logo
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವ ಪುರುಷರ ದಿನ: ಸೋಷಿಯಲ್ ಮೀಡಿಯಾಗಳಲ್ಲಿ ಪುರುಷರ ದಿನದ ಹವಾ, ಶುಭ ಕೋರುವ ನೆಪದಲ್ಲಿ ಕಾಲೆಳೆದರು, ಆತ್ಮಾವಲೋಕನ ಮಾಡಿಕೊಂಡರು

ವಿಶ್ವ ಪುರುಷರ ದಿನ: ಸೋಷಿಯಲ್ ಮೀಡಿಯಾಗಳಲ್ಲಿ ಪುರುಷರ ದಿನದ ಹವಾ, ಶುಭ ಕೋರುವ ನೆಪದಲ್ಲಿ ಕಾಲೆಳೆದರು, ಆತ್ಮಾವಲೋಕನ ಮಾಡಿಕೊಂಡರು

Suma Gaonkar HT Kannada

Nov 19, 2024 07:56 PM IST

google News

ವಿಶ್ವ ಪುರುಷರ ದಿನ:

    • ವೆಸ್ಟ್ ಇಂಡೀಸ್‌ನ ಡಾ. ಜೆರೋಮ್ ಟೀಲಿಕ್ಸಿಂಗ್ ಎಂಬ ಇತಿಹಾಸ ಪ್ರಾಧ್ಯಾಪಕ ತಮ್ಮ ತಂದೆಯ ಹುಟ್ಟುಹಬ್ಬದ ನಿಮಿತ್ತ ಆರಂಭಿಸಿದ ಈ ಪುರುಷರ ದಿನ ಇಂದು ವಿಶ್ವದಾದ್ಯಂತ ವಿಸ್ತರಿಸಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪುರುಷರ ದಿನ ಇನ್ನಷ್ಟು ಹೊಸ ಹೊಳಹುಗಳನ್ನು ಹುಟ್ಟಿಸುವತ್ತ ಸಾಗಿದೆ.
ವಿಶ್ವ ಪುರುಷರ ದಿನ:
ವಿಶ್ವ ಪುರುಷರ ದಿನ:

ಬಹುಶಃ ಹತ್ತು ಹಲವು ಜವಾಬ್ದಾರಿಗಳನ್ನು ಹೊತ್ತು, ಸಮರ್ಥವಾಗಿ ನಿಭಾಯಿಸಿದರೂ ಎಲ್ಲೂ ಪ್ರಚಾರ ಬಯಸದೇ ತೆಪ್ಪಗೆ ಇರುವ ಜೀವ ಪ್ರಬೇಧ ಅಂದ್ರೆ ಪುರುಷರೇ ಇರಬೇಕು! ಬಹುತೇಕ ಎಲ್ಲ ದಿನಗಳು, ಆಚರಣೆಗಳು ಮಹಿಳಾ ಪ್ರಧಾನವೇ ಆಗಿರುವಾಗ ನಮಗೆ ಅಂತ ಏನೂ ಇಲ್ಲವಾ ಎಂದು ಪುರುಷರ ಹಳಹಳಿಸಬಾರದು ಎಂದೇ ವಿಶ್ವ ಪುರುಷರ ದಿನವನ್ನು ಆಚರಿಸಲಾಗುತ್ತಿದೆ. ಪುರುಷರಲ್ಲೂ ಮಮತೆ, ಕರುಣೆ ಎಲ್ಲವೂ ಇದೆ. ಪುರುಷರು ಕಣ್ಣೀರು ಬರದ ಕಲ್ಲುಗಳಲ್ಲ, ಎಂಥ ಭಂಡ ಎದೆಯ ಗಂಡೇ ಆದರೂ ಅವರಲ್ಲೂ ಕಣ್ಣೀರು ಅಡಗಿರಬಹುದು. ವೆಸ್ಟ್ ಇಂಡೀಸ್‌ನ ಡಾ. ಜೆರೋಮ್ ಟೀಲಿಕ್ಸಿಂಗ್ ಎಂಬ ಇತಿಹಾಸ ಪ್ರಾಧ್ಯಾಪಕ ತಮ್ಮ ತಂದೆಯ ಹುಟ್ಟುಹಬ್ಬದ ನಿಮಿತ್ತ ಆರಂಭಿಸಿದ ಈ ಪುರುಷರ ದಿನ ಇಂದು ವಿಶ್ವದಾದ್ಯಂತ ವಿಸ್ತರಿಸಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪುರುಷರ ದಿನ ಇನ್ನಷ್ಟು ಹೊಸ ಹೊಳಹುಗಳನ್ನು ಹುಟ್ಟಿಸುವತ್ತ ಸಾಗಿದೆ.

ಅರುಣ್ ಜೋಳದ ಕೂಡ್ಲಿಗಿ ಅವರು ಪುರುಷರ ದಿನದ ಬಗ್ಗೆ ಬರೆದ ಕಚಗುಳಿ ಇಡೋ ಸಾಲುಗಳಿವು

ಗಂಡಿನ ದಿನದ ಸಾರ್ಥಕ ಆಚರಣೆಗಾಗಿ ಬೆಲ್ ಹುಕ್ಸ್ ಓದಬೇಕು...

ನಂದೊಂದು ಇದು...😍

ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಎಷ್ಟಿರುತ್ತದೋ..

ಗಂಡಿನೊಳಗೆ ಹೆಣ್ಣಿನ ಅಂಶ ಅಷ್ಟಿದೆ.

ಬೀಜ..ತೊಗಟೆಯ ಒಂದು ಭಾಗವಷ್ಟೆ ಗಂಡು..

ಅಲ್ಲದೇ ಅವರು ವಿಶ್ವ ಪುರುಷರ ದಿನದಂದು ಸಖತ್ ಬರಹವನ್ನೇ ಬರೆದಿದ್ದಾರೆ

ಯಾರು ಪರಿಪೂರ್ಣ ಗಂಡು?

ತಮಿಳುನಾಡಿನ ವಿಲ್ಲುಪುರಂ ಬಳಿಯ ಕೂವಗಂ ನಲ್ಲಿ ನಡೆಯುವ ಕೂತಾಂಡವರ್ ಜಾತ್ರೆಯಲ್ಲಿ ಕೂತಾಂಡವ ದೇವರ ಬಗೆಗಿನ ಒಂದು ಮಿತ್ ನಲ್ಲಿ ಮಹಾಭಾರತ ಯುದ್ಧ ಗೆಲ್ಲಲು ಒಬ್ಬ ಪರಿಪೂರ್ಣ ಗಂಡಸಿನ ಬಲಿ ಆಗಬೇಕು ಎಂದಿರುತ್ತದೆ. ಆಗ ಹಾಗಾದರೆ ಯಾರು ಪರಿಪೂರ್ಣ ಗಂಡಸು ಎನ್ನುವ ಚರ್ಚೆ ನಡೆದು, ಅರ್ಧ ಗಂಡು ಅರ್ಧ ಹೆಣ್ಣಿನ ಲಕ್ಷಣಗಳಿರುವ ಗಂಡಸೇ ನಿಜವಾದ ಪರಿಪೂರ್ಣ ಗಂಡಸು ಎನ್ನಲಾಗುತ್ತದೆ. ಈಗ ಇರುವವರಲ್ಲಿ ಕೃಷ್ಣ, ಅರ್ಜುನ, ಅರ್ಜುನನ ಮಗ ಅರವಣ ಮೂವರೆ ಪರಿಪೂರ್ಣ ಗಂಡಸರು. ಇದರಲ್ಲಿ ಕೃಷ್ಣ ಮತ್ತು ಅರ್ಜುನ ಬಲಿಯಾದರೆ ಯುದ್ಧವೆ ನಿಲ್ಲುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅರ್ಜುನ ಮತ್ತು ನಾಗರಾಜ ಕುಮಾರಿಯ ಮಗನಾದ ಅರವಣ ಸ್ವಬಲಿಯಾಗಲು ಒಪ್ಪುತ್ತಾನೆ. ಆದರೆ ಒಂದು‌ದಿನದ ಮಟ್ಟಿಗೆ ಒಬ್ಬಳನ್ನು ಮದುವೆಯಾಗಿ ರಾತ್ರಿ ಅವಳೊಂದಿಗೆ ಕಳೆಯಬೇಕೆಂದು ಷರತ್ತು ವಿಧಿಸುತ್ತಾನೆ. ಆದರೆ ಒಂದು ರಾತ್ರಿಯ ಗಂಡನಿಗೆ ಯಾವ ಹೆಣ್ಣೂ ಮದುವೆಯಾಗಲು ಒಪ್ಪುವುದಿಲ್ಲ. ಅನಿವಾರ್ಯವಾಗಿ ಕೃಷ್ಣನೆ ಮೋಹಿನಿ ವೇಷ ಧರಿಸಿ ಮದುವೆಯಾಗುತ್ತಾನೆ.

ಆ ದಿನ ಅರವಣ ಅವಳೊಂದಿಗೆ ರಾತ್ರಿ ಕಳೆದು ಬೆಳಗಿನ ಜಾವ ಬಲಿಯಾಗುತ್ತದೆ. ಮೋಹಿನಿ ತನ್ನ ಗಂಡನ ಬಲಿಗೆ ಗಾಢವಾಗಿ ಶೋಕಿಸುತ್ತಾಳೆ. ಹಲವು ದಿನಗಳ ಕಾಲ ಕೃಷ್ಣ ಮೋಹಿನಿಯಾಗಿಯೇ ಇರುತ್ತಾನೆ. ಹಾಗಾಗಿಯೇ ತಮಿಳುನಾಡಿನ ಕೂತಾಂಡವ ಜಾತ್ರೆಯಲ್ಲಿ ಲಕ್ಷಾಂತರ ಟ್ರಾನ್ಸ್ ಜೆಂಡರ್ ಮಹಿಳೆಯರು ಅರವಣನನ್ನು ರಾತ್ರಿ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಸಂಭ್ರಮಿಸುತ್ತಾರೆ. ಬೆಳಗಿನ ಜಾವ ವಿಧವೆಯರಾಗುತ್ತಾರೆ. ಟ್ರಾನ್ ಮಹಿಳೆಯರು ಈ ಮೂಲಕ ತಮ್ಮ ಮದುವೆಯ ಆಸೆಯನ್ನು ಪೂರೈಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಕತೆ ಹೇಳಲು ಕಾರಣ ಯಾವ ಗಂಡಸಿನಲ್ಲಿ ಅರ್ಧ ಹೆಣ್ಣು-ಅರ್ಧ ಗಂಡಿನ ಲಕ್ಷಣಗಳಿರುತ್ತವೆಯೋ ಅವರೇ 'ಪರಿ ಪೂರ್ಣ ಗಂಡಸು' ಎಂದು ಮಹಭಾರತದ ಯಾವುದೋ ಒಂದು ಪಠ್ಯ ವ್ಯಾಖ್ಯಾನಿಸುತ್ತೆ. ಸಾಮಾನ್ಯವಾಗಿ 'ಒಳ್ಳೆಯ ಹೆಂಗರುಳಿನ ಗಂಡಸು' ಎನ್ನುವುದು ರೂಢಿಯ ಮಾತು.

ಹಾಗಾಗಿ ಎಲ್ಲಾ ಪರಿಪೂರ್ಣ ಮತ್ತು ಬಹುಸಂಖ್ಯಾತ ಅಪೂರ್ಣ ಗಂಡಸರಿಗೆ #ಪುರುಷದಿನದ ಶುಭಾಶಯಗಳು.

ಪುರುಷರ ದಿನದ ಪ್ರಯುಕ್ತ ಕೃಷ್ಣಮೂರ್ತಿ ಶ್ರೀನಾಥ್ ಅವರ ಫೇಸ್‌ಬುಕ್ ಪೋಸ್ಟ್‌ ಮತ್ತು ಕಾಮೆಂಟ್‌ಗಳು ಕುತೂಹಲಕರವಾಗಿದೆ

ಪುರುಷರ ದಿನದಂದು ಪುರುಷರಿಗೆ ವಿಶ್ ಮಾಡಲು ಮಹಿಳೆಯರು ಸಹ ಹಿಂದೆ ಬಿದ್ದಿಲ್ಲ. ಪುರುಷರ ದಿನದ ಕುರಿತು ದೀಪಾ ಹೀರೆಗುತ್ತಿ ಅವರ ನೋಟ ಹೀಗಿದೆ

ಗಂಡಿನ ದಿನದ ಶುಭಾಶಯಗಳು😀😀

ವರ್ಷದ 364 ದಿನಗಳೂ ತಮ್ಮವೇ ಆಗಿದ್ರೂ ಅದರಲ್ಲೇ ಮತ್ತೂ ಒಂದು ದಿನ ತಮ್ಮದು ಅಂತ ಮಾಡ್ಕೊಂಡು ತಮಗೆ ಯಾರೂ ವಿಶ್ ಮಾಡ್ಲೇ ಇಲ್ಲ ಅಂತ ಗೋಳಾಡ್ತಿರೋ ಗಂಡು ಜೀವಗಳಿಗೆ

Happy Men's Day❤️

ತಿರು ಶ್ರೀಧರ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪುರುಷರ ದಿನವನ್ನು ವ್ಯಾಖ್ಯಾನಿಸಿದ್ದು ಹೀಗೆ

ನಮ್ಮಲ್ಲಿ ಯಾರು, ಯಾಕೆ, ಹೇಗೆ ಪ್ರಭಾವ ಬೀರಿರುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಿಕೊಳ್ಳುವುದು ಕಷ್ಟ. ಆದರೆ, ಹಾಗೆ ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವುದು ಉಪಯುಕ್ತ. ಇಂದು ಅಂತರರಾಷ್ಟ್ರೀಯ ಪುರುಷರ ದಿನ. ಹಾಗಾಗಿ ಈ ಸಮಯ ನನ್ನ ನೆನಪಿಗೆ ಬಂದ, ನನ್ನನ್ನು ವ್ಯಕ್ತಿಗಳಾಗಿ ಸೆಳೆದ ಕೆಲವು ಮಹಾಪುರುಷರನ್ನು ಇಲ್ಲಿ ಕಂಡುಕೊಳ್ಳುತ್ತಿದ್ದೇನೆ. ಅವರು ಯಾಕಿಲ್ಲ, ಇವರು ಯಾಕಿಲ್ಲ ಎಂಬುದಕ್ಕೆ ಉತ್ತರವಿಲ್ಲ. ಆದರೆ, ಪ್ರಾಮಾಣಿಕ ಪೂರ್ಣ ಅನಿಸಿಕೆಗಳಲ್ಲಿ ಇವರುಗಳು ನನಗಿಷ್ಟವಾದವರು ಎಂಬುದರ ಕುರಿತು ಸಂದೇಹವಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ