ಉದ್ಯೋಗ ಸಂದರ್ಶನದಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬೇಕಾ; ನಿಮ್ಮ ರೆಸ್ಯೂಮ್‌ನಲ್ಲಿ ಈ 7 ಪವರ್‌ಫುಲ್ ಪದಗಳು ಇರಲಿ
Feb 28, 2024 03:22 PM IST
ಉದ್ಯೋಗ ಪಡೆಯಬೇಕಾದರೆ ನಿಮ್ಮ ರೆಸ್ಯೂಮ್ ಹೇಗಿರಬೇಕು. ಸಂದರ್ಶನಕಾರರನ್ನು ಆಕರ್ಷಿಸಲು ಸಿವಿಯಲ್ಲಿ ಏನೆಲ್ಲಾ ವಿಷಯಗಳಿರಬೇಕು ಅನ್ನೋದರ ವಿವರವನ್ನು ಇಲ್ಲಿ ತಿಳಿಯಿರಿ.
- ರೆಸ್ಯೂಮ್‌ನಲ್ಲಿ ಈ 7 ಪವರ್‌ಫುಲ್ ಪದಗಳಿದ್ದರೆ ನಿಮ್ಮನ್ನು ಸಂದರ್ಶನ ಮಾಡುವವರು ಇಂಪ್ರೆಸ್ ಮಾಡಿಸಿ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು. ಯಾವುವು ಆ ಪವರ್ ಪದಗಳು.
ಬೆಂಗಳೂರು: ಉದ್ಯೋಗ ಪಡೆಯಬೇಕಾದರೆ ಸಂದರ್ಶನದಲ್ಲಿ ಉತ್ತಮವಾಗಿ ಮಾತನಾಡಬೇಕು, ನಿಮ್ಮ ಮಾತಿನಲ್ಲಿ ಹಿಂದಿನ ಸಾಧನೆಗಳು, ಅವಕಾಶ ಸಿಕ್ಕರೆ ಮುಂದೆ ಏನೆಲ್ಲಾ ಮಾಡಬಹುದು ಎಂಬುದನ್ನು ಸಂದರ್ಶನಕಾರರಿಗೆ ಮನವರಿಕೆಯಾಗುವಂತೆ ಮಾತನಾಡಬೇಕು. ಇದರ ಜೊತೆಗೆ ನೀವು ವಿವರಿಸುವ ಮಾಹಿತಿಯೊಂದಿಗೆ ರೆಸ್ಯೂಮ್‌ನಲ್ಲೂ ಒಂದಷ್ಟು ಆಕರ್ಷಕ ವಿಚಾರಗಳಿರಬೇಕಾಗುತ್ತದೆ.
ರೆಸ್ಯೂಮ್ ಎಂಬುದು ಉದ್ಯೋಗ ಬಯಸುವ ಅಭ್ಯರ್ಥಿಯ ತನ್ನ ಬಗ್ಗೆ ಮನವರಿಕೆ ಮಾಡಿಕೊಡಬಹುದು ಶಿಕ್ಷಣದಿಂದ ಹಿಡಿದು ಅನುಭವದ ವರೆಗೆ ಎಲ್ಲಾ ಅಂಶಗಳನ್ನು ಒಳಗೊಂಡಿರವ ದಾಖಲೆಯಾಗಿರುತ್ತದೆ. ಈ ರೆಸ್ಯೂಮ್ ನೋಡಿದ ತಕ್ಷಣ ನೇಮಕ ಮಾಡಿಕೊಳ್ಳುವವರು ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಅವರ ಮನಸ್ಸಿನಲ್ಲಿ ಮೂಡಬೇಕು. ಏನೆಲ್ಲಾ ಸಾಧನೆ ಮಾಡಿರುತ್ತೀರಿ ಎಂಬುದನ್ನು ಇದರಲ್ಲಿ ಸ್ಪಷ್ಟವಾಗಿ ಹೇಳಿರಬೇಕು. ಸ್ಪರ್ಧಾ ಜಗತ್ತಿನಲ್ಲಿ ಉತ್ತಮ ರೀತಿಯಲ್ಲಿ ರೆಸ್ಯೂಮ್ ತಯಾರಿಸುವುದು ಒಂದು ರೀತಿಯ ಕಲೆ ಹಾಗೂ ಸವಾಲಿನ ಕೆಲಸವೇ ಸರಿ.
ನೀವೇನಾದರೂ ಉತ್ತಮ ರೆಸ್ಯೂಮ್ ತಯಾರಿಸಿ ಸಂದರ್ಶನಕಾರರನ್ನು ಇಂಪ್ರೆಸ್ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ಆಲೋಚನೆ ಮಾಡುತ್ತಿದ್ದರೆ, ನಿಮ್ಮ ರೆಸ್ಯೂಮ್‌ನಲ್ಲಿ ಈ 7 ಪವರ್ ಫುಲ್ ಪದಗಳನ್ನು ತಪ್ಪದೇ ಸೇರಿಸಿ. ಆಗ ನೇಮಕಾತಿ ಮಾಡಿಕೊಳ್ಳುವರಿಗೆ ನಿಮಗೆ ಮೊದಲ ಆದ್ಯತೆ ನೀಡುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಯಾವುವು ಆ 7 ಪವರ್ ಪದಗಳು ಅನ್ನೋದರ ವಿವರ ಈ ಕೆಳಗೆ ನೀಡಲಾಗಿದೆ.
ರೆಸ್ಯೂಮ್‌ನಲ್ಲಿ ಇರಬೇಕಾದ 7 ಪವರ್ ಫುಲ್ ಪದಗಳು
1 ಸಾಧಿಸಿದ್ದೇನೆ (Achieved)
ರೆಸ್ಯೂಮ್‌ನಲ್ಲಿ ನೀವು ನಿಮ್ಮ ನಿರ್ದಿಷ್ಟ ಗುರಿಗಳ ಬಗ್ಗೆ ಮಾಹಿತಿ ಇರಬೇಕು. ಜೊತೆಗೆ ಹಿಂದೆ ಏನೆಲ್ಲಾ ಸಾಧನೆ ಮಾಡಿದ್ದೀರಿ ಎಂಬುದನ್ನ ಸ್ಪಷ್ಟವಾಗಿ ಹೇಳಬೇಕು ಗುರಿಯನ್ನು ಹೈಲೈಟ್ ಮಾಡಲು ಅಚೀವ್ಡ್ ಎಂಬ ಪದದೊಂದಿಗೆ ನಿಮ್ಮ ಸಾಧನೆಯನ್ನು ವಿವರಿಸಬೇಕು. ಈ ಪದ ಯಶಸ್ಸಿನ ಅರ್ಥವನ್ನ ತಿಳಿಸುತ್ತದೆ.
2 ನವೀನ (Innovation)
ಹಿಂದಿನ ನಿಮ್ಮ ಕೆಲಸದ ಸಂದರ್ಭದಲ್ಲಿ ಹೊಸ ಆಲೋಚನೆಗಳನ್ನು ಜಾರಿ ಮಾಡಿದ ರೀತಿ, ಯಶಸ್ಸು, ಸಮಸ್ಯೆಗಳನ್ನು ಬಗೆಹರಿಸಲು ಬಳಸಿದ ಕೌಶಲ್ಯಗಳ ಬಗ್ಗೆ ವಿವರಿಸಲು ಇನ್ನೊವೇಷನ್ ಪದವನ್ನು ಬಳಸಬೇಕು.
3 ಲೆಡ್ (Led)
ನಾಯಕತ್ವದ ಕೌಶಲ್ಯಗಳು ಹಾಗೂ ಅನುಭವವನ್ನು ಹಂಚಿಕೊಳ್ಳಲು, ನಿಮ್ಮ ಪಾತ್ರ, ಮಾರ್ಗದರ್ಶನ ಹಾಗೂ ಮುಂದಾಳತ್ವದ ಬಗ್ಗೆ ವಿವರಿಸಲು ಲೆಡ್ ಎಂಬ ಪದವನ್ನು ಬಳಸಿ.
4 ಅನುಷ್ಠಾನ (Implementation)
ಯೋಜನೆಗಳು ಅಥವಾ ಕಾರ್ಯತಂತ್ರಗಳನ್ನು ಹೇಗೆ ಕಾರ್ಯರೂಪಕ್ಕೆ ತಂದಿದ್ದೀರಿ ಎಂಬುದರ ಬಗ್ಗೆ ವಿವರಿಸಲು ಇಂಪ್ಲಿಮೆಂಟೇಷನ್ ಎಂಬ ಪದವನ್ನು ಬರೆಯಲು ಮರೆಯಬೇಡಿ.
5 ಪುನಶ್ಚೇತನಗೊಳಿಸಲಾಗಿದೆ (Revitalised)
ರೆಸ್ಯೂಮ್‌ನಲ್ಲಿ ಪುನಶ್ಚೇತಗೊಳಿಸಲಾಗಿದೆ ಎಂಬ ಪದವನ್ನು ಬಳಸುವ ಮೂಲಕ ತಂಡ ಇಲ್ಲವೇ ಸಂಸ್ಥೆಗೆ ಹೊಸ ಶಕ್ತಿಯನ್ನು ತುಂಬಿವಂತಹ ನಿಮ್ಮ ಸಾಮರ್ಥ್ಯವನ್ನ ಹೈಲೈಟ್ ಮಾಡಿ
6 ಸುವ್ಯವಸ್ಥಿತಾಗಿದೆ (Streamlined)
ನಿಮ್ಮ ಸಂಘಟನಾ ಕೌಶಲ್ಯ ಮತ್ತು ಸರಳೀಕೃತ ಬಗ್ಗೆ ವಿವರಿಸಲು ಸುವ್ಯವಸ್ಥಿತ ಪದವನ್ನು ತಪ್ಪದೇ ಬಳಿಸಿಕೊಂಡು ನಿಮ್ಮ ದಕ್ಷತೆ ಬಗ್ಗೆ ವಿವರಿಸಿ.
7 ಪ್ರಭಾವಿತವಾಗಿದೆ (Influenced)
ನೀವು ಹೇಗೆ ಯಶಸ್ವಿಯಾಗಿ ಇತರರಿಗೆ ಮನವರಿಕೆ ಮಾಡಿಕೊಟ್ಟಿದ್ದೀರಿ ಎಂಬುದನ್ನು ಉದ್ಯೋಕ ಸಂದರ್ಶನಕಾರರ ಗಮನ ಸೆಳೆಯಲು ಇನ್‌ಫ್ಲ್ಯೂಯೆನ್ಸ್ಡ್ ಎಂಬ ಪದವನ್ನು ಬರೆಯಿರಿ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ