ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು, ನೀರು ಕಡಿಮೆ ಕುಡಿದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ; ಇಲ್ಲಿದೆ ಮಾಹಿತಿ
Nov 27, 2024 03:47 PM IST
ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು
- ಮನುಷ್ಯನ ದೇಹಕ್ಕೆ ನೀರು ಅತ್ಯಗತ್ಯ. ಎಲ್ಲಾ ಕಾಲದಲ್ಲೂ ಸಾಕಷ್ಟು ನೀರು ಕುಡಿಯುವುದು ಅವಶ್ಯ. ಆದರೆ ಚಳಿಗಾಲದಲ್ಲಿ ಶೀತ ವಾತಾವರಣವಿರುವ ಕಾರಣ ಬಾಯಾರಿಕೆ ಕಡಿಮೆ. ಹಾಗಂತ ನೀರು ಕುಡಿಯದೇ ಇರುವಂತಿಲ್ಲ. ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು? ಎಂಬ ವಿವರ ಇಲ್ಲಿದೆ ನೋಡಿ.
ಚಳಿಗಾಲ ಶುರುವಾಗಿ ಕೆಲವು ದಿನಗಳು ಕಳೆದಿವೆ. ಕೆಲವೆಡೆ ಚಳಿಯ ಅಬ್ಬರ ಜೋರಿದೆ. ಆರ್ದತೆ ಹೆಚ್ಚಿರುವ ಕಾರಣ ಬಾಯಾರಿಕೆ ಕಡಿಮೆಯಾಗಿದೆ. ಚಳಿಗಾಲದಲ್ಲಿ ಬೇಡವೆಂದರೂ ದ್ರವಾಹಾರಗಳ ಸೇವನೆಗೆ ಕಡಿವಾಣ ಹಾಕುತ್ತೇವೆ. ಆದರೆ ವರ್ಷದ ಇತರ ತಿಂಗಳುಗಳಂತೆ ಚಳಿಗಾಲದ ತಿಂಗಳುಗಳಲ್ಲೂ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಒಬ್ಬ ಪುರುಷನಿಗೆ 120 ಔನ್ಸ್ ನೀರು ಬೇಕಾಗುತ್ತದೆ ಹಾಗೂ ಮಹಿಳೆಗೆ 91 ಔನ್ಸ್ ನೀರು ಬೇಕಾಗುತ್ತದೆ.
ಬೇಸಿಗೆ ಕಾಲದಲ್ಲಿ ಮಾತ್ರವಲ್ಲ ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದು ಕೂಡ ಡೀಹೈಡ್ರೇಷನ್ ಅಥವಾ ನಿರ್ಲಜಲೀಕರಣ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಸಾಮಾನ್ಯ ರೋಗಲಕ್ಷಣಗಳಾದ ತುಟಿ ಸೀಳುವುದು, ಮೂಗಿನಿಂದ ರಕ್ತ ಬರುವುದು, ಒಣಕೆಮ್ಮು, ಮಲಬದ್ಧತೆ, ತಲೆನೋವು, ಆಯಾಸ, ಸ್ನಾಯು ಸೆಳೆತ ಹಾಗೂ ಮೊಡವೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯಲು ಟಿಪ್ಸ್
- ಚಳಿಗಾಲದಲ್ಲಿ ಬಿಸಿನೀರು ಅಥವಾ ಪಾನೀಯ ಕುಡಿಯಲು ಇಷ್ಟಪಡುತ್ತೇವೆ. ಬರಿ ನೀರು ಕುಡಿಯುವುದಕ್ಕಿಂತ ನಿಂಬೆರಸ, ದಾಲ್ಚಿನ್ನಿ, ಗ್ರೀನ್ ಟೀ ಅಥವಾ ಜೇನುತುಪ್ಪ ಬೆರೆಸಿದ ಬಿಸಿನೀರು ಕುಡಿಯುವುದು ಉತ್ತಮ.
- ನೀವು ಮನೆಯಲ್ಲಿ ಇದ್ದಾಗ ನಿಮ್ಮ ಪಕ್ಕದಲ್ಲೇ ನೀರಿನ ಬಾಟಲಿಯನ್ನು ತುಂಬಿಸಿ ಇಟ್ಟುಕೊಳ್ಳಿ. ಪ್ರತಿ ಗಂಟೆಗೊಮ್ಮೆ ನೀರು ಕುಡಿಯಲು ನೆನಪಿಸಲು ಮೊಬೈಲ್‌ನಲ್ಲಿ ರಿಮೈಂಡರ್ ಇರಿಸಿಕೊಳ್ಳಿ.
- ಹೈಡ್ರೇಷನ್ ಗುರಿಗಳನ್ನು ಇರಿಸಿಕೊಳ್ಳಿ. ದಿನಕ್ಕೆ ಕನಿಷ್ಠ ಇಂತಿಷ್ಟು ಗ್ಲಾಸ್ ನೀರು ಕುಡಿಯುವ ಗುರಿ ಹೊಂದಿಸಿಕೊಳ್ಳಿ. ನೀವು ಹೈಡ್ರೇಟ್ ಆಗಿರಲು ಇದು ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ: ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು - ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣು ಅಥವಾ ಫ್ರೂಟ್ ಸಲಾಡ್, ಸೂಪ್, ಎಳನೀರು ಸೇರಿಸುವುದು ನಿಮ್ಮನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳುವ ಇನ್ನೊಂದು ಬೆಸ್ಟ್ ವಿಧಾನವಾಗಿದೆ. ಇದರಿಂದ ದೇಹಕ್ಕೆ ಅಗತ್ಯ ಖನಿಜ, ಲವಣಗಳು ಸಿಗುತ್ತವೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿ.
- ಯಾವುದೇ ಪಾನೀಯ ಸೇವಿಸಿದ್ರೂ ಅದರ ಜೊತೆ ಒಂದು ಲೋಟ ನೀರು ಕುಡಿಯುವುದು ಉತ್ತಮ ಆಯ್ಕೆ.
- ಹಸಿವನ್ನು ಬಾಯಾರಿಕೆ ಎಂದು ತಪ್ಪು ತಿಳಿಯಲಾಗುತ್ತದೆ. ಚಳಿಗಾಲದಲ್ಲಿ ಹಸಿವಾದಾಗ ಆಹಾರ ಸೇವಿಸುವ ಬದಲು ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸ ಮಾಡಬೇಕು. ಇದು ತೀಕ ಏರಿಕೆಯನ್ನು ನಿಯಂತ್ರಿಸುತ್ತದೆ.
- ಬೇಸಿಗೆಯಂತೆ ಚಳಿಗಾದಲ್ಲೂ ಹೊರಗಡೆ ಹೋಗುವಾಗ ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಿ.
ಬೇರೆಲ್ಲಾ ಕಾಲಗಳಂತೆ ಚಳಿಗಾಲದಲ್ಲೂ ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ನಮ್ಮ ದೇಹ ಹಾಗೂ ಚರ್ಮದ ಆರೋಗ್ಯಕ್ಕೆ ಬಹಳ ಅವಶ್ಯಕ. ಚಳಿಗಾಲದಲ್ಲಿ ಸಾಧ್ಯವಾದಷ್ಟು ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿ.