logo
ಕನ್ನಡ ಸುದ್ದಿ  /  ಜೀವನಶೈಲಿ  /  ಹರ್ ಘರ್ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ರಾಷ್ಟ್ರಧ್ವಜದ ಜತೆ ಸೆಲ್ಫಿ ತೆಗೆದು ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿ

ಹರ್ ಘರ್ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ರಾಷ್ಟ್ರಧ್ವಜದ ಜತೆ ಸೆಲ್ಫಿ ತೆಗೆದು ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿ

Praveen Chandra B HT Kannada

Aug 14, 2024 12:18 PM IST

google News

ಹರ್ ಘರ್ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ರಾಷ್ಟ್ರಧ್ವಜದ ಜತೆ ಸೆಲ್ಫಿ

    • How to download Har Ghar Tiranga Certificate: ಆಗಸ್ಟ್‌ 9ರಿಂದ 15ರವರೆಗೆ ಹರ್ ಘರ್ ತಿರಂಗ 2024 ನಡೆಯಲಿದೆ. ದೇಶಭಕ್ತಿ ಸಾರುವ ಈ ಅಭಿಯಾನದಲ್ಲಿ ಪಾಲ್ಗೊಂಡವರು ಇದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್‌/ ಪ್ರಮಾಣ ಪತ್ರವನ್ನು ಪಡೆಯಬಹುದು. ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಲು ಅನುಸರಿಸಬೇಕಾದ ವಿಧಾನಗಳ ವಿವರ ಇಲ್ಲಿದೆ.
ಹರ್ ಘರ್ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ರಾಷ್ಟ್ರಧ್ವಜದ ಜತೆ ಸೆಲ್ಫಿ
ಹರ್ ಘರ್ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ರಾಷ್ಟ್ರಧ್ವಜದ ಜತೆ ಸೆಲ್ಫಿ

ಬೆಂಗಳೂರು: ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು (download Har Ghar Tiranga Certificate) ಬಯಸುವವರು ಮೊದಲಿಗೆ ರಾಷ್ಟ್ರಧ್ವಜದ ಜತೆಗೆ ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಸೆಲ್ಫಿ ಮುಂದೆ ಸ್ಮೈಲ್‌ ನೀಡಿ ಫೋಟೋ ತೆಗೆದು ಅದನ್ನು ಅಪ್ಲೋಡ್‌ ಮಾಡುವ ಮುನ್ನ ಹರ್‌ ಘರ್‌ ತಿರಂಗ ಅಭಿಯಾನದ ಕುರಿತು ಕೊಂಚ ಮಾಹಿತಿ ತಿಳಿಯೋಣ್ವ.

ಏನಿದು ಹರ್‌ ಘರ್‌ ತಿರಂಗ ಅಭಿಯಾನ?

ಜಗತ್ತಿನಾದ್ಯಂತ ಇರುವ ಭಾರತೀಯರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡುವಂತಹ ಒಂದು ಅಭಿಯಾನ. ಹರ್ ಘರ್ ತಿರಂಗ 2024 ಭಾರತದ ಏಕತೆ, ದೇಶಭಕ್ತಿ ಮತ್ತು ಚೈತನ್ಯದ ಆಚರಣೆ. ಭಾರತದ 75 ನೇ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಈ ಅಭಿಯಾನ ಪ್ರಾರಂಭಿಸಲಾಯಿತು. ರಾಷ್ಟ್ರಧ್ವಜದ ಜತೆಗೆ ಎಲ್ಲರಿಗೂ ಇರುವ ಔಪಚಾರಿಕ ಸಂಬಂಧವನ್ನು ವೈಯಕ್ತಿಕವಾಗಿಸುವ ಸಲುವಾಗಿ ಈ ಅಭಿಯಾನ ಆಚರಿಸಲಾಗಿದೆ. ದೇಶಾದ್ಯಂತದ ಮನೆಗಳು, ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು.

ಹರ್‌ ಘರ್‌ ತಿರಂಗ ಅಭಿಯಾನದಲ್ಲಿ ಭಾಗವಹಿಸುವುದು ಹೇಗೆ?

ಮನೆಯಲ್ಲಿ ತಿರಂಗ ಹಾರಿಸುವುದು ಮಾತ್ರವಲ್ಲದೆ ಹರ್‌ಘರ್‌ ತಿರಂಗ ವೆಬ್‌ಸೈಟ್‌ನಲ್ಲಿ ನೋಂದಾಯಿಸುವ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗುವ ಅವಕಾಶವನ್ನು ನೀಡಲಾಗಿದೆ. ಹರ್ ಘರ್ ತಿರಂಗ 2024 ಅಭಿಯಾನದಲ್ಲಿ ನೋಂದಾಯಿಸಲು ಬಯಸುವವರು ಈ ಮುಂದಿನ ಹಂತಗಳನ್ನು ಅನುಸರಿಸಿ.

  • ಹಂತ 1: ಅಧಿಕೃತ ಹರ್ ಘರ್ ತಿರಂಗ 2024 ವೆಬ್‌ಸೈಟ್‌ಗೆ https://harghartiranga.com/ ಭೇಟಿ ನೀಡಿ.
  • ಹಂತ 2: ಅಲ್ಲಿರುವ ನೋಂದಣಿ ಫಾರ್ಮ್‌ ಭರ್ತಿ ಮಾಡಿ.
  • ಹಂತ 3: ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳನ್ನು ಒದಗಿಸಿ.
  • ಹಂತ 4: ಈ ಹಂತದಲ್ಲಿ 'ಹರ್ ಘರ್ ತಿರಂಗ' ಅಭಿಯಾನದ ಪ್ರತಿಜ್ಞೆಗೆ ಉಚಿತ ನೋಂದಣಿಯನ್ನು ಪೂರ್ಣಗೊಳಿಸಬಹುದು.

ಸೆಲ್ಫಿ ಅಪ್ಲೋಡ್‌ ಮಾಡಿ

ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ಈ ಅಭಿಯಾನದಲ್ಲಿ ಪಾಲ್ಗೊಂಡವರು ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡಬಹುದು. ಅದಕ್ಕಾಗಿ ಈ ಮುಂದಿನ ಹಂತಗಳನ್ನು ಅನುಸರಿಸಿ.

  • ಹಂತ 1: ಅಧಿಕೃತ ಹರ್ ಘರ್ ತಿರಂಗ 2024 ವೆಬ್‌ಸೈಟ್‌ಗೆ https://harghartiranga.com/ ಭೇಟಿ ನೀಡಿ.
  • ಹಂತ 2: ಧ್ವಜದ ಜತೆ ಸೆಲ್ಫಿ ತೆಗೆದ ಫೋಟೋವನ್ನು ಅಪ್ಲೋಡ್‌ ಮಾಡಿ. ಈ ಆಯ್ಕೆ ವೆಬ್‌ಸೈಟ್‌ನ ಮುಖಪುಟದಲ್ಲಿಯೇ ಇದೆ..
  • ಹಂತ 3: ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.
  • ಹಂತ 4: ನಿಮ್ಮ ಹೆಸರಿನಲ್ಲಿ ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ರಚಿಸಲಾಗುತ್ತಿದೆ.

ಹಂತ 5: ಹರ್‌ ಘರ್‌ ತಿರಂಗ ಸರ್ಟಿಫಿಕೇಟ್‌ ಡೌನ್‌ಲೋಡ್‌ಗೆ ಲಭ್ಯವಿರುತ್ತದೆ. ಡೌನ್‌ಲೋಡ್‌ ಮಾಡಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ