ ಹಾಕಿಕೊಳ್ಳುತ್ತಿದ್ದಾರೆ. ನವರಾತ್ರಿ ಸಮಯದಲ್ಲಿ ಮನೆಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಿದೆ. ಈ ಸಮಯದಲ್ಲಿ ದೇವಿಯ ಭಜನೆ ಮಾಡುತ್ತ ಅಥವಾ ಕೇಳುತ್ತ ಭಕ್ತಿಪರವಶರಾಗಲು ಎಲ್ಲರೂ ಬಯಸುತ್ತಾರೆ. ಕನ್ನಡದಲ್ಲಿ ನವರಾತ್ರಿ ಸ್ತೋತ್ರಗಳನ್ನು ಮತ್ತು ಭಜನೆಗಳನ್ನು ಹುಡುಕುತ್ತಿದ್ದರೆ ಇಲ್ಲಿವೆ ಟಾಪ್‌ ಕನ್ನಡ ನವರಾತ್ರಿ ಭಜನೆಗಳು ಮತ್ತು ಸ್ತೋತ್ರಗಳು.
Navaratri 2022: ನವರಾತ್ರಿಗೆ ಟಾಪ್‌ ಕನ್ನಡ ನವರಾತ್ರಿ ಭಜನೆಗಳು ಮತ್ತು ಸ್ತೋತ್ರಗಳು, ಓದಿ, ಆಲಿಸಿ, ಪಠಿಸಿ ಭಕ್ತಿಪರವಶರಾಗಿ (PTI Photo/Swapan Mahapatra)
Navaratri 2022: ನವರಾತ್ರಿಗೆ ಟಾಪ್‌ ಕನ್ನಡ ನವರಾತ್ರಿ ಭಜನೆಗಳು ಮತ್ತು ಸ್ತೋತ್ರಗಳು, ಓದಿ, ಆಲಿಸಿ, ಪಠಿಸಿ ಭಕ್ತಿಪರವಶರಾಗಿ (PTI Photo/Swapan Mahapatra) (PTI)

Navaratri 2022: ಎಲ್ಲರಲ್ಲಿಯೂ ದಸರಾ ಸಂಭ್ರಮ ಮನೆ ಮಾಡಿದೆ. ಶಾಲಾ ಮಕ್ಕಳಿಗೆ ರಜೆ ಘೋಷಣೆಯಾಗಿದೆ. ಉದ್ಯೋಗಿಗಳೂ ವಿವಿಧ ರಜೆ ಹೊಂದಾಣಿಕೆ ಮಾಡಿಕೊಂಡು ದಸರಾ ರಜೆ ಹಾಕಿಕೊಳ್ಳುತ್ತಿದ್ದಾರೆ. ನವರಾತ್ರಿ ಸಮಯದಲ್ಲಿ ಮನೆಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಿದೆ. ಈ ಸಮಯದಲ್ಲಿ ದೇವಿಯ ಭಜನೆ ಮಾಡುತ್ತ ಅಥವಾ ಕೇಳುತ್ತ ಭಕ್ತಿಪರವಶರಾಗಲು ಎಲ್ಲರೂ ಬಯಸುತ್ತಾರೆ.

ಅಯಿಗಿರಿ ನಂದಿನಿ ಕನ್ನಡ ಲಿರಿಕ್ಸ್‌ (Aigiri Nandini lyrics in Kannada)

ಸಾಕಷ್ಟು ದುರ್ಗಾ ದೇವಿ ಭಕ್ತರಿಗೆ ಅತ್ಯಂತ ಇಷ್ಟವಾದ ಭಜನೆ/ಸ್ತ್ರೋತ್ರಗಳಲ್ಲಿ ಅಯಿಗಿರಿ ನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ ಭಕ್ತಿಗೀತೆ ಇಷ್ಟ. ಪ್ರಮುಖ ಗಾಯಕರ ಕಂಠದಲ್ಲಿ ಈ ಭಜನೆಯನ್ನು/ಸ್ತ್ರೋತ್ರಗಳನ್ನು ಕೇಳಿದರೆ ನಮ್ಮ ಮನಸ್ಸು ಮಂತ್ರಮುಗ್ಧಗೊಳ್ಳುತ್ತದೆ ಮತ್ರು ಭಕ್ತಿಪರವಶವಾಗುತ್ತದೆ. ಈ ಭಜನೆ/ಸ್ತ್ರೋತ್ರದ ಕನ್ನಡದ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ.

ಅಯಿಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ

ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ

ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧ ||

ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ

ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ

ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨ ||

ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ

ಶಿಖರಿಶಿರೋಮಣಿತುಂಗಹಿಮಾಲಯಶೃಂಗನಿಜಾಲಯಮಧ್ಯಗತೇ

ಮಧುಮಧುರೇ ಮಧುಕೈಟಭಗಂಜಿನಿ ಕೈಟಭಭಂಜಿನಿ ರಾಸರತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೩ ||

ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ

ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ

ನಿಜಭುಜದಂಡ ನಿಪಾತಿತಖಂಡವಿಪಾತಿತಮುಂಡಭಟಾಧಿಪತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೪ ||

ಅಯಿ ರಣದುರ್ಮದ ಶತ್ರುವಧೋದಿತ ದುರ್ಧರನಿರ್ಜರ ಶಕ್ತಿಭೃತೇ

ಚತುರವಿಚಾರಧುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ

ದುರಿತದುರೀಹದುರಾಶಯದುರ್ಮತಿದಾನವದೂತಕೃತಾಂತಮತೇ

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೫ ||

ದೇವಿಯೇ ದುರ್ಗಾಂಬ- ನವರಾತ್ರಿಗೆ ಕನ್ನಡ ಭಕ್ತಿಗೀತೆಗಳು ಮತ್ತು ಭಜನೆಗಳು

ಅಂತರ್ಗತೆ ಶ್ರೀ ದುರ್ಗಾಂಬೆ

ಭ್ರಮರಾಂಬೆ ಶ್ರೀ ಕಟಿಲೇಶ್ವರಿ (Bhramarambe Sri Kateeleshwari)

ಕಟೀಲು ದುರ್ಗಾ ಪರಾಮೇಶ್ವರಿ ಭಕ್ತರಿಗೆ ಅಚ್ಚುಮೆಚ್ಚಿನ ಭಕ್ತಿಗೀತೆಗಳಲ್ಲಿ ಭ್ರಮರಾಂಬೆ ಶ್ರೀ ಕಟಿಲೇಶ್ವರಿ ಭಜನೆಯೂ ಒಂದಾಗಿದೆ. ವಿದ್ಯಾಭೂಷಣ, ಜಯಶ್ರೀ ಅರವಿಂದ್‌ ಧ್ವನಿಯಲ್ಲಿ ಕೇಳೋಣ ಬನ್ನಿ.

ಯಾ ದೇವೀ ಸರ್ವಭೂತೇಷು (ದೇವಿ ಸೂಕ್ತಂ) (Kannada Lyrics)

ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಚಿತಿರೂಪೇಣ ಯಾ ಕೃತ್ಸ್ನಮೇತದ್ವ್ಯಾಪ್ಯ ಸ್ಥಿತಾ ಜಗತ್ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಇನ್ನುಳಿದಂತೆ ನೀವು ಇಂಟರ್‌ನೆಟ್‌ನಲ್ಲಿ ಹುಡುಕಬಹುದಾದ ಇತರೆ ಟಾಪ್‌ ದುರ್ಗಾದೇವಿ ಭಜನೆಗಳು, ಸ್ತೋತ್ರಗಳ ಲಿಸ್ಟ್‌ ಇಲ್ಲಿದೆ.

- ಕೋಟಿಗೊಬ್ಬಳೇ ಶ್ರೀ ಚಾಮುಂಡೇಶ್ವರಿ

-ಭಕ್ತರ ತಾಯಿ ಚಾಮುಂಡೇಶ್ವರಿ

- ನಮ್ಮ ತಾಯಿ ಚಾಮುಂಡಿ

- ಸಾವಿರ ಮೆಟ್ಟಿಲು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ