ಅಜೀರ್ಣದಿಂದ ವಾಕರಿಕೆ ನಿವಾರಣೆಯವರೆಗೆ: ನಿಂಬೆ-ಶುಂಠಿ ಚಹಾ ಸೇವನೆಯ ಪ್ರಯೋಜನ ಎಷ್ಟೆಲ್ಲಾ ಗೊತ್ತಾ?
Oct 28, 2024 12:46 PM IST
ಸಾಮಾನ್ಯ ಚಹಾಕ್ಕಿಂತ ಶುಂಠಿ-ನಿಂಬೆ ಟೀ ನಿಮಿಷಗಳಲ್ಲಿ ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ.
ನಮಗೆ ತಲೆನೋವು ಅಥವಾ ವಾಕರಿಕೆ ಬಂದರೆ ತಕ್ಷಣ ಟೀ ಕುಡಿಯುತ್ತೇವೆ. ಆದರೆ, ಚಹಾ ಕುಡಿಯುವುದಕ್ಕಿಂತ ಆ ಸಮಯದಲ್ಲಿ ಶುಂಠಿ-ನಿಂಬೆ ಕಾಂಬಿನೇಶನ್ ಇರುವ ಚಹಾವನ್ನು ಕುಡಿಯುವುದು ಉತ್ತಮ. ಇದು ಸಾಮಾನ್ಯ ಚಹಾಕ್ಕಿಂತ ನಿಮಿಷಗಳಲ್ಲಿ ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ.
ಶುಂಠಿಯು ಪ್ರಕೃತಿಯ ನೈಸರ್ಗಿಕ ಸಿದ್ಧ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಶುಂಠಿಯನ್ನು ಖಾದ್ಯಗಳಿಗೆ ಮಾತ್ರವಲ್ಲ, ಕಷಾಯ ಅಥವಾ ಚಹಾಗೂ ಸೇರಿಸಿ ತಯಾರಿಸಲಾಗುತ್ತದೆ. ಶೀತ, ಕಫ, ಕೆಮ್ಮು ನಿವಾರಣೆಗೂ ಇದು ಸಹಕಾರಿಯಾಗಿದೆ. ಶುಂಠಿ ಚಹಾವು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯಕರ ಪಾನೀಯ ಎಂದೇ ಹೇಳಬಹುದು. ಆ ಶುಂಠಿ ಟೀಗೆ ನಿಂಬೆರಸ ಸೇರಿಸಿ ಕುಡಿದರೆ ನೆಗಡಿ, ತಲೆನೋವು, ಜಠರಗರುಳಿನ ಸಮಸ್ಯೆ, ವಾಂತಿ ಮುಂತಾದ ಹಲವು ಸಮಸ್ಯೆಗಳಿಂದ ಶೀಘ್ರ ಪರಿಹಾರ ಸಿಗುತ್ತದೆ.
ಮಾರುಕಟ್ಟೆಯಲ್ಲಿ ಶುಂಠಿ ಅತ್ಯಂತ ಸುಲಭವಾಗಿ ದೊರೆಯುತ್ತದೆ. ಶುಂಠಿಯ ಮೇಲಿನ ಪದರವನ್ನು ತೆಗೆದುಹಾಕಿ, ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ಕುದಿಸಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಈ ಚಹಾವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಕೆಲವರು ನೀರಿಗೆ ಅರಿಶಿನ, ಮೆಣಸು, ಪುದೀನ ಅಥವಾ ದಾಲ್ಚಿನ್ನಿ ಸೇರಿಸುತ್ತಾರೆ. ಇವು ಚಹಾದ ರುಚಿಯನ್ನು ಹೆಚ್ಚಿಸುತ್ತವೆ ಮತ್ತು ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ.
ನಿಂಬೆ ಶುಂಠಿ ಚಹಾವನ್ನು ಹೇಗೆ ತಯಾರಿಸುವುದು
ಬೇಕಾಗುವ ಸಾಮಾಗ್ರಿಗಳು: ತಾಜಾ ಶುಂಠಿ (ಸಣ್ಣ ತುಂಡುಗಳು) – 4, ನಿಂಬೆಹಣ್ಣು-1, ಬಿಸಿ ನೀರು - 4 ಕಪ್.
ಮಾಡುವ ವಿಧಾನ: ಶುಂಠಿ ತುಂಡುಗಳನ್ನು ತುರಿಯಿರಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ತುರಿದ ಶುಂಠಿ ಹಾಕಿ ಚೆನ್ನಾಗಿ ಕುದಿಸಿ. ನಂತರ ನಿಂಬೆ ರಸವನ್ನು ಸೇರಿಸಿ, ಕುದಿಯಲು ಬಿಡಿ. 5 ನಿಮಿಷದ ನಂತರ ಕೆಳಗಿಳಿಸಿ ಒಂದು ಲೋಟದಲ್ಲಿ ಹಾಕಿ ಬೆಚ್ಚಗೆ ಕುಡಿಯಿರಿ. ನೀವು ಈ ಚಹಾವನ್ನು ಮತ್ತೆ ಬಿಸಿ ಮಾಡಿ ದಿನಕ್ಕೆ 4 ರಿಂದ 5 ಬಾರಿ ಕುಡಿಯಬಹುದು.
ನಿಂಬೆ-ಶುಂಠಿ ಚಹಾ ಸೇವನೆಯ ಪ್ರಯೋಜನಗಳು
ಅಜೀರ್ಣಕ್ಕೆ ಪರಿಹಾರ: ನಿಂಬೆ-ಶುಂಠಿ ಚಹಾವು ಅಜೀರ್ಣ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ನಿಂಬೆ ಮತ್ತು ಶುಂಠಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ ಮತ್ತು ಜ್ವರದಂತಹ ಕಾಯಿಲೆಗಳಿಂದ ನೀವು ರಕ್ಷಣೆ ಪಡೆಯುತ್ತೀರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಚಹಾವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ನೋವಿನಿಂದ ಪರಿಹಾರ: ನಿಂಬೆ-ಶುಂಠಿ ಚಹಾವು ಉರಿಯೂತ, ಸಂಧಿವಾತ ಮತ್ತು ತಲೆನೋವುಗಳಿಗೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮದ ನಂತರ ಸ್ನಾಯು ನೋವನ್ನು ನಿವಾರಿಸಲು ಕೆಲವರು ನಿಂಬೆ-ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ.
ತೂಕ ನಷ್ಟ: ನಿಂಬೆ-ಶುಂಠಿ ಚಹಾವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಇನ್ಸುಲಿನ್ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಶುಂಠಿ ಹಸಿವನ್ನು ನಿಗ್ರಹಿಸುತ್ತದೆ. ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ
ವಾಕರಿಕೆಯಿಂದ ಪರಿಹಾರ: ಪ್ರಾಚೀನ ಕಾಲದಿಂದಲೂ ಶುಂಠಿಯನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಬಳಸಲಾಗುತ್ತದೆ. ನಿಂಬೆ-ಶುಂಠಿ ಚಹಾವನ್ನು ಕುಡಿಯುವುದು ವಾಂತಿ ಮತ್ತು ವಾಕರಿಕೆಯಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ: ನಿಂಬೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಶುಂಠಿ-ನಿಂಬೆ ಟೀ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಚಹಾವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದು ಹೃದಯಕ್ಕೂ ಒಳ್ಳೆಯದು. ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಷಯ ಸೂಚನೆ: ಇನ್ನು ಮುಖ್ಯವಾಗಿ ಗಮನಿಸಬೇಕಾಗಿರುವ ವಿಚಾರ ಏನೆಂದರೆ ಗರ್ಭಿಣಿ ಅಥವಾ ಹಾಲುಣಿಸುವ ತಾಯಂದಿರು ವೈದ್ಯರನ್ನು ಸಂಪರ್ಕಿಸದೆ ಶುಂಠಿ-ನಿಂಬೆ ಚಹಾವನ್ನು ಕುಡಿಯಬಾರದು. ಅಲ್ಲದೆ, ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಕಂಡುಬರುವ ವಿವರಗಳನ್ನು ಆಧರಿಸಿದೆ. ಇದು ಕೇವಲ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಸಂದೇಹಗಳು ಅಥವಾ ತೊಂದರೆಗಳಿದ್ದರೆ ಸಂಬಂಧಿತ ತಜ್ಞ ವೈದ್ಯರನ್ನು ಸಂಪರ್ಕಿಸಿ.
ವಿಭಾಗ