logo
ಕನ್ನಡ ಸುದ್ದಿ  /  ಜೀವನಶೈಲಿ  /  Explainer: ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುವುದು ಹೇಗೆ

Explainer: ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುವುದು ಹೇಗೆ

Umesh Kumar S HT Kannada

Nov 08, 2023 08:45 PM IST

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುವುದು ಹೇಗೆ, ಅದರ ಗುಣಲಕ್ಷಣ ವಿವರ ಇಲ್ಲಿದೆ.

  • ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ನಿಮಗನಿಸುತ್ತಿದೆಯಾ? ಫೋನ್ ಹ್ಯಾಕ್ ಆಗಿದೆ ಎಂಬುದನ್ನು ಗುರುತಿಸುವುದು ಹೇಗೆ, ಅದರ ಗುಣಲಕ್ಷಣಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ. 

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುವುದು ಹೇಗೆ, ಅದರ ಗುಣಲಕ್ಷಣ ವಿವರ ಇಲ್ಲಿದೆ.
ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುವುದು ಹೇಗೆ, ಅದರ ಗುಣಲಕ್ಷಣ ವಿವರ ಇಲ್ಲಿದೆ.

ಹಿಂದೆಲ್ಲ ಫೋನ್ ಕದ್ದಾಲಿಕೆ ಎಂಬುದು ಬಹುಚರ್ಚಿತ ವಿಚಾರ. ಈಗ ಫೋನ್ ಹ್ಯಾಕ್ ಮಾಡಲಾಗಿದೆ ಎಂಬುದು ಸುದ್ದಿಯ ಕೇಂದ್ರ ಬಿಂದು. ಕಳೆದ ಒಂದು ವಾರದ ಬೆಳವಣಿಗೆ ಗಮನಿಸಿದರೆ ವಿಪಕ್ಷ ನಾಯಕರು ಮತ್ತು ಕೆಲವು ಪತ್ರಕರ್ತರು ತಮ್ಮ ಐಫೋನ್‌ ಹ್ಯಾಕ್ ಆಗಿದೆ. “ಸರ್ಕಾರಿ ಪ್ರಾಯೋಜಿತ” ಹ್ಯಾಕರ್‌ಗಳು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಿಗೆ ಕೇಂದ್ರ ಸರ್ಕಾರವು, ಐಫೋನ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಹಕರಿಸುವಂತೆ ಆಪಲ್‌ ಕಂಪನಿಗೆ ಮನವಿ ಮಾಡಿತ್ತು.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನಿಮ್ಮ ಫೋನ್ ಹ್ಯಾಕ್ ಆಗಿದೆಯಾ? ಹ್ಯಾಕ್ ಆಗಿದ್ದರೆ ನೀವು ಏನು ಮಾಡಬಹುದು? ಇಲ್ಲಿ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳಿವೆ. ಅಂತಹ 5 ಅಂಶಗಳ ವಿವರಣೆ ಇಲ್ಲಿದೆ.

1. ಸರ್ಕಾರಿ ಪ್ರಾಯೋಜಿತ ಸೈಬರ್ ದಾಳಿ (state-sponsored cyber attack) ಎಂದರೇನು

ಸರ್ಕಾರಿ ಪ್ರಾಯೋಜಿತ ದಾಳಿ (state-sponsored attack) ಅಥವಾ ಸರ್ಕಾರಿ ಪ್ರಾಯೋಜಿತ ಸೈಬರ್ ದಾಳಿಯಲ್ಲಿ ಹ್ಯಾಕರ್‌ಗಳು ಒಂದು ನಿಶ್ಚಿತ ದೇಶದ ಸರ್ಕಾರಿ ವೆಬ್‌ಸೈಟ್‌ ಅಥವಾ ನಿರ್ಣಾಯಕ ಮೂಲಸೌಕರ್ಯಗಳಾದ ಪವರ್‌ಗ್ರಿಡ್ ಮುಂತಾದವುಗಳ ಮೇಲೆ ದಾಳಿ ನಡೆಸುವಂಥದ್ದು. ಅರ್ಥ ಮಾಡಿಕೊಳ್ಳುವ ಸಲುವಾಗಿ ಚೀನೀಯರು ಅಥವಾ ಪಾಕಿಸ್ತಾನೀಯರು ಭಾರತದ ಮೇಲೆ ನಡೆಸುವ ಸೈಬರ್‌ ದಾಳಿಯನ್ನು ಮನಸ್ಸಿಗೆ ತಂದುಕೊಳ್ಳಿ.

ಆದ್ದರಿಂದ ಮಂಗಳವಾರ ಹಲವಾರು ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರು 'ಸರ್ಕಾರಿ ಪ್ರಾಯೋಜಿತ' ಗೌಪ್ಯತಾ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ಐಫೋನ್ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದಾಗ, ಅವರು ಗಲಿಬಿಲಿಗೊಂಡರು.

ಭಾರತ ಸರ್ಕಾರವು ತನಿಖೆಗೆ ಸಹಾಯ ಮಾಡಲು ಆಪಲ್ ಅನ್ನು ಒತ್ತಾಯಿಸಿದೆ. ಅಲ್ಲದೆ, 150 ಕ್ಕೂ ಹೆಚ್ಚು ದೇಶಗಳ ಜನರಿಗೆ ಈ ಎಚ್ಚರಿಕೆ ಸಂದೇಶಗಳನ್ಜು ಕಳುಹಿಸಿರುವುದೇಕೆ ಎಂದು ಎಂದು ಕೇಳಿದೆ.

ಇದೇ ವೇಳೆ, ಎಚ್ಚರಿಕೆ ಸಂದೇಶದಲ್ಲಿ ಯಾವುದೇ ಸರ್ಕಾರಿ ಪ್ರಾಯೋಜಿತ ದಾಳಿಕೋರರ ವಿವರ ನಿರ್ದಿಷ್ಟಪಡಿಸಿಲ್ಲ ಎಂದು ಆಪಲ್ ಕಂಪನಿ ಸ್ಪಷ್ಟಪಡಿಸಿದೆ.

2. ಸರ್ಕಾರಗಳು ತಮ್ಮ ಪೌರರನ್ನೂ ಟಾರ್ಗೆಟ್ ಮಾಡುತ್ತಾವಾ?

2021 ರಲ್ಲಿ, ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು ಭಾರತ ಮತ್ತು ವಿದೇಶಗಳಲ್ಲಿನ ಕಾರ್ಯಕರ್ತರು ಮತ್ತು ಪತ್ರಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ ಎಂಬ ಸುದ್ದಿ ಜಾಗತಿಕವಾಗಿ ಸಂಚಲನ ಮೂಡಿಸಿತ್ತು. ಒಂದು ವರ್ಷದ ನಂತರ, ಸುಪ್ರೀಂ ಕೋರ್ಟ್ ಸ್ಥಾಪಿಸಿದ ತಾಂತ್ರಿಕ ಸಮಿತಿಯು ತಾನು ಪರೀಕ್ಷಿಸಿದ ಫೋನ್‌ಗಳಲ್ಲಿ ಪೆಗಾಸಸ್ ಅನ್ನು ಸ್ಥಾಪಿಸಲಾಗಿಲ್ಲ ಎಂದು ತೀರ್ಮಾನಿಸಿತು. ಆದಾಗ್ಯೂ, ಭಾರತದ ಅಧಿಕಾರಿಗಳು ತನ್ನ ತನಿಖೆಗೆ "ಸಹಕಾರ ನೀಡಲಿಲ್ಲ" ಎಂದು ಸಮಿತಿ ಉಲ್ಲೇಖಿಸಿತ್ತು.

ಚೀನಾ, ರಷ್ಯಾ, ಯುಕೆ, ಮತ್ತು ಯುಎಸ್ ಸೇರಿದಂತೆ ಹಲವು ದೇಶಗಳು, ಫೋನಿ ಅಪ್ಲಿಕೇಶನ್‌ಗಳು, ಸ್ಪೈವೇರ್ ಮತ್ತು ಟ್ರೋಜನ್‌ಗಳ ಸಹಾಯದಿಂದ ಪರಸ್ಪರ ಮತ್ತು ಅವರ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುತ್ತಿವೆ ಎಂಬ ಆರೋಪವಿದೆ.

3. ಆಂಡ್ರಾಯ್ಡ್‌ಗಳಿಗಿಂತ ಐಫೋನ್‌ಗಳು ಸೇಫ್ ಅಲ್ವಾ

ಆಪಲ್ ಒಂದೇ ಆಪರೇಟಿಂಗ್ ಸಿಸ್ಟಮ್ (OS) ಅನ್ನು ಹೊಂದಿರುವುದರಿಂದ ಅದರ ದೋಷಗಳನ್ನು ಬೇಕಾದಂತೆ ಸರಿಪಡಿಸಬಹುದು. ಮತ್ತೊಂದೆಡೆ, ಆಂಡ್ರಾಯ್ಡ್‌ನ ಆಪರೇಟಿಂಗ್ ಸಿಸ್ಟಮ್‌ ವಿವಿಧ ರೀತಿಯವು ಇದ್ದು, ಪದೇಪದೆ ಅಪ್ಡೇಟ್‌ ಆಗುತ್ತಿರುತ್ತವೆ. ಪೆಗಾಸಸ್‌ನಂತಹ ಸ್ಪೈವೇರ್ ರಿಮೋಟ್ ಆಗಿ ಐಫೋನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಆದರೆ, ಈ ರಿಮೋಟ್ ಹ್ಯಾಕಿಂಗ್ "ವಿಸ್ಮಯಕಾರಿಯಾಗಿ ವಿಶೇಷವಾದುದು ಅಷ್ಟೇ ಅಲ್ಲ ದುಬಾರಿ" ಕೂಡ. ಇದಕ್ಕೆ ಕನಿಷ್ಠ 100,000 ಡಾಲರ್‌ ವೆಚ್ಚವಾಗುತ್ತದೆ ಎಂದು ಸೆರ್ಟೊ ಸಾಫ್ಟ್‌ವೇರ್ ವಿವರಿಸುತ್ತದೆ.

4. ಫೋನ್‌ಗಳನ್ನು ಹ್ಯಾಕರ್‌ಗಳು ಸ್ನೂಪ್ ಮಾಡುವುದು ಹೇಗೆ

  1. ಮಾಲ್‌ವೇರ್‌ನೊಂದಿಗೆ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಅಥವಾ ಕಂಪನಿ ಅಥವಾ ವಿಶ್ವಾಸಾರ್ಹ ವ್ಯಕ್ತಿಯನ್ನು ಸೋಗು ಹಾಕುವ ಮೂಲಕ ಹ್ಯಾಕರ್‌ಗಳು ಬಳಕೆದಾರರನ್ನು ಆಕರ್ಷಿಸುತ್ತಾರೆ.
  2. ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳು ಮತ್ತು ಕೀಲಾಗರ್‌ಗಳನ್ನು ಸಹ ನೀವು ಟೈಪ್ ಮಾಡುವುದನ್ನು ಅಥವಾ ಹೇಳುವುದನ್ನು ಸ್ನೂಪ್ ಮಾಡಲು ಬಳಸುತ್ತಾರೆ.
  3. ಹ್ಯಾಕರ್‌ಗಳು ನಿಮ್ಮ ಫೋನ್ 30 ಅಡಿ ಒಳಗೆ ಇದ್ದರೆ ಬ್ಲೂಟೂತ್ ಸಂಪರ್ಕದ ಮೂಲಕವೂ ಸ್ನೂಪ್‌ ಮಾಡಬಹುದು.
  4. ಸ್ನೂಪ್‌ ಆದ ಫೋನ್ ಬಳಕೆದಾರರ ಸಂದೇಶಗಳು, ಫೋಟೋಗಳು, ಕರೆ ಲಾಗ್‌ಗಳು, ಇಂಟರ್ನೆಟ್ ಇತಿಹಾಸ ಮತ್ತು ಕ್ರೆಡಿಟ್ ಕಾರ್ಡ್ ಖಾತೆಗಳು ಮತ್ತು ಇತರ ವೈಯಕ್ತಿಕ ಮಾಹಿತಿಯಂತಹ ಡೇಟಾ ಸೇರಿ ಆನ್‌ಲೈನ್ ಸ್ಟೋರೇಜ್ ಸೈಟ್‌ಗಳಿಗೆ ಸಿಂಕ್ ಮಾಡಲಾದ ಎಲ್ಲವೂ ಹ್ಯಾಕರ್‌ಗಳಿಗೆ ಲಭ್ಯವಿರುತ್ತದೆ.

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಹೇಳುವುದು ಹೇಗೆ

  1. ಫೋನ್‌ನ ಬ್ಯಾಟರಿ ಬೇಗ ಬರಿದಾಗುವುದು ಒಂದು ಲಕ್ಷಣ.
  2. ಫೋನ್ ಕಾರ್ಯಾಚರಣೆ ಸ್ವಲ್ಪ ನಿಧಾನವಾಗುವುದು ಅಥವಾ ಬಿಸಿಯಾಗುವುದು
  3. ಅಪ್ಲಿಕೇಶನ್‌ಗಳು ಹಠಾತ್ತನೆ ನಿಂತುಬಿಡುವುದು ಅಥವಾ ನಿಮ್ಮ ಫೋನ್ ರೀಬೂಟ್ ಆಗುವುದು
  4. ನಿಮ್ಮ ಫೋನ್ ಬಿಲ್‌ನಲ್ಲಿ ವಿಚಿತ್ರ ಡೇಟಾ, ಪಠ್ಯ ಅಥವಾ ಇತರ ವಿಚಿತ್ರ ಶುಲ್ಕಗಳು ಸೇರಿಕೊಳ್ಳುವುದು
  5. ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಎನ್‌ಕ್ರಿಪ್ಟ್ ಮಾಡಲು (ನಿಮ್ಮ 'ಭದ್ರತೆ' ಸೆಟ್ಟಿಂಗ್‌ಗಳಲ್ಲಿ), SIM ಕಾರ್ಡ್‌ಗಳನ್ನು ಲಾಕ್ ಮಾಡಲು, ಸಾಧ್ಯವಾದಾಗಲೆಲ್ಲಾ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು ಬಳಸಲು, ಬಳಕೆಯಲ್ಲಿಲ್ಲದಿದ್ದಾಗ ವೈ-ಫೈ ಮತ್ತು ಬ್ಲೂಟೂತ್ ಅನ್ನು ಆಫ್ ಮಾಡಲು ಮತ್ತು ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಸ್ಟೋರ್‌ಗಳಿಂದ ದೂರವಿರಲು McAfee ಸಲಹೆ ನೀಡುತ್ತದೆ. ನಿಮ್ಮ ಭದ್ರತಾ ಸಾಫ್ಟ್‌ವೇರ್ ಮತ್ತು ಓಎಸ್ ಅನ್ನು ನಿಯತವಾಗಿ ಅಪ್ಡೇಟ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು