logo
ಕನ್ನಡ ಸುದ್ದಿ  /  ಜೀವನಶೈಲಿ  /  Health Benefits Of Dates: ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನಿ; ಆರೋಗ್ಯ ಪ್ರಯೋಜನ ಹೀಗಿದೆ

Health benefits of Dates: ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನಿ; ಆರೋಗ್ಯ ಪ್ರಯೋಜನ ಹೀಗಿದೆ

HT Kannada Desk HT Kannada

Oct 03, 2022 11:36 AM IST

google News

ಖರ್ಜೂರ

    • ಖರ್ಜೂರವು ನಿಮ್ಮ ಮೆದುಳಿನ ಕೋಶಗಳ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಸಿಯಮ್ ಅಂಶಗಳು ನಿಮ್ಮ ನರಮಂಡಲವನ್ನು ಬಲಪಡಿಸಲು ನೆರವಾಗುತ್ತದೆ. ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ.
ಖರ್ಜೂರ
ಖರ್ಜೂರ (freepik)

ಖರ್ಜೂರ ಬಾಯಿಗೆ ತುಂಬಾ ರುಚಿಯಾದ ಡ್ರೈಫ್ರೂಟ್.‌ ಹಲವು ಸಿಹಿತಿಂಡಿಗಳಲ್ಲಿ ಇದನ್ನು ಯಥೇಚ್ಛವಾಗಿ ಬಳಸಲಾಗುತ್ತದೆ.‌ ಊಟ ತಿಂಡಿ ನಡುವೆ ಕೆಲವೊಬ್ಬರು ಆಗಾಗ ಇದನ್ನು ತಿನ್ನುತ್ತಾರೆ. ಇದು ಬಾಯಿಗೆ ರುಚಿ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗೂ ಒಳ್ಳೆಯದು. ಮಲಬದ್ಧತೆ, ಕಿಬ್ಬೊಟ್ಟೆಯ ಕ್ಯಾನ್ಸರ್ ಮತ್ತು ಅತಿಸಾರ ಸೇರಿದಂತೆ ಕೆಲವು ಅನಾರೋಗ್ಯ ಸಮಸ್ಯೆಗೆ ಖರ್ಜೂರವನ್ನು ಮನೆಮದ್ದಾಗಿ ಬಳಸಲಾಗುತ್ತದೆ.

ಮೂಳೆಯ ಆರೋಗ್ಯ, ಮೆದುಳಿನ ಆರೋಗ್ಯ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ನೈಸರ್ಗಿಕ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ಇದು ಕ್ಯಾನ್ಸರ್ ನಿರೋಧಕ, ಆಂಟಿ ಡಯಾಬಿಟಿಕ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಒಳಗೊಂಡಿದ್ದು, ಆರೋಗ್ಯಸುಧೆಯಾಗಿ ಬಳಕೆಯಾಗುತ್ತದೆ. ದಿನದಲ್ಲಿ ಆಗಾಗ ಇದನ್ನು ತಿನ್ನುವುದಕ್ಕಿಂತ ಖರ್ಜೂರವನ್ನು ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನಗಳಿವೆ ಎಂಧು ತಜ್ಞರು ಹೇಳುತ್ತಾರೆ. ಹಾಗಿದ್ರೆ ಆ ಪ್ರಯೋಜನ ಯಾವುವು ಎಂಬುದನ್ನು ಮುಂದೆ ಓದಿ.

ಖಾಲಿ ಹೊಟ್ಟೆಗೆ ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳು

ಮೆದುಳಿನ ಆರೋಗ್ಯ ಸುಧಾರಣೆ

ಖರ್ಜೂರದ ಹಣ್ಣಿನಲ್ಲಿ ನೈಸರ್ಗಿಕ ಜೀವಸತ್ವಗಳು, ಅಗತ್ಯ ಅಮೈನೋ ಆಮ್ಲಗಳು ಮತ್ತು ಖನಿಜ ಹೇರಳವಾಗಿದೆ. ಇದು ನಿಮ್ಮ ಮೆದುಳಿನ ಕೋಶಗಳ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಸಿಯಮ್ ಅಂಶಗಳು ನಿಮ್ಮ ನರಮಂಡಲವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಹಸಿವು ಕಡಿಮೆ ಮಾಡುತ್ತದೆ

ಮುಂಜಾನೆಯೇ ಖರ್ಜೂರವನ್ನು ತಿನ್ನುವುದರಿಂದ ಹಸಿವಿನ ಅನುಭವ ನಿಮಗಾಗುವುದಿಲ್ಲ. ಇದು ದಿನವಿಡೀ ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಖರ್ಜೂರದ ನಿಯಮಿತ ಸೇವನೆಯು ಹೃದಯರಕ್ತನಾಳದ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ ನಿಮ್ಮ ಹುರುಪು ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಖರ್ಜೂರವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಿಸುವುದನ್ನು ತಡೆಯುವಲ್ಲಿ ಖರ್ಜೂರ ಅತ್ಯಗತ್ಯ ಎಂದು ಈ ಹಿಂದೆ ನಡೆದ ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.

ತ್ವಚೆಯ ಆರೋಗ್ಯ ಸುಧಾರಿಸುತ್ತದೆ

ಖರ್ಜೂರದಲ್ಲಿ ವಿಟಮಿನ್ ಸಿ, ಬಿ5, ಫ್ಲೇವನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಹಲವಾರು ಪೌಷ್ಟಿಕಾಂಶಗಳಿವೆ. ಈ ಎಲ್ಲಾ ಅಗತ್ಯ ಅಂಶಗಳು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ. ಇದರಿಂದಾಗಿ ನಿಮ್ಮ ಚರ್ಮದ ಮೇಲೆ, ವಿಶೇಷವಾಗಿ ಮುಖದಲ್ಲಿ ಸುಕ್ಕುಗಳು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕೂದಲಿನ ಆರೋಗ್ಯ

ಖರ್ಜೂರದಲ್ಲಿ ವಿಟಮಿನ್ ಬಿ5 ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಯಥೇಚ್ಛವಾಗಿದೆ. ಇದು ಕೂದಲಿನ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ. ಖರ್ಜೂರವು ನಿಮ್ಮ ನೆತ್ತಿಯ ಮೇಲೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ತಲೆಹೊಟ್ಟು ನಿವಾರಣೆ, ಕೂದಲು ಉದುರುವಿಕೆ ಸೇರಿದಂತೆ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಕೂದಲು ದುರ್ಬಲವಾಗಿದ್ದರೆ, ಅದರ ಆರೋಗ್ಯ ಸುಧಾರಿಸಲು ಖರ್ಜೂರ ಸಹಕಾರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ