logo
ಕನ್ನಡ ಸುದ್ದಿ  /  ಜೀವನಶೈಲಿ  /  Instant Green Chilli Karindi Recipe: ಉತ್ತರ ಕರ್ನಾಟಕ ಶೈಲಿಯ ಈ ಹಸಿರು ಮೆಣಸಿನಕಾಯಿ ಕರಿಂಡಿ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತೆ

Instant Green Chilli Karindi Recipe: ಉತ್ತರ ಕರ್ನಾಟಕ ಶೈಲಿಯ ಈ ಹಸಿರು ಮೆಣಸಿನಕಾಯಿ ಕರಿಂಡಿ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತೆ

Nov 17, 2022 01:40 PM IST

ಉತ್ತರ ಕರ್ನಾಟಕ ಶೈಲಿಯ ಈ ಹಸಿರು ಮೆಣಸಿನಕಾಯಿ ಕರಿಂಡಿ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತೆ..

    • ಹಸಿ ಮೆಣಸಿನಕಾಯಿಯಿಂದ ಉಪ್ಪಿನಕಾಯಿ ಮಾಡುವುದು ಹೇಗೆಂದು ಹೇಳುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಕರಿಂಡಿ ಎಂದೂ ಕರೆಯುತ್ತಾರೆ. ಖಾರ ತಿನ್ನುವವರಿಗೆ ಈ ಉಪ್ಪಿನಕಾಯಿ ಇಷ್ಟವಾಗಬಹುದು. ಹಾಗಾದರೆ ಇದರ ಪಾಕ ವಿಧಾನ ಹೇಗೆ?
ಉತ್ತರ ಕರ್ನಾಟಕ ಶೈಲಿಯ ಈ ಹಸಿರು ಮೆಣಸಿನಕಾಯಿ ಕರಿಂಡಿ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತೆ..
ಉತ್ತರ ಕರ್ನಾಟಕ ಶೈಲಿಯ ಈ ಹಸಿರು ಮೆಣಸಿನಕಾಯಿ ಕರಿಂಡಿ ನಿಮ್ಮ ಊಟದ ರುಚಿ ಇನ್ನಷ್ಟು ಹೆಚ್ಚಿಸುತ್ತೆ..

ಉಪ್ಪಿನಕಾಯಿ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಮಾವಿನ ಕಾಯಿ ಮತ್ತು ನಿಂಬೆ ಹಣ್ಣಿನ ಉಪ್ಪಿನಕಾಯಿ. ಅದರ ಜತೆಗೆ ಮೆಣನಸಿನಕಾಯಿ, ಮೂಲಂಗಿ, ಸೌತೆಕಾಯಿ, ಬೆಳ್ಳುಳ್ಳಿ, ಶುಂಠಿಯಿಂದಲೂ ಉಪ್ಪಿನಕಾಯಿ ಮಾಡಲಾಗುತ್ತದೆ. ಇದೀಗ ನಾವಿಲ್ಲಿ ಹಸಿ ಮೆಣಸಿನಕಾಯಿಯಿಂದ ಉಪ್ಪಿನಕಾಯಿ ಮಾಡುವುದು ಹೇಗೆಂದು ಹೇಳುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಕರಿಂಡಿ ಎಂದೂ ಕರೆಯುತ್ತಾರೆ. ಖಾರ ತಿನ್ನುವವರಿಗೆ ಈ ಉಪ್ಪಿನಕಾಯಿ ಇಷ್ಟವಾಗಬಹುದು. ಹಾಗಾದರೆ ಇದರ ಪಾಕ ವಿಧಾನ ಹೇಗೆ?

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

ಹಸಿ ಮೆಣಸಿನಕಾಯಿ ಕರಿಂಡಿಗೆ ಬೇಕಾಗುವ ಸಾಮಗ್ರಿಗಳು..

* ಹಸಿರು ಮೆಣಸಿನಕಾಯಿ 250 ಗ್ರಾಂ

* ಸೋಂಪು - 2 ಟೀ ಸ್ಪೂನ್

* ಜೀರಿಗೆ - 1 ಟೀ ಸ್ಪೂನ್

* ಮೆಂತ್ಯ ಕಾಳು - 1 ಟೀ ಸ್ಪೂನ್

* ಸಾಸಿವೆ- 2 ಟೀ ಸ್ಪೂನ್

* ಸಾಸಿವೆ ಎಣ್ಣೆ 1/2 ಕಪ್

* ಅರಿಶಿನ ಪುಡಿ - 1 ಟೀ ಸ್ಪೂನ್

* ಎಳ್ಳು 1 ಟೀ ಸ್ಪೂನ್

* ಇಂಗು - 1/2 ಟೀ ಸ್ಪೂನ್

* ಉಪ್ಪು 1.5 ಟೀ ಸ್ಪೂನ್

* ವಿನೆಗರ್ 5 ಟೀ ಸ್ಪೂನ್

ಮಾಡುವ ವಿಧಾನ

- ಮೊದಲಿಗೆ ಮೆಣಸಿನ ಕಾಯಿಯನ್ನು ಶುಚಿಯಾಗಿಸಿಕೊಂಡು, ಎರಡು ಹೋಳುಗಳಾಗಿ ಸೀಳಿಕೊಳ್ಳಿ

- ಗ್ಯಾಸ್‌ ಮೇಲೆ ಪ್ಯಾನ್‌ ಇಟ್ಟು ಜೀರಿಗೆ, ಸಾಸಿವೆ, ಮೆಂತ್ಯೆ ಕಾಳು, ಸೋಂಪು ಹಾಕಿ ಬಿಸಿಯಾಗುವವರೆಗೂ ಹುರಿದುಕೊಳ್ಳಿ.

- ಬಳಿಕ ಆ ಮಿಶ್ರಣವನ್ನು ಮಿಕ್ಸರ್‌ನಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ

- ಪ್ಯಾನ್‌ಗೆ ಸಾಸಿವೆ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿ ಆದ ನಂತರ ತಣ್ಣಗಾಗಲು ಬಿಡಿ.

- ಇತ್ತ ಸೀಳಿದ ಮೆಣಸಿನಕಾಯಿಗಳಿಗೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ವಿನೇಗೆರ್‌, ಎಳ್ಳು, ಕೆಂಪು ಮೆಣಸಿನ ಖಾರ ಸೇರಿಸಿ.

- ಮಿಕ್ಸರ್‌ನಲ್ಲಿ ಪುಡಿ ಮಾಡಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಎಲ್ಲವನ್ನು ಕಲಸಿ

- ಈ ಮಿಶ್ರಣಕ್ಕೆ ತಣ್ಣಗಾದ ಸಾಸಿವೆ ಎಣ್ಣೆಯನ್ನು ಸುರಿದು ಬಾಡಿಸಿ.

- ಇದೆಲ್ಲ ಮುಗಿದ ಬಳಿಕ ಗಾಜಿನ ಬಾಟಲಿಗೆ ತುಂಬಿಸಿಡಿ. ಒಂದು ವರ್ಷದ ವರೆಗೂ ಇದನ್ನು ಸಂಗ್ರಹಿಸಿಟ್ಟು ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು