Tulsi Tanti Scholarship: 1.20 ಲಕ್ಷ ರೂ ವಿದ್ಯಾರ್ಥಿವೇತನ, ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌ಗೆ ಡಿಸೆಂಬರ್ 10ರ ಮೊದಲು ಅರ್ಜಿ ಸಲ್ಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Tulsi Tanti Scholarship: 1.20 ಲಕ್ಷ ರೂ ವಿದ್ಯಾರ್ಥಿವೇತನ, ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌ಗೆ ಡಿಸೆಂಬರ್ 10ರ ಮೊದಲು ಅರ್ಜಿ ಸಲ್ಲಿಸಿ

Tulsi Tanti Scholarship: 1.20 ಲಕ್ಷ ರೂ ವಿದ್ಯಾರ್ಥಿವೇತನ, ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌ಗೆ ಡಿಸೆಂಬರ್ 10ರ ಮೊದಲು ಅರ್ಜಿ ಸಲ್ಲಿಸಿ

Shri Tulsi Tanti Scholarship program 2024-25: ಸುಜ್ಲಾನ್‌ ಗ್ರೂಪ್‌ನ ಶ್ರೀ ತುಳಸಿ ತಂತಿ ಶಕ್ತಿ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್‌ 10, 2024 ಕೊನೆಯ ದಿನವಾಗಿದೆ. 9ನೇ ತರಗತಿಯ ವಿದ್ಯಾರ್ಥಿನಿಯರಿಗೆ, ಮೊದಲ ವರ್ಷದ ಬಿಇ/ಬಿಟೆಕ್‌ ವಿದ್ಯಾರ್ಥಿನಿಯರಿಗೆ, ಎಂಜಿನಿಯರಿಂಗ್‌ ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್‌ಷಿಪ್‌ ದೊರಕುತ್ತದೆ.

ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌
ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌

Shri tulsi tanti Scholarship program 2024 25 apply: ಉತ್ತಮ ಶಿಕ್ಷಣ ಪಡೆಯುವ ಕನಸು ಇರುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವರದಾನವಾಗಿದೆ. ಭಾರತದಲ್ಲಿ ಬಡ ವಿದ್ಯಾರ್ಥಿಗಳಿಗೆ ಹಲವು ಸ್ಕಾಲರ್‌ಶಿಪ್‌ಗಳು ಇವೆ. 9ನೇ ತರಗತಿಯ ವಿದ್ಯಾರ್ಥಿನಿಯರಿಗೆ, ಮೊದಲ ವರ್ಷದ ಬಿಇ/ಬಿಟೆಕ್‌ ವಿದ್ಯಾರ್ಥಿನಿಯರಿಗೆ, ಎಂಜಿನಿಯರಿಂಗ್‌ ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸುಜ್ಲಾನ್‌ ಗ್ರೂಪ್‌ನ ಪ್ರತಿವರ್ಷ ಸ್ಕಾಲರ್‌ಶಿಪ್‌ ನೀಡುತ್ತದೆ. ಬಿಇ/ಬಿಟೆಕ್‌ ವಿದ್ಯಾರ್ಥಿನಿಯರಿಗೆ 1.20 ಲಕ್ಷ ಸ್ಕಾಲರ್‌ಶಿಪ್‌ ದೊರಕುತ್ತದೆ.

ಶ್ರೀ ತುಳಸಿ ತಂತಿ ಸ್ಕಾಲರ್‌ಶಿಪ್ ಕುರಿತು

ಶ್ರೀ ತುಳಸಿ ತಂತಿ ಸ್ಕಾಲರ್‌ಶಿಪ್ ಕಾರ್ಯಕ್ರಮವು ಸುಜ್ಲಾನ್ ಗ್ರೂಪ್‌ನ ದಿವಂಗತ ಸಂಸ್ಥಾಪಕರಾದ ಶ್ರೀ ತುಳಸಿ ತಂತಿ ಅವರ ನೆನಪಿಗಾಗಿ ಸುಜ್ಲಾನ್ ಗ್ರೂಪ್‌ ನೀಡುವ ವಿದ್ಯಾರ್ಥಿವೇತನವಾಗಿದೆ. 9 ನೇ ತರಗತಿಯ ಬಾಲಕಿಯರಿಗೆ ಮತ್ತು ಬಿಇ/ಬಿಟೆಕ್‌ನ ಮೊದಲ ವರ್ಷದ ಕಲಿಕೆಗೆ ಈ ವರ್ಷ ದಾಖಲಾದ ವಿದ್ಯಾರ್ಥಿನಿಯರಿಗೆ ದೊರಕುತ್ತದೆ. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ಸ್ಕಾಲರ್‌ಷಿಪ್‌ ನೀಡಲಾಗುತ್ತದೆ.

ಶ್ರೀ ತುಳಸಿ ತಂತಿ ಶಕ್ತಿ ಸ್ಕಾಲರ್‌ಷಿಪ್‌

ಶ್ರೀ ತುಳಸಿ ತಂತಿ ಶಕ್ತಿ ವಿದ್ಯಾರ್ಥಿವೇತನ (Shri Tulsi Tanti Shakti Scholarship Program) ಮೊತ್ತ: ವಿದ್ಯಾರ್ಥಿನಿಯರಿಗೆ ಶ್ರೀ ತುಳಸಿ ತಂತಿ ಸ್ಕಾಲರ್‌ಶಿಪ್ ಕಾರ್ಯಕ್ರಮದಡಿ ಎಷ್ಟು ಸ್ಕಾಲರ್‌ಷಿಪ್‌ ದೊರಕುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. 9ನೇ ತರಗತಿಯ ಬಡ ವಿದ್ಯಾರ್ಥಿನಿಯರಿಗೆ 6 ಸಾವಿರ ರೂಪಾಯಿ ವಿದ್ಯಾರ್ಥಿವೇತನ ದೊರಕುತ್ತದೆ. ಈ ಸ್ಕಾಲರ್‌ಷಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 10ನೇ ತರಗತಿಗೂ ಸ್ಕಾಲರ್‌ಷಿಪ್‌ ದೊರಕುತ್ತದೆ. ಈ ಸ್ಕಾಲರ್‌ಷಿಪ್‌ ಮೊತ್ತವನ್ನು ಟ್ಯೂಷನ್‌ ಫೀಸ್‌, ಬುಕ್ಸ್‌, ಸ್ಟೇಷನಲರಿ, ಟ್ರಾವೆಲ್‌, ಲ್ಯಾಪ್‌ಟಾಪ್‌ ಇತ್ಯಾದಿ ಶೈಕ್ಷಣಿಕ ಅವಶ್ಯಕತೆಗೆ ಮಾತ್ರ ಬಳಸಬೇಕು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂಪಾಯಿ ಮೀರಿರಬಾರದು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಬೇಕಾದ ದಾಖಲೆಗಳು

  • ವಿಳಾಸ, ಗುರುತಿನ ಚೀಟಿ (ಆಧಾರ್‌ ಕಾರ್ಡ್‌)
  • ಪ್ರಸಕ್ತ ವರ್ಷದ ಶಾಲಾ ದಾಖಲಾತಿ ದಾಖಲೆ (ಶುಲ್ಕ ಪಾವತಿ ರಸಿದಿ, ದಾಖಲಾತಿ ಪತ್ರ, ಐಡೆಂಟೆಟಿ ಕಾರ್ಡ್‌)
  • ಈ ಹಿಂದಿನ ವರ್ಷದ ಅಂಕಪಟ್ಟಿ
  • ಆದಾಯ ಪ್ರಮಾಣ ಪತ್ರ
  • ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮೂಲದ ಆದಾಯದ ಕುರಿತು ಸಂಬಂಧಪಟ್ಟ ಪ್ರಾಧಿಕಾರದಿಂದ ಸರ್ಟಿಫಿಕೇಟ್‌
  • ಕುಟುಂಬದ ಉದ್ಯೋಗಿ ಮೃತಪಟ್ಟಿದ್ದರೆ ಅನಾಥ/ಸಿಂಗಲ್‌ ಪೇರೆಂಟ್‌ ಅಫಿಡವಿತ್‌
  • ಹೆತ್ತವರ ಕಳೆದ ಮೂರು ತಿಂಗಳ ಸ್ಯಾಲರಿ ಸ್ಲಿಪ್‌/ಐಟಿಆರ್‌/ ನಮೂನೆ 16
  • ಬಿಪಿಎಲ್‌/ ಪಡಿತರ ಚೀಟಿ
  • ಅರ್ಜಿದಾರರ ಅಥವಾ ಹೆತ್ತವರ ಬ್ಯಾಂಕ್‌ ಖಾತೆ ಮಾಹಿತಿ
  • ಪಾಸ್‌ಪೋರ್ಟ್‌ ಗಾತ್ರದ ಫೋಟೋ

ಶ್ರೀ ತುಳಸಿ ತಂತಿ ಉದಾನ್‌ ವಿದ್ಯಾರ್ಥಿವೇತನ (Shri Tulsi Tanti Udaan Scholarship)

ಮೊದಲ ವರ್ಷದ ಬಿಇ/ಬಿಟೆಕ್‌ ಪದವಿಗೆ ಸೇರಿರುವ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಹತ್ತನೇ ತರಗತಿ, 12ನೇ ತರಗತಿಯಲ್ಲಿ ಕನಿಷ್ಢ 50 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಗಿಂತ ಹೆಚ್ಚಿರಬಾರದು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿನಿಯರು ಅಜಿ ಸಲ್ಲಿಸಬಹುದು.

ವಿದ್ಯಾರ್ಥಿ ವೇತನದ ಮೊತ್ತ: ವರ್ಷಕ್ಕೆ 1.20 ಲಕ್ಷ ರೂಪಾಯಿ

ಬೇಕಾದ ದಾಖಲೆಗಳು

  • ಹತ್ತನೇ ತರಗತಿ ಮತ್ತು 12 ತರಗತಿ ಅಂಕಪಟ್ಟಿ
  • ವಿಳಾಸ, ಗುರುತಿನ ಚೀಟಿ (ಆಧಾರ್‌ ಕಾರ್ಡ್‌)
  • ಪ್ರಸಕ್ತ ವರ್ಷದ ಕಾಲೇಜು ದಾಖಲಾತಿ ದಾಖಲೆ (ಶುಲ್ಕ ಪಾವತಿ ರಸಿದಿ, ದಾಖಲಾತಿ ಪತ್ರ, ಐಡೆಂಟೆಟಿ ಕಾರ್ಡ್‌)
  • ಆದಾಯ ಪ್ರಮಾಣ ಪತ್ರ
  • ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮೂಲದ ಆದಾಯದ ಕುರಿತು ಸಂಬಂಧಪಟ್ಟ ಪ್ರಾಧಿಕಾರದಿಂದ ಸರ್ಟಿಫಿಕೇಟ್‌
  • ಕುಟುಂಬದ ಉದ್ಯೋಗಿ ಮೃತಪಟ್ಟಿದ್ದರೆ ಅನಾಥ/ಸಿಂಗಲ್‌ ಪೇರೆಂಟ್‌ ಅಫಿಡವಿತ್‌
  • ಹೆತ್ತವರ ಕಳೆದ ಮೂರು ತಿಂಗಳ ಸ್ಯಾಲರಿ ಸ್ಲಿಪ್‌/ಐಟಿಆರ್‌/ ನಮೂನೆ 16
  • ಬಿಪಿಎಲ್‌/ ಪಡಿತರ ಚೀಟಿ
  • ಅರ್ಜಿದಾರರ ಅಥವಾ ಹೆತ್ತವರ ಬ್ಯಾಂಕ್‌ ಖಾತೆ ಮಾಹಿತಿ
  • ಪಾಸ್‌ಪೋರ್ಟ್‌ ಗಾತ್ರದ ಫೋಟೋ

ಶ್ರೀ ತುಳಸಿ ತಂತಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್‌ 10, 2024 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ಲಿಂಕ್‌ ಇಲ್ಲಿದೆ.

Whats_app_banner