Weight Loss: ತೂಕ ಇಳಿಸಲು ಟ್ರೈ ಮಾಡ್ತಿದ್ರೆ ಕರಿಬೇವು ತಿನ್ನಿ; ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗಲು ಕರಿಬೇವಿನಿಂದಾಗುವ ಪ್ರಯೋಜನಗಳಿವು
Oct 06, 2023 01:42 PM IST
ತೂಕ ಇಳಿಕೆಗೆ ಸಹಕಾರಿ ಕರಿಬೇವು
- ತೂಕ ಇಳಿಕೆಗೆ ಕೆಲವು ಮನೆಮದ್ದು ಕೂಡ ಸಹಾಯ ಮಾಡುತ್ತವೆ. ಸಮರ್ಪಕ ಡಯೆಟ್ ಹಾಗೂ ವ್ಯಾಯಾಮದೊಂದಿಗೆ ಈ ಮನೆಮದ್ದುಗಳ ಸೇವನೆಯಿಂದ ಪರಿಣಾಮಕಾರಿ ತೂಕ ಇಳಿಕೆ ಸಾಧ್ಯ. ಇವುಗಳಲ್ಲಿ ಕರಿಬೇವು ಕೂಡ ಒಂದು. ಹಾಗಾದರೆ ಕರಿಬೇವು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ ನೋಡಿ.
ಇತ್ತೀಚೆಗೆ ತೂಕ ಇಳಿಕೆಯ ವಿಚಾರದಲ್ಲಿ ಜನರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನಾವು ಸೇವಿಸುವ ಆಹಾರ, ಅನುಸರಿಸುತ್ತಿರುವ ಜೀವನಶೈಲಿ, ಒತ್ತಡ ಇನ್ನಿತರ ಕಾರಣಗಳಿಂದ ಎಷ್ಟೇ ನಿಗಾ ವಹಿಸಿದರೂ ತೂಕ ಹೆಚ್ಚಳವಾಗುವುದು ಸಾಮಾನ್ಯವಾಗಿದೆ.
ತೂಕ ಇಳಿಕೆ ವಿಚಾರವಾಗಿ ಮನೆಮದ್ದಿನ ಬಗ್ಗೆ ನೀವು ಯೋಚಿಸುತ್ತಿದ್ದರೆ, ಖಂಡಿತ ಇಲ್ಲಿದೆ ಉತ್ತರ. ಕರಿಬೇವು ತೂಕ ಇಳಿಕೆಗೆ ಬೆಸ್ಟ್ ಮೆಡಿಸಿನ್. ಅಡುಗೆಯ ಪರಿಮಳ ಹೆಚ್ಚಿಸುವ ಉದ್ದೇಶದಿಂದ ಒಗ್ಗರಣೆಗೆ ಬಳಸುವ ಈ ಕರಿಬೇವು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದರ ಸೇವನೆಯಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಪ್ರತಿದಿನ ನಿಮ್ಮ ಆಹಾರದೊಂದಿಗೆ ಕರಿಬೇವನ್ನು ಬಳಸುವುದರಿಂದ ಕೊಬ್ಬು ಕಡಿಮೆಯಾಗುವ ಜೊತೆಗೆ, ತೂಕ ಇಳಿಕೆಗೂ ಸಹಾಯ ಮಾಡುತ್ತದೆ.
ಕರಿಬೇವು ತೂಕ ಇಳಿಕೆಗೆ ಯಾವೆಲ್ಲಾ ರೀತಿ ಸಹಾಯ ಮಾಡುತ್ತದೆ ನೋಡಿ.
ಚಯಾಪಚಯನ್ನು ಹೆಚ್ಚಿಸುತ್ತದೆ
ಕರಿಬೇವಿನ ಎಲೆಯಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕ ಅಂಶಗಳಿವೆ. ಜೊತೆಗೆ ಇದು ಚಯಾಪಚಯವನ್ನು ಉತ್ತೇಜಿಸುವ ಜೈವಿಕ ಸಕ್ರಿಯ ಸಂಯಕ್ತಗಳಿಂದ ಸಮೃದ್ಧವಾಗಿದೆ. ಚಯಾಪಚಯ ಕ್ರಿಯೆಯ ಸುಧಾರಣೆಯಿಂದ ಕ್ಯಾಲೊರಿ ಮಟ್ಟದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ಪರಿಣಾಮಕಾರಿ ಇದು ತೂಕ ಇಳಿಕೆಗೆ ಸಹಕರಿಸುತ್ತದೆ.
ಜೀರ್ಣಕ್ರಿಯೆಯ ವೃದ್ಧಿ
ಪರಿಣಾಮಕಾರಿ ತೂಕ ಇಳಿಕೆಗೆ ಆರೋಗ್ಯಕರ ಜೀರ್ಣಕ್ರಿಯೆ ಬಹಳ ಮುಖ್ಯ. ಕರಿಬೇವಿನ ಎಲೆಗಳು ದೇಹದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಮಲಬದ್ಧತೆ ನಿವಾರಣೆಗೂ ನೆರವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಅಂಶದ ನಿಯಂತ್ರಣ
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸುವುದು ಕೂಡ ತೂಕ ಇಳಿಕೆಗೆ ಬಹಳ ಅವಶ್ಯ. ಕರಿಬೇವಿನ ಎಲೆಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಸಿವನ್ನು ನಿಯಂತ್ರಿಸುತ್ತದೆ
ಕರಿಬೇವಿನ ಎಲೆಗಳಲ್ಲಿನ ನಾರಿನಾಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಾರಿನಾಂಶವು ಹೊಟ್ಟೆಯನ್ನು ತುಂಬಿದಂತಿರಿಸುತ್ತದೆ. ಇದು ಅತಿಯಾಗಿ ತಿನ್ನುವುದು ಹಾಗೂ ಊಟದ ಮಧ್ಯೆ ಬೇಡ ತಿನಿಸುಗಳ ಸೇವನೆಗೆ ಕಡಿವಾಣ ಹಾಕುವಂತೆ ಮಾಡುತ್ತದೆ. ಹೀಗಾಗಿ ಕರಿಬೇವಿನ ಸೇವನೆಯಿಂದ ದೇಹದಲ್ಲಿ ಕ್ಯಾಲೊರಿ ಅಂಶ ಕೂಡ ಕಡಿಮೆಯಾಗುತ್ತದೆ.
ನಿರ್ವಿಷಗೊಳಿಸುತ್ತದೆ
ದೇಹವನ್ನು ನಿರ್ವಿಷಗೊಳಿಸುವುದರಿಂದ ಪರಿಣಾಮಕಾರಿಯಾಗಿ ತೂಕ ನಷ್ಟಗೊಳಿಸಲು ಸಾಧ್ಯವಿದೆ. ಕರಿಬೇವಿನ ಎಲೆಗಳು ಮೂತ್ರವರ್ಧಕ ಗುಣಗಳನ್ನು ಹೊಂದಿದ್ದು, ಇದು ದೇಹದಿಂದ ವಿಷ ಮತ್ತು ಹೆಚ್ಚುವರಿ ನೀರಿನಾಂಶವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ನಿರ್ವಿಶೀಕರಣದಿಂದ ದೇಹ ಹಗುರಾಗುತ್ತದೆ.
ಕ್ಯಾಲೊರಿ ಕಡಿಮೆ ಇದ್ದು, ಪೋಷಕಾಂಶ ಸಮೃದ್ಧವಾಗಿರುತ್ತದೆ
ಕರಿಬೇವಿನ ಎಲೆಗಳು ಕಡಿಮೆ ಕ್ಯಾಲೊರಿ ಅಂಶ ಹೊಂದಿವೆ. ಆದರೆ ಇದರಲ್ಲಿ ವಿಟಮಿನ್ ಎ, ಬಿ, ಮತ್ತು ಇ ಹಾಗೂ ಕ್ಯಾಲ್ಸಿಯಂನಂತಹ ಖನಿಜಾಂಶಗಳು ಸಮೃದ್ಧವಾಗಿರುತ್ತದೆ.
ಒತ್ತಡವನ್ನು ಕಡಿಮೆ ಮಾಡುತ್ತದೆ
ಒತ್ತಡದಿಂದ ನಾವು ಹೆಚ್ಚು ಆಹಾರ ಸೇವಿಸಬಹುದು, ಅಲ್ಲದೆ ಒತ್ತಡವಾದಾಗ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುವುದರಿಂದ ತೂಕ ಹೆಚ್ಚಳವಾಗುತ್ತದೆ. ಕರಿಬೇವಿನ ಸುವಾಸನೆ ಒತ್ತಡ ಕಡಿಮೆ ಮಾಡುವ ಗುಣವನ್ನು ಹೊಂದಿದೆ.
ತೂಕ ಇಳಿಕೆಗೆ ಇಷ್ಟೆಲ್ಲಾ ರೀತಿಯಿಂದ ಸಹಾಯ ಮಾಡುವ ಕರಿಬೇವಿನ ಎಲೆ ದೇಹ ಹಲವು ಆರೋಗ್ಯ ಸಮಸ್ಯೆಗಳಿಗೂ ಮದ್ದು. ಇದರಿಂದ ಆರೋಗ್ಯ ಪ್ರಯೋಜನಗಳು ನೂರಾರು
ಇದನ್ನು ಓದಿ
Weight Loss: ತೂಕ ಇಳಿಕೆಗೆ ಬೆಸ್ಟ್ ಬಾದಾಮಿ; ದೇಹದ ಬೊಜ್ಜು ಕರಗಲು ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು ನೋಡಿ
ಹಲವರಿಗೆ ಪ್ರತಿದಿನ ಬೆಳಗೆದ್ದು ಬಾದಾಮಿ ತಿನ್ನುವ ಅಭ್ಯಾಸವಿದೆ. ಕೆಲವರು ರಾತ್ರಿ ನೀರಿನಲ್ಲಿ ನೆನೆಹಾಕಿ ತಿಂದರೆ, ಇನ್ನೂ ಕೆಲವರು ಹಾಗೆಯೇ ತಿನ್ನುತ್ತಾರೆ. ಪ್ರತಿನಿತ್ಯ ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅರಿವಿನ ಸಾಮರ್ಥ್ಯ ಹೆಚ್ಚಲು ಬಾದಾಮಿ ಒಂದು ಉತ್ತಮ ಆಹಾರ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ನೀವು ತೂಕ ಇಳಿಕೆಯ ಪ್ಲಾನ್ ಮಾಡಿದ್ದರೂ ಕೂಡ ಬಾದಾಮಿ ಸೇವನೆ ಉತ್ತಮ. ಬಾದಾಮಿಯು ಪೌಷ್ಟಿಕಾಂಶಗಳ ಆಗರವಾಗಿದೆ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿರುವ ಕಾರಣದಿಂದಲೇ ತೂಕ ಇಳಿಕೆಗೆ ಪಯಣದಲ್ಲಿ ಇದು ಬಹಳ ಅವಶ್ಯ ಎನ್ನಿಸುತ್ತದೆ.