logo
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಅನಾಫಿಲ್ಯಾಕ್ಟಿಕ್ ರಿಯಾಕ್ಷನ್? ಮಂಗಳೂರಿನ ಉಪನ್ಯಾಸಕಿ ಸಾವಿಗೆ ಕಾರಣವಾಗಿದ್ದು ಆಹಾರದ ಅಲರ್ಜಿಯೇ, ಇಲ್ಲಿದೆ ತಜ್ಞರ ಉತ್ತರ

ಏನಿದು ಅನಾಫಿಲ್ಯಾಕ್ಟಿಕ್ ರಿಯಾಕ್ಷನ್? ಮಂಗಳೂರಿನ ಉಪನ್ಯಾಸಕಿ ಸಾವಿಗೆ ಕಾರಣವಾಗಿದ್ದು ಆಹಾರದ ಅಲರ್ಜಿಯೇ, ಇಲ್ಲಿದೆ ತಜ್ಞರ ಉತ್ತರ

Reshma HT Kannada

Nov 18, 2024 03:56 PM IST

google News

ಅನಾಫಿಲ್ಯಾಕ್ಟಿಕ್ ರಿಯಾಕ್ಷನ್

    • ಕಳೆದ ಮೂರ್ನ್ಕಾಲು ದಿನಗಳ ಹಿಂದೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ (23) ಎನ್ನುವವರು ಕಾಲೇಜಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಅವರ ಸಾವಿಗೆ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಕಾರಣ. ಆಹಾರದ ಅಲರ್ಜಿಯು ಮನುಷ್ಯನನ್ನು ಸಾವಿಗೆ ದವಡೆಗೆ ದೂಡುತ್ತಾ, ಏನಿದು ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಎಂಬ ವಿವರ ಇಲ್ಲಿದೆ.
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್
ಅನಾಫಿಲ್ಯಾಕ್ಟಿಕ್ ರಿಯಾಕ್ಷನ್

ಫುಡ್‌ ಪಾಯಿಸನ್… ಬಹುತೇಕ ನಾವೆಲ್ಲರೂ ಒಮ್ಮೆಯಾದ್ರೂ ಫುಡ್ ಪಾಯಿಸನ್‌ನಿಂದ ಬಳಲಿರುತ್ತೇವೆ. ಇದರಿಂದ ವಾಂತಿ, ವಾಕರಿಕೆ, ಅತಿಸಾರ ಮುಂತಾದ ಸಮಸ್ಯೆ ಎದುರಾಗುತ್ತದೆ. ಆಹಾರ ವಿಷವಾಗಿ ದೇಹದಲ್ಲಿ ಪ್ರತಿಕ್ರಿಯೆ ನೀಡುವುದು ಫುಡ್ ಪಾಯಿಸನ್ ಆದರೆ, ಆಹಾರದ ಅಲರ್ಜಿಯಿಂದ ದೇಹದಲ್ಲಿ ವಿಚಿತ್ರ ಬದಲಾವಣೆಗಳಾಗುವುದನ್ನು ನಾವು ನೋಡಿರುತ್ತೇವೆ. ಆಹಾರದ ಅಲರ್ಜಿಯಿಂದ ತುರಿಕೆ, ಮೈ ಊದಿಕೊಳ್ಳಲುವುದು ಇದೆಲ್ಲಾ ಸಂಭವಿಸುತ್ತದೆ.

ನಮ್ಮ ದೇಹಕ್ಕೆ ಶಕ್ತಿ ಸಿಗಬೇಕು ಎನ್ನುವ ಕಾರಣಕ್ಕೆ ತಿನ್ನುವ ಆಹಾರವೇ ವಿಷವಾಗುತ್ತದೆ ಎಂದರೆ ನಮಗೆ ಅಚ್ಚರಿಯಾಗುತ್ತದೆ. ಆಹಾರವು ವಿಷವಾಗಿ, ಅಲರ್ಜಿ ರೂಪದಲ್ಲಿ ದೇಹವನ್ನು ಸುತ್ತವರಿದು ಇದರಿಂದ ಉಸಿರೇ ನಿಂತು ಹೋಗುತ್ತದೆ ಎನ್ನುವ ವಿಚಾರ ಹಲವರಿಗೆ ತಿಳಿದಿಲ್ಲ. ಆದರೆ ಇದು ನಿಜ. ಮೂರ್ನ್ಕಾಲು ದಿನಗಳ ಹಿಂದೆ ಮಂಗಳೂರಿನ ಉಪನ್ಯಾಸಕಿಯೊಬ್ಬರು ಎಳೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಅವರ ಸಾವಿಗೆ ಕಾರಣವಾಗಿದ್ದು ಇದೇ ಆಹಾರದ ಅಲರ್ಜಿ. ಅದನ್ನು ವೈದ್ಯಕೀಯ ಭಾಷೆಯಲ್ಲಿ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಎಂದು ಕರೆಯುತ್ತಾರೆ. ಮಧ್ಯಾಹ್ನ ಊಟ ತಿಂದ ನಂತರ ಗ್ಲೋರಿಯಾ ರೋಡ್ರಿಗಸ್ ಏಕಾಏಕಿ ಕುಸಿದು ಬಿದ್ದು ಸಾಯುತ್ತಾರೆ. ಹಾಗಾದರೆ ಏನಿದು ಅನಾಫಿಲ್ಯಾಕ್ಟಿಕ್ ರಿಯಾಕ್ಷನ್, ಇದು ಹೇಗೆ ಸಂಭವಿಸುತ್ತದೆ ನೋಡಿ.

ಏನಿದು ಅನಾಫಿಲ್ಯಾಕ್ಟಿಕ್ ರಿಯಾಕ್ಷನ್?

ಅನಾಫಿಲ್ಯಾಕ್ಟಿಕ್ ಎಂದರೆ ತೀವ್ರವಾದ ಅಲರ್ಜಿ ಪ್ರಕ್ರಿಯೆ. ಇದರಿಂದ ಜೀವಕ್ಕೆ ಅಪಾಯ ಬಂದೊದಗಿ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ನಾವು ಸೇವಿಸುವ ಆಹಾರದಲ್ಲಿ ಯಾವುದಾದರೂ ಅಲರ್ಜಿ ಅಂಶ ಇದ್ದರೆ ಇದು ಬಹಳ ವೇಗ ಹರಡಿ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಇದು ದೇಹ, ಗಂಟಲಿನ ಒಳಗೆ ಊದಿಕೊಳ್ಳುತ್ತದೆ. ತುಟಿ, ನಾಲಿಗೆಯು ಊದಿಕೊಳ್ಳುತ್ತದೆ. ಇದರಿಂದ ಉಸಿರಾಟಕ್ಕೆ ಕಷ್ಟವಾಗಬಹುದು. ಉಸಿರಾಟಕ್ಕೆ ಕಷ್ಟವಾಗಿ ಜ್ಞಾನತಪ್ಪಿ ಅಲ್ಲೇ ಸಾಯುತ್ತಾರೆ. ಈ ಸಮಸ್ಯೆ ಕಾಣಿಸಿದಾಗ ತಕ್ಷಣ ಇಂಜೆಕ್ಷನ್ ನೀಡಿದರೆ ಕೆಲವು ಸೆಕೆಂಡ್‌ಗಳಲ್ಲಿ ವೈದ್ಯರು ಮ್ಯಾಜಿಕ್ ರೀತಿ ಪ್ರಾಣ ಉಳಿಸಲು ಸಾಧ್ಯವಿದೆ ಎನ್ನುತ್ತಾರೆ ಡಾ. ಸುಜಾತ ರಮೇಶ್‌.

ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಆಗಲು ಕಾರಣವೇನು?

ಸಾಮಾನ್ಯವಾಗಿ ಈ ಸ್ಥಿತಿಗೆ ಕೆಲವು ಔಷಧಿಗಳು ಕಾರಣವಾಗುತ್ತವೆ. ಮೈಕೈನೋವು, ತಲೆನೋವಿಗೆ ತೆಗೆದುಕೊಳ್ಳುವ ಪೇನ್‌ ಕಿಲ್ಲರ್‌ಗಳು, ಆಂಟಿಬಯೋಟಿಕ್ಸ್‌ಗಳು ಹಾಗೂ ಹಲವಾರು ಡ್ರಗ್ಸ್‌ಗಳಿಂದಲೂ ಈ ರಿಯಾಕ್ಷನ್ ಉಂಟಾಗುತ್ತದೆ. ಕೆಲವರಿಗೆ ಫುಡ್ ಅಲರ್ಜಿಯಿಂದ ಕೂಡ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಆಗುತ್ತದೆ. ಆದರೆ ಇದು ತುಂಬಾ ಅಪರೂಪದ ಸಂಗತಿಗಳಲ್ಲಿ ಆಗುತ್ತದೆ. ಶೆಂಗಾ, ಕಾಬೂಲ್‌ ಕಡಲೆ, ಸಿಗಡಿಯಂತಹ ಸಮುದ್ರಾಹಾರಗಳು ರಿಯಾಕ್ಷನ್‌ಗೆ ಕಾರಣವಾಗಬಹುದು. ಮಕ್ಕಳಿಗೆ ಹಾಲು ಹಾಗೂ ಒಣಹಣ್ಣುಗಳಿಂದ ರಿಯಾಕ್ಷನ್ ಉಂಟಾಗಬಹುದು.

ಇದನ್ನು ಅಲರ್ಜಿ ಸ್ಪೆಷಲಿಸ್ಟ್ ಬಳಿ ತೋರಿಸಿದಾಗ ಅವರು ಈ ಸಮಸ್ಯೆಗೆ ಸರಿಯಾದ ಕಂಡುಹಿಡಿದು, ಈ ಸಮಸ್ಯೆ ಯಾವ ಕಾರಣಕ್ಕೆ ಸಂಭವಿಸಿತು ಎಂದು ತಿಳಿದು ಚಿಕಿತ್ಸೆ ನೀಡುತ್ತಾರೆ. ವೈದ್ಯರು ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಅನಾಫಿಲ್ಯಾಕ್ಟಿಕ್ ರಿಯಾಕ್ಷನ್‌ಗೆ ಈಗೀಗ ಕೆಲವು ಔಷಧಿಗಳು ಲಭ್ಯವಿವೆ. ಆದರೆ ಸಕಾಲಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಹಾಗಾಗಿ ಈ ಕಾಯಿಲೆಯ ಬಗ್ಗೆ ಅರಿತು ಅದನ್ನು ಗುರುತಿಸಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವುದರಿಂದ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಯಾವುದೇ ಅಪಾಯ ಉಂಟಾಗದಂತೆ ನೋಡಿಕೊಳ್ಳಬಹುದು ಹಾಗೂ ಪ್ರಾಣಕ್ಕೂ ಅಪಾಯವಾಗದಂತೆ ನೋಡಿಕೊಳ್ಳಬಹುದು. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ