Pulao Recipe: ಇದೊಂದು ಸಾಮಗ್ರಿ ಸೇರಿಸಿದ್ರೆ ಸಾಕು, ರೆಡಿ ಆಗುತ್ತೆ ಹೋಟೆಲ್ ಸ್ಟೈಲ್‌ನ ಟೇಸ್ಟಿ ಪಲಾವ್; ನೀವೂ ಒಮ್ಮೆ ಟ್ರೈ ಮಾಡಿ ನೋಡಿ
Pulao Recipe: ರೈಸ್ ಐಟಂಗಳಲ್ಲಿ ಜನರಿಗೆ ಹೆಚ್ಚು ಇಷ್ಟವಾಗುವುದು ಪಲಾವ್. ವಿವಿಧ ಬಗೆಯ ತರಕಾರಿಗಳು ಹಾಗೂ ಮಸಾಲೆ ಸೇರಿಸಿ ತಯಾರಿಸುವ ಪಲಾವ್ ಎಂದರೆ ಇಷ್ಟಪಡದವರು ಕಡಿಮೆ. ಮೊಸರು ಚಟ್ನಿಯೊಂದಿಗೆ ಪಲಾವ್ ತಿನ್ನುವ ಖುಷಿಯೇ ಬೇರೆ. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಪಲಾವ್‌ನ ರುಚಿಯೇ ಬೇರೆ.
ರೈಸ್ ಐಟಂಗಳಲ್ಲಿ ಹಲವರಿಗೆ ಫೇವರಿಟ್ ಪಲಾವ್. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಸೂಪರ್ ಟೇಸ್ಟಿ ಪಲಾವ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಹೋಟೆಲ್‌ನಷ್ಟೇ ರುಚಿಯಾದ ಪಲಾವ್ ಅನ್ನು ನೀವು ಮನೆಯಲ್ಲೂ ತಯಾರಿಸಬಹುದು. ಆದರೆ ಇದೊಂದು ಸಾಮಗ್ರಿ ಇರಬೇಕು.
ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಜನರು ರೈಸ್ ಐಟಂಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪಲಾವ್, ಚಿತ್ರಾನ್ನ, ಮೊಸರನ್ನ, ಟೊಮೆಟೊ ಬಾತ್, ಬಿಸಿಬೇಳೆ ಬಾತ್, ಮೆಂತ್ಯೆ ಬಾತ್, ಪುದಿನಾ ಬಾತ್ ಹೀಗೆ ಹಲವು ಬಗೆಯ ಬಾತ್‌ಗಳು ಬೆಳಗಿನ ಉಪಾಹಾರ ಹಾಗೂ ಹಬ್ಬದಂತಹ ವಿಶೇಷ ದಿನಗಳಲ್ಲಿ ಹೊಟ್ಟೆ ತುಂಬಿಸುತ್ತದೆ.
ಆದರೆ ಈ ರೈಸ್ ಐಟಂಗಳಲ್ಲಿ ಜನರಿಗೆ ಹೆಚ್ಚು ಇಷ್ಟವಾಗುವುದು ಪಲಾವ್. ವಿವಿಧ ಬಗೆಯ ತರಕಾರಿಗಳು ಹಾಗೂ ಮಸಾಲೆ ಸೇರಿಸಿ ತಯಾರಿಸುವ ಪಲಾವ್ ಎಂದರೆ ಇಷ್ಟಪಡದವರು ಕಡಿಮೆ. ಮೊಸರು ಚಟ್ನಿಯೊಂದಿಗೆ ಪಲಾವ್ ತಿನ್ನುವ ಖುಷಿಯೇ ಬೇರೆ. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಪಲಾವ್‌ನ ರುಚಿಯೇ ಬೇರೆ. ಈ ರುಚಿಯಾದ ಪಲಾವ್ ಅನ್ನು ನೀವು ಮನೆಯಲ್ಲೂ ತಯಾರಿಸಿ ತಿನ್ನಬಹುದು. ಇದರ ರೆಸಿಪಿ ಇಲ್ಲಿದೆ ನೋಡಿ.
ಹೋಟೆಲ್ ಸ್ಟೈಲ್ ಪಲಾವ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಅಕ್ಕಿ - 1 ಕಪ್, ಎಣ್ಣೆ - 4 ಟೀ ಚಮಚ, 2 ಈರುಳ್ಳಿ, 4 ಹಸಿಮೆಣಸಿನಕಾಯಿ, 1 ಟೊಮೆಟೊ, 100 ಗ್ರಾಂ ಬೀನ್ಸ್, ಕ್ಯಾರೆಟ್, ಹಸಿಬಟಾಣಿ, ಅರ್ಧ ಕಟ್ಟು ಪುದೀನಾ ಮತ್ತು ಕೊತ್ತಂಬರಿ ಸೊಪ್ಪು, 4 ಚಮಚ ಹಸಿಕೊಬ್ಬರಿ, 1 ಸಣ್ಣ ಚಕ್ರಮೊಗ್ಗು, 3 ಲವಂಗ, ಒಂದು ಇಂಚು ಚಕ್ಕೆ, 2 ಯಾಲಕ್ಕಿ, ಪಲಾವ್ ಎಲೆ, ಅರ್ಧ ಟೀ ಚಮಚ ಜೀರಿಗೆ, 1 ಟೀ ಚಮಚ ಧನಿಯ
ಮಸಾಲೆಗೆ: ಕೊಬ್ಬರಿ, ಅರ್ಧ ಈರುಳ್ಳಿ, 1 ಲವಂಗ, ಚಕ್ಕೆ, ಜೀರಿಗೆ, ಕೊತ್ತಂಬರಿ ಸೊಪ್ಪು, ಧನಿಯ, ಒಂದು ಸಣ್ಣ ಎಸಳು ಚಕ್ರಮೊಗ್ಗು, ಪುದಿನಾ ಈ ಎಲ್ಲವನ್ನೂ ಸೇರಿಸಿ ರುಬ್ಬಿಟ್ಟುಕೊಳ್ಳಿ.
ತಯಾರಿಸುವ ವಿಧಾನ: ಒಲೆಯ ಮೇಲೆ ಕುಕ್ಕರ್ ಇಟ್ಟು ಬಿಸಿಯಾದ ಮೇಲೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಒಂದು ಸಣ್ಣ ಎಸಳು ಚಕ್ರಮೊಗ್ಗು, 2 ಲವಂಗ, ಚಕ್ಕೆ, ಯಾಲಕ್ಕಿ, ಪಲಾವ್ ಎಲೆ ಹಾಕಿ ನಂತರ ಹೆಚ್ಚಿಟ್ಟುಕೊಂಡ ಪುದಿನ ಹಾಕಿ. ನಂತರ ಉದ್ದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಸೇರಿಸಿ. ಇವು ಬೇಯುತ್ತಿದ್ದಂತೆ ಕತ್ತರಿಸಿಟ್ಟ ತರಕಾರಿಗಳನ್ನು ಹಾಕಿ ಬೇಯಿಸಿ, ಉಪ್ಪು, ಅರಿಸಿನ ಸೇರಿಸಿ. ಅದಕ್ಕೆ ಹಸಿ ಬಟಾಣಿ ಹಾಕಿ ನಂತರ ರುಬ್ಬಿಟ್ಟುಕೊಂಡ ಮಸಾಲೆಯನ್ನು ಹಾಕಿ. ಹಸಿವಾಸನೆ ಹೋಗುವವರೆಗೆ ಕೈಯಾಡಿಸಿ. ಆಮೇಲೆ ಎರಡು ಕಪ್ಪು ನೀರು ಹಾಗೂ ಅಕ್ಕಿ ಸೇರಿಸಿ ಮಿಶ್ರಣ ಮಾಡಿ, ಕುಕ್ಕರ್ ಮುಚ್ಚಿ ಎರಡು ವಿಶಲ್ ಕೂಗಿಸಿದರೆ ರುಚಿಯಾದ ಪಲಾವ್ ಸವಿಯಲು ಸಿದ್ಧ.
ವಿಭಾಗ