Weight Loss: ತೂಕ ಇಳಿಕೆಗೆ ಬೆಸ್ಟ್‌ ಬಾದಾಮಿ; ದೇಹದ ಬೊಜ್ಜು ಕರಗಲು ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ತೂಕ ಇಳಿಕೆಗೆ ಬೆಸ್ಟ್‌ ಬಾದಾಮಿ; ದೇಹದ ಬೊಜ್ಜು ಕರಗಲು ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು ನೋಡಿ

Weight Loss: ತೂಕ ಇಳಿಕೆಗೆ ಬೆಸ್ಟ್‌ ಬಾದಾಮಿ; ದೇಹದ ಬೊಜ್ಜು ಕರಗಲು ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು ನೋಡಿ

ತೂಕ ಇಳಿಕೆಯ ವಿಚಾರ ಕೇಳಿದಾಗ ಕಿವಿ ಚುರುಕಾಗುವುದು ಸಹಜ. ನಮ್ಮ ಆಹಾರಕ್ರಮದಲ್ಲಿ ಕೆಲವು ಒಣಹಣ್ಣುಗಳನ್ನು ಸೇರಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಬೆಲ್ಲಿ ಫ್ಯಾಟ್‌ ಕರಗಿಸಲು ಬಾದಾಮಿ ಬೆಸ್ಟ್‌ ಎನ್ನುವುದರಲ್ಲಿ ಎರಡು ಮಾತಿಲ್ಲ.

ತೂಕ ಇಳಿಕೆ ಮತ್ತು ಬಾದಾಮಿ
ತೂಕ ಇಳಿಕೆ ಮತ್ತು ಬಾದಾಮಿ

ಹಲವರಿಗೆ ಪ್ರತಿದಿನ ಬೆಳಗೆದ್ದು ಬಾದಾಮಿ ತಿನ್ನುವ ಅಭ್ಯಾಸವಿದೆ. ಕೆಲವರು ರಾತ್ರಿ ನೀರಿನಲ್ಲಿ ನೆನೆಹಾಕಿ ತಿಂದರೆ, ಇನ್ನೂ ಕೆಲವರು ಹಾಗೆಯೇ ತಿನ್ನುತ್ತಾರೆ. ಪ್ರತಿನಿತ್ಯ ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅರಿವಿನ ಸಾಮರ್ಥ್ಯ ಹೆಚ್ಚಲು ಬಾದಾಮಿ ಒಂದು ಉತ್ತಮ ಆಹಾರ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ನೀವು ತೂಕ ಇಳಿಕೆಯ ಪ್ಲಾನ್‌ ಮಾಡಿದ್ದರೂ ಕೂಡ ಬಾದಾಮಿ ಸೇವನೆ ಉತ್ತಮ. ಬಾದಾಮಿಯು ಪೌಷ್ಟಿಕಾಂಶಗಳ ಆಗರವಾಗಿದೆ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿರುವ ಕಾರಣದಿಂದಲೇ ತೂಕ ಇಳಿಕೆಗೆ ಪಯಣದಲ್ಲಿ ಇದು ಬಹಳ ಅವಶ್ಯ ಎನ್ನಿಸುತ್ತದೆ.

ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು?

ತೂಕ ಇಳಿಕೆ ಹಾಗೂ ಬಾದಾಮಿ ಸೇವನೆಯ ವಿಷಯಕ್ಕೆ ಬಂದಾಗ ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಬಾದಾಮಿಯಲ್ಲಿ ಕ್ಯಾಲೊರಿ ದಟ್ಟವಾಗಿರುತ್ತದೆ. ಅವುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೂ ಕೂಡ ಗಣನೀಯ ಪ್ರಮಾಣದಲ್ಲಿ ಶಕ್ತಿಯನ್ನು ಒದಗಿಸುತ್ತವೆ. ಪ್ರತಿದಿನ 28 ಗ್ರಾಂನಷ್ಟು ಬಾದಾಮಿ ತಿನ್ನುವುದು ದೇಹಕ್ಕೆ ಉತ್ತಮ. 28 ಗ್ರಾಂ ಬಾದಾಮಿ ಎಂದರೆ ಸರಿಸುಮಾರು 23 ಬಾದಾಮಿ ಸೇವಿಸಬಹುದು ಎನ್ನುತ್ತಾರೆ ತಜ್ಞರು.

ತೂಕ ಇಳಿಕೆಗೆ ಬಾದಾಮಿಯಿಂದಾಗುವ ಉಪಯೋಗಗಳಿವು

ಚಯಾಪಚಯನ್ನು ವೃದ್ಧಿಸುತ್ತದೆ

ಬಾದಾಮಿ ಸೇವನೆಯಿಂದ ದೇಹದಲ್ಲಿ ಚಯಾಪಚಯವು ವೃದ್ಧಿಯಾಗುತ್ತದೆ. ಬಾದಾಮಿಯಲ್ಲಿನ ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಜೀರ್ಣಕ್ರಿಯೆ ವೃದ್ಧಿಯಾಗಲು ಸಹಾಯ ಮಾಡುತ್ತದೆ. ಇದು ಚಯಾಚಪಯ ಕ್ರಿಯೆ ಸುಗಮವಾಗಲು ನೆರವಾಗುತ್ತದೆ. ಸಮಯ ಕಳೆದಂತೆ ಇದು ಕ್ಯಾಲೊರಿ ಕಡಿಮೆಯಾಗಲು ನೆರವಾಗುತ್ತದೆ, ಜೊತೆಗೆ ತೂಕ ಇಳಿಕೆಯ ಪ್ರಯತ್ನಕ್ಕೆ ನೆರವಾಗುತ್ತದೆ.

ಆಹಾರದ ಕಡುಬಯಕೆಯನ್ನು ನಿಯಂತ್ರಿಸುತ್ತದೆ

ತೂಕ ಇಳಿಕೆಯ ಪಯಣದಲ್ಲಿ ಬಾದಾಮಿಯ ಒಂದು ವಿಶೇಷ ಗುಣವೆಂದರೆ ಇದನ್ನು ಸೇವಿಸುವುದರಿಂದ ಹೊಟ್ಟೆದಂತಿರುತ್ತದೆ. ಬಾದಾಮಿ ತಿನ್ನುವುದರಿಂದ ಪದೇ ಪದೇ ಹಸಿವಾಗುವುದಿಲ್ಲ, ಇದು ಬಾದಾಮಿ ಪ್ರಾಥಮಿಕ ಪ್ರಯೋಜನ ಅಂತಲೇ ಹೇಳಬಹುದು. ಬಾದಾಮಿಯಲ್ಲಿ ನಾರಿನಾಂಶ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಉತ್ತಮವಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಹಸಿವಿನ ಸಂಕಟವನ್ನು ನಿಗ್ರಹಿಸುತ್ತದೆ ಮತ್ತು ಊಟದ ನಡುವೆ ಅನಾರೋಗ್ಯಕರ ತಿಂಡಿಗಳನ್ನು ತಲುಪುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಪೋಷಕಾಂಶಗಳ ಸಾಂದ್ರತೆ

ಕ್ಯಾಲೊರಿ ಅಂಶ ಹೊರತಾಗಿಯೂ ಬಾದಾಮಿಯಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಅವು ವಿಟಮಿನ್‌ ಇ, ಮೆಗ್ನೀಸಿಯಂ ಹಾಗೂ ಪ್ರೊಟೀನ್‌ಗಳಿಂದ ಸಮೃದ್ಧವಾಗಿರುತ್ತದೆ. ತೂಕ ಇಳಿಕೆಯ ಪಯಣದಲ್ಲಿ ಬಾದಾಮಿ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಲಭ್ಯವಾಗುತ್ತದೆ. ಇದರಿಂದ ದೇಹದ ನಿಶಕ್ತಿಯನ್ನೂ ತಪ್ಪಿಸಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ

ರಕ್ತದಲ್ಲಿನ ಸಕ್ಕರೆಯ ಮಟ್ಟದ ಸ್ಥಿರತೆಯು ತೂಕ ನಿರ್ವಹಣೆಗೆ ನಿರ್ಣಾಯಕವಾಗಿದೆ. ಬಾದಾಮಿಯಲ್ಲಿ ಕಡಿಮೆ ಗ್ಲೈಸೆಮಿಕ್‌ ಅಂಶ ಇರುತ್ತದೆ. ಅವು ರಕ್ತದಲ್ಲಿನ ಸಕ್ಕರೆಯ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ. ಇದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ದಿನವಿಡೀ ಸ್ಥಿರವಾದ ಶಕ್ತಿಯ ಮಟ್ಟವನ್ನು ಉತ್ತೇಜಿಸುತ್ತದೆ.

ಹೃದಯ ಆರೋಗ್ಯಕ್ಕೆ ಪ್ರಯೋಜನಗಳು

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಬಾದಾಮಿಯು ಹಲವು ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ಮೊನೊಸ್ಯಾಚುರೇಟೆಡ್‌ ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ನಿವಾರಿಸುತ್ತದೆ. ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಹೃದಯ ಬಹಳ ಅವಶ್ಯ. ಇದು ತೂಕ ಇಳಿಕೆಗೆ ಸಹಕಾರಿ.

ತೂಕ ನಷ್ಟಕ್ಕೆ ಬಾದಾಮಿ ಸೇವನೆ ಬಹಳ ಅವಶ್ಯವಾದರೂ ಕೂಡ ಅವುಗಳನ್ನು ಮಿತವಾಗಿ ಸೇವಿಸುವುದನ್ನು ಮರೆಯಬಾರದು. ಅತಿಯಾಗಿ ಬಾದಾಮಿ ತಿನ್ನುವುದರಿಂದ ಕ್ಯಾಲೊರಿ ಪ್ರಮಾಣದಲ್ಲಿ ಏರಿಕೆಯಾಗಬಹುದು. ಇದು ನಿಮ್ಮ ತೂಕ ಇಳಿಕೆಯ ಗುರಿಗೆ ಅಡ್ಡಿಯಾಗಬಹುದು. ಸಮತೋಲಿತ ಡಯೆಟ್‌ ಕ್ರಮದೊಂದಿಗೆ ನಿರಂತರ ದೈಹಿಕ ಚಟುವಟಿಕೆಗೆ ಗಮನ ಕೊಡುವುದು ಮುಖ್ಯವಾಗುತ್ತದೆ.

Whats_app_banner