ಎಷ್ಟೇ ಪ್ರಯತ್ನಿಸಿದ್ರೂ ಕೂದಲು ಉದುರೋದು ನಿಲ್ತಾ ಇಲ್ವಾ, ಹಾಗಿದ್ರೆ ಈ ವಸ್ತುವನ್ನು ಪ್ರತಿದಿನ ತಿಂದು ನೋಡಿ, ಅಚ್ಚರಿಯ ಫಲಿತಾಂಶ ಸಿಗುತ್ತೆ
Nov 22, 2024 03:02 PM IST
ಕೂದಲು ಉದುರುವುದನ್ನು ತಡೆಯುವುದು ಹೇಗೆ
- ಕೂದಲು ಉದುರುವ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗುತ್ತೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಕೂದಲು ಉದುರೋದು ತಡೆಯೋದು ಕಷ್ಟ. ಹಾಗಂತ ಚಿಂತೆ ಮಾಡಬೇಕು ಅಂತಿಲ್ಲ. ಈ ಒಂದು ವಸ್ತುವನ್ನು ನೀವು ಪ್ರತಿದಿನ ತಿನ್ನುವ ಅಭ್ಯಾಸ ಮಾಡಿದ್ರೆ ಸಾಕು ಕೂದಲು ಉದುರೋದು ನಿಂತು ಹೊಸ ಕೂದಲು ಬೆಳಯೋಕೆ ಶುರುವಾಗುತ್ತೆ.
ಕೂದಲು ಉದುರುವ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಕೂದಲು ಉದುರುವುದು ಕೀಳರಿಮೆಯನ್ನು ಹೆಚ್ಚಿಸುತ್ತಿದೆ. ಕೂದಲು ಉದುರದೆ, ಹೊಸ ಕೂದಲು ಬೆಳೆಯಬೇಕೆಂದರೆ ದಿನನಿತ್ಯದ ಆಹಾರದಲ್ಲಿ ಒಂದಿಷ್ಟು ಸೂಪರ್ ಫುಡ್‌ಗಳನ್ನು ಸೇರಿಸಿಕೊಳ್ಳಬೇಕು. ಆ ಸೂಪರ್‌ಫುಡ್‌ಗಳು ಕೂದಲು ಉದುರುವುದನ್ನು ತಡೆದು ಹೊಸ ಕೂದಲು ಬೆಳೆಯಲು ಸಹಕರಿಸುತ್ತವೆ. ಇಂತಹ ಒಂದು ಸೂಪರ್‌ಫುಡ್ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನು ನೀವು ನಿರಂತರವಾಗಿ ತಿನ್ನುವ ಅಭ್ಯಾಸ ಮಾಡಿದ್ರೆ ಅಚ್ಚರಿಯ ಫಲಿತಾಂಶ ನಿಮ್ಮದಾಗುತ್ತೆ.
ಡಾ. ಕೃತಿಕಾ ಮೋಹನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಒಂದು ಪಾನೀಯದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ತನ್ನ ಕೂದಲ ಬೆಳವಣಿಗೆಗೆ ತುಂಬಾ ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಪಾನೀಯದ ಪ್ರಯೋಜನದ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದರೆ ಅವರು ಹೇಳಿರುವ ವಸ್ತು ಯಾವುದು ಅಂತ ಯೋಚನೆ ಮಾಡ್ತಾ ಇದೀರಾ, ಇಲ್ಲಿದೆ ನೋಡಿ ಉತ್ತರ. ‘ನಾನು ಚಿಯಾ ಬೀಜಗಳನ್ನು ನನ್ನ ದಿನಚರಿಯ ಭಾಗವಾಗಿ ಮಾಡಿಕೊಂಡಿದ್ದೇನೆ. ಇದು ನನ್ನ ಕೂದಲು ಉದುರುವುದನ್ನು ಕಡಿಮೆ ಮಾಡಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ‘ ಎಂದು ಅವರು ಹೇಳುತ್ತಾರೆ.
ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ನೆತ್ತಿಯ ಉರಿಯೂತವನ್ನು ನಿವಾರಿಸಲು ಮತ್ತು ಕೂದಲು ಉದುರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ. ಕೃತಿಕಾ ವಿವರಿಸುತ್ತಾರೆ. ಚಿಯಾ ಬೀಜಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಬೆಳಗಿನ ಹೊತ್ತು. ಚಿಯಾ ಬೀಜಗಳನ್ನು ಸ್ಮೂಥಿಗಳು, ಮೊಸರು, ಓಟ್‌ಮೀಲ್ ಅಥವಾ ಸಾಮಾನ್ಯ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬಹುದು. ರಾತ್ರಿಯಿಡಿ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಬೇಗ ಇದನ್ನು ಸೇವಿಸಿ .
ಚಿಯಾ ಬೀಜಗಳು ಕೂದಲು ಉದುರುವುದನ್ನು ತಡೆಯುತ್ತವೆಯೇ?
ಚಿಯಾ ಬೀಜಗಳು ನಿಜಕ್ಕೂ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತವೆಯೇ ಎಂಬ ಪ್ರಶ್ನೆಗೆ ಹೌದು ಎನ್ನುತ್ತಿದ್ದಾರೆ ವೈದ್ಯರು. ಕೂದಲು ಉದುರುವುದನ್ನು ಕಡಿಮೆ ಮಾಡಲು ಬಯಸುವವರು ತಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿಕೊಳ್ಳಬೇಕು. ಅವು ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೊಟೀನ್, ಸತು ಮತ್ತು ಕಬ್ಬಿಣದಂತಹ ಅಗತ್ಯ ಖನಿಜಗಳಿಂದ ತುಂಬಿವೆ. ಚಿಯಾ ಬೀಜಗಳು ಆರೋಗ್ಯಕರ ಕೂದಲು ಬೆಳವಣಿಗೆಗೆ ಪವರ್ ಹೌಸ್ ಎಂದು ಹೇಳಬಹುದು.
ಒಮೆಗಾ -3 ಕೊಬ್ಬಿನಾಮ್ಲಗಳು: ಚಿಯಾ ಬೀಜಗಳನ್ನು ತಿನ್ನುವುದರಿಂದ ನೆತ್ತಿಯ ಮೇಲೆ ಉರಿಯೂತವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇದು ನೆತ್ತಿಯ ಭಾಗವನ್ನು ತೇವವಾಗಿಡುತ್ತದೆ.
ಪ್ರೊಟೀನ್: ಚಿಯಾ ಬೀಜಗಳಲ್ಲಿರುವ ಪ್ರೊಟೀನ್ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ಕೂದಲು ಒಡೆಯುವುದನ್ನು ತಡೆಯುತ್ತದೆ.
ಸತು: ಚಿಯಾ ಬೀಜಗಳಲ್ಲಿರುವ ಸತುವು ಹಾನಿಗೊಳಗಾದ ಕೂದಲು ಕಿರುಚೀಲಗಳನ್ನು ಸರಿಪಡಿಸುತ್ತದೆ.
ಕಬ್ಬಿಣ: ಈ ಬೀಜಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ನೆತ್ತಿಯ ಮೇಲೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೂದಲಿನ ಬೇರುಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.
ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದು ಹೇಗೆ?
ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದು ಸುಲಭ. ಅವುಗಳನ್ನು ಸ್ಮೂಥಿಗಳಾಗಿ ಮಿಶ್ರಣ ಮಾಡಿ, ಮೊಸರಿನ ಮೇಲೆ ಸಿಂಪಡಿಸಿ. ಪೌಷ್ಟಿಕಾಂಶ ಸಮೃದ್ಧ ಚಿಯಾ ಪುಡಿಂಗ್ ಮಾಡಬಹುದು. ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಆ ನೀರಿನಿಂದ ಅವುಗಳನ್ನು ಕುಡಿಯಿರಿ. ಚಿಯಾ ಬೀಜಗಳ ನಿಯಮಿತ ಸೇವನೆಯು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ, ಆದರೆ ಒಟ್ಟಾರೆ ಕೂದಲಿನ ರಚನೆ ಮತ್ತು ಹೊಳಪನ್ನು ಸುಧಾರಿಸುತ್ತದೆ.