logo
ಕನ್ನಡ ಸುದ್ದಿ  /  ಜೀವನಶೈಲಿ  /  Navaratri Fashion: ನವರಾತ್ರಿಗೆ ಹೆಣ್ಣುಮಕ್ಕಳಷ್ಟೇ ಅಲ್ಲ ಮನೆಮಂದಿಯೆಲ್ಲಾ ಸುಂದರವಾಗಿ ತಯಾರಾಗಲು ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌

Navaratri Fashion: ನವರಾತ್ರಿಗೆ ಹೆಣ್ಣುಮಕ್ಕಳಷ್ಟೇ ಅಲ್ಲ ಮನೆಮಂದಿಯೆಲ್ಲಾ ಸುಂದರವಾಗಿ ತಯಾರಾಗಲು ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌

Reshma HT Kannada

Oct 17, 2023 12:42 PM IST

google News

ನವರಾತ್ರಿಗೆ ಹೆಣ್ಣುಮಕ್ಕಳಷ್ಟೇ ಅಲ್ಲ ಮನೆಮಂದಿಯೆಲ್ಲಾ ಸುಂದರವಾಗಿ ತಯಾರಾಗಲು ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌

    • ಈ ನವರಾತ್ರಿಗೆ ಮಕ್ಕಳು, ಮಹಿಳೆಯರು ಹಾಗೂ ಗಂಡಸರು ಹೀಗೆ ಮನೆಮಂದಿಯೆಲ್ಲಾ ಯಾವ ರೀತಿಯ ಉಡುಪು, ಆಭರಣ ಹಾಗೂ ಸೌಂದರ್ಯ ಪರಿಕರಗಳನ್ನು ಧರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಒಂದಿಷ್ಟು ಐಡಿಯಾ. ಈ ಐಡಿಯಾವನ್ನು ನೀವೂ ಅನುಸರಿಸಿ ಹಬ್ಬದ ದಿನಗಳಲ್ಲಿ ಸ್ಟೈಲಿಶ್‌ ಆಗಿ, ಸಾಂಪ್ರದಾಯಿಕವಾಗಿಯೂ ಕಾಣಿಸಿ. 
ನವರಾತ್ರಿಗೆ ಹೆಣ್ಣುಮಕ್ಕಳಷ್ಟೇ ಅಲ್ಲ ಮನೆಮಂದಿಯೆಲ್ಲಾ ಸುಂದರವಾಗಿ ತಯಾರಾಗಲು ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌
ನವರಾತ್ರಿಗೆ ಹೆಣ್ಣುಮಕ್ಕಳಷ್ಟೇ ಅಲ್ಲ ಮನೆಮಂದಿಯೆಲ್ಲಾ ಸುಂದರವಾಗಿ ತಯಾರಾಗಲು ಇಲ್ಲಿದೆ ಒಂದಿಷ್ಟು ಫ್ಯಾಷನ್‌ ಟಿಪ್ಸ್‌ (Pinterest )

ಹಬ್ಬಗಳು ಬಂತೆಂದರೆ ಮನೆ, ಮನಗಳಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಪೂಜೆ, ವಿಶೇಷ ತಿನಿಸುಗಳ ಜೊತೆಗೆ ಬಟ್ಟೆಗಳು, ಆಭರಣಗಳು ಸಂಭ್ರಮ ಹೆಚ್ಚುವಂತೆ ಮಾಡುತ್ತವೆ. ಸಾಮಾನ್ಯವಾಗಿ ಹಬ್ಬದ ದಿನಗಳು ಬಂತೆಂದರೆ ಈ ಬಾರಿ ಯಾವ ರೀತಿಯ ಬಟ್ಟೆ, ಆಭರಣ ಧರಿಸುವುದು ಎಂಬ ಚಿಂತೆ ಗಂಡಸರು, ಹೆಂಗಸರು ಹಾಗೂ ಮಕ್ಕಳು ಎಲ್ಲರನ್ನೂ ಕಾಡುವುದು ಸಹಜ. ಪ್ರತಿ ಬಾರಿಯೂ ಹಿಂದಿಗಿಂತ ಈ ಬಾರಿ ಭಿನ್ನವಾಗಿ ಕಾಣಿಸಬೇಕು ಎಂಬ ಆಸೆ ಕಾಡುವುದು ಸಹಜ.

ಇದೀಗ ನವರಾತ್ರಿ ಹಬ್ಬ ಆರಂಭವಾಗಿದೆ. ನವರಾತ್ರಿಯಲ್ಲಿ ವಿವಿಧ ಬಣ್ಣಗಳ ಬಟ್ಟೆ ಧರಿಸುವುದು ವಿಶೇಷ. ಈ ಹಬ್ಬದಲ್ಲಿ ಪೂಜೆಯೊಂದಿಗೆ ಫ್ಯಾಷನ್‌ನತ್ತಲೂ ಗಮನ ಹರಿಸಬಹುದು. ನವರಾತ್ರಿ ಮೊದಲ ದಿನದಿಂದ ವಿಜಯದಶಮಿವರೆಗೂ ವಿಶೇಷ ಪೂಜೆಗಳು ನಡೆಯುವ ಕಾರಣ ದಿನಕ್ಕೊಂದು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕಾಗುತ್ತದೆ. ಹಾಗಾದರೆ ಈ ನವರಾತ್ರಿಗೆ ಮಕ್ಕಳು, ಮಹಿಳೆಯರು ಹಾಗೂ ಗಂಡಸರು ಯಾವೆಲ್ಲಾ ರೀತಿ ಉಡುಪುಗಳನ್ನು ಧರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು ನೋಡಿ.

ಮಹಿಳೆಯರ ಸಾಂಪ್ರದಾಯಿಕ ಫ್ಯಾಷನ್‌

ಘಾಗ್ರ ಚೋಲಿ: ಈ ಹಬ್ಬದ ಸಮಯಕ್ಕೆ ಘಾಗ್ರ ಚೋಲಿ ಹೇಳಿ ಮಾಡಿಸಿದ ಉಡುಪು. ಬಣ್ಣ ಬಣ್ಣದ ಘಾಗ್ರ ಚೋಲಿಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಹಗಲಿನಲ್ಲಿ ತಿಳಿ ಬಣ್ಣ ಘಾಗ್ರ ಸೂಕ್ತವಾದರೆ, ರಾತ್ರಿ ವೇಳೆಗೆ ಗಾಢ ವಿನ್ಯಾಸದ ಘಾಗ್ರ ಹೆಚ್ಚು ಹೊಂದುತ್ತದೆ.

ಸೀರೆ: ಯಾವುದೇ ಹಬ್ಬ, ಪೂಜೆಯ ಸಂದರ್ಭವಾಗಲಿ ಸೀರೆ ಬೆಸ್ಟ್‌ ಸಾಂಪ್ರದಾಯಿಕ ಉಡುಪು. ಧಾಳ ಬಣ್ಣದ, ಸಾಂಪ್ರದಾಯಿಕ ವಿನ್ಯಾಸವಿರುವ ಸೀರೆಯು ನಿಮ್ಮ ನೋಟವನ್ನು ಬದಲಿಸುವುದರಲ್ಲಿ ಎರಡು ಮಾತಿಲ್ಲ. ಸೀರೆಯನ್ನು ಬೇರೆ ಬೇರೆ ರೀತಿಯಲ್ಲಿ ಉಡುಪು ಮೂಲಕ ಹಬ್ಬದಲ್ಲಿ ಮಿಂಚಬಹುದು.

ಪಲಾಝೋ ಸೆಟ್‌: ಧರಿಸಲು ಆರಾಮದಾಯಕ ಎನ್ನಿಸುವ, ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುವ ಪಾಲಾಝೋ ಸೆಟ್‌ಗಳು ಹಬ್ಬಕ್ಕೆ ಸಾಂಪ್ರದಾಯಿಕ ಹಾಗೂ ಪಾಶ್ಚ್ಯಾತ್ಯ ನೋಟ ಎರಡೂ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಧಾಳ ಹಾಗೂ ಕಾಂಟ್ರ್ಯಾಸ್ಟ್‌ ಬಣ್ಣದ ಉಡುಪುಗಳು ಧರಿಸಲು ಉತ್ತಮ.

ಚೂಡಿದಾರ್‌: ಚೂಡಿದಾರ್‌ ಧರಿಸಲು ಸುಲಭ ಹಾಗೂ ಇದು ಆರಾಮದಾಯಕ ಉಡುಪು ಹೌದು, ಇದನ್ನು ಧರಿಸಿದಾಗ ಸಾಂಪ್ರದಾಯಿಕ ನೋಟ ಸಿಗುವುದು ಸುಳ್ಳಲ್ಲ.

ಇತರೆ ಪರಿಕರಗಳು

ಆಭರಣ: ಅಗಲವಾದ ಕಿವಿಯೋಲೆ, ಕೈ ತುಂಬ ಬಳೆಗಳು ಮತ್ತು ಕೊರಳಿಗೊಪ್ಪುವ ನೆಕ್ಲೇಸ್‌ ನಿಮ್ಮ ಔಟ್‌ಫಿಟ್‌ಗೆ ಪರಿಪೂರ್ಣತೆ ನೀಡುತ್ತವೆ. ಬಣ್ಣದ ಬಣ್ಣದ ಅಗಲವಾದ ಸೆಟ್‌ಗಳನ್ನು ಧರಿಸಲು ಹಿಂಜರಿಯಬೇಡಿ. ಇವು ನಿಮಗೆ ರಿಚ್‌ ಲುಕ್‌ ನೀಡುತ್ತವೆ.

ಬಿಂದಿ ಹಾಗೂ ಬಳೆ: ನವರಾತ್ರಿ ಹಬ್ಬದಲ್ಲಿ ಬಿಂದಿ ಹಾಗೂ ಬಳೆಗಳನ್ನು ತೊಡುವುದು ಬಹಳ ಮುಖ್ಯ. ಇವು ನಿಮ್ಮ ಸಾಂಪ್ರದಾಯಿಕ ಸ್ಟೈಲ್‌ಗೆ ಇನ್ನಷ್ಟು ಒತ್ತು ನೀಡುವುದರಲ್ಲಿ ಅನುಮಾನವಿಲ್ಲ.

ಪಾದರಕ್ಷೆಗಳನ್ನು ಕೂಡ ಸಾಂಪ್ರದಾಯಿಕ ಉಡುಪಿಗೆ ಹೊಂದುವಂತೆ ಧರಿಸುವುದು ಬಹಳ ಮುಖ್ಯವಾಗುತ್ತದೆ.

ಹಬ್ಬಕ್ಕೆ ಹೀಗಿರಲಿ ಪುರುಷರ ಉಡುಪು

ಕುರ್ತಾ ಪೈಜಾಮ ಅಥವಾ ಕುರ್ತಾ ಧೋತಿ: ಯಾವುದೇ ಕಾರ್ಯಕ್ರಮ ಅಥವಾ ಹಬ್ಬಗಳಿಗಿರಲಿ ಗಂಡನಿಗೆ ಕುರ್ತಾ ಪೈಜಾಮ ಅಥವಾ ಧೋತಿ ಹೇಳಿ ಮಾಡಿಸಿದ ಉಡುಪು. ಇದು ಕ್ಲಾಸಿಕ್‌ ನೋಡ ಸಿಗುವಂತೆ ಮಾಡುತ್ತದೆ. ಬೋಲ್ಡ್‌ ಬಣ್ಣ, ವಿನ್ಯಾಸವು ಅಪರೂಪ ಎನ್ನಿಸುವ ಕುರ್ತಾವನ್ನು ಈ ಹಬ್ಬಕ್ಕೆ ಧರಿಸಬಹುದು.

ಶೇವಾರ್ನಿ: ವಿಶೇಷ ಸಂದರ್ಭಗಳಲ್ಲಿ, ಸಂಕೀರ್ಣವಾದ ಕಸೂತಿ ಮತ್ತು ಕಾಂಟ್ರಾಸ್ಟ್ ಬಾಟಮ್‌ಗಳನ್ನು ಹೊಂದಿರುವ ಶೆರ್ವಾನಿ ಒಂದು ಸೊಗಸಾದ ಆಯ್ಕೆಯಾಗಿದೆ.

ಪಂಚೆ, ಶರ್ಟ್‌: ಸಾಂಪ್ರದಾಯಿಕ ಉಡುಪಿನ ವಿಷಯಕ್ಕೆ ಬಂದಾಗ ಪಂಚೆ ಹಾಗೂ ಶರ್ಟ್‌ ಎಂದಿಗೂ ಮೇಲುಗೈ ಸಾಧಿಸುವುದು. ಬಿಳಿ ಪಂಚೆಯ ಜೊತೆ ವಿವಿಧ ಬಣ್ಣದ ಶರ್ಟ್‌ಗಳನ್ನು ಧರಿಸುವ ಮೂಲಕ ಹಬ್ಬದ ದಿನಗಳಲ್ಲಿ ಸ್ಟೈಲಿಶ್‌ ಆಗಿ ಕಾಣಬಹುದು.

ಮಕ್ಕಳ ಉಡುಪು ಹೀಗಿರಲಿ

ಹೆಣ್ಣುಮಕ್ಕಳಿಗೆ

ಲೆಹಂಗಾ ಚೋಲಿ, ಅರ್ನಾಕಲಿ ಡ್ರೆಸ್‌: ಗಾಢ ಹಾಗೂ ವಿವಿಧ ಬಣ್ಣದ ಲೆಹಂಗಾ ಚೋಲಿ ನವರಾತ್ರಿಯ ಸಮಯದಲ್ಲಿ ಮಕ್ಕಳ ಅಂದ ಹೆಚ್ಚಿಸುವ ಜೊತೆಗೆ ಸಾಂಪ್ರದಾಯಿಕ ನೋಟ ಸಿಗುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಅರ್ನಾಕಲಿ ಉಡುಪು ಕೂಡ ಮಕ್ಕಳಿಗೆ ಹೇಳಿ ಮಾಡಿಸಿದಂತಿರುತ್ತದೆ.

ಇದರೊಂದಿಗೆ ಸುಂದರವಾಗಿ ತಲೆಗೂದಲನ್ನು ವಿವಿಧ ಪರಿಕರಗಳಿಂದ ಅಲಂಕರಿಸಿಬೇಕು. ಜೊತೆಗೆ ಕೈ ತುಂಬಾ ಬಳೆ, ಕಿವಿಯೋಲೆ, ಬೈತಲೆ ಬೊಟ್ಟು, ಕಾಲ್ಗೆಜ್ಜೆ ಇವುಗಳು ತೊಡಿಸುವ ಮೂಲಕ ಅಂದ ಹೆಚ್ಚಿಸಬಹುದು.

ಗಂಡು ಮಕ್ಕಳಿಗೆ

ಕುರ್ತಾ ಪೈಜಾಮ: ಗಂಡಸರಂತೆ ಗಂಡು ಮಕ್ಕಳಿಗೆ ಹಬ್ಬದ ಸಮಯದಲ್ಲಿ ಕುರ್ತಾ ಪೈಜಾಮ ಅಥವಾ ಧೋತಿ ಹಾಕಿಸುವುದು ಉತ್ತಮ. ಇದು ಧರಿಸಲು ಆರಾಮದಾಯಕವಾಗಿದ್ದು, ಅವರನ್ನು ಮುದ್ದಾಗಿ ಕಾಣುವಂತೆ ಮಾಡುತ್ತದೆ. ವಿವಿಧ ಬಣ್ಣದ ಕುರ್ತಾ ತೊಡಿಸಿ ಗಂಡುಮಕ್ಕಳು ಮುದ್ದಾಗಿ ಕಾಣುವಂತೆ ಸಿಂಗರಿಸಬಹುದು.

ಇನ್ನೊಂದಿಷ್ಟು ಟಿಪ್ಸ್‌

  • ನವರಾತ್ರಿ ಸಮಯದಲ್ಲಿ ಮನೆಯವರೆಲ್ಲರೂ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಹಬ್ಬವನ್ನು ಆನಂದಿಸಬಹುದು. ಇದು ಗ್ರೂಪ್‌ ಫೋಟೊಗೊ ಬೆಸ್ಟ್‌.
  • ಹಗಲಿನ ವೇಳೆ ಕಾಟನ್‌ನಂತಹ ಆರಾಮದಾಯಕ ಬಟ್ಟೆ ಧರಿಸಿದರೆ, ರಾತ್ರಿ ವೇಳೆ ರೇಷ್ಮೆ ಬಟ್ಟೆ ಧರಿಸಬಹುದು.
  • ಹೆಣ್ಣುಮಕ್ಕಳು ಬಟ್ಟೆಗೆ ತಕ್ಕಂತೆ ಸಾಂಪ್ರದಾಯಿಕ ಶೈಲಿಯ ಮೇಕಪ್‌ಗೂ ಒತ್ತು ನೀಡಬಹುದು.
  • ಇದರೊಂದಿಗೆ ನೀವು ಧರಿಸುವ ಆಭರಣ ಮೇಲೂ ಗಮನ ಹರಿಸಿ, ಇವು ಕೂಡ ನಿಮ್ಮ ಅಂದ ಹೆಚ್ಚಲು ಸಹಕಾರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ