logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಮೂಗು ಮೊಟ್ಟೆಯ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ; ನಿಮ್ಮ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದು

Personality Test: ಮೂಗು ಮೊಟ್ಟೆಯ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ; ನಿಮ್ಮ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದು

Raghavendra M Y HT Kannada

Sep 13, 2024 07:31 AM IST

google News

Personality Test: ಮೂಗು ಮೊಟ್ಟೆಯ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ; ನಿಮ್ಮ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದು

    • Personality Test: ಎಲ್ಲರ ಮೂಗಿನ ಆಕಾರ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ಉದ್ದ ಇದ್ದರೆ, ಮತ್ತೊಬ್ಬರಿಗೆ ಅಗಲ, ಮೋಟು ಹೀಗೆಲ್ಲಾ ಇರುತ್ತೆ. ಮೂಗಿನ ಆಕಾರದ ಮೂಲಕವೂ ನಮ್ಮ ವ್ಯಕ್ತಿತ್ವ ತಿಳಿಯಬಹುದು. ಮೊಟ್ಟೆಯ ಆಕಾರದಲ್ಲಿ ಮೂಗು ಇದ್ದರೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳಿಯಿರಿ. (ಬರಹ: ಜ್ಯೋತಿಷಿ ಎಚ್‌. ಸತೀಶ್)
Personality Test: ಮೂಗು ಮೊಟ್ಟೆಯ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ; ನಿಮ್ಮ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದು
Personality Test: ಮೂಗು ಮೊಟ್ಟೆಯ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳಿವೆ; ನಿಮ್ಮ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದು

Personality Test: ಸಾಕಷ್ಟು ಮಂದಿಗೆ ತಮ್ಮ ವ್ಯಕ್ತಿತ್ವವನ್ನು ತಿಳಿಯುವ ಕುತೂಹಲ ಇರುತ್ತದೆ. ಕೆಲವರಿಗೆ ತಮ್ಮ ಮೂಗು ಮೂಟ್ಟೆಯ ಆಕಾರದಲ್ಲಿ ಇದ್ದರೆ ಯಾವ ರೀತಿಯ ವ್ಯಕ್ತಿತ್ವ ನಮ್ಮದಾಗಿರುತ್ತೆ ಎಂಬುದನ್ನು ತಿಳಿಯುವ ಆಸಕ್ತಿಯನ್ನು ಹೊಂದಿರುತ್ತಾರೆ. ಹೀಗಾಗಿ ಮೊಟ್ಟೆಯ ಆಕಾರದಲ್ಲಿ ಮೂಗು ಹೊಂದಿರುವವರು ವ್ಯಕ್ತಿತ್ವದ ವಿವರ ಇಲ್ಲಿದೆ. ಇಂತಹವರು ಸಾಮಾನ್ಯವಾಗಿ ರುಚಿಕರವಾದ ಭೋಜನಕ್ಕೆ ಹಾತೊರೆಯುತ್ತಾರೆ. ಮನಸ್ಸಿನಲ್ಲಿ ಅತಿಯಾದ ಆಸೆ ಇರುತ್ತದೆ. ಆಸೆಗಳು ಈಡೇರದೆ ಹೋದಲ್ಲಿ ಚಿಂತೆಗೆ ಒಳಗಾಗುತ್ತಾರೆ. ಚಿಕ್ಕ ಮಕ್ಕಳಲ್ಲಿಯೇ ಆತ್ಮವಿಶ್ವಾಸವನ್ನು ಕಾಣಬಹುದು. ಹೆತ್ತವರಾಗಲಿ ಅಥವಾ ಬೇರೆಯವರಾಗಲಿ ಹೇಳುವ ಬುದ್ಧಿವಾದವನ್ನು ಇವರು ಒಪ್ಪುವುದಿಲ್ಲ. ಆದರೆ ನ್ಯಾಯ ನೀತಿಯ ಹಾದಿಯಲ್ಲಿ ನಡೆಯುತ್ತಾರೆ. ಜೀವನದಲ್ಲಿ ವಿಶೇಷವಾದ ಸಾಧನೆಯನ್ನು ಮಾಡುತ್ತಾರೆ. ಬೇರೆಯವರನ್ನು ಎಂದಿಗೂ ಇವರು ಬೇರೆಯವರನ್ನು ಅವಲಂಬಿಸುವುದಿಲ್ಲ.

ಮೂಗು ಮೊಟ್ಟೆಯ ಆಕಾರದಲ್ಲಿ ಇರುವವರು ಚುರುಕುತನ ಜೀವನದಲ್ಲಿ ಹೊಸ ರೀತಿಯ ಬದಲಾವಣೆಗಳನ್ನು ಉಂಟುಮಾಡುತ್ತಾರೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದೇ ಇವರ ಗುರಿಯಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ಆತ್ಮೀಯರ ಸಹಾಯ ದೊರೆಯುತ್ತದೆ. ಗೆಳೆಯರಿಲ್ಲದ ಜೀವನ ಇವರಿಗೆ ನೀರಸವಾಗಿರುತ್ತದೆ. ವಿದ್ಯಾರ್ಥಿದೆಸೆಯಲ್ಲಿ ಇರುವಾಗಲೇ ಹಣವನ್ನು ಸಂಪಾದಿಸುವ ಮೂಲ ದೊರೆಯುತ್ತದೆ. ಇವರಿಗೆ ವಂಶದ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಸಾಮಾನ್ಯವಾಗಿ ಇವರ ಜೀವನದಲ್ಲಿ ಹಣದ ಕೊರತೆ ಕಂಡುಬರುವುದಿಲ್ಲ. ಆದರೆ ಆತುರದ ಕಾರಣ ತೊಂದರೆಗೆ ಒಳಗಾಗುತ್ತಾರೆ. ತಾವು ಮಾಡುವ ಕೆಲಸ ಕಾರ್ಯಗಳು ಮಾತ್ರ ಸತ್ಯ ಎಂಬ ಭಾವನೆ ಇವರಿಗೆ ಇರುತ್ತದೆ. ಮನದಲ್ಲಿ ಹತ್ತು ಹಲವು ರೀತಿಯ ಆಸೆ ಆಕಾಂಕ್ಷೆಗಳು ಮನೆ ಮಾಡಿರುತ್ತವೆ.

ಇಷ್ಟಪಡುವ ವ್ಯಕ್ತಿಯ ಜೊತೆಯಲ್ಲಿ ವಿವಾಹವಾಗುತ್ತೆ

ಇವರ ಮನಸ್ಸಿಗೆ ಒಪ್ಪುವಂತಹ ಉದ್ಯೋಗ ದೊರೆಯುತ್ತದೆ. ಸಮಯಕ್ಕೆ ಅನುಸಾರವಾಗಿ ಬುದ್ಧಿವಂತಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಇವರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಾರೆ. ಅನಾವಶ್ಯಕವಾಗಿ ಉದ್ಯೋಗವನ್ನು ಬದಲಿಸುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ತಿರುವುಗಳು ಗಲಿಬಿಲಿಗೆ ಕಾರಣವಾಗುತ್ತದೆ. ಇವರು ಇಷ್ಟಪಡುವಂತಹ ವ್ಯಕ್ತಿಯ ಜೊತೆಯಲ್ಲಿ ವಿವಾಹವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಅಭಿರುಚಿ ಇರುತ್ತದೆ. ಆದರೆ ತಮ್ಮ ಹಣಕಾಸಿನ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ.

ಮೂಗು ಮೊಟ್ಟೆಯ ಆಕಾರದಲ್ಲಿ ಇರುವವರು ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸುತ್ತಾರೆ. ಹಣಕಾಸಿನ ಕೊರತೆ ಕಂಡು ಬರುವುದಿಲ್ಲ. ಬುದ್ಧಿವಂತಿಕೆಯಿಂದ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಮಾತಿನಲ್ಲಿ ಇವರನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಬಂಧು ಬಳಗದವರಿಂದ ಇವರು ದೂರ ಉಳಿಯಲು ಬಯಸುತ್ತಾರೆ. ಆದರೆ ತಮ್ಮ ಮನೆಗೆ ಬರುವವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಂಬಿಕೆ ಇರುವುದಿಲ್ಲ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವನ್ನು ಗಳಿಸುತ್ತಾರೆ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಉತ್ತಮ ಸಲಹೆಯನ್ನು ನೀಡುತ್ತಾರೆ. ಇವರಿಗೆ ದೀರ್ಘಕಾಲದ ಪ್ರವಾಸ ಮಾಡುವುದೆಂದರೆ ಬಲು ಇಷ್ಟ. ಗುಟ್ಟಾಗಿ ಹಣವನ್ನು ಸಂಗ್ರಹಿಸುವ ಬುದ್ಧಿ ಇವರಿಗೆ ಇರುತ್ತದೆ.

ವಿವಾಹ ನಂತರ ಇವರ ಜೀವನದಲ್ಲಿ ಪ್ರಗತಿಪರ ಬದಲಾವಣೆಗಳು ಕಂಡು ಬರುತ್ತವೆ. ಐಷಾರಾಮಿ ಜೀವನವನ್ನು ನಡೆಸಲು ಆಸೆ ಇರುತ್ತದೆ. ಆದರೆ ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಡೆದುಕೊಳ್ಳುತ್ತಾರೆ. ಸಣ್ಣ ಪುಟ್ಟ ತೀರ್ಮಾನಗಳಾದರೂ ಸಹ ಬುದ್ದಿವಂತಿಕೆಯಿಂದ ತೆಗೆದುಕೊಳ್ಳುತ್ತಾರೆ. ಬೇರೆಯವರ ತಪ್ಪನ್ನು ಸುಲಭವಾಗಿ ಮನ್ನಿಸುವುದಿಲ್ಲ. ತಾವು ಮಾಡುವ ತಪ್ಪನ್ನು ಬೇರೆಯವರು ಕಾಣದಂತೆ ಎಚ್ಚರವಹಿಸುತ್ತಾರೆ. ಇವರ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉದ್ಯೋಗ ದೊರೆಯುತ್ತದೆ. ಅವರ ಜೀವನದಲ್ಲಿ ದಿನೇ ದಿನೇ ಬದಲಾವಣೆಗಳು ಕಾಣಸಿಗುತ್ತದೆ. ಬಾಳ ಸಂಗಾತಿಯ ಜೊತೆ ಅಥವಾ ಮಕ್ಕಳ ಜೊತೆಗೂಡಿ ಸಮಯ ವ್ಯರ್ಥ ಮಾಡದೆ ವ್ಯಾಪಾರವನ್ನು ಆರಂಭಿಸುತ್ತಾರೆ.

ತಮ್ಮ ಇಳುವಯಸ್ಸಿನಲ್ಲಿಯೂ ಸಹ ಇವರು ಸ್ವತಂತ್ರವಾಗಿ ಜೀವನವನ್ನು ನಡೆಸುತ್ತಾರೆ. ಸ್ವಂತ ಮನೆಯ ಆಸೆಯು ಆತ್ಮೀಯರ ಸಹಾಯದಿಂದ ಪೂರ್ಣಗೊಳ್ಳುತ್ತದೆ. ನರಕ್ಕೆ ಸಂಬಂಧಿಸಿದ ತೊಂದರೆಯು ಇವರನ್ನು ಕಾಡಬಹುದು. ಅನಿರೀಕ್ಷಿತವಾದ ಆರ್ಥಿಕ ಪ್ರಗತಿಯು ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ. ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುತ್ತಾರೆ. ಸ್ವಲ್ಪ ಪ್ರಯತ್ನ ಪಟ್ಟಲ್ಲಿ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ನಡೆಸಬಹುದು. ವಿದೇಶದಲ್ಲಿ ನೆಲೆಸದೇ ಹೋದರೂ ವಿದೇಶಕ್ಕೆ ತೆರಳುವ ಹಂಬಲವಿರುತ್ತದೆ. ಅಲ್ಲದೆ ಅದು ಕೈಗೂಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ