logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಪಾಯಕಾರಿ ಕ್ಯಾನ್ಸರ್ ಬಾಧಿಸಲು 3 ಪ್ರಮುಖ ಕಾರಣ ವಿವರಿಸಿದ ತಜ್ಞರು; ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

ಅಪಾಯಕಾರಿ ಕ್ಯಾನ್ಸರ್ ಬಾಧಿಸಲು 3 ಪ್ರಮುಖ ಕಾರಣ ವಿವರಿಸಿದ ತಜ್ಞರು; ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

Jayaraj HT Kannada

Nov 09, 2024 05:32 PM IST

google News

ಅಪಾಯಕಾರಿ ಕ್ಯಾನ್ಸರ್ ಬಾಧಿಸಲು 3 ಪ್ರಮುಖ ಕಾರಣ ವಿವರಿಸಿದ ತಜ್ಞರು

    • Causes for Cancer: ಕ್ಯಾನ್ಸರ್‌ ಎಂಬ ಮಾರಕ ರೋಗ ಬಾಧಿಸಿದರೆ, ಜೀವನಪೂರ್ತಿ ಯಾತನೆ ಅನುಭವಿಸುವವರು ಹೆಚ್ಚು. ಸೂಕ್ತ ಚಿಕಿತ್ಸೆ ಪಡೆಯಲು ಹೆಚ್ಚು ಖರ್ಚಾಗುತ್ತದೆ. ಹೀಗಾಗಿ ಸೂಕ್ತ ಜೀವನಶೈಲಿ ಅನುಸರಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಅಪಾಯಕಾರಿ ಕ್ಯಾನ್ಸರ್ ಬಾಧಿಸಲು 3 ಪ್ರಮುಖ ಕಾರಣ ವಿವರಿಸಿದ ತಜ್ಞರು
ಅಪಾಯಕಾರಿ ಕ್ಯಾನ್ಸರ್ ಬಾಧಿಸಲು 3 ಪ್ರಮುಖ ಕಾರಣ ವಿವರಿಸಿದ ತಜ್ಞರು (Pexel)

ಮಾರಕ ರೋಗಗಳಲ್ಲಿ ಒಂದಾದ ಕ್ಯಾನ್ಸರ್, ವಿಶ್ವದಾದ್ಯಂತ ಹೆಚ್ಚುತ್ತಿರುವ ಕಾಯಿಲೆಯಾಗಿದೆ. ಕ್ಯಾನ್ಸರ್ ಪ್ರತಿ ವರ್ಷ ಲಕ್ಷಾಂತರ ಜನರನ್ನು ಕೊಲ್ಲುತ್ತದೆ. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಕೆಲವು ವಿಧದ ಕ್ಯಾನ್ಸರ್‌ಗಳನ್ನು ಔಷಧಗಳಿಂದ ನಿಯಂತ್ರಿಸಬಹುದಾಗಿದೆ. ಇದಕ್ಕೆ ಆರಂಭದಿಂದಲೇ ನಿರಂತರ ಪ್ರಯತ್ನ ಮಾಡಬೇಕು ಎನ್ನುತ್ತಾರೆ ತಜ್ಞರು. ಅದರಲ್ಲೂ ಕುಟುಂಬದಲ್ಲಿ ಕ್ಯಾನ್ಸರ್ ಸಮಸ್ಯೆ ಕಾಡಿದ ಇತಿಹಾಸ ಇದ್ದರೆ, ಆ ಕುಟುಂಬದವರು ಹೆಚ್ಚು ಜಾಗರೂಕರಾಗಿರಬೇಕು. ಹೀಗಾಗಿ ಕ್ಯಾನ್ಸರ್‌ ರೋಗದ ಬಗ್ಗೆ ಮಾಹಿತಿ ಹಾಗೂ ತಿಳುವಳಿಕೆ ಅಗತ್ಯ.

ನಮ್ಮ ದಿನನಿತ್ಯದ ಜೀವನ ಮತ್ತು ಆಹಾರ ಪದ್ಧತಿಯಲ್ಲಿ ಕೆಲವೊಂದು ತಪ್ಪು ಅಭ್ಯಾಸಗಳಿವೆ ಎಂಬುದನ್ನು ಆರೋಗ್ಯ ತಜ್ಞರು ಆಗಾಗ ಎಚ್ಚರಿಸಿ ಹೇಳುತ್ತಾರೆ. ಇಂಥಾ ಅಭ್ಯಾಸಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಅರಿವು ಮೂಡಿಸಿದರೆ ಕ್ಯಾನ್ಸರ್ ತಡೆಗಟ್ಟಲು ಸುಲಭ ಸಾಧ್ಯ. ಹಾಗಿದ್ದರೆ ಕ್ಯಾನ್ಸರ್‌ಗೆ ಕಾರಣವೆಂದು ಪರಿಗಣಿಸುವ ಅಂಶಗಳು ಯಾವುದು ಎಂಬುದನ್ನು ತಿಳಿಯೋಣ.

ಜೀವನಶೈಲಿಯನ್ನು ಸುಧಾರಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ಒಂದು ಮಟ್ಟಿಗೆ ಕಡಿಮೆ ಮಾಡಬಹುದು. ಕ್ಯಾನ್ಸರ್ ಕುರಿತು ತಜ್ಞ ವೈದ್ಯರು ಹೇಳುವ ಪ್ರಕಾರ, ಕೆಲವು ಅಧ್ಯಯನಗಳು ವಯಸ್ಸಾದಂತೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿವೆ. ಆದರೆ ಮಕ್ಕಳು ಸಹ ಇದಕ್ಕೆ ಬಲಿಯಾಗಬಹುದು. ಜೊತೆಗೆ, ಜೀವನಶೈಲಿಯ ಅಂಶಗಳಾದ ಧೂಮಪಾನ, ಅಧಿಕ ತೂಕ, ಆಹಾರದ ಅಸ್ವಸ್ಥತೆಗಳು, ದೈಹಿಕ ನಿಷ್ಕ್ರಿಯತೆ ಕೂಡ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ತಂಬಾಕು ಮತ್ತು ಮದ್ಯ

ಧೂಮಪಾನವನ್ನು ಕ್ಯಾನ್ಸರ್‌ ರೋಗಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಶ್ವಾಸಕೋಶದ ಕ್ಯಾನ್ಸರ್ 80ರಿಂದ 90ರಷ್ಟು ಪ್ರತಿಶತ ಸಾವುಗಳಿಗೆ ಕಾರಣವಾಗಿದೆ. ತಂಬಾಕು ಹೊಗೆಯು ಕಾರ್ಸಿನೋಜೆನ್‌ಗಳನ್ನು ಹೊಂದಿರುತ್ತದೆ. ಅದು ಜೀವಕೋಶಗಳಲ್ಲಿ ಡಿಎನ್‌ಎಗೆ ಹಾನಿ ಮಾಡುತ್ತದೆ. ಇದು ಅನಿಯಂತ್ರಿತ ಜೀವಕೋಶದ ಬೆಳವಣಿಗೆಗೆ ಕಾರಣವಾಗುತ್ತದೆ. ಇದೇ ವೇಳೆ ಆಗಾಗ ಆಲ್ಕೊಹಾಲ್ ಸೇವನೆ ಮಾಡುವುದರಿಂದ ಯಕೃತ್ತು, ಅನ್ನನಾಳ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಸೇರಿದಂತೆ ಕೆಲವು ರೀತಿಯ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.

ತಪ್ಪು ಆಹಾರ ಕ್ರಮ

ಕೆಲವು ರೀತಿಯ ಆಹಾರಕ್ರಮಗಳು ಕೂಡಾ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಸಂಸ್ಕರಿಸಿದ ಮಾಂಸ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು. ಈ ಮಾಂಸಗಳು ನೈಟ್ರೇಟ್‌ಗಳಂತಹ ಕಾರ್ಸಿನೋಜೆನಿಕ್ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಕರುಳಿನ ಒಳಪದರಕ್ಕೆ ಹಾನಿ ಮಾಡುತ್ತದೆ. ಹೆಚ್ಚಿನ ಕೊಬ್ಬಿನ ಆಹಾರವು ಹಾನಿಕಾರಕವಾಗಿದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಇದೇ ವೇಳೆ ಸಕ್ಕರೆ ಅಂಶ ಹೆಚ್ಚಿರುವ ಆಹಾರವು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗಬಹುದು.

ದೈಹಿಕ ನಿಷ್ಕ್ರಿಯತೆ ತಪ್ಪಿಸಿ, ಸದಾ ಸಕ್ರಿಯವಾಗಿರಿ

ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು ವ್ಯಾಯಾಮ ತುಂಬಾ ಮುಖ್ಯ. ವ್ಯಾಯಾಮ ಮಾಡದ ಅಥವಾ ದೈಹಿಕವಾಗಿ ನಿಷ್ಕ್ರಿಯವಾಗಿರುವ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು. ದೈಹಿಕ ನಿಷ್ಕ್ರಿಯತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಕ್ಯಾನ್ಸರ್ ಅಪಾಯಕ್ಕೆ ಸಂಬಂಧಿಸಿದೆ ಎಂದು ಅಧ್ಯಯನಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ