Weight Loss: 105 ರಿಂದ 70 ಕೆಜಿಗೆ ತೂಕ ಇಳಿಸಿಕೊಂಡ ಯುವಕ; ಈತ ಅನುಸರಿಸಿದ ದಕ್ಷಿಣ ಭಾರತದ ಡಯಟ್ ಪ್ಲಾನ್ ಇಲ್ಲಿದೆ
Dec 15, 2024 07:51 PM IST
ಸೌತ್ ಇಂಡಿಯಾದ ಡಯಟ್ ಪ್ಲಾನ್ ನೊಂದಿಗೆ ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡ ರೀತಿಯನ್ನು ಹಂಚಿಕೊಂಡಿದ್ದಾನೆ.
- Weight Loss Tips: ಯುವಕನೊಬ್ಬ ತನ್ನ ತೂಕವನ್ನು 105 ಕೆಜಿಯಿಂದ 70 ಕೆಜಿಗೆ ಇಳಿಸಿಕೊಂಡಿದ್ದಾನೆ. ಈ ವಿಷಯವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಳ್ಳಲು ಏನೆಲ್ಲಾ ಮಾಡಿದ, ಸೌತ್ ಇಂಡಿಯಾ ಡಯಟ್ ಪ್ಲಾನ್ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದಾಗಿ ದೇಹದ ತೂಕ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತುಂಬಾ ಜನರು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನ್ನ ತೂಕವನ್ನು 105 ರಿಂದ 70 ಕೆಜಿಗೆ ಇಳಿಸಿಕೊಂಡಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದು, ವೈರಲ್ ಆಗಿದೆ. ಜಿತಿನ್ ವಿಎಸ್ ಎಂಬ ಯುವಕ ತಾನು 35 ಕೆಜಿ ತೂಕ ಇಳಿಸಿಕೊಂಡಿರುವುದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾನೆ. 105 ಕೆಜಿಯಿಂದ 70 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಆಹಾರಕ್ರಮವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದರು.
ಈತನ ದಕ್ಷಿಣ ಭಾರತದ ಡಯಟ್ ಪ್ಲಾನ್ ಹೀಗಿದೆ
105 ಕೆಜಿ ದೇಹದ ತೂಕದಲ್ಲಿ 35 ಕೆಜಿ ಇಳಿಸಿಕೊಳ್ಳಲು ದಕ್ಷಿಣ ಭಾರತದ ಡಯಟ್ ಪ್ಲಾನ್ ಹೇಗಿತ್ತು ಎಂಬುದನ್ನು ಜಿತಿನ್ ವಿಎಸ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಅವರು ಕೊಬ್ಬು ಕರಗಿಸಲು ತಮ್ಮ ಆಹಾರದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳನ್ನು ವಿವರಿಸಿದ್ದಾರೆ. ಈತ ಒಂದು ದಿನದಲ್ಲಿ ಏನು ತಿನ್ನುತ್ತಿದ್ದ ಎಂಬುದರ ಸಂಪೂರ್ಣ ಪ್ಲಾನ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸೌತ್ ಇಂಡಿಯನ್ ಡಯಟ್ ಪ್ಲಾನ್ ಎಂದು ಹೆಸರಿಟ್ಟಿದ್ದಾರೆ. ಪ್ರತಿ ಊಟಕ್ಕೂ ಆಯ್ಕೆಗಳಿವೆ. ಅದರ ವಿವರ ಇಲ್ಲಿದೆ.
ಜಿತಿನ್ ಹಂಚಿಕೊಂಡ ಅವರ ಆಹಾರದ ಪ್ಲಾನ್
ಬೆಳಿಗ್ಗೆ 6:30: ನಿಂಬೆ ರಸದೊಂದಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು
ಆಯ್ಕೆ: ಸಕ್ಕರೆ ಇಲ್ಲದೆ ಬ್ಲಾಕ್ ಟೀ ಅಥವಾ ಗ್ರೀನ್ ಟೀ
ಬೆಳಿಗ್ಗೆ 8:00 ಗಂಟೆಗೆ ಉಪಹಾರ:
ಆಯ್ಕೆ 1 - ಎರಡು ಬೇಯಿಸಿದ ಮೊಟ್ಟೆಗಳು (12 ಗ್ರಾಂ ಪ್ರೋಟೀನ್), ಸಾಂಬಾರ್ ಜೊತೆ 2 ಸಣ್ಣ ಇಡ್ಲಿ (4-5 ಗ್ರಾಂ ಪ್ರೋಟೀನ್).
ಆಯ್ಕೆ 2 - ಒಂದು ಕಪ್ ಮೊಳಕೆ ಕಾಳಿನ ಸಲಾಡ್ (15 ಗ್ರಾಂ ಪ್ರೋಟೀನ್), ಚಟ್ನಿಯೊಂದಿಗೆ ಒಂದು ದೋಸೆ (5 ಗ್ರಾಂ ಪ್ರೋಟೀನ್)
ಬೆಳಿಗ್ಗೆ 11:00 ಗಂಟೆಗೆ ಬೆಳಗಿನ ತಿಂಡಿ: ಒಂದು ಕಪ್ ಮಜ್ಜಿಗೆ (3-4 ಗ್ರಾಂ ಪ್ರೋಟೀನ್), ಒಂದು ಹಿಡಿ ಹುರಿದ ಕಡಲೆಕಾಯಿ (7 ಗ್ರಾಂ ಪ್ರೋಟೀನ್)
ಮಧ್ಯಾಹ್ನ 1:00 ಗಂಟೆಗೆ ಊಟ:
ಆಯ್ಕೆ 1: ಒಂದು ಕಪ್ ಕಂದು ಅಕ್ಕಿ ಅಥವಾ ಧಾನ್ಯದ ಅನ್ನ, ಒಂದು ಕಪ್ ದಾಲ್ ಅಥವಾ ಸಾಂಬಾರ್ (10 ಗ್ರಾಂ ಪ್ರೋಟೀನ್), ಒಂದು ಕಪ್ ತರಕಾರಿಗಳನ್ನು ತೆಂಗಿನಕಾಯಿಯೊಂದಿಗೆ ಬೆರೆಸಿದ, 100 ಗ್ರಾಂ ಬೇಯಿಸಿದ ಚಿಕನ್ ಅಥವಾ ಮೀನು (25 ಗ್ರಾಂ ಪ್ರೋಟೀನ್)
ಆಯ್ಕೆ 2 (ಸಸ್ಯಾಹಾರಿ): ಚಿಕನ್, ಮೀನಿಗೆ ಬದಲಾಗಿ 100 ಗ್ರಾಂ ಪನೀರ್ ಅಥವಾ ಟೋಫು (20-25 ಗ್ರಾಂ ಪ್ರೋಟೀನ್).
4:00 PM ತಿಂಡಿ: ಸಕ್ಕರೆ ಇಲ್ಲದೆ ಒಂದು ಕಪ್ ಗ್ರೀನ್ ಟೀ ಅಥವಾ ಒಂದು ಕಪ್ ಮಸಾಲಾ ಟೀ, 2 ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ ಒಂದು ಹಿಡಿ ಹುರಿದ ಕಡಲೆ (8 ಗ್ರಾಂ ಪ್ರೋಟೀನ್)
ರಾತ್ರಿ 7:00 ಗಂಟೆಗೆ ಭೋಜನ:
ಆಯ್ಕೆ 1: ಒಂದು ಕಪ್ ಧಾನ್ಯದ ದೋಸೆ ಅಥವಾ ಗೋಧಿ ದೋಸೆ, ಒಂದು ಕಪ್ ಲೆಟಿಸ್ ಅಥವಾ ಡ್ರಮ್ ಸ್ಟಿಕ್ ಸೂಪ್ (5 ಗ್ರಾಂ ಪ್ರೋಟೀನ್), 100 ಗ್ರಾಂ ಬೇಯಿಸಿದ ಮೀನು ಅಥವಾ ಚಿಕನ್ (25 ಗ್ರಾಂ ಪ್ರೋಟೀನ್).
ಆಯ್ಕೆ 2 (ಸಸ್ಯಾಹಾರಿ): ಒಂದು ಕಪ್ ದಾಲ್ ಅಥವಾ ರಾಜ್ಮಾ ಕರಿ ಜೊತೆಗೆ 2 ಮಲ್ಟಿಗ್ರೇನ್ ರೊಟ್ಟಿ (12-15 ಗ್ರಾಂ ಪ್ರೋಟೀನ್).
9:00 PM: ಒಂದು ಲೋಟ ಬೆಚ್ಚಗಿನ ಹಾಲನ್ನು ಅರಿಶಿನದೊಂದಿಗೆ ಒಂದು ಟೀಚಮಚ ಪ್ರೋಟೀನ್ ಪುಡಿಯೊಂದಿಗೆ (8 ಗ್ರಾಂ ಪ್ರೋಟೀನ್) ಕುಡಿಯುವುದು
ಈ ಮುನ್ನೆಚ್ಚರಿಕೆಗಳು
ಜಿತಿನ್ ತನ್ನ ಆಹಾರಕ್ರಮವನ್ನು ಹಂಚಿಕೊಳ್ಳುವುದರ ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನೂ ಹೇಳಿದ್ದಾನೆ. ಕರಿದ ಮತ್ತು ಹೆಚ್ಚು ಕ್ಯಾಲೋರಿ ಇರುವ ಆಹಾರಗಳನ್ನು ಸೇವಿಸಬಾರದು. ತಮ್ಮ ಪಾಕವಿಧಾನಗಳಲ್ಲಿ ತುಪ್ಪ ಮತ್ತು ತೆಂಗಿನ ಎಣ್ಣೆಯನ್ನು ಬಹಳ ಕಡಿಮೆ ಬಳಸಿರುವುದಾಗಿ ಹೇಳಿದ್ದಾರೆ. ಪ್ರತಿ ಊಟದ ನಂತರ 10 ರಿಂದ 15 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ. ಸಾಕಷ್ಟು ನೀರು ಕುಡಿಯಲು ಮತ್ತು ದಿನವಿಡೀ ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಸಲಹೆ ನೀಡಿದ್ದಾರೆ.