ಬೆಂಗಳೂರು ಮಳೆ; ಬಾಗಲೂರು ಕ್ರಾಸ್‌ ಜಲಾವೃತ, ವಾಹನ ಸವಾರರ ಪರದಾಟ, ಸುಮನಹಳ್ಳಿ ಹೊಳೆಯ ವೈರಲ್‌ ವಿಡಿಯೋ ನೀವು ನೋಡಿದ್ರಾ..
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಳೆ; ಬಾಗಲೂರು ಕ್ರಾಸ್‌ ಜಲಾವೃತ, ವಾಹನ ಸವಾರರ ಪರದಾಟ, ಸುಮನಹಳ್ಳಿ ಹೊಳೆಯ ವೈರಲ್‌ ವಿಡಿಯೋ ನೀವು ನೋಡಿದ್ರಾ..

ಬೆಂಗಳೂರು ಮಳೆ; ಬಾಗಲೂರು ಕ್ರಾಸ್‌ ಜಲಾವೃತ, ವಾಹನ ಸವಾರರ ಪರದಾಟ, ಸುಮನಹಳ್ಳಿ ಹೊಳೆಯ ವೈರಲ್‌ ವಿಡಿಯೋ ನೀವು ನೋಡಿದ್ರಾ..

ಬೆಂಗಳೂರಲ್ಲಿ ಸದ್ಯ ಸುರಿದ ಮಳೆಗೆ ಸುಮನಹಳ್ಳಿ ಜಂಕ್ಷನ್‌ ಹೊಳೆಯಂತೆ ಕಂಡಿತು. ಬಾಗಲೂರು ಕ್ರಾಸ್‌ನಲ್ಲಿ ವಾಹನ ಸವಾರರು ಸಂಕಷ್ಟಕ್ಕೆ ಒಳಗಾದರು. ನಿಧಾನಗತಿಯ ಟ್ರಾಫಿಕ್ ಅನುಭವಕ್ಕೆ ಬಂದ ಕಾರಣ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ. ಇಲ್ಲಿದೆ ವೈರಲ್ ವಿಡಿಯೋ ಮತ್ತು ಮಾಹಿತಿ.

ಬೆಂಗಳೂರು ಮಳೆ; ಸುಮನಹಳ್ಳಿ ಜಂಕ್ಷನ್‌, ಬಾಗಲೂರು ಕ್ರಾಸ್‌ ಜಲಾವೃತವಾಯಿತು. ಸುಮನಹಳ್ಳಿಯಲ್ಲಿ ರಸ್ತೆಯಲ್ಲೆ ಮಳೆ ನೀರು ಹೊಳೆಯಾಗಿ ಹರಿದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಯಿತು. (ವಿಡಿಯೋ ಚಿತ್ರ)
ಬೆಂಗಳೂರು ಮಳೆ; ಸುಮನಹಳ್ಳಿ ಜಂಕ್ಷನ್‌, ಬಾಗಲೂರು ಕ್ರಾಸ್‌ ಜಲಾವೃತವಾಯಿತು. ಸುಮನಹಳ್ಳಿಯಲ್ಲಿ ರಸ್ತೆಯಲ್ಲೆ ಮಳೆ ನೀರು ಹೊಳೆಯಾಗಿ ಹರಿದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಯಿತು. (ವಿಡಿಯೋ ಚಿತ್ರ) (blrcitytraffic)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಮತ್ತೆ ಮಳೆರಾಯ ಗೋಳು ಹುಯ್ದುಕೊಳ್ಳಲು ಶುರುಮಾಡಿದಂತಿದೆ. ಸದ್ಯ ಸುರಿದ ಮಳೆಯ ಕಾರಣ ಸುಮನಹಳ್ಳಿ ಜಂಕ್ಷನ್ ಜಲಾವೃತವಾಗಿದ್ದು ಹೊಳೆಯಂತೆ ಕಂಡುಬಂತು. ಇಲ್ಲಿ ವಾಹನ ಸಂಚಾರ ನಿಧಾನವಾಗಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿರುವುದು ಕಂಡುಬಂತು. ಅದೇ ರೀತಿ, “ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ ವೀರಸಂದ್ರದ ಬಳಿ ಮಳೆ ಬಿದ್ದು ವಾಟರ್ ಲಾಗಿಂಗ್ ಆಗಿ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಹೊಸೂರು ಕಡೆ ಹೋಗುವ ವಾಹನ ಸವಾರರು ಫ್ಲೈ ಓವರ್ ಕೆಳಗಿನ ರಸ್ತೆ ಬಳಸುವುದು ಹಾಗೂ ಇತರೆ ಬದಲಿ ರಸ್ತೆಗಳನ್ನು ಬಳಸುವುದು”
ಎಂದು ಮಹದೇವಪುರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಮಳೆಗೆ ಎಲ್ಲೆಲ್ಲಿ ಸಮಸ್ಯೆ

1) ಬಾಗಲೂರು ಕ್ರಾಸ್ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ಏರ್‌ಪೋರ್ಟ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

2) ಬೆಂಗಳೂರು ಮಳೆಯ ಕಾರಣ ಬಳಗೆರೆ ಟಿ ಕ್ರಾಸ್‌ - ಪಾಣತ್ತೂರು ರಸ್ತೆಯಲ್ಲಿ ನೀರು ನಿಂತು ರಸ್ತೆ ಹದಗೆಟ್ಟಿದೆ. ನಿಧಾನಗತಿಯ ವಾಹನ ಸಂಚಾರ ಇದ್ದು, ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ವೈಟ್‌ಫೀಲ್ಡ್ ಸಂಚಾರ ಪೊಲೀಸರು ಮನವಿ ಮಾಡಿದ್ದರೆ. ತುರ್ತು ಇದ್ದರೆ 112ಕ್ಕೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ.

3) ವೀರಸಂದ್ರ ಜಂಕ್ಷನ್‌ ಬಳಿ ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಹೊಸೂರು ಮುಖ್ಯರಸ್ತೆಯ ಕಡೆಗೆ (ಹೊರಹೋಗುವ ಮತ್ತು ಒಳಬರುವ ವಾಹನಗಳು ನಗರದ ಕಡೆಗೆ ಎರಡೂ ಬದಿಗಳಲ್ಲಿ ನಿಧಾನಗತಿಯ ಸಂಚಾರ ವಿರುತ್ತದೆ) ದಯಮಾಡಿ ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.

4) ರಾಜಾಜಿನಗರ ಕೊಡೆ ಅಂಡರ್‌ಪಾಸ್ ಬಳಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ ಎಂದು ಬೆಳಗ್ಗೆ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದರು.

ಬೆಂಗಳೂರು ಮಳೆ; ಸುಮನಹಳ್ಳಿ ಹೊಳೆಯಂತಾದ ರಸ್ತೆ

ಹೆಚ್ಚಿನ ಪ್ರಮಾಣದ ಮಳೆಯಾಗಿರುವ ಕಾರಣ ಬೆಂಗಳೂರು ಸುಮನಹಳ್ಳಿ ಜಂಕ್ಷನ್ ಪ್ರದೇಶದಲ್ಲಿ ರಸ್ತೆಯಲ್ಲಿ ತುಂಬ ಪ್ರಮಾಣದ ನೀರು ತುಂಬಿಕೊಂಡಿದೆ. ಕೆಲವು ಕಡೆ ಮೊಣಕಾಲು ಮಟ್ಟದ ನೀರು ನಿಂತ ಕಾರಣ ವಾಹನ ಸಂಚಾರ ನಿಧಾನವಾಗಿದೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಇದೇ ವೇಳೆ, “ಸುಮನಹಳ್ಳಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ” ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರು ಹವಾಮಾನ ಇಂದು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಅಕ್ಟೋಬರ್ 30) ಹವಾಮಾನ ಹೇಗಿರಲಿದೆ? ಇಂದು ಮಳೆ ಬರುತ್ತಾ ಎಂಬ ಕುತೂಹಲ ತಣಿಸುವಂತೆ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಕೊಟ್ಟಿರುವ ಹವಾಮಾನ ಮುನ್ಸೂಚನೆ ಮಳೆ ಬರುವ ಸೂಚನೆ ನೀಡಿತ್ತು. ಇದರಂತೆ, ನಾಳೆ (ಅಕ್ಟೋಬರ್ 31) ಬೆಳಗ್ಗೆ 8.30 ರ ತನಕ ಅಲ್ಲಲ್ಲಿ ಕೆಲವು ಕಡೆಗೆ ಹನಿ ಮಳೆ, ಹಗುರ ಮಳೆಯಿಂದ ಸಾಧಾರಣ ಮಳೆ ಸುರಿಯಬಹುದು. ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇರಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿತ್ತು.

Whats_app_banner