Badam Halwa: ಆಹಾ! ಬಾದಾಮಿ ಹಲ್ವಾ ಬಲುರುಚಿ; ಮಾಡೋಕೂ ಸುಲಭ, ಬೇಕಾಗುವ ಸಾಮಾಗ್ರಿಗಳೂ ಕಡಿಮೆ.. ಇಲ್ಲಿದೆ ರೆಸಿಪಿ
Aug 19, 2023 01:24 PM IST
ಬಾದಾಮಿ ಹಲ್ವಾ
- Almond Halwa Recipe: ಸುಲಭವಾಗಿ ಹಾಗೂ ಕಡಿಮೆ ಸಾಮಾಗ್ರಿಗಳಲ್ಲಿ ಮಾಡಬಹುದಾದ ತಿನಿಸುಗಳಲ್ಲಿ ಬಾದಾಮಿ ಹಲ್ವಾ ಕೂಡ ಒಂದಾಗಿದೆ. ನಿಮ್ಮ ಮನೆಯಲ್ಲಿ ವಿಶೇಷ ದಿನಗಳಲ್ಲಿ ಇದನ್ನು ಮಾಡಿ ಸವಿಯಿರಿ. ಬಾದಾಮಿ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ..
ಹಲ್ವಾಗಳಲ್ಲಿ ಕೇಸರಿ ಹಲ್ವಾ, ಕ್ಯಾರೆಟ್ ಹಲ್ವಾ, ಬಾದಾಮಿ ಹಲ್ವಾ ಹೀಗೆ ನಾನಾ ವಿಧಗಳಿವೆ. ಈ ಪೈಕಿ ಬಾದಾಮಿ ಹಲ್ವಾ ಕೂಡ ಬಹಳ ರುಚಿಕರವಾದ ಖಾದ್ಯ. ಸುಲಭವಾಗಿ ಹಾಗೂ ಕಡಿಮೆ ಸಾಮಾಗ್ರಿಗಳಲ್ಲಿ ಮಾಡಬಹುದಾದ ತಿನಿಸು ಕೂಡ ಇದಾಗಿದೆ. ನಿಮ್ಮ ಮನೆಯಲ್ಲಿ ವಿಶೇಷ ದಿನಗಳಲ್ಲಿ ಇದನ್ನು ಮಾಡಿ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
- ಕೇಸರಿ (ಚಿಟಿಕೆ)
2. ಅರ್ಧ ಕಪ್ ಬಾದಾಮಿ
3. ಅರ್ಧ ಕಪ್ ಹಾಲು
4. ಅರ್ಧ ಕಪ್ ಸಕ್ಕರೆ
5. ಮೂರು ಟೇಬಲ್ ಸ್ಪೂನ್ ತುಪ್ಪ
6. ಏಲಕ್ಕಿ ಪುಡಿ (ಚಿಟಿಕೆ)
ಬಾದಾಮಿ ಹಲ್ವಾ ಮಾಡುವ ವಿಧಾನ:
- ಮೊದಲು ಚಿಟಿಕೆ ಕೇಸರಿಯನ್ನು ಎರಡು ಟೇಬಲ್ ಸ್ಪೂನ್ ಹಾಲಿನಲ್ಲಿ ನೆನೆಸಿಟಿ.
- ಅರ್ಧ ಕಪ್ ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಬೇಕು.
- ಬಳಿಕ ಬಾದಾಮಿಯ ಸಿಪ್ಪೆ ತೆಗೆದು ಮಿಕ್ಸಿ ಜಾರ್ಗೆ ಹಾಕಿ. ಅದಕ್ಕೆ ಅರ್ಧ ಕಪ್ ಹಾಲಿನ ಜೊತೆ ರುಬ್ಬಿ. ತುಂಬಾ ನೈಸ್ ಆಗಬಾರದು ತರಿತರಿಯಾಗಿ ಇರಬೇಕು.
- ನಂತರ ಒಂದು ಬಾಣಲೆಗೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಅರೆದುಕೊಂಡಿರುವ ಬಾದಾಮಿ ಮತ್ತು ಹಾಲಿನ ಮಿಶ್ರಣವನ್ನ ಹಾಕಿ ಕಲಕಬೇಕು.
- ಹೀಗೆ ಕಲಕುತ್ತಿರುವಾಗಲೇ ಅರ್ಧ ಕಪ್ ಸಕ್ಕರೆ ಹಾಕಿ ಕಲಕುವುದನ್ನು ಮುಂದುವರೆಸಿ.
- ನಂತರ ಇದಕ್ಕೆ ನೆನೆಸಿಟ್ಟ ಕೇಸರಿ ಹಾಲನ್ನು ಹಾಕಿ ಕಲಕುವುದನ್ನು ಮುಂದುವರೆಸಿ.
- ಈ ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಮತ್ತೆ ಕಲಕಿ.
- ಮತ್ತೆ ಸ್ವಲ್ಪ ಗಟ್ಟಿಯಾದ ಮೇಲೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ಇದಕ್ಕೆ ಬೇಕಾದರೆ ಕೊನೆಯಲ್ಲಿ ಗೋಡಂಬಿ ಮತ್ತು ಪಿಸ್ತಾ ತುಂಡುಗಳನ್ನು ಹಾಕಿಕೊಳ್ಳಬಹುದು.
- ಈಗ ಬಿಸಿಬಿಸಿಯಾದ ಬಾದಾಮಿ ಹಲ್ವಾ ರೆಡಿ. ಇದನ್ನು ಸ್ವಲ್ಪ ಸಣ್ಣಗಾದ ಮೇಲೆ ಸವಿಯಿರಿ.
ವಿಭಾಗ