logo
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ರಾತ್ರಿ ಕಾಲಿಗೆ ಸಾಕ್ಸ್ ಹಾಕಿ ಮಲಗುವುದರಿಂದಾಗುವ ಪ್ರಯೋಜನಗಳಿವು; ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ

ಚಳಿಗಾಲದಲ್ಲಿ ರಾತ್ರಿ ಕಾಲಿಗೆ ಸಾಕ್ಸ್ ಹಾಕಿ ಮಲಗುವುದರಿಂದಾಗುವ ಪ್ರಯೋಜನಗಳಿವು; ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ

Reshma HT Kannada

Jan 07, 2024 02:16 PM IST

google News

ಸಾಂಕೇತಿಕ ಚಿತ್ರ

    • ಚಳಿಗಾಲದಲ್ಲಿ ದೇಹ ಬೆಚ್ಚಗಿರಲಿ ಎನ್ನುವ ಕಾರಣಕ್ಕೆ ಕಾಲಿಗೆ ಸಾಕ್ಸ್‌ ಹಾಕಿ ಮಲಗುವುದು ಸಾಮಾನ್ಯ. ಇದರಿಂದ ಪಾದಗಳು ಬಿರುಕು ಮೂಡುವುದನ್ನೂ ತಪ್ಪಿಸಬಹುದು. ಸಾಕ್ಸ್‌ ಹಾಕಿ ಮಲಗುವುದರಿಂದ ಇಷ್ಟೇ ಅಲ್ಲ, ಇನ್ನೂ ಹಲವು ಪ್ರಯೋಜನಗಳಿವೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ರಾತ್ರಿ ಮಲಗುವಾಗ ಕಾಲಿಗೆ ಸಾಕ್ಸ್‌ ಹಾಕಿ ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಇದು ಖಂಡಿತ ಉತ್ತಮ ಅಭ್ಯಾಸ. ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್‌ ಹಾಕಿ ಮಲಗುವುದರಿಂದ ಒಂದಲ್ಲ ಎರಡಲ್ಲ ಹಲವು ಪ್ರಯೋಜನಗಳಿವೆ. ಇದರಿಂದ ಪಾದಗಳು ಬೆಚ್ಚಗಿರುತ್ತವೆ. ಇದು ದೇಹದಾದ್ಯಂತ ಉಷ್ಣತೆಯನ್ನು ಹರಡುವಂತೆ ಮಾಡುತ್ತದೆ. ರಾತ್ರಿಯಲ್ಲಿ ಈ ರೀತಿ ಸಾಕ್ಸ್ ಹಾಕಿಕೊಂಡು ಮಲಗುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ.

ಸಾಕ್ಸ್‌ ಧರಿಸಿ ಮಲಗುವುದರಿಂದಾಗುವ ಪ್ರಯೋಜನಗಳು

ಮಲಗುವ ಮುನ್ನ ಸಾಕ್ಸ್ ಧರಿಸುವುದರಿಂದ ನಿದ್ದೆ ಬೇಗ ಆವರಿಸುತ್ತದೆ. ಇದು ಸಾಕ್ಸ್‌ ಧರಿಸುವುದರಿಂದಾಗುವ ಅದ್ಭುತ ಪ್ರಯೋಜನಗಳಲ್ಲಿ ಒಂದು. 2007ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಸಾಕ್ಸ್ ಧರಿಸಿದವರಿಗಿಂತ ಸಾಕ್ಸ್ ಧರಿಸದೇ ಇರುವವರಿಗೆ ತಡವಾಗಿ ಆವರಿಸುತ್ತದೆ ಎಂಬುದು ಸಾಬೀತಾಗಿದೆ.

ಸಾಕ್ಸ್ ಧರಿಸುವುದರಿಂದ ದೇಹದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ದೇಹಕ್ಕೆ ಚಳಿ ಕಾಡುವುದಿಲ್ಲ. ರಕ್ತನಾಳಗಳು ಸಂಕುಚಿತಗೊಳ್ಳುವ ಬದಲು ಶಾಖಕ್ಕೆ ಹಿಗ್ಗುತ್ತವೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಆರಾಮವಾಗಿ ನಿದ್ದೆ ಮಾಡಬಹುದು.

ಸಾಕ್ಸ್ ಪಾದಗಳಲ್ಲಿನ ರಕ್ತನಾಳಗಳನ್ನು ಬೆಚ್ಚಗಾಗಿಸುತ್ತದೆ. ಆ ಕಾರಣಕ್ಕೆ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಸಾಕ್ಸ್‌ ಧರಿಸುವುದು ಬಹಳ ಮುಖ್ಯ. ಹಿಮ್ಮಡಿ ಒಡಕಿನಿಂದ ಬಳಲುತ್ತಿರುವವರು ಮಾಯಿಶ್ಚರೈಸರ್ ಹಚ್ಚಿ ಸಾಕ್ಸ್ ಧರಿಸಿದರೆ ಚರ್ಮ ಮೃದುವಾಗುತ್ತದೆ. ಅಲ್ಲದೆ ಬಿರುಕು ನಿವಾರಣೆಯಾಗುತ್ತದೆ.

ಸಾಕ್ಸ್‌ ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ

ರಾತ್ರಿ ಮಲಗುವಾಗ ಧರಿಸುವ ಸಾಕ್ಸ್ ಸಿಂಥೆಟಿಕ್ ಬಟ್ಟೆಗಳಿಂದ ತಯಾರಿಸಿ ಇರಬಾರದು ಮತ್ತು ತುಂಬಾ ದಪ್ಪವಾಗಿರಬಾರದು. ಕೆಲವು ಹಗುರವಾದ, ತೆಳ್ಳನೆಯ ಸಾಕ್ಸ್ ಧರಿಸುವುದು ಉತ್ತಮ. ಈ ಸಾಕ್ಸ್ ಪಾದಗಳನ್ನು ಬೆಚ್ಚಗಿಡುತ್ತದೆ. ಇದು ಆರೋಗ್ಯಕ್ಕೆ ಬಹಳ ಮುಖ್ಯ.

ಕ್ಲೀನ್ ಆಗಿರುವ ಸಾಕ್ಸ್ ಧರಿಸಿ. ಸ್ವಚ್ಛವಾಗಿರದ ಸಾಕ್ಸ್‌ಗಳನ್ನು ಧರಿಸುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕು ಹೆಚ್ಚಬಹುದು. ಹಾಗಾಗಿ ಸಾಕ್ಸ್ ಅನ್ನು ಚೆನ್ನಾಗಿ ತೊಳೆದ ನಂತರವೇ ಧರಿಸುವುದು ಮುಖ್ಯ. ಪ್ರತಿದಿನ ಅವುಗಳನ್ನು ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ತುಂಬಾ ಬಿಗಿಯಾದ ಸಾಕ್ಸ್ ಧರಿಸಬೇಡಿ. ಸಾಕ್ಸ್ ತುಂಬಾ ಬಿಗಿಯಾಗಿದ್ದರೆ, ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಪಾದ ಊದಿಕೊಳ್ಳಲು ಕಾರಣವಾಗಬಹುದು.

ರಾತ್ರಿ ಧರಿಸುವ ಸಾಕ್ಸ್‌ಗಳು ಹತ್ತಿ ಅಥವಾ ಉಣ್ಣೆಯಿಂದ ಮಾಡಿದ್ದು ಮೃದುವಾಗಿರಬೇಕು. ನೈಲಾನ್, ಪಾಲಿಸ್ಟರ್, ಸಿಂಥೆಟಿಕ್ ಬಟ್ಟೆಗಳಿಂದ ತಯಾರಿಸಿದ ಸಾಕ್ಸ್‌ಗಳನ್ನು ಧರಿಸುವುದು ಸರಿಯಲ್ಲ. ಸಾಕ್ಸ್ ತುಂಬಾ ಬಿಗಿಯಾಗಿರಬಾರದು ಅಥವಾ ತುಂಬಾ ಸಡಿಲವಾಗಿರಬಾರದು. ಸರಿಯಾದ ಗಾತ್ರದ ಸಾಕ್ಸ್‌ಗಳನ್ನು ಧರಿಸುವುದು ನಿಮಗೆ ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ

Weight Loss: ಚಳಿಗಾಲದಲ್ಲಿ ತೂಕ ಇಳಿಯೋ ಜೊತೆಗೆ, ಬೆಲ್ಲಿ ಫ್ಯಾಟ್‌ ಕೂಡ ಕಡಿಮೆ ಆಗ್ಬೇಕಾ? ಹಾಗಿದ್ರೆ ಈ 5 ಪಾನೀಯಗಳನ್ನು ಕುಡೀರಿ

ಚಳಿಗಾಲದಲ್ಲಿ ದೇಹ ಬೆಚ್ಚಗಿದ್ದು, ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಬಗೆ ಬಗೆ ಕಷಾಯಗಳನ್ನು ಕುಡಿಯಬೇಕು. ಈ ಕಷಾಯಗಳು ದೇಹಾರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸಹಕಾರಿ. ಇವು ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ, ಬೆಲ್ಲಿ ಫ್ಯಾಟ್‌ ಇಳಿಸಲು ಸಹಕರಿಸುತ್ತವೆ. ಇದನ್ನು ಸುಲಭವಾಗಿ ಮನೆಯಲ್ಲೂ ಮಾಡಿಕೊಂಡು ಕುಡಿಯಬಹುದು. ಅಂತಹ ಕೆಲವು ಕಷಾಯಗಳ ಬಗ್ಗೆ ಇಲ್ಲಿದೆ ಮಾಹಿತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ