Masala Chai Recipe: ನಿಮ್ಮ ಮನೆ ಟೀ ರುಚಿಸುತ್ತಿಲ್ಲವೇ? ನಾರ್ಮಲ್ ಚಹಾವನ್ನು ಮತ್ತಷ್ಟು ಸ್ವಾದಿಷ್ಟಗೊಳಿಸುವುದು ಹೇಗೆ? ಇಲ್ಲಿದೆ ನೋಡಿ
Nov 19, 2022 11:56 AM IST
ನಿಮ್ಮ ಮನೆ ಟೀ ರುಚಿಸುತ್ತಿಲ್ಲವೇ? ನಾರ್ಮಲ್ ಚಹಾವನ್ನು ಮತ್ತಷ್ಟು ಸ್ವಾದಿಷ್ಟಗೊಳಿಸುವುದು ಹೇಗೆ? ಇಲ್ಲಿದೆ ನೋಡಿ
- ಇವತ್ತು ನಿಮ್ಮ ಮನೆಯ ಚಹಾದ ಘಮ ಹೆಚ್ಚಿಸುವ ಪೌಡರ್ ರೆಸಿಪಿ ಜತೆ ಆಗಮಿಸಿದ್ದೇವೆ. ಇದು ಕೇವಲ ಚಹಾದ ರುಚಿಯನ್ನಷ್ಟೇ ಅಲ್ಲ, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಇಲ್ಲಿದೆ ನೋಡಿ ರೆಸಿಪಿ.. ಈಗಲೇ ಮಾಡಿ ನೋಡಿ..
Masala Chai Recipe:ಕೆಲವೊಬ್ಬರ ಮನೆಯಲ್ಲಿ ಎಷ್ಟೇ ಟೀ ಬ್ರಾಂಡ್ ಬದಲಾವಣೆ ಮಾಡಿದರೂ, ಚಹಾದ ರುಚಿಯೇ ಘಮಿಸುವುದಿಲ್ಲ. ಎಷ್ಟೇ ಹಾಲು ಸುರಿದರೂ ಸ್ವಾದ ನಾಲಿಗೆಗೆ ಇಷ್ಟವಾಗುವುದಿಲ್ಲ. ಬೇರೆಯವರ ಮನೆಯಲ್ಲಿನ ಚಹಾದ ಘಮ ಇಷ್ಟವಾದಂತೆ, ತಮ್ಮ ಮನೆಯ ಚಹಾ ಇಷ್ಟವಾಗುವುದಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾವಿಲ್ಲಿ ನಿಮ್ಮ ಮನೆಯ ಚಹಾದ ಘಮ ಹೆಚ್ಚಿಸುವ ಪೌಡರ್ ರೆಸಿಪಿ ಜತೆ ಆಗಮಿಸಿದ್ದೇವೆ. ಇದು ಕೇವಲ ಚಹಾದ ರುಚಿಯನ್ನಷ್ಟೇ ಅಲ್ಲ, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಇಲ್ಲಿದೆ ನೋಡಿ, ಈಗಲೇ ಮಾಡಿ ನೋಡಿ..
ಮಸಾಲಾ ಚಹಾ ಮಾಡಲು ಬೇಕಾಗಿರುವ ಸಾಮಗ್ರಿ..
* ಏಲಕ್ಕಿ 20 ಗ್ರಾಂ/3 ಟೀಸ್ಪೂನ್
* ಕರಿಮೆಣಸು - 1 ಟೀಸ್ಪೂನ್/10 ಗ್ರಾಂ
* ಲವಂಗ - 1 ಟೀಸ್ಪೂನ್/5 ಗ್ರಾಂ
* ದಾಲ್ಚಿನ್ನಿ - 10 ಗ್ರಾಂ
* ಸೋಂಪು - 2 ಟೀಸ್ಪೂನ್
* ಕಪ್ಪು ಏಲಕ್ಕಿ - 4 ತುಂಡುಗಳು
* ಜಾಯಿಕಾಯಿ - 1 ತುಂಡು
* ಒಣ ಶುಂಠಿ ಪುಡಿ - 4 ಟೀಸ್ಪೂನ್
* ಐದಾರು ತುಳಸಿ ಎಲೆಗಳು
ಮಸಾಲಾ ಚಹಾ ಪೌಡರ ಮಾಡುವ ವಿಧಾನ
- ಒಂದು ಬಾಣಲೆಗೆ ಏಲಕ್ಕೆ, ಕರಿ ಮೆಣಸು, ಲವಂಗ, ದಾಲ್ಚಿನ್ನಿ, ಸೋಂಪು, ಕಪ್ಪು ಏಲಕ್ಕಿ, ಜಾಯಿಕಾಯಿಯನ್ನು ಕುಟ್ಟಿ ಪುಡಿ ಮಾಡಿ ಹಾಕಿ.
- ಇವೆಲ್ಲವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
- ಹೀಗೆ ಹುರಿದ ಬಳಿಕ ಈ ಮಿಶ್ರಣಕ್ಕೆ ಒಣ ಶುಂಠಿಯ ಪುಡಿಯನ್ನು ಹಾಕಿ ಮತ್ತೆ ಬಾಡಿಸಿ.
- ಇದೇ ಮಿಶ್ರಣಕ್ಕೆ ತುಳಸಿ ಎಲೆಗಳನ್ನೂ ಹಾಕಿ.
- ಕೊನೆಗೆ ಇದೆಲ್ಲವನ್ನು ಒಂದು ಮಿಕ್ಸರ್ ಬೌಲ್‌ಗೆ ಹಾಕಿ ನುಣ್ಣಗೆ ಹಿಟ್ಟಿನ ಹದಕ್ಕೆ ತನ್ನಿ..
ಈ ಪುಡಿಯನ್ನು ಚಹಾಕ್ಕೆ ಬಳಕೆ ಮಾಡುವುದು ಹೇಗೆ?
ಚಹಾದ ಪಾತ್ರೆಗೆ ಮೊದಲು ನೀರು ಹಾಕಿ ಬಿಸಿ ಮಾಡಿ. ನೀರು ಕಾದ ನಂತರ ನಿಮ್ಮ ಮನೆಯಲ್ಲಿನ ಚಹಾಪುಡಿಯನ್ನು ಹಾಕಿ ಎರಡು ನಿಮಿಷ ಚೆನ್ನಾಗಿ ಕುದಿಸಿ. ಬಳಿಕ, ನಿಮಗೆ ಬೇಕಾದಷ್ಟು ಸಕ್ಕರೆ ಹಾಕಿ. ಚೆನ್ನಾಗಿ ಕುದಿ ಬಂದ ಬಳಿಕ ಹಾಲು ಹಾಕಿ ಮತ್ತೆ ಕುದಿಸಿ. ಹೀಗೆ ಕುದ್ದ ಬಳಿಕ ಎರಡು ಕಪ್ ಟೀಗೆ ಅರ್ಧ ಟೀ ಚಮಚ ಲೆಕ್ಕದಲ್ಲಿ ಮಸಾಲೆಯನ್ನು ಮಿಶ್ರಣ ಮಾಡಿ ಮತ್ತೆ ಬಾಡಿಸಿ. ಈಗ ನಿಮ್ಮ ಮನೆಯ ಚಹಾ ಕೂಡ ನಿಮಗೆ ಇನ್ನಷ್ಟು ಇಷ್ಟವಾಗಲಿದೆ..