Narasimha Jayanti: ಇಂದು ನರಸಿಂಹ ಜಯಂತಿ; ಶ್ರೀ ವಿಷ್ಣುವು ನರಸಿಂಹಸ್ವಾಮಿ ಅವತಾರವೆತ್ತಿದ ಈ ದಿನದ ಮಹತ್ವ, ಪೂಜಾ ವಿಧಾನದ ಬಗ್ಗೆ ಮಾಹಿತಿ
May 04, 2023 10:28 AM IST
ನರಸಿಂಹ ಜಯಂತಿ 2023
ಹನ್ನೆರಡು ಉದಕಕುಂಭಗಳನ್ನು ದಾನ ಮಾಡಿದರೆ ಬ್ರಹ್ಮಹತ್ಯಾದೋಷವು ಪರಿಹಾರವಾಗುತ್ತದೆ. ತಿಲಹೋಮದಿಂದ ಋಣಮುಕ್ತರಾಗಬಹುದು. ಎಣ್ಣೆಯ ಸಹಿತ ದೀಪವನ್ನು ದಾನ ನೀಡಿದಲ್ಲಿ ಮಹಾ ಪುಣ್ಯ ಲಭಿಸುವುದು.
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಶ್ರೀ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ತಂದೆ ಹಿರಣ್ಯಕಶ್ಯಪುವಿನಿಂದ ರಕ್ಷಿಸಲು ನರಸಿಂಹಸ್ವಾಮಿಯ ಅವತಾರದಲ್ಲಿ ಬಂದ ದಿನ ಎಂದು ನಂಬಲಾಗಿದೆ. ಆದ್ದರಿಂದ ಪ್ರತಿ ವರ್ಷ ಈ ದಿನವನ್ನು ನರಸಿಂಹ ಜಯಂತಿಯನ್ನಾಗಿ ಆಚರಿಸುತ್ತಾ ಬರಲಾಗಿದೆ.
ಈ ವರ್ಷ ನರಸಿಂಹ ಜಯಂತಿ ಆಚರಣೆಯ ದಿನಾಂಕ ಸಮಯ ಈ ರೀತಿ ಇದೆ
ಈ ವರ್ಷ ಮೇ 4 ರಂದು (ಗುರುವಾರ) ನರಸಿಂಹ ಜಯಂತಿ ಆಚರಿಸಲಾಗುತ್ತಿದೆ. ಸೂರ್ಯೋದಯದಿಂದ ರಾತ್ರಿ 10.42 ವರೆಗೂ ಚತುರ್ದಶಿ ಇರುತ್ತದೆ. ಆದ್ದರಿಂದ ಅದೇ ದಿನ ಶ್ರೀ ನರಸಿಂಹ ಜಯಂತಿಯನ್ನು ವೈಷ್ಣವರಾದಿಯಾಗಿ ಎಲ್ಲರೂ ಆಚರಿಸಬೇಕು. ಆ ದಿನ ಒಂದು ಹೊತ್ತು ಭೋಜನ ಸ್ವೀಕರಿಸಬೇಕು. ಸೂರ್ಯಾಸ್ತದ ಮೊದಲು ಸ್ನಾನ ಮಾಡಿ ಸಂಧ್ಯಾವಂದನೆಯ ನಂತರ ಪೂಜಿಸಬೇಕು.
ಪೂರ್ಣಪಾತ್ರೆಯಲ್ಲಿ ಕಳಶವನ್ನಿಟ್ಟು ದೇವರ ವಿಗ್ರಹವನ್ನು ಅದರಲ್ಲಿ ಪ್ರತಿಷ್ಠಾಪಿಸಬೇಕು. ನರಸಿಂಹಾಚ್ಯುತ ಗೋವಿಂದ ಲಕ್ಷೀಕಾಂತ ಜಗತ್ಪತೇ| ಅನೇನಾಚಾರ್ಯಪ್ರದಾನೇನ ಸಫಲಾ ಸ್ಯುರ್ಮನೋರ್‍ರಥ ಎಂಬ ಮಂತ್ರವನ್ನು ಪಠಿಸಿ ಪೂಜಿಸಬೇಕು. ವಿಷ್ಣು ಅಥವ ನರಸಿಂಹಸ್ವಾಮಿಯ ಮಂತ್ರಪಠಣೆಯಿಂದ ಸಂಕಲ್ಪ ಮಾಡಿ, ಷೋಡಚೋಪಚಾರ ಪೂಜೆಯನ್ನು ಮಾಡಬೇಕು.
ಉದಕಕುಂಭ ದಾನದಿಂದ ಗೋದಾನ ಮಾಡಿದ ಫಲ ದೊರೆಯುತ್ತದೆ.
ಹನ್ನೆರಡು ಉದಕಕುಂಭಗಳನ್ನು ದಾನ ಮಾಡಿದರೆ ಬ್ರಹ್ಮಹತ್ಯಾದೋಷವು ಪರಿಹಾರವಾಗುತ್ತದೆ. ತಿಲಹೋಮದಿಂದ ಋಣಮುಕ್ತರಾಗಬಹುದು. ಎಣ್ಣೆಯ ಸಹಿತ ದೀಪವನ್ನು ದಾನ ನೀಡಿದಲ್ಲಿ ಮಹಾ ಪುಣ್ಯ ಲಭಿಸುವುದು. ಆದರೆ ನರಸಿಂಹಸ್ವಾಮಿಯ ಜೊತೆಯಲ್ಲಿ ಶ್ರೀಲಕ್ಷ್ಮಿ ವಿಗ್ರಹವನ್ನಿಟ್ಟು ಪೂಜಿಸಬೇಕು.
ಅಶಕ್ತರು,ರೋಗಿಗಳು ಮತ್ತು ವಯೋವೃದ್ಧರು ಭೋಜನವನ್ನು ಸೇವಿಸಬಹುದು. ಉಳಿದವರು ಉಪವಾಸ ಮಾಡಬೇಕು. ಗೋಧಿ ಅಥವಾ ರವೆಯಿಂದ ಮಾಡಿದ ತಂಬಿಟ್ಟನ್ನು ಸೇವಿಸಬಹುದು. ಆದರೆ ಬೆಂದ ಅಕ್ಕಿಯಿಂದ ಮಾಡಿದ ಖಾದ್ಯವನ್ನು ಸೇವಿಸಬಾರದು. ಮನ್ಯುಸೂಕ್ತ ಪಾರಾಯಣದಿಂದ ಮಾನವರಿಂದ ಉಂಟಾಗುವ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. ನರಸಿಂಹ ಸ್ವಾಮಿ ದೇವಾಲಕ್ಕೆ ಬೆಣ್ಣೆ ನೀಡುವುದರಿಂದಲೂ ಶುಭ ಫಲಗಳು ದೊರೆಯುತ್ತವೆ. ಬಹುಮುಖ್ಯವಾಗಿ ಇಂದು ಶ್ರೀ ನರಸಿಂಹಸ್ವಾಮಿಯನ್ನು ಆರಾಧಿಸುವುದರಿಂದ ಶತ್ರುಗಳ ಉಪಟಳ ಕಡಿಮೆ ಆಗುತ್ತದೆ.
ನರಸಿಂಹ ಅಷ್ಟೋತ್ತರ ಶತನಾಮಾವಳಿ
ಓಂ ನಾರಸಿಂಹಾಯ ನಮಃ
ಓಂ ಮಹಾಸಿಂಹಾಯ ನಮಃ
ಓಂ ದಿವ್ಯ ಸಿಂಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಉಗ್ರ ಸಿಂಹಾಯ ನಮಃ
ಓಂ ಮಹಾದೇವಾಯ ನಮಃ
ಓಂ ಸ್ತಂಭಜಾಯ ನಮಃ
ಓಂ ಉಗ್ರಲೋಚನಾಯ ನಮಃ
ಓಂ ರೌದ್ರಾಯ ನಮಃ
ಓಂ ಸರ್ವಾದ್ಭುತಾಯ ನಮಃ
ಓಂ ಶ್ರೀಮತೇ ನಮಃ
ಓಂ ಯೋಗಾನಂದಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಹರಯೇ ನಮಃ
ಓಂ ಕೋಲಾಹಲಾಯ ನಮಃ
ಓಂ ಚಕ್ರಿಣೇ ನಮಃ
ಓಂ ವಿಜಯಾಯ ನಮಃ
ಓಂ ಜಯವರ್ಣನಾಯ ನಮಃ
ಓಂ ಪಂಚಾನನಾಯ ನಮಃ
ಓಂ ಪರಬ್ರಹ್ಮಣೇ ನಮಃ
ಓಂ ಅಘೋರಾಯ ನಮಃ
ಓಂ ಘೋರ ವಿಕ್ರಮಾಯ ನಮಃ
ಓಂ ಜ್ವಲನ್ಮುಖಾಯ ನಮಃ
ಓಂ ಮಹಾ ಜ್ವಾಲಾಯ ನಮಃ
ಓಂ ಜ್ವಾಲಾಮಾಲಿನೇ ನಮಃ
ಓಂ ಮಹಾ ಪ್ರಭವೇ ನಮಃ
ಓಂ ನಿಟಲಾಕ್ಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ದುರ್ನಿರೀಕ್ಷಾಯ ನಮಃ
ಓಂ ಪ್ರತಾಪನಾಯ ನಮಃ
ಓಂ ಮಹಾದಂಷ್ಟ್ರಾಯುಧಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಚಂಡಕೋಪಿನೇ ನಮಃ
ಓಂ ಸದಾಶಿವಾಯ ನಮಃ
ಓಂ ಹಿರಣ್ಯಕ ಶಿಪುಧ್ವಂಸಿನೇ ನಮಃ
ಓಂ ದೈತ್ಯದಾನ ವಭಂಜನಾಯ ನಮಃ
ಓಂ ಗುಣಭದ್ರಾಯ ನಮಃ
ಓಂ ಮಹಾಭದ್ರಾಯ ನಮಃ
ಓಂ ಬಲಭದ್ರಕಾಯ ನಮಃ
ಓಂ ಸುಭದ್ರಕಾಯ ನಮಃ
ಓಂ ಕರಾಳಾಯ ನಮಃ
ಓಂ ವಿಕರಾಳಾಯ ನಮಃ
ಓಂ ವಿಕರ್ತ್ರೇ ನಮಃ
ಓಂ ಸರ್ವರ್ತ್ರಕಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ
ಓಂ ಈಶಾಯ ನಮಃ
ಓಂ ಸರ್ವೇಶ್ವರಾಯ ನಮಃ
ಓಂ ವಿಭವೇ ನಮಃ
ಓಂ ಭೈರವಾಡಂಬರಾಯ ನಮಃ
ಓಂ ದಿವ್ಯಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಕವಯೇ ನಮಃ
ಓಂ ಮಾಧವಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ಅಕ್ಷರಾಯ ನಮಃ
ಓಂ ಶರ್ವಾಯ ನಮಃ
ಓಂ ವನಮಾಲಿನೇ ನಮಃ
ಓಂ ವರಪ್ರದಾಯ ನಮಃ
ಓಂ ಅಧ್ಭುತಾಯ ನಮಃ
ಓಂ ಭವ್ಯಾಯ ನಮಃ
ಓಂ ಶ್ರೀವಿಷ್ಣವೇ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಅನಘಾಸ್ತ್ರಾಯ ನಮಃ
ಓಂ ನಖಾಸ್ತ್ರಾಯ ನಮಃ
ಓಂ ಸೂರ್ಯ ಜ್ಯೋತಿಷೇ ನಮಃ
ಓಂ ಸುರೇಶ್ವರಾಯ ನಮಃ
ಓಂ ಸಹಸ್ರಬಾಹವೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವಸಿದ್ಧ ಪ್ರದಾಯಕಾಯ ನಮಃ
ಓಂ ವಜ್ರದಂಷ್ಟ್ರಯ ನಮಃ
ಓಂ ವಜ್ರನಖಾಯ ನಮಃ
ಓಂ ಮಹಾನಂದಾಯ ನಮಃ
ಓಂ ಪರಂತಪಾಯ ನಮಃ
ಓಂ ಸರ್ವಮಂತ್ರೈಕ ರೂಪಾಯ ನಮಃ
ಓಂ ಸರ್ವತಂತ್ರಾತ್ಮಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸುವ್ಯಕ್ತಾಯ ನಮಃ
ಓಂ ವೈಶಾಖ ಶುಕ್ಲ ಭೂತೋತ್ಧಾಯ ನಮಃ
ಓಂ ಶರಣಾಗತ ವತ್ಸಲಾಯ ನಮಃ
ಓಂ ಉದಾರ ಕೀರ್ತಯೇ ನಮಃ
ಓಂ ಪುಣ್ಯಾತ್ಮನೇ ನಮಃ
ಓಂ ದಂಡ ವಿಕ್ರಮಾಯ ನಮಃ
ಓಂ ವೇದತ್ರಯ ಪ್ರಪೂಜ್ಯಾಯ ನಮಃ
ಓಂ ಭಗವತೇ ನಮಃ
ಓಂ ಪರಮೇಶ್ವರಾಯ ನಮಃ
ಓಂ ಶ್ರೀ ವತ್ಸಾಂಕಾಯ ನಮಃ
ಓಂ ಶ್ರೀನಿವಾಸಾಯ ನಮಃ
ಓಂ ಜಗದ್ವ್ಯಪಿನೇ ನಮಃ
ಓಂ ಜಗನ್ಮಯಾಯ ನಮಃ
ಓಂ ಜಗತ್ಭಾಲಾಯ ನಮಃ
ಓಂ ಜಗನ್ನಾಧಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ದ್ವಿರೂಪಭ್ರತೇ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಜ್ಯೋತಿಷೇ ನಮಃ
ಓಂ ನಿರ್ಗುಣಾಯ ನಮಃ
ಓಂ ನೃಕೇ ಸರಿಣೇ ನಮಃ
ಓಂ ಪರತತ್ತ್ವಾಯ ನಮಃ
ಓಂ ಪರಂಧಾಮ್ನೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ಲಕ್ಷ್ಮೀನೃಸಿಂಹಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಧೀರಾಯ ನಮಃ
ಓಂ ಪ್ರಹ್ಲಾದ ಪಾಲಕಾಯ ನಮಃ
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ
ವಿಭಾಗ