ಬೀಟ್‌ರೂಟ್ ಹೊರತುಪಡಿಸಿ ನಿಮ್ಮ ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸುವ 8 ಸೂಪರ್ ಫುಡ್‌ಗಳಿವು; ಡಾರ್ಕ್ ಚಾಕೊಲೇಟ್ ಕೂಡಾ ಲಿಸ್ಟ್‌ನಲ್ಲಿದೆ
Nov 25, 2024 03:09 PM IST
ಟೋಪು, ಪಾಲಕ್ ಸೇರಿದಂತೆ ದೇಹಕ್ಕೆ ಕಬ್ಬಿಣಾಂಶ ಒದಗಿಸುವ ಆಹಾರಗಳು
Health Tips: ದೇಹಕ್ಕೆ ಪ್ರತಿದಿನ ವಿವಿಧ ಪೋಷಕಾಂಶಗಳ ಅಗತ್ಯವಿದೆ. ಅದರಲ್ಲಿ ಕಬ್ಬಿಣಾಂಶ ಇರುವ ಆಹಾರಗಳು ಮಹಿಳೆಯರಿಗೆ ಅತ್ಯಗತ್ಯವಾಗಿದೆ. ಬೀಟ್‌ರೂಟ್ ಹೊರತುಪಡಿಸಿ ಇತರ ಆಹಾರಗಳಲ್ಲೂ ಕಬ್ಬಿಣಾಂಶ ಹೇರಳವಾಗಿದೆ. ಪಾಲಕ್ , ಬೇಳೆಕಾಳುಗಳು, ಮಾಂಸ ಸೇರಿದಂತೆ ಹೇರಳ ಕಬ್ಬಿಣಾಂಶ ಹೊಂದಿರುವ ಆಹಾರಗಳ ಲಿಸ್ಟ್ ಇಲ್ಲಿದೆ.
ಕಬ್ಬಿಣದ ಕೊರತೆ ಬಹಳಷ್ಟು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ನಿಮ್ಮ ಪ್ರತಿದಿನ ಕಬ್ಬಿಣಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸದರೆ ನಿಮ್ಮ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಬಹುದು. ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯವಾದ ಪ್ರಮುಖ ಖನಿಜವಾಗಿದೆ. ಕಬ್ಬಿಣಾಂಶವು ಪ್ರತಿರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಕಬ್ಬಿಣಾಂಶವು ಬಹಳ ಮುಖ್ಯವಾಗಿದೆ ಯಾವೆಲ್ಲಾ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶವಿದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂಬ ವಿವರ ಇಲ್ಲಿದೆ.
ಬೀಟ್‌ರೂಟ್‌ನಲ್ಲಿ ಹೇರಳವಾದ ಕಬ್ಬಿಣಾಂಶವಿದೆ. ಇದು ಹಿಮೊಗ್ಲೋಬಿನ್ ಉತ್ಪಾದಿಸಲು, ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬೀಟ್‌ರೂಟ್‌ನಲ್ಲಿರುವ ನೈಟ್ರೇಟ್ ಅಂಶಗಳು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ, ಅರಿವಿನ ಕಾರ್ಯವನ್ನು ಸಮರ್ಥವಾಗಿ ವರ್ಧಿಸುತ್ತದೆ. ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೀಟ್‌ರೂಟ್ ಹೊರತುಪಡಿಸಿ ಕಬ್ಬಿಣಾಂಶ ಇರುವ ಇನ್ನಷ್ಟು ಫುಡ್‌ಗಳಿವು
ಬೇಳೆ ಕಾಳುಗಳು
100 ಗ್ರಾಂ ಬೇಳೆ ಕಾಳುಗಳಲ್ಲಿ 3.3 ಮಿಲಿಗ್ರಾಂ ಕಬ್ಬಿಣಾಂಶವಿದೆ. ಇದು ಸಸ್ಯ ಆಧಾರಿತ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಮಸೂರವು ಕಬ್ಬಿಣದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಆದರೆ ಜೀರ್ಣಕಾರಿ ಆರೋಗ್ಯ ಮತ್ತು ತೂಕ ನಿರ್ವಹಣೆಯನ್ನು ಸಹ ಬೆಂಬಲಿಸುತ್ತದೆ.
ಪಾಲಕ್
ಹಸಿರು ಸೊಪ್ಪುಗಳಲ್ಲಿ ಹೇರಳವಾದ ಕಬ್ಬಿಣಾಂಶವಿದೆ. 100 ಗ್ರಾಂ ಬೇಯಿಸಿದ ಪಾಲಕ್‌ನಲ್ಲಿ 2.7 ಮಿಲಿ ಗ್ರಾಂ ಕಬ್ಬಿಣಾಂಶವಿದೆ. ಇದರಲ್ಲಿರುವ ಕಬ್ಬಿಣದ ಅಂಶವು ಬೀಟ್‌ರೂಟ್‌ಗಿಂತ ಹೆಚ್ಚಾಗಿದೆ. ಸಲಾಡ್‌ಗಳು, ಸ್ಮೂಥಿಗಳಲ್ಲಿ ಕೂಡಾ ಪಾಲಕ್ ಅಂಶ ಹೆಚ್ಚಾಗಿದೆ. ಇದರಲ್ಲಿ ಕಬ್ಬಿಣಾಂಶ ಮಾತ್ರವಲ್ಲದೆ ವಿಟಮಿನ್ ಎ, ಸಿ ಮತ್ತು ಕೆ ಅಂಶ ಹೇರಳವಾಗಿದೆ.
ಮಾಂಸ
100 ಗ್ರಾಂ ಮಾಂಸದಲ್ಲಿ 2.7 ಮಿಲಿ ಗ್ರಾಂ ಕಬ್ಬಿಣಾಂಶವಿದೆ. ಇದರಲ್ಲಿ ಕಬ್ಬಿಣದ ಜೊತೆ ಪ್ರೋಟೀನ್, ವಿಟಮಿನ್ ಬಿನಂಥ ಅಗತ್ಯ ಪೋಷಕಾಂಶಗಳಿವೆ. ಆದರೆ ಇದನ್ನು ಮಿತವಾಗಿ ಸೇವಿಸಿದರೆ ಉತ್ತಮ.
ಡಾರ್ಕ್ ಚಾಕೊಲೇಟ್
100 ಗ್ರಾಂ ಡಾರ್ಕ್ ಚಾಕೊಲೇಟ್‌ನಲ್ಲಿ ಸುಮಾರು 11.9 ಮಿಲಿ ಗ್ರಾಂ ಕಬ್ಬಿಣ ಅಂಶವಿದೆ. ರುಚಿಯ ಜೊತೆಗೆ ದೇಹಕ್ಕೆ ಕಬ್ಬಿಣದ ಅಂಶವನ್ನು ಇದು ಒಳಗೊಂಡಿದೆ. ಇದು ಹೆಚ್ಚುವರಿ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ.
ಕಡಲೆ ಕಾಳು
100 ಗ್ರಾಂ ಬೇಯಿಸಿದ ಕಡಲೆ ಕಾಳಿನಲ್ಲಿ ಸುಮಾರು 2.9 ಮಿಲಿ ಗ್ರಾಂ ಕಬ್ಬಿಣ ಅಂಶವಿದೆ. ಕಡಲೆಯು ಬಹುಮುಖ ದ್ವಿದಳ ಧಾನ್ಯವಾಗಿದ್ದು ಇದನ್ನು ಸಲಾಡ್‌ಗಳು, ಮತ್ತು ಹಮ್ಮಸ್‌ಗಳಲ್ಲಿ ಬಳಸಬಹುದು. ಅವು ಕಬ್ಬಿಣ, ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಕಡಲೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಕುಂಬಳಕಾಯಿ ಬೀಜ
100 ಗ್ರಾಂಗೆ ಕುಂಬಳಕಾಯಿ ಬೀಜದಲ್ಲಿ 3.3 ಮಿಲಿ ಗ್ರಾಂ ಕಬ್ಬಿಣಾಂಶವಿದೆ. ಇದರಲ್ಲಿ ಕಬ್ಬಿಣಾಂಶ ಮಾತ್ರವಲ್ಲದೆ, ಉತ್ತಮ ಪೋಷಕಾಂಶ ಕೂಡಾ ಇದೆ. ಇದನ್ನು ಸಲಾಡ್‌ಗಳು ಬೇಯಿಸಿದ ಆಹಾರದೊಂದಿಗೆ ಸೇರಿಸಬಹುದು. ಹಾಗೇಯೂ ತಿನ್ನಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕ ಅಂಶ ಹೆಚ್ಚಾಗಿದ್ದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಕ್ವಿನೋವಾ
100 ಗ್ರಾಂ ಕ್ವಿನೋವಾದಲ್ಲಿ 2.8 ಮಿಲಿ ಗ್ರಾಂ ಕಬ್ಬಿಣಾಂಶವಿದೆ. ಕ್ವಿನೋವಾ ಸಂಪೂರ್ಣ ಪ್ರೋಟೀನ್ ಮತ್ತು ಅತ್ಯುತ್ತಮ ಧಾನ್ಯ ಪರ್ಯಾಯವಾಗಿದೆ. ಸಲಾಡ್, ಮೇನ್ ಕೋರ್ಸ್ ಸೇರಿದಂತೆ ವಿವಿಧ ಅಡುಗೆಗಳಲ್ಲಿ ಇದನ್ನು ಬಳಸಬಹುದು. ಕ್ವಿನೋವಾವು ಮೆಗ್ನೀಷಿಯಮ್, ಮ್ಯಾಂಗನೀಸ್ ಮತ್ತು ಫೈಬರ್ ಸೇರಿದಂತೆ ಇತರ ಅಗತ್ಯ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.
ಟೋಫು
100 ಗ್ರಾಂ ನಲ್ಲಿ ಸುಮಾರು 5.4 ಮಿಲಿ ಗ್ರಾಂ ಕಬ್ಬಿಣಾಂಶವಿದೆ. ಟೋಫು ಕಬ್ಬಿಣದ ಉತ್ತಮ ಮೂಲವಾಗಿದೆ. ವಿಶೇಷವಾಗಿ ಸಸ್ಯಾಹಾರಿಗಳಿಗೆ ಇದು ಬಹಳ ಮುಖ್ಯವಾಗಿದೆ. ಸೂಪ್, ಗ್ರೇವಿ ಸೇರಿದಂತೆ ವಿವಿಧ ಅಡುಗೆಗಳಲ್ಲಿ ಇದನ್ನು ಬಳಸಬಹುದು. ಟೋಫುವಿನಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ.