ದೀಪಾವಳಿಯಲ್ಲಿ ಸಿಹಿ ತಿನಿಸು, ನಾನ್ ವೆಜ್ ತಿನ್ನುತ್ತಿದ್ದೀರಾ? ಕರಿದ ಎಣ್ಣೆ ಪದಾರ್ಥ ತಿನ್ನುವ ಮುನ್ನ ಇರಲಿ ಆರೋಗ್ಯ ಕಾಳಜಿ
Nov 01, 2024 11:49 AM IST
ದೀಪಾವಳಿ ಹಬ್ಬದಲ್ಲಿ ಕರಿದ ಎಣ್ಣೆ ಪದಾರ್ಥಗಳನ್ನು ತಿನ್ನುವ ಮುನ್ನ ಆರೋಗ್ಯ ಬಗ್ಗೆ ಕಾಳಜಿ ವಹಿಸಿ. ಇದಕ್ಕಾಗಿ ಒಂದಿಷ್ಟು ನಿಮಯಗಳನ್ನು ಪಾಲಿಸಿ.
- ದೀಪಾವಳಿ 2024: ದೀಪಾವಳಿ ಹಬ್ಬದ ದಿನದಂದು ಮನೆಯಲ್ಲಿ ವೆರೈಟಿ ಪದಾರ್ಥಗಳನ್ನು ಮಾಡಿರುತ್ತಾರೆ. ಇವುದನ್ನು ನೋಡಿ ತಿನ್ನದೆ ಇರಲು ಸಾಧ್ಯವಿಲ್ಲ. ಸಿಹಿ ಮತ್ತು ನಾನ್ ವೆಜ್ ಹೆಚ್ಚು ಸೇವಿಸಿದರೆ ಸಮಸ್ಯೆ ಶುರುವಾಗುತ್ತದೆ. ಹಾಗಾದರೆ ಇಲ್ಲಿ ಯಾವ ಸಲಹೆಯನ್ನು ಅನುಸರಿಸಬೇಕು ಎಂದು ತಿಳಿಯೋಣ.
ದೀಪಾವಳಿಯ ದಿನದಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತೀರಿ. ಈ ವೇಳೆ ವಿವಿಧ ಸಿಹಿತಿಂಡಿಗಳು ಮತ್ತು ಮಾಂಸಾಹಾರಿ ಖಾದ್ಯಗಳನ್ನು ಆನಂದಿಸುತ್ತೀರಿ. ಆದರೆ, ನೀವು ಮಿತಿ ಮೀರಿದ ಆಹಾರವನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯ ಸಮಸ್ಯೆಗೆ ಕಾಣವಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂಥ ಸಮಯದಲ್ಲಿ ನೀವು ಈ ಸಲಹೆಗಳನ್ನು ಅನುಸರಿಸಿದರೆ ನೀವು ಹಬ್ಬವನ್ನು ಇನ್ನಷ್ಟು ಆನಂದಿಸಬಹುದು.
ಆಹಾರದ ಮಿತಿಯನ್ನು ದಾಟಬೇಡಿ
ಹಬ್ಬದ ದಿನ ಮನೆಯಲ್ಲಿ ಸಿಹಿ ತಿಂಡಿಗಳನ್ನು ಸ್ವಲ್ಪ ಹೆಚ್ಚು ಮಾಡುತ್ತಾರೆ. ಆದಾಗ್ಯೂ ಸಿಹಿ ತಿಂಡಿಗಳನ್ನು ಅತಿಯಾಗಿ ಸೇವಿಸಬೇಡಿ. ನಾನ್ ವೆಜ್ ಸೇವನೆಯಲ್ಲೂ ಸ್ವಲ್ಪ ಮಿತಿಯನ್ನು ಇಟ್ಟುಕೊಳ್ಳಿ. ಹಾಗೆಯೇ ಒಮ್ಮೆಲೇ ಹೆಚ್ಚು ತಿನ್ನದೆ ಸ್ವಲ್ಪ ಸ್ವಲ್ಪವೇ ತಿನ್ನಿ. ಇದು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ನಿಮ್ಮ ಊಟಕ್ಕೆ ತರಕಾರಿಗಳು, ಸಲಾಡ್‌ಗಳು ಹಾಗೂ ಬ್ರೆಡ್‌ನಂತಹ ಪದಾರ್ಥಗಳಿದ್ದರೆ ನಿಮ್ಮ ಫೈಬರ್ ಸೇವನೆಯು ಹೆಚ್ಚಾಗುತ್ತದೆ. ಈ ಫೈಬರ್ ನಿಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಾನ್ ವೆಜ್ ತಿನ್ನುವ ಮುನ್ನ ಇದನ್ನು ಗಮನಿಸಿ
ಹಲವೆಡೆ ದೀಪಾವಳಿ ದಿನ ನಾನ್ ವೆಜ್ ಹೆಚ್ಚು ತಿನ್ನುತ್ತಾರೆ. ಸಾಮಾನ್ಯವಾಗಿ ನಾನ್ ವೆಜ್ ನಲ್ಲಿ ಪ್ರೊಟೀನ್ ಮತ್ತು ಕೊಬ್ಬು ಅಧಿಕವಾಗಿರುತ್ತದೆ. ಹಾಗಾಗಿ ನಾನ್ ವೆಜ್ ತಿನಿಸುಗಳನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಮಿತಿಯನ್ನು ಮೀರಿದರೆ ಅಜೀರ್ಣ, ಉಬ್ಬುವುದು ಮತ್ತು ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನಾನ್ ವೆಜ್ ತಿನ್ನುವಾಗ ಮಿತಿ ಮೀರದಂತೆ ನೋಡಿಕೊಳ್ಳಿ.
ಒಂದು ಲೋಟ ಮಜ್ಜಿಗೆ ಅಥವಾ ಸ್ವಲ್ಪ ಮೊಸರು ಸೇವಿಸಿ
ನಿಮ್ಮ ಮಧ್ಯಾಹ್ನದ ಊಟದ ಕೊನೆಯಲ್ಲಿ ಸ್ವಲ್ಪ ಮೊಸರು ಸೇರಿಸಿ. ಆ ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಇರುವ ಕಾರಣ, ಜೀರ್ಣಕ್ರಿಯೆಯು ಸುಧಾರಿಸುತ್ತದೆ. ನೀವು ಮೊಸರು ತಿನ್ನದಿದ್ದರೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಒಂದು ಲೋಟ ಮಜ್ಜಿಗೆಗೆ ನಿಂಬೆ ರಸವನ್ನು ಸೇರಿಸಿ. ಹೊಟ್ಟೆಯುಬ್ಬರ ಸಮಸ್ಯೆ ದೂರವಾಗುತ್ತೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಾಕಿಂಗ್
ಊಟದ ನಂತರ 10-15 ನಿಮಿಷಗಳ ಕಾಲ ನಡೆಯಿರಿ. ಹೀಗೆ ಮಾಡುವುದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ಬರುವುದಿಲ್ಲ. ಊಟದ ಮೊದಲು ಮತ್ತು ನಂತರ ವಿರಾಮ ತೆಗೆದುಕೊಳ್ಳಿ. ಸಣ್ಣ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ನಿಂಬೆ ಅಥವಾ ಶುಂಠಿ ಚಹಾ ಕುಡಿಯಿರಿ
ಜೀರಿಗೆ ಪುಡಿಯನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಊಟದ ನಂತರ ನಿಂಬೆ ಚಹಾ ಅಥವಾ ಶುಂಠಿ ಚಹಾವು ಗ್ಯಾಸ್ ಅಥವಾ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.