logo
ಕನ್ನಡ ಸುದ್ದಿ  /  ಜೀವನಶೈಲಿ  /  Hdfc Scholarship: ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನ, 75 ಸಾವಿರ ರೂವರೆಗೆ ಸ್ಕಾಲರ್‌ಷಿಪ್‌ ಪಡೆಯಲು ಅವಕಾಶ

HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನ, 75 ಸಾವಿರ ರೂವರೆಗೆ ಸ್ಕಾಲರ್‌ಷಿಪ್‌ ಪಡೆಯಲು ಅವಕಾಶ

Praveen Chandra B HT Kannada

Nov 26, 2024 02:45 PM IST

google News

HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    • HDFC Bank Parivartan's ECSS Programme 2024-25: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿವರ್ತನ್‌ ಇಸಿಎಸ್‌ಎಸ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್‌ 31, 2024 ಕೊನೆಯ ದಿನಾಂಕವಾಗಿದೆ. 1-12 ತರಗತಿ, ಡಿಪ್ಲೊಮಾ, ಯುಜಿ, ಪಿಜಿ ಕಲಿಯುತ್ತಿರುವ ಅರ್ಹ ಅಭ್ಯರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
HDFC Scholarship: ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

HDFC Scholarship 2024: ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿಯು ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುವ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಪರಿವರ್ತನ್‌ ಇಸಿಎಸ್‌ಎಸ್‌ ಪ್ರೋಗ್ರಾಂನಡಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗುತ್ತದೆ. 1-12 ತರಗತಿಯ ವಿದ್ಯಾರ್ಥಿಗಳು, ಡಿಪ್ಲೊಮಾ, ಐಟಿಐ ಮುಂತಾದ ತಾಂತ್ರಿಕ ಶಿಕ್ಷಣ ಪಡೆಯುವವರು, ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಸೇರಿದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ ಪ್ರಯೋಜನ ಪಡೆದುಕೊಳ್ಳಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಗಳೇನು? ನಿಯಮಗಳೇನು? ಎಷ್ಟು ಮೊತ್ತ ಸ್ಕಾಲರ್‌ಷಿಪ್‌ ದೊರಕುತ್ತದೆ? ಇತ್ಯಾದಿ ಎಲ್ಲಾ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಶಾಲಾ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನ

ಅರ್ಹತೆಗಳು

  • 1-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರಕಾರಿ, ಖಾಸಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಈ ಹಿಂದಿನ ವರ್ಷ ಕನಿಷ್ಠ ಶೇಕಡ 55 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
  • ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಡಿಪ್ಲೊಮಾ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.

ವಿದ್ಯಾರ್ಥಿ ವೇತನದ ಮೊತ್ತ: 1-6ನೇ ತರಗತಿಯವರಿಗೆ 15,000 ರೂಪಾಯಿ, 7-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 18,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್‌ 31, 2024

ಪದವಿ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಪರಿವರ್ತನ್‌ ಸ್ಕಾಲರ್‌ಷಿಪ್‌

ಅರ್ಹತೆಗಳು

  • ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ ಮುಂತಾದ ಪದವಿ ಕೋರ್ಸ್‌ಗಳು, ಬಿಟೆಕ್‌, ಎಂಬಿಬಿಎಸ್‌, ಎಲ್‌ಎಲ್‌ಬಿ, ಬಿಆರ್ಕ್‌, ನರ್ಸಿಂಗ್‌ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.
  • ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
  • ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 

ವಿದ್ಯಾರ್ಥಿ ವೇತನದ ಮೊತ್ತ: ಸಾಮಾನ್ಯ ಪದವಿ ಕೋರ್ಸ್‌- 30 ಸಾವಿರ ರೂಪಾಯಿ, ವೃತ್ತಿಪರ ಪದವಿ ಕೋರ್ಸ್‌ 50,000 ರೂಪಾಯಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 31, 2024

ಸ್ನಾತಕೋತ್ತರ ಪದವೀಧರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಪರಿವರ್ತನ್‌ ವಿದ್ಯಾರ್ಥಿವೇತನ

ಅರ್ಹತೆಗಳು

  • ಎಂಕಾಂ, ಎಂಎ ಮುಂತಾದ ಜನರಲ್‌ ಕೋರ್ಸ್‌, ಎಂಟೆಕ್‌, ಎಂಬಿಎ ಮುಂತಾದ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ ಕಲಿಯುವವರು ಅರ್ಜಿ ಸಲ್ಲಿಸಬಹುದು.
  • ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.
  • ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.
  • ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ ಮೊತ್ತ: ಜನರಲ್‌ ಸ್ನಾತಕೋತ್ತರ ಪದವಿ: 35 ಸಾವಿರ ರೂಪಾಯಿ, ವೃತ್ತಿಪರ ಸ್ನಾತಕೋತ್ತರ ಕೋರ್ಸ್‌: 75 ಸಾವಿರ ರೂಪಾಯಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 31, 2024

ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿ ವೇತನಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾದ ಲಿಂಕ್‌ನಲ್ಲಿ ತಿಳಿಸಿರುವ ದಾಖಲೆಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಲಿಂಕ್‌: hdfcbankecss.com

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ