logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಾವಿನಕಾಯಿ, ಹುಣಸೆಹಣ್ಣು, ತರಕಾರಿ ಉಪ್ಪಿನಕಾಯಿ ಸವಿದಿರುವಿರಿ: ನಾಟಿಕೋಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

ಮಾವಿನಕಾಯಿ, ಹುಣಸೆಹಣ್ಣು, ತರಕಾರಿ ಉಪ್ಪಿನಕಾಯಿ ಸವಿದಿರುವಿರಿ: ನಾಟಿಕೋಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

Priyanka Gowda HT Kannada

Nov 17, 2024 12:31 PM IST

google News

ಮಾವಿನಕಾಯಿ, ಹುಣಸೆಹಣ್ಣು, ತರಕಾರಿ ಉಪ್ಪಿನಕಾಯಿ ಸವಿದಿರುವಿರಿ: ನಾಟಿಕೋಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

  • ಚಿಕನ್ ಕರಿ ಅಂದ್ರೆ ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರುತ್ತದೆ. ವೀಕೆಂಡ್‌ನಲ್ಲಂತೂ ಚಿಕನ್ ರೆಸಿಪಿ ತಿನ್ನದೇ ಇದ್ರೆ ಹೇಗೆ ಹೇಳಿ. ಎಂದಾದರೂ ನೀವು ನಾಟಿಕೋಳಿ ಉಪ್ಪಿನಕಾಯಿ ಸವಿದಿದ್ದೀರಾ. ಇದರ ರುಚಿ ಅದ್ಭುತ. ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಈ ಪಾಕವಿಧಾನ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಮಾವಿನಕಾಯಿ, ಹುಣಸೆಹಣ್ಣು, ತರಕಾರಿ ಉಪ್ಪಿನಕಾಯಿ ಸವಿದಿರುವಿರಿ: ನಾಟಿಕೋಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ, ಇಲ್ಲಿದೆ ರೆಸಿಪಿ
ಮಾವಿನಕಾಯಿ, ಹುಣಸೆಹಣ್ಣು, ತರಕಾರಿ ಉಪ್ಪಿನಕಾಯಿ ಸವಿದಿರುವಿರಿ: ನಾಟಿಕೋಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ, ಇಲ್ಲಿದೆ ರೆಸಿಪಿ

ಚಿಕನ್ ಕರಿ ಅಂದ್ರೆ ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರುತ್ತದೆ. ಚಿಕನ್ ಸಾಂಬಾರ್, ಚಿಕನ್ ಗ್ರೇವಿ, ಚಿಕನ್ ಸುಕ್ಕ, ಚಿಕನ್ ಘೀ ರೋಸ್ಟ್, ಚಿಕನ್ ಬಟರ್ ಮಸಾಲೆ ಹೀಗೆ ಹಲವಾರು ವಿಧದ ಚಿಕನ್ ಕರಿಯನ್ನು ತಯಾರಿಸಬಹುದು. ಅದರಲ್ಲೂ ನಾಟಿ ಕೋಳಿ ಸಾಂಬಾರ್ ಅಂದ್ರೆ ಇನ್ನೂ ಕೂಡ ರುಚಿಕರವಾಗಿರುತ್ತದೆ. ಮುದ್ದೆ-ನಾಟಿಕೋಳಿ ಸಾಂಬಾರ್ ಅಥವಾ ಒತ್ತುಶ್ಯಾವಿಗೆ ಜತೆ ತುಂಬಾ ರುಚಿಕರವಾಗಿರುತ್ತದೆ. ಆದರೆ, ಎಂದಾದರೂ ಕೋಳಿ ಉಪ್ಪಿನಕಾಯಿ ರೆಸಿಪಿಯನ್ನು ಎಂದಾದರೂ ಸವಿದಿದ್ದೀರಾ. ಅನ್ನದೊಂದಿಗೆ ಸವಿಯಲು ಸೂಪರ್ ಆಗಿರುತ್ತದೆ. ಬಿಸಿ ಬಿಸಿ ಅನ್ನ ಮಾತ್ರವಲ್ಲ ದೋಸೆ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಈ ನಾಟಿಕೋಳಿ ಉಪ್ಪಿನಕಾಯಿ ಪಾಕವಿಧಾನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಾಟಿಕೋಳಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ನಾಟಿ ಕೋಳಿ- ಒಂದು ಕೆಜಿ, ಮೆಣಸಿನಕಾಯಿ- ಅರ್ಧ ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಎರಡು ಟೀ ಚಮಚ, ಅಡುಗೆ ಎಣ್ಣೆ- ಒಂದು ಕಪ್, ಸಾಸಿವೆ- ಒಂದು ಟೀ ಚಮಚ, ಜೀರಿಗೆ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ನಾಲ್ಕು ಟೀ ಚಮಚ, ಜೀರಿಗೆ- ಒಂದು ಟೀ ಚಮಚ, ಮೆಂತ್ಯ ಪುಡಿ – ಒಂದು ಟೀ ಚಮಚ, ಗರಂ ಮಸಾಲೆ ಪುಡಿ- ಎರಡು ಟೀ ಚಮಚ, ಅರಿಶಿನ- ಒಂದು ಟೀ ಚಮಚ, ನಿಂಬೆ ರಸ- ಕಾಲು ಕಪ್.

ಮಾಡುವ ವಿಧಾನ: ನಾಟಿಕೋಳಿ ಮಾಂಸವನ್ನು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇಡಿ. ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಆ ಬಟ್ಟಲಿನಲ್ಲಿ ಎರಡು ಟೀ ಚಮಚ ಮೆಣಸಿನ ಪುಡಿ, ಎರಡು ಚಮಚ ಉಪ್ಪು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಈಗ ಒಲೆಯ ಮೇಲೆ ಕಡಾಯಿ ಹಾಕಿ ಎಣ್ಣೆ ಹಾಕಿ. ಅದರಲ್ಲಿ ಮ್ಯಾರಿನೇಡ್ ಮಾಡಿದ ಚಿಕನ್ ಹಾಕಿ ಬೇಯಿಸಿ. ಸ್ವಲ್ಪ ಸಮಯದಲ್ಲಿ ಚಿಕನ್ ನೀರು ಬಿಡುತ್ತದೆ. ಎಲ್ಲಾ ನೀರು ಹೀರಿಕೊಳ್ಳುವವರೆಗೆ ಅದನ್ನು ಚೆನ್ನಾಗಿ ಫ್ರೈ ಮಾಡಿ. ಕಡಿಮೆ ಉರಿಯಲ್ಲಿ ಹುರಿದರೆ ಉತ್ತಮ. ಇದನ್ನು ಬೇಗ ಹೊರತೆಗೆದು ಪಕ್ಕಕ್ಕೆ ಇಡಬೇಕು.

ಈಗ ಉಳಿದ ಎಣ್ಣೆಗೆ ಸಾಸಿವೆ ಮತ್ತು ಜೀರಿಗೆ ಸೇರಿಸಿ. ನಂತರ ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಸಾಸಿವೆ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಯಿಸಿದ ಚಿಕನ್ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಸ್ಟೌವ್ ಆಫ್ ಮಾಡಿ. ಈ ಸಂಪೂರ್ಣ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ. ಇದನ್ನು ಎರಡರಿಂದ ಮೂರು ತಿಂಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು. ಯಾವಾಗ ಬೇಕಾದರೂ ತಿನ್ನಬಹುದು.

ಸಾಮಾನ್ಯ ಬ್ರಾಯ್ಲರ್ ಕೋಳಿಗೆ ಹೋಲಿಸಿದರೆ ನಾಟಿಕೋಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹಕ್ಕೆ ಶಕ್ತಿ ನೀಡುತ್ತದೆ. ಈ ನಾಟುಕೋಳಿ ಉಪ್ಪಿನಕಾಯಿ ಮಾಡುವುದು ತುಂಬಾ ಸುಲಭ. ಒಮ್ಮೆ ನೀವು ಮಾಡಿದರೆ, ಖಂಡಿತ ಇಷ್ಟಪಡುವಿರಿ. ಮೆಣಸಿನಕಾಯಿ ಸ್ವಲ್ಪ ಕಡಿಮೆ ಹಾಕಿದರೆ ಮಕ್ಕಳೂ ತಿನ್ನಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ