logo
ಕನ್ನಡ ಸುದ್ದಿ  /  ಜೀವನಶೈಲಿ  /  ಶುಂಠಿ ಅಡುಗೆಗೆ ಮಾತ್ರವಲ್ಲ, ಕೂದಲು ಉದುರುವಿಕೆ ತಡೆದು ಬುಡದಿಂದ ಗಟ್ಟಿಯಾಗಿಸುತ್ತದೆ, ಈ 3 ವಿಧಾನದಲ್ಲಿ ಬಳಸಿ ನೋಡಿ

ಶುಂಠಿ ಅಡುಗೆಗೆ ಮಾತ್ರವಲ್ಲ, ಕೂದಲು ಉದುರುವಿಕೆ ತಡೆದು ಬುಡದಿಂದ ಗಟ್ಟಿಯಾಗಿಸುತ್ತದೆ, ಈ 3 ವಿಧಾನದಲ್ಲಿ ಬಳಸಿ ನೋಡಿ

Jayaraj HT Kannada

Oct 27, 2024 07:17 PM IST

google News

ಶುಂಠಿ ಅಡುಗೆಗೆ ಮಾತ್ರವಲ್ಲ, ಕೂದಲು ಉದುರುವಿಕೆ ತಡೆದು ಬುಡದಿಂದ ಗಟ್ಟಿಯಾಗಿಸುತ್ತದೆ

    • ಕೂದಲು ಉದುರದಂತೆ ತಡೆದು ಬೆಳವಣಿಗೆ ಹೆಚ್ಚಿಸಲು ಮನೆಯಲ್ಲೇ ಇರುವ ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು. ಅಡುಗೆ ಮನೆಯಲ್ಲಿ ನಿತ್ಯ ಬಳಕೆಯಾಗುವ ಶುಂಠಿ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಶುಂಠಿಯನ್ನು ಹೇಗೆಲ್ಲಾ ಬಳಸಬಹುದು ನೋಡಿ.
ಶುಂಠಿ ಅಡುಗೆಗೆ ಮಾತ್ರವಲ್ಲ, ಕೂದಲು ಉದುರುವಿಕೆ ತಡೆದು ಬುಡದಿಂದ ಗಟ್ಟಿಯಾಗಿಸುತ್ತದೆ
ಶುಂಠಿ ಅಡುಗೆಗೆ ಮಾತ್ರವಲ್ಲ, ಕೂದಲು ಉದುರುವಿಕೆ ತಡೆದು ಬುಡದಿಂದ ಗಟ್ಟಿಯಾಗಿಸುತ್ತದೆ (Pixabay)

ಆಧುನಿಕ ಜೀವನಶೈಲಿಯಿಂದ ಕೂದಲನ್ನು ಆರೋಗ್ಯಕರವಾಗಿ ಕಾಪಾಡುವುದು ಒಂದು ಸವಾಲು. ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆ ಒಂದೆಡೆಯಾದರೆ, ಕೂದಲ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ ಎಂಬುವುದು ಇನ್ನೊಂದೆಡೆ. ಸಾಮಾನ್ಯವಾಗಿ ಕೂದಲ ಬೆಳವಣಿಗೆಗೆ ನೈಸರ್ಗಿಕ ಪರಿಹಾರಗಳನ್ನು ಬಯಸುವವರು ಹೆಚ್ಚು. ಹೀಗಾಗಿ ಕೂದಲಿನ ಆರೈಕೆಗೆ ಶುಂಠಿಯ ಬಳಕೆ ಮಾಡಬಹುದು. ವಿವಿಧ ಅಡುಗೆಗಳಲ್ಲಿ ಸಕ್ರಿಯವಾಗಿ ಬಳಕೆಯಾಗುವ ಶುಂಠಿಯನ್ನು ಕೂದಲಿನ ಉದುರುವಿಕೆ ತಡೆಯಲು ಬಳಸಬಹುದು. ಇದರಲ್ಲಿರುವ ಸಕ್ರಿಯ ಸಂಯುಕ್ತಗಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ನೆತ್ತಿಯಲ್ಲಿ ರಕ್ತದ ಹರಿವನ್ನು ಉತ್ತೇಜಿಸುವ ಮೂಲಕ ಕೂದಲಿನ ಆರೋಗ್ಯ ವೃದ್ಧಿಸುತ್ತದೆ.

ಕೂದಲ ಬೆಳವಣಿಗೆಗೆ ಹಲವಾರು ಎಣ್ಣೆಗಳು ಹಾಗೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಕೂದಲಿನ ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು.

ಶುಂಠಿಯ ಉರಿಯೂತದ ಗುಣಲಕ್ಷಣಗಳು ನೆತ್ತಿಯಲ್ಲಿ ಆಗುವ ಕಿರಿಕಿರಿಯನ್ನು ನಿವಾರಿಸುತ್ತದೆ. ತಲೆಯ ಆರೋಗ್ಯವನ್ನು ಕಾಪಾಡುವ ಮೂಲಕ ತಲೆಹೊಟ್ಟು ನಿವಾರಿಸುವ ಜೊತೆಗೆ ತುರಿಕೆ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಶುಂಠಿ ಬಳಸುವ ಮೂಲಕ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕವು ನೆತ್ತಿಯನ್ನು ಪೋಷಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ಆಕರ್ಷಕ ನೋಟ ಕೊಡುತ್ತದೆ. ಹೀಗಾಗಿ ಕೂದಲಿನ ಆರೈಕೆ ಮತ್ತು ಬೆಳವಣಿಗೆಗಾಗಿ ಶುಂಠಿಯನ್ನು ಬಳಸುವ ವಿಧಾನಗಳನ್ನು ನೋಡೋಣ.

ಹಸಿ ಶುಂಠಿ ರಸ

ತಲೆಹೊಟ್ಟು ನಿವಾರಿಸಲು ಮತ್ತು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮಾತ್ರವಲ್ಲದೆ ಒಟ್ಟಾರೆ ನೆತ್ತಿಯ ಆರೋಗ್ಯವನ್ನು ಹೆಚ್ಚಿಸಲು ಹಸಿ ಶುಂಠಿಯ ರಸವನ್ನು ನೇರವಾಗಿ ನೆತ್ತಿಗೆ ಮಸಾಜ್ ಮಾಡಿ. ಆ ಬಳಿಕ ಅರ್ಧ ಗಂಟೆ ಬಿಟ್ಟು ನಂತರ ತಲೆ ಸ್ನಾನ ಮಾಡಿ. ಶುಂಠಿ ರಸವನ್ನು ಆಗಾಗ ಬಳಕೆಸುವುದರಿಂದ ಕೂದಲ ಬೆಳವಣಿಗೆ ಸರಾಗವಾಗಿ ಆಗುತ್ತದೆ. ಅದರ ಹೊಳಪು, ಮೃದುತ್ವ ಹೆಚ್ಚುತ್ತದೆ.

ಶುಂಠಿ ಎಣ್ಣೆ

ಶುಂಠಿಯ ಎಣ್ಣೆ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ವೃದ್ಧಿಯಾಗುತ್ತದೆ. ಶುಂಠಿ ಎಣ್ಣೆ ತಯಾರಿಸಲು 1/4 ಕಪ್ ತೆಂಗಿನ ಎಣ್ಣೆ ಮತ್ತು 1/4 ಕಪ್ ಆಲಿವ್ ಎಣ್ಣೆ ತೆಗೆದುಕೊಳ್ಳಿ. ಇದಕ್ಕೆ 2 ಟೀ ಚಮಚ ಹಸಿ ಶುಂಠಿ ರಸ ಮಿಶ್ರಣ ಮಾಡಿ. ಈ ಎಣ್ಣೆಯ ಮಿಶ್ರಣವನ್ನು ನೆತ್ತಿ ಮೇಲೆ ಮಸಾಜ್ ಮಾಡಿ. ಕನಿಷ್ಠ 3 ಗಂಟೆಗಳ ಕಾಲ ಈ ಎಣ್ಣೆ ತಲೆಯಲ್ಲಿರಲಿ. ಆ ನಂತರ ಸ್ನಾನ ಮಾಡಿ.

ಶುಂಠಿಯ ಹೇರ್ ಮಾಸ್ಕ್

2 ಚಮಚ ಶುಂಠಿ ರಸ, 1/4 ಕಪ್ ಮೊಸರು ಮತ್ತು 1 ಚಮಚ ಜೇನುತುಪ್ಪವನ್ನು ಒಂದು ಬೌಲ್‌ನಲ್ಲಿ ಮಿಶ್ರಣ ಮಾಡಿ. ದಪ್ಪ ಮಿಶ್ರಣವನ್ನು ನೆತ್ತಿಯ ಮೇಲೆ ದಪ್ಪನೆ ಹಚ್ಚಿ, ಕನಿಷ್ಠ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ಬಳಿಕ ತಣ್ಣಿರಿನಿಂದ ತೊಳೆಯಿರಿ ಅಥವಾ ಸ್ನಾನ ಮಾಡಿ. ಇದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ