logo
ಕನ್ನಡ ಸುದ್ದಿ  /  ಜೀವನಶೈಲಿ  /  Paneer Bhurji Recipe: ಎಗ್‌ ಬುರ್ಜಿ ತಿಂದು ಬೋರಾಗಿದ್ಯಾ; ಪನೀರ್‌ ಬುರ್ಜಿ ಒಮ್ಮೆ ಟ್ರೈ ಮಾಡಿ; ಸಸ್ಯಾಹಾರಿಗಳಿಗೂ ಇದು ಸಖತ್‌ ಇಷ್ಟ ಆಗುತ್ತೆ

Paneer Bhurji Recipe: ಎಗ್‌ ಬುರ್ಜಿ ತಿಂದು ಬೋರಾಗಿದ್ಯಾ; ಪನೀರ್‌ ಬುರ್ಜಿ ಒಮ್ಮೆ ಟ್ರೈ ಮಾಡಿ; ಸಸ್ಯಾಹಾರಿಗಳಿಗೂ ಇದು ಸಖತ್‌ ಇಷ್ಟ ಆಗುತ್ತೆ

Reshma HT Kannada

Aug 08, 2023 08:00 AM IST

google News

ಪನೀರ್‌ ಬುರ್ಜಿ

    • Paneer Bhurji Recipe: ಎಗ್‌ ಬುರ್ಜಿ ಬಹಳ ಮಂದಿಗೆ ಇಷ್ಟವಾಗುವ ಖಾದ್ಯ. ಸರಳವಾಗಿ, ಸುಲಭವಾಗಿ ಇದನ್ನು ತಯಾರಿಸಬಹುದು. ಆದರೆ ಯಾವಾಗಲೂ ಎಗ್‌ ಬುರ್ಜಿ ತಿಂದು ಬೇಸರ ಆಗಿದ್ಯಾ? ಹಾಗಾದರೆ ಸ್ವಲ್ಪ ಡಿಫರೆಂಟ್‌ ಆಗಿ ಪನೀರ್‌ ಬುರ್ಜಿ ಟ್ರೈ ಮಾಡಿ. 15 ನಿಮಿಷದಲ್ಲಿ ತಯಾರಿಸಬಹುದಾದ ಈ ರೆಸಿಪಿ ಸಸ್ಯಾಹಾರಿಗಳಿಗೂ ಇಷ್ಟವಾಗೋದು ಖಂಡಿತ.
ಪನೀರ್‌ ಬುರ್ಜಿ
ಪನೀರ್‌ ಬುರ್ಜಿ (istock)

ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಫಾಸ್ಟ್‌ ಆಗಿ ಏನಾದ್ರೂ ಸೈಡ್ಸ್‌ ಮಾಡಬೇಕು ಅನ್ನುವ ಆಲೋಚನೆ ತಲೆಯಲ್ಲಿ ಹೊಳೆದಾಕ್ಷಣ ನೆನಪಿಗೆ ಬರೋದು ಎಗ್‌ ಬುರ್ಜಿ. ಮೊಟ್ಟೆಯಲ್ಲಿ ಸ್ಕ್ರಾಂಬಲ್ಡ್‌ ಎಗ್‌ ಅಥವಾ ಎಗ್‌ ಬುರ್ಜಿ ಮಾಡಿ ಸವಿಯಬಹುದು. ಆದರೆ ಯಾವಾಗ್ಲೂ ಅದನ್ನೇ ತಿನ್ನೋದು ಬೋರು ಹೊಡೆಸಬಹುದು. ಅದಕ್ಕಾಗಿ ಸ್ವಲ್ಪ ಭಿನ್ನವಾಗಿ ಪನೀರ್‌ ಬುರ್ಜಿ ತಯಾರಿಸಿಕೊಂಡು ತಿನ್ನಬಹುದು. ಇದು ಸಸ್ಯಹಾರಿಗಳಿಗೂ ಇಷ್ಟವಾಗುತ್ತದೆ. ಅಲ್ಲದೇ ನೀವಿದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನೋದು ಫಿಕ್ಸ್‌. ಈ ಪನೀರ್ ಬುರ್ಜಿಯನ್ನು ಅನ್ನ ಅಥವಾ ಬ್ರೆಡ್ ಜೊತೆ ತಿನ್ನಬಹುದು. ರೋಲ್‌, ಸ್ಯಾಂಡ್‌ವಿಚ್‌, ಬ್ರೆಡ್ ರೋಲ್‌ಗಳಲ್ಲಿ ಸ್ಟಫಿಂಗ್ ರೂಪದಲ್ಲೂ ಬಳಸಬಹುದು.

ಪನೀರ್ ಬುರ್ಜಿಯನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಆದರೆ ಕೇವಲ 15 ನಿಮಿಷಗಳಲ್ಲಿ ಮಾಡಬಹುದಾದ ಸರಳವಾದ ಪನೀರ್ ಬುರ್ಜಿ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಪನೀರ್‌ ತುಂಡು - 200 ಗ್ರಾಂ, ಟೊಮೆಟೊ - 1, ಕ್ಯಾಪ್ಸಿಕಂ - 1/4 ಕಪ್, ಈರುಳ್ಳಿ - 1, ಹಸಿಮೆಣಸು - 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ, ಎಣ್ಣೆ - 2 ಚಮಚ, ಜೀರಿಗೆ - ಅರ್ಧ ಚಮಚ, ಅರಿಸಿನ - ಕಾಲು ಚಮಚ, ಖಾರದಪುಡಿ - ಅರ್ಧ ಚಮಚ, ಗರಂಮಸಾಲಾ ಪುಡಿ - ಮುಕ್ಕಾಲು ಚಮಚ, ಉಪ್ಪು- ರುಚಿಗೆ, ನಿಂಬೆರಸ - 1 ಟೀ ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ

ತಯಾರಿಸುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಕೊಳ್ಳಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಸಣ್ಣಗೆ ಹೆಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಿಸಿನ ಹಾಕಿ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ನಂತರ ಮೆಣಸಿನಕಾಯಿ ಮತ್ತು ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ, ನಂತರ ಕ್ಯಾಪ್ಸಿಕಂ ತುಂಡುಗಳನ್ನು ಹಾಕಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ಪನೀರ್ ಅನ್ನು ಸಣ್ಣಗೆ ತುರಿದುಕೊಂಡು ಪ್ಯಾನ್‌ಗೆ ಸೇರಿಸಿ. ಉಪ್ಪು, ಮೆಣಸು ಮತ್ತು ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು 2 ನಿಮಿಷಗಳ ಕಾಲ ಫ್ರೈ ಮಾಡಿ. ಕೊನೆಗೆ ಹೆಚ್ಚಿಟ್ಟುಕೊಂಡಿದ್ದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಸ್ವಲ್ಪ ನಿಂಬೆ ರಸವನ್ನು ಹಿಂಡಿ. ಈಗ ನಿಮ್ಮ ಮುಂದೆ ರುಚಿಯಾದ ಪನೀರ್‌ ಬುರ್ಜಿ ಸವಿಯಲು ಸಿದ್ಧ.

ಇದನ್ನೂ ಓದಿ

Pulao Recipe: ರೈಸ್‌ ಐಟಂಗಳಲ್ಲಿ ಜನರಿಗೆ ಹೆಚ್ಚು ಇಷ್ಟವಾಗುವುದು ಪಲಾವ್‌. ವಿವಿಧ ಬಗೆಯ ತರಕಾರಿಗಳು ಹಾಗೂ ಮಸಾಲೆ ಸೇರಿಸಿ ತಯಾರಿಸುವ ಪಲಾವ್‌ ಎಂದರೆ ಇಷ್ಟಪಡದವರು ಕಡಿಮೆ. ಮೊಸರು ಚಟ್ನಿಯೊಂದಿಗೆ ಪಲಾವ್‌ ತಿನ್ನುವ ಖುಷಿಯೇ ಬೇರೆ. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಪಲಾವ್‌ನ ರುಚಿಯೇ ಬೇರೆ.

ರೈಸ್‌ ಐಟಂಗಳಲ್ಲಿ ಹಲವರಿಗೆ ಫೇವರಿಟ್‌ ಪಲಾವ್‌. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಸೂಪರ್‌ ಟೇಸ್ಟಿ ಪಲಾವ್‌ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಹೋಟೆಲ್‌ನಷ್ಟೇ ರುಚಿಯಾದ ಪಲಾವ್‌ ಅನ್ನು ನೀವು ಮನೆಯಲ್ಲೂ ತಯಾರಿಸಬಹುದು. ಆದರೆ ಇದೊಂದು ಸಾಮಗ್ರಿ ಇರಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ