logo
ಕನ್ನಡ ಸುದ್ದಿ  /  ಜೀವನಶೈಲಿ  /  Eunice Newton Foote: ಹಸಿರುಮನೆ ಪರಿಣಾಮ ಕಂಡುಹಿಡಿದ ಮೊದಲ ವಿಜ್ಞಾನಿ ಯುನಿಸ್‌ ನ್ಯೂಟನ್‌ ಫೂಟ್‌ಗೆ ಗೂಗಲ್‌ ಡೂಡಲ್‌ ಗೌರವ; ಯಾರಿವರು, ವಿವರ

Eunice Newton Foote: ಹಸಿರುಮನೆ ಪರಿಣಾಮ ಕಂಡುಹಿಡಿದ ಮೊದಲ ವಿಜ್ಞಾನಿ ಯುನಿಸ್‌ ನ್ಯೂಟನ್‌ ಫೂಟ್‌ಗೆ ಗೂಗಲ್‌ ಡೂಡಲ್‌ ಗೌರವ; ಯಾರಿವರು, ವಿವರ

Reshma HT Kannada

Jul 17, 2023 11:09 AM IST

google News

ವಿಜ್ಞಾನಿ ಯುನಿಸ್‌ ನ್ಯೂಟನ್‌ ಫೂಟ್‌ಗೆ ಗೂಗಲ್‌ ಡೂಡಲ್‌ ಗೌರವ

    • Google Doodle Features: ವಾತಾವರಣದ ಮೇಲೆ ಹಸಿರು ಮನೆ ಪರಿಣಾಮದ ಬಗ್ಗೆ ಮೊದಲ ಬಾರಿ ಪ್ರಯೋಗದ ಮೂಲಕ ತಿಳಿಸಿದ ಮಹಿಳೆ ಯುನಿಸ್‌ ನ್ಯೂಟನ್‌ ಫೂಟ್‌. ಅಮೆರಿಕದ ಮೂಲದ ಈ ವಿಜ್ಞಾನಿಗೆ ಇಂದು ಗೂಗಲ್‌ ಡೂಡಲ್‌ ತನ್ನ ಗೌರವ ಸಲ್ಲಿಸಿದೆ. ಪರಿಸರ ವಿಜ್ಞಾನಕ್ಕೆ ಈಕೆ ನೀಡಿದ ಕೊಡುಗೆಗಳನ್ನು ಗೂಗಲ್‌ ಶ್ಲಾಘಿಸಿದೆ. ಹಾಗಾದರೆ ಇವರ ಸಾಧನೆಗಳೇನು ನೋಡಿ. 
ವಿಜ್ಞಾನಿ ಯುನಿಸ್‌ ನ್ಯೂಟನ್‌ ಫೂಟ್‌ಗೆ ಗೂಗಲ್‌ ಡೂಡಲ್‌ ಗೌರವ
ವಿಜ್ಞಾನಿ ಯುನಿಸ್‌ ನ್ಯೂಟನ್‌ ಫೂಟ್‌ಗೆ ಗೂಗಲ್‌ ಡೂಡಲ್‌ ಗೌರವ

ಹಸಿರುಮನೆ ಪರಿಣಾಮ ಮತ್ತು ಜಾಗತಿಕ ತಾಪಮಾನ ಏರಿಕೆಯ ಮೇಲೆ ಅದರ ಪರಿಣಾಮವನ್ನು ಮೊದಲು ಗುರುತಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್‌ ನ್ಯೂಟನ್‌ ಫೂಟ್‌ ಅವರಿಗೆ ಗೂಗಲ್‌ ಸೋಮವಾರ ದೂಡಲ್‌ ರಚಿಸುವ ಮೂಲಕ ಗೌರವ ಸಲ್ಲಿಸಿದೆ. 11 ಸ್ಲೈಡ್‌ಗಳ ಸಂವಾದಾತ್ಮಕ ಡೂಡಲ್‌ ರಚಿಸಿರುವ ಗೂಗಲ್‌ ಆಕೆ ನಡೆದು ಬಂದ ಹಾದಿಯನ್ನು ಶ್ಲಾಷಿಸಿದೆ. ಹಸಿರುಮನೆಯ ಪರಿಣಾಮದ ಪರಿಕಲ್ಪನೆಯು ಆಕೆಯ ಸಾಧನೆಯ ಪ್ರಮುಖ ಹೆಜ್ಜೆಯಾಗಿದೆ. ಅದು ಇಂದಿನ ವಿಜ್ಞಾನಿಗಳಿಗೆ ಪರಿಸರ ಅಧ್ಯಯನದ ತಳಹದಿಯನ್ನು ರೂಪಿಸಿಕೊಟ್ಟಿತ್ತು. 

1819ರಲ್ಲಿ ಕನೆಕ್ಟಿಕಟ್‌ನಲ್ಲಿ ಜನಿಸಿದ ಫೂಟ್‌ ಅವರು ಟ್ರಾಯ್‌ ಫೀಮೇಲ್‌ ಸೆಮಿನರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಈ ಶಾಲೆಯು ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಿಗೆ ಹಾಜರಾಗಲು ಮತ್ತು ರಸಾಯನಶಾಸ್ತ್ರ ಪ್ರಯೋಗಾಲಯಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿತ್ತು ಮತ್ತು ಅವರಲ್ಲಿ ಹೆಚ್ಚು ಆಸಕ್ತಿ ಮೂಡುವಂತೆ ಮಾಡುತ್ತಿತ್ತು. ಹಾಗಾಗಿ ಇದು ಎಂಎಸ್‌ ಫೂಟ್‌ ಅವರಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹಾಗೂ ಕುತೂಹಲ ಮೂಡಲು ಕಾರಣವಾಗಿತ್ತು. ಅಲ್ಲದೆ ಆಕೆ ಅಂದಿನಿಂದ ವಿಜ್ಞಾನವನ್ನೇ ಉಸಿರಾಡಲು ತೊಡಗಿದರು.

ವೈಜ್ಞಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳನ್ನು ವ್ಯಾಪಕವಾಗಿ ದೂರವಿಟ್ಟ ಸಮಯದಲ್ಲಿ ಅವರು 1856 ರಲ್ಲಿ ಒಂದು ವಿಶಿಷ್ಟ ಪ್ರಯೋಗವನ್ನು ನಡೆಸುತ್ತಾರೆ. ಅದು ಇಂದು ಇಂದಿನ ಹವಾಮಾನ ಬದಲಾವಣೆಯ ತಿಳುವಳಿಕೆಯನ್ನು ರೂಪಿಸಿತ್ತು

ಹಸಿರುಮನೆ ಪರಿಣಾಮ ಕಂಡು ಹಿಡಿದ್ದಿದ್ದು ಹೀಗೆ 

ಗಾಜಿನ ಸಿಲಿಂಡರ್‌ಗಳಲ್ಲಿ ಪಾದರಸದ ಥರ್ಮಾಮೀಟರ್‌ಗಳನ್ನು ಇರಿಸಿದ ನಂತರ ಕಾರ್ಬನ್ ಡೈಆಕ್ಸೈಡ್ ಹೊಂದಿರುವ ಸಿಲಿಂಡರ್ ಸೂರ್ಯನಲ್ಲಿ ತಾಪವನ್ನು ಅತಿಯಾಗಿ ಹೀರಿಕೊಂಡಿತ್ತು ಹಾಗೂ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಆಕೆ ಕಂಡು ಹಿಡಿದಿದ್ದರು. ಇದರ ಪರಿಣಾಮವಾಗಿ, ಏರುತ್ತಿರುವ ಇಂಗಾಲದ ಡೈಆಕ್ಸೈಡ್‌ ಮಟ್ಟಗಳು ಮತ್ತು ವಾತಾವರಣದ ಉಷ್ಣತೆಯ ನಡುವಿನ ಸಂಪರ್ಕವನ್ನು ಕಂಡು ಹಿಡಿದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತನ್ನ ಮೊದಲ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಬಳಿಕ ಅವರು, ವಾತಾವರಣದ ಸ್ಥಿರ ವಿದ್ಯುತ್‌ ಮೇಲೆ ತನ್ನ ಎರಡನೇ ಅಧ್ಯಯನವನ್ನು ತಯಾರಿಸಿದರು. ಇವರು ಅಮೆರಿಕ ಭೌತಶಾಸ್ತ್ರದಲ್ಲಿ ಎರಡು ಅಧ್ಯಯನಗಳನ್ನು ಪ್ರಕಟಿಸಿದರು. ಆ ಮೂಲಕ ಎರಡು ಅಧ್ಯಯನಗಳನ್ನು ಪ್ರಕಟಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗುತ್ತಾರೆ. ಇವರ ಅಧ್ಯಯನಗಳು ಹಸಿರು ಮನ ಪರಿಣಾಮದ ಮೇಲಿನ ಹೆಚ್ಚಿನ ಪ್ರಯೋಗಗಳಿಗೆ ಕಾರಣವಾಯಿತು.

ಇಂದು ಪ್ರಪಂಚದಾದ್ಯಂತ ವಿಜ್ಞಾನಿಗಳು ಹವಾಮಾನ ವಿಜ್ಞಾನವನ್ನು ಮುನ್ನಡೆಸುತ್ತಿದ್ದಾರೆ, ಅಲ್ಲದೆ ಹವಮಾನ ವೈಪರೀತ್ಯದ ಪರಿಣಾಮಗಳ ಬಗ್ಗೆ ಜನರಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಅಡಿಪಾಯ ಹಾಕಿದ್ದು ಫೂಟ್‌ ಅವರು. ಅವರಿಗೆ ಧನ್ಯವಾದ ಹೇಳುವುದು ನಮ್ಮ ಕರ್ತವ್ಯವಾಗಿದೆ.

ಮಹಿಳೆಯ ಹಕ್ಕುಗಳ ಪ್ರಚಾರ

ಅಷ್ಟೇ ಅಲ್ಲ; ಮಹಿಳೆಯ ಹಕ್ಕುಗಳ ಪ್ರಚಾರಕ್ಕೂ ಇವರು ತಮ್ಮ ಸಮಯವನ್ನು ಮೀಸಲಿಟ್ಟರು. 1848ರಲ್ಲಿ ಮಿಸ್‌ ಫೂಟ್‌ ಸೆನೆಕಾ ಫಾಲ್ಸ್‌ನಲ್ಲಿ ಮೊದಲ ಮಹಿಳಾ ಹಕ್ಕುಗಳ ಸಮಾವೇಶದಲ್ಲಿ ಭಾಗವಹಿಸಿದರು. ಸಾಮಾಜಿಕ ಮತ್ತು ಕಾನೂನು ಸ್ಥಾನಮಾನದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಒತ್ತಾಯಿಸುವ ದಾಖಲೆಗೆ ಇವರು ಅಂದೇ ಸಹಿ ಹಾಕಿದ್ದರು.

1888 ರಲ್ಲಿ ಮರಣ ಹೊಂದಿದ್ದ ಈಕೆಯ ಸಾಧನೆಗಳು ಶತಮಾನಗಳವರೆಗೆ ಗುರುತಿಸ್ಪಡಲಿಲ್ಲ ಎನ್ನುವುದು ಖೇಧದ ಸಂಗತಿ. ಶತಮಾನಗಳ ನಂತ ಈಕೆಯ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗಿತ್ತು.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ