ಚಿಕ್ಕ ವಯಸ್ಸಿಗೆ ಕೂದಲು ಬಿಳಿಯಾಗೋಕೆ ಶುರುವಾಗಿದ್ಯಾ; ಅಕಾಲಿಕ ಬಾಲನೆರೆ ತಡೆಯಲು ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕ್ಕ ವಯಸ್ಸಿಗೆ ಕೂದಲು ಬಿಳಿಯಾಗೋಕೆ ಶುರುವಾಗಿದ್ಯಾ; ಅಕಾಲಿಕ ಬಾಲನೆರೆ ತಡೆಯಲು ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಚಿಕ್ಕ ವಯಸ್ಸಿಗೆ ಕೂದಲು ಬಿಳಿಯಾಗೋಕೆ ಶುರುವಾಗಿದ್ಯಾ; ಅಕಾಲಿಕ ಬಾಲನೆರೆ ತಡೆಯಲು ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಅತಿಯಾದ ಒತ್ತಡ, ಕಳಪೆ ಆಹಾರಕ್ರಮ, ಪಟ್ಟಣದ ಜೀವನಶೈಲಿ ಈ ಹಲವು ಕಾರಣಗಳಿಂದ ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುತ್ತಿದೆ. ದೇಹವು ಮೆಲನಿನ್ ವರ್ಣದ್ರವ್ಯವನ್ನು ಉತ್ಪಾದಿಸುವುದನ್ನ ನಿಲ್ಲಿಸಿದಾಗ ಅಕಾಲಿಕ ಬಾಲನೆರೆ ಉಂಟಾಗುತ್ತದೆ. ಇದನ್ನು ತಡೆಯುವ ನೈಸರ್ಗಿಕ ಔಷಧಿಗಳು ಯಾವುವು ನೋಡಿ. ಇದರಿಂದ ಬೇಗನೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಅಕಾಲಿಕ ಬಾಲನೆರೆ ನಿವಾರಣೆಗೆ ಮನೆಮದ್ದು
ಅಕಾಲಿಕ ಬಾಲನೆರೆ ನಿವಾರಣೆಗೆ ಮನೆಮದ್ದು (PC: Canva)

ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಸಂಬಂಧಿಸಿ ಒಂದಿಲ್ಲೊಂದು ಸಮಸ್ಯೆಗಳು ಕಾಡುವುದು ಸಹಜವಾಗಿದೆ. ಕೂದಲು ಉದುರುವುದು, ತಲೆಹೊಟ್ಟಿನ ಜೊತೆಗೆ ಅಕಾಲಿಕ ಬಾಲನೆರೆ ಸಮಸ್ಯೆಯು ಹಲವರನ್ನು ಕಾಡುತ್ತಿದೆ. ಅಕಾಲಿಕ ಬಾಲನೆರೆ ಎಂದರೆ 20, 30ನೇ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು. ವಯಸ್ಸು 40 ದಾಟಿದ ನಂತರ ಕೂದಲು ಬಿಳಿಯಾಗುವುದು ಸಹಜವಾದರೂ 20 ರಿಂದ 30 ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದರಿಂದ ಸೌಂದರ್ಯ ಕೆಡುತ್ತದೆ. ಕೂದಲಿನ ಗಾಢ ಬಣ್ಣಕ್ಕೆ ಕಾರಣವಾದ ಮೆಲನಿನ್ ವರ್ಣದ್ರವ್ಯವನ್ನು ದೇಹವು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಕೂದಲು ಬಿಳಿಯಾಗಲು ಆರಂಭಿಸುತ್ತದೆ.

ಪೋಷಣೆಯ ಕೊರತೆ ಮತ್ತು ಅನುವಂಶಿಯತೆ ಬೂದು ಬಣ್ಣಕ್ಕೆ ಪ್ರಮುಖ ಕಾರಣಗಳಾಗಿದ್ದರೂ, ತಂಬಾಕಿನ ಅತಿಯಾದ ಬಳಕೆ ಮತ್ತು ಧೂಮಪಾನ ಅಥವಾ ಭಾವನಾತ್ಮಕ ಒತ್ತಡವು ಕೂದಲು ಬಿಳಿಯಾಗಲು ಕಾರಣವಾಗುತ್ತದೆ. ಹಾಗಂತ ಇದಕ್ಕೆ ಪರಿಹಾರವೇ ಇಲ್ಲ ಅಂತಲ್ಲ. ಕೆಲವು ಮನೆಮದ್ದುಗಳ ಮೂಲಕ ಅಕಾಲಿಕ ಬಾಲನೆರೆಯನ್ನು ತಡೆಯಬಹುದು.

ನೆಲ್ಲಿಕಾಯಿ

ಇದು ನೈಸರ್ಗಿಕವಾಗಿ ಕೂದಲಿನ ಬಣ್ಣವನ್ನು ಕಪ್ಪಾಗಿಸುವ ಗುಣವನ್ನು ಹೊಂದಿದೆ. ಉಪಯೋಗಿಸುವುದು: ನೆಲ್ಲಿಕಾಯಿಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. ಬೀಜಗಳನ್ನು ಪೇಸ್ಟ್ ಮಾಡಿ. ಇದನ್ನು ನೆತ್ತಿ ಹಾಗೂ ಕೂದಲಿನ ಬೇರುಗಳಿಗೆ ಹಚ್ಚಿ ಒಣಗಿದ ನಂತರ ತಲೆಸ್ನಾನ ಮಾಡಿ.

ತೆಂಗಿನೆಣ್ಣೆ ಮತ್ತು ನಿಂಬೆರಸ

ಇದರ ಮಿಶ್ರಣವು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಎಣ್ಣೆ ಬಯೋಟಿನ್, ತೇವಾಂಶ ಮತ್ತು ಇತರ ಸಾರಗಳನ್ನು ಹೊಂದಿರುತ್ತದೆ. ಇದು ಕೂದಲು ಬಿಳಿಯಾಗುವುದನ್ನು ತಡೆದು, ಕೂದಲನ್ನು ಹೊಳೆಯುವಂತೆ ಮಾಡುತ್ತದೆ.

ಬಳಸುವುದು ಹೇಗೆ: ಎರಡು ಚಮಚ ತೆಂಗಿಣ್ಣೆಯಲ್ಲಿ ಒಂದು ಚಮಚ ನಿಂಬೆರಸ ಬೆರೆಸಿ, ಈ ಮಿಶ್ರಣವನ್ನು ನಿಮ್ಮ ನೆತ್ತಿ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

ಕರಿಬೇವಿನ ಎಲೆಗಳು

ಇದು ಕೂದಲಿನ ಬೇರುಗಳನ್ನು ಬಲಪಡಿಸಿ ಮತ್ತು ಕೂದಲಿಗೆ ಚೈತನ್ಯವನ್ನು ನೀಡುತ್ತದೆ.

ಏನು ಮಾಡಬೇಕು: ಕರಿಬೇವಿನ ಎಲೆಗಳನ್ನು ಒಂದು ಚಮಚ ತೆಂಗಿನ ಎಣ್ಣೆಯಲ್ಲಿ ಕರಟುವ ತನಕ ಕುದಿಸಿ. ಇದನ್ನು ಸೋಸಿ, ಕೂದಲಿಗೆ ಮಸಾಜ್ ಮಾಡಿ. ತಲೆಸ್ನಾನಕ್ಕೂ ಮೊದಲು 30-45 ನಿಮಿಷಗಳ ಕಾಲ ಬಿಡಿ. ವಾರಕ್ಕೆ ಎರಡು ಬಾರಿಯಾದರೂ ಈ ವಿಧಾನ ಅನುಸರಿಸಿ.

ಟೀ ಅಥವಾ ಕಾಫಿ

ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪು ಹಾಗೂ ಕಂದು ಬಣ್ಣದಲ್ಲಿ ಇರಿಸುತ್ತದೆ.

ಏನು ಮಾಡಬೇಕು: ಚಹಾ ಅಥವಾ ಕಾಫಿಯನ್ನು ನೀರಿಗೆ ಸೇರಿಸಿ ಮತ್ತು 10 ನಿಮಿಷಗಳ ಕಾಲ ಕುದಿಸಿ. ಕೂದಲಿನ ಬಣ್ಣದ ಕಪ್ಪಾಗಬೇಕು ಎಂದರೆ ಚಹಾದ ನೀರನ್ನು ಕೂದಲಿಗೆ ಹಚ್ಚಿ, ಕೂದಲ ಬಣ್ಣ ಕಂದಾಗಲು ಕಾಫಿಯೊಂದಿಗೆ ತೊಳೆಯಿರಿ.

ಕಪ್ಪು ಎಳ್ಳು

ಇದು ನೈಸರ್ಗಿಕವಾಗಿ ಕೂದಲಿನ ಬಣ್ಣವನ್ನು ಕಪ್ಪಾಗಿಸುತ್ತದೆ. ಹಸಿ ಕಪ್ಪು ಎಳ್ಳನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೀರಿನೊಂದಿಗೆ ಸೇವಿಸಿ.

ಮೊಲಾಸಸ್‌

ಇದು ಕೂದಲು ಕಪ್ಪಾಗುವುದನ್ನು ತಡೆಯುತ್ತದೆ. ಇದರಲ್ಲ ತಾಮ್ರದಂಶವಿರುತ್ತದೆ. ಇದು ಕೂದಲಿನ ವರ್ಣದ್ರವ್ಯದ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಏನು ಮಾಡಬೇಕು: ಧನಾತ್ಮಕ ಫಲಿತಾಂಶಗಳನ್ನು ನೋಡಲು ಕನಿಷ್ಠ ಕೆಲವು ತಿಂಗಳುಗಳವರೆಗೆ ಪ್ರತಿದಿನ ಬೆಳಿಗ್ಗೆ ಒಂದು ಚಮಚವನ್ನು ತಿನ್ನಿರಿ.

ಈರುಳ್ಳಿ ಪೇಸ್ಟ್

ಇದು ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಈರುಳ್ಳಿ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ.

ಅಮರಂಥ್

ಕೂದಲು ತನ್ನ ಕಪ್ಪು ವರ್ಣದ್ರವ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು: ಅಮರಂಥ್ ಎಲೆಗಳನ್ನು ಪುಡಿಮಾಡಿ ಮತ್ತು ಪೇಸ್ಟ್ ಮಾಡಿ ನೆತ್ತಿಯ ಭಾಗಕ್ಕೆ ಹಚ್ಚಿ.

ಸೀಗೆಕಾಯಿ

ಅಕಾಲಿಕ ಬೂದುಬಣ್ಣದ ಚಿಕಿತ್ಸೆಗೆ ಪರಿಣಾಮಕಾರಿ ಮನೆಮದ್ದು.

ಏನು ಮಾಡಬೇಕು: ಶಿಕಾಕಾಯಿಯನ್ನು ರಾತ್ರಿ ಕಬ್ಬಿಣದ ಪಾತ್ರೆಯಲ್ಲಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ನೀರನ್ನು ಕುದಿಸಿ ಮತ್ತು ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿ.

Whats_app_banner