logo
ಕನ್ನಡ ಸುದ್ದಿ  /  ಜೀವನಶೈಲಿ  /  ಗಡ್ಡ-ಮೀಸೆ ಆಕರ್ಷಕವಾಗಿ ಬೆಳೆಯಲು ಹೆಚ್ಚು ದುಡ್ಡು ಖರ್ಚು ಮಾಡಬೇಕಿಲ್ಲ; ಈ ಗ್ರೂಮಿಂಗ್‌ ಹ್ಯಾಕ್ಸ್ ಟ್ರೈ ಮಾಡಿ

ಗಡ್ಡ-ಮೀಸೆ ಆಕರ್ಷಕವಾಗಿ ಬೆಳೆಯಲು ಹೆಚ್ಚು ದುಡ್ಡು ಖರ್ಚು ಮಾಡಬೇಕಿಲ್ಲ; ಈ ಗ್ರೂಮಿಂಗ್‌ ಹ್ಯಾಕ್ಸ್ ಟ್ರೈ ಮಾಡಿ

Jayaraj HT Kannada

Oct 23, 2024 07:27 PM IST

google News

ಗಡ್ಡ-ಮೀಸೆ ಆಕರ್ಷಕವಾಗಿ ಬೆಳೆಯಲು ಈ ಗ್ರೂಮಿಂಗ್‌ ಹ್ಯಾಕ್ಸ್ ಟ್ರೈ ಮಾಡಿ

    • ಕೆಲವು ಹುಡುಗರಿಗೆ ಗಡ್ಡ ಸರಿಯಾಗಿ ಬೆಳೆಯುವುದಿಲ್ಲ. ಹೀಗಾಗಿ ದುಬಾರಿ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕೆಲವೊಂದು ಜೀವನಶೈಲಿ ದೋಷಗಳಿಂದ ಆಗಿರುವ ಸಮಸ್ಯೆಗಳಿಗೆ ಹಣದಿಂದ ಪರಿಹಾರ ಸಿಗುವುದಿಲ್ಲ. ಇದಕ್ಕೆ ಏನು ಮಾಡಬಹುದು ಎಂಬುದನ್ನು ನೋಡೋಣ.
ಗಡ್ಡ-ಮೀಸೆ ಆಕರ್ಷಕವಾಗಿ ಬೆಳೆಯಲು ಈ ಗ್ರೂಮಿಂಗ್‌ ಹ್ಯಾಕ್ಸ್ ಟ್ರೈ ಮಾಡಿ
ಗಡ್ಡ-ಮೀಸೆ ಆಕರ್ಷಕವಾಗಿ ಬೆಳೆಯಲು ಈ ಗ್ರೂಮಿಂಗ್‌ ಹ್ಯಾಕ್ಸ್ ಟ್ರೈ ಮಾಡಿ (Insta, Pexel)

ಹಿಂದೆಲ್ಲಾ ಕ್ಲೀನ್ ಶೇವ್ ಮಾಡಿದ ಹುಡುಗರನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಆಗಿನ ಸಿನಿಮಾ ಅಥವಾ ಸೀರಿಯಲ್‌ಗಳಲ್ಲಿ ಕೂಡಾ ಕ್ಲೀನ್‌ ಶೇವ್‌ ಟ್ರೆಂಡ್‌ ಆಗಿದ್ದವು. ಆದರೆ, ಈಗ ಹಾಗಲ್ಲ. ಕಾಲ ಬದಲಾಗಿದ್ದು, ಜನರು ಕೂಡಾ ಟ್ರೆಂಡ್‌ಗೆ ಒಗ್ಗಿಕೊಂಡಿದ್ದಾರೆ. ಆಧುನಿಕ ಯುಗದಲ್ಲಿ ಯುವಕರ ಅಭಿರುಚಿ ಕೂಡಾ ಬದಲಾಗಿದೆ. ರಗಡ್‌ ಲುಕ್‌ ಇರುವ ಹುಡುಗರೇ ಹುಡುಗಿಯರ ಕ್ರಶ್‌ ಆಗುತ್ತಿದ್ದಾರೆ. ದಪ್ಪ ಗಡ್ಡ ಇಟ್ಟುಕೊಂಡು ಮೀಸೆ ತಿರುವುವ ಹುಡುಗರು ಹುಡುಗಿಯರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆ. ಪುರುಷರಲ್ಲಿ ದಪ್ಪನೆ ಗಡ್ಡ ಬೆಳೆಸಿ ಮೀಸೆ ಇಡುವ ಕ್ರೇಜ್ ಫ್ಯಾಷನ್ ಆಗಿದೆ.

ಚೆನ್ನಾಗಿ ಗಡ್ಡ ಬೆಳೆಸಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಕೆಲವು ಹುಡುಗರ ಮುಖದಲ್ಲಿ ಗಡ್ಡವೇ ಸರಿಯಾಗಿ ಬೆಳೆಯುವುದಿಲ್ಲ. ಗಡ್ಡ ಸರಿಯಾಗಿ ಬೆಳೆಯದೆ ತಮ್ಮ ಮುಖಕ್ಕೆ ಸರಿಹೊಂದುವ ಸ್ಟೈಲ್ ಮಾಡಲು ಸಾಧ್ಯವಾಗುವುದಿಲ್ಲ. ಮಂದ ಗಡ್ಡ ಕೂದಲು ಅಥವಾ ಪ್ಯಾಚಿ ಬಿಯರ್ಡ್‌ನಿಂದಾಗಿ ಕಿರಿಕಿರಿ ಅನುಭವಿಸುವ ಹುಡುಗರಿದ್ದಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಬಳಸಿದರೂ, ಪರಿಣಾಮಕಾರಿ ಫಲಿತಾಂಶ ಸಿಗುವುದಿಲ್ಲ. ನಿಮಗೂ ಇಂತಹ ಸಮಸ್ಯೆ ಇದ್ದರೆ, ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಗಡ್ಡಕ್ಕೆ ಮಸಾಜ್‌

ಗಡ್ಡದ ಬೆಳವಣಿಗೆಗೆ ದುಬಾರಿ ಉತ್ಪನ್ನಗಳನ್ನು ಬಳಸುವ ಬದಲು, ಪ್ರತಿದಿನ ತೆಂಗಿನ ಎಣ್ಣೆ, ಆಮ್ಲಾ ಎಣ್ಣೆ ಅಥವಾ ಹರಳೆಣ್ಣೆಯಿಂದ ಗಡ್ಡಕ್ಕೆ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಗಡ್ಡದ ಕೂದಲಿನ ಬುಡದ ಚರ್ಮ ಸಕ್ರಿಯವಾಗುತ್ತದೆ. ಆ ಮೂಲಕ ಗಡ್ಡ ಬೆಳೆಯುತ್ತದೆ. ಮುಖವನ್ನು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲಿನ ಕಿರುಚೀಲಗಳಿಗೆ ಪೋಷಕಾಂಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಇದು ಕೂದಲು ದಪ್ಪವಾಗಿ ಮತ್ತು ವೇಗವಾಗಿ ಬೆಳೆಯುವಂತೆ ಮಾಡುತ್ತದೆ. ಮಸಾಜ್‌ ಮಾಡುವುದರ ಬದಲಿಗೆ ಗಡ್ಡದ ಕೂದಲನ್ನು ಬಾಚಣಿಗೆಯಿಂದ ನಿತ್ಯವೂ ಬಾಚಬಹುದು.

ಆಹಾರಕ್ರಮದಲ್ಲಿ ಬದಲಾವಣೆ

ಪ್ಯಾಚಿ ಗಡ್ಡಕ್ಕೆ ನಿಮ್ಮ ಆಹಾರಕ್ರಮ ಕೂಡಾ ಕಾರಣ. ಇದಕ್ಕಾಗಿ ದುಬಾರಿ ಕ್ರೀಮ್ ಮತ್ತು ಲೋಷನ್ ಬಳಸಿದರೆ ಪರಿಣಾಮಕಾರಿ ಫಲಿತಾಂಶ ಸಿಗದಿರಬಹುದು. ಗಡ್ಡದ ಬೆಳವಣಿಗೆಗಾಗಿ, ನೀವು ಮೊದಲು ನಿಮ್ಮ ದೇಹ ಸೇರುವ ಪೌಷ್ಠಿಕಾಂಶಯುತ ಆಹಾರದ ಬಗ್ಗೆ ಗಮನ ಹರಿಸಬೇಕು. ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬಿನ ಜೊತೆಗೆ ಪ್ರೋಟೀನ್, ಕಬ್ಬಿಣ ಮತ್ತು ಸತು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಕೂದಲ ಬೆಳವಣಿಗೆಗೆ ನೆರವಾಗುವ ಆಹಾರದ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ರಿವರ್ಸ್ ಶೇವ್

ಹೆಚ್ಚಿನ ಹುಡುಗರು ಶೇವಿಂಗ್ ಮಾಡುವಾಗ ರೇಜರ್ ಅನ್ನು ನೇರವಾಗಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಗಡ್ಡದ ಕೂದಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಗಡ್ಡದ ಕೂದಲು ಬೆಳೆಯುವುದು ಉತ್ತಮವಾಗಬೇಕೆಂದು ನೀವು ಬಯಸಿದರೆ, ಶೇವಿಂಗ್ ಮಾಡುವಾಗ ರೇಜರ್ ಅನ್ನು ಕೂದಲಿಗೆ ವಿರುದ್ಧ ದಿಕ್ಕಿನಲ್ಲಿ ಬಳಸಿ. ಇದರಿಂದ ಮುಖದ ಮೇಲೆ ಗಡ್ಡದ ಬೆಳವಣಿಗೆ ಕ್ರಮೇಣ ಹೆಚ್ಚಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ