logo
ಕನ್ನಡ ಸುದ್ದಿ  /  ಜೀವನಶೈಲಿ  /  Grater Tips: ತುರಿಮಣೆ ಮೊಡ್ಡಾಗಿದ್ಯಾ? ಹಾಗಾದ್ರೆ ಅದನ್ನು ಶಾರ್ಪ್‌ ಮಾಡಲು ಇಲ್ಲೊಂದಷ್ಟಿದೆ ಐಡಿಯಾಸ್‌; ಟ್ರೈ ಮಾಡಿ ಖಂಡಿತ ವರ್ಕ್ ಆಗುತ್ತೆ

Grater Tips: ತುರಿಮಣೆ ಮೊಡ್ಡಾಗಿದ್ಯಾ? ಹಾಗಾದ್ರೆ ಅದನ್ನು ಶಾರ್ಪ್‌ ಮಾಡಲು ಇಲ್ಲೊಂದಷ್ಟಿದೆ ಐಡಿಯಾಸ್‌; ಟ್ರೈ ಮಾಡಿ ಖಂಡಿತ ವರ್ಕ್ ಆಗುತ್ತೆ

Suma Gaonkar HT Kannada

Sep 13, 2024 01:26 PM IST

google News

ತುರಿಮಣೆ

    • Kitchen Tips: ನಿಮ್ಮ ಮನೆಯಲ್ಲಿ ದಿನವೂ ಉಪಯೋಗ ಮಾಡುತ್ತಿರುವ ತುರಿಮಣೆ ಮೊಡ್ಡಾಗಿ ನಿಮ್ಮ ಕೈ ಜಾರುತ್ತಾ ಇದ್ಯಾ? ಹಾಗಾದ್ರೆ ನೀವು ಈ ಒಂದು ಕೆಲಸ ಮಾಡಿ. ನಿಮ್ಮ ಮನೆಯ ತುರಿಮಣೆ ತುಂಬಾ ಶಾರ್ಪ್‌ ಆಗುತ್ತದೆ. ಇದಂತು ತುರಿಯೋದೇ ಇಲ್ಲ. ಇದನ್ನು ಇನ್ನು ಬಿಸಾಡಬೇಕು ಎಂಬ ಆಲೋಚನೆ ಮಾಡುತ್ತಿದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. 
ತುರಿಮಣೆ
ತುರಿಮಣೆ

ನೀವೇನಾದರೂ ದಿನವೂ ಕ್ಯಾರೆಟ್‌, ಶುಂಠಿ ಅಥವಾ ಇನ್ಯಾವುದೇ ತರಕಾರಿಯನ್ನು ಕಟ್ ಮಾಡಲು ಬಳಕೆ ಮಾಡುತ್ತಿದ್ದ ತುರಿಮಣೆ ಈಗ ಮೊಡ್ಡಾಗಿದ್ಯಾ? ಹಾಗಾದ್ರೆ ಅದನ್ನು ಮತ್ತೆ ಸರಿಮಾಡಬಹುದು. ತುರಿಮಣೆ ಮೊಡ್ಡಾಗಿ ನಿಮ್ಮ ಕೈ ಜಾರುತ್ತಾ ಇದ್ಯಾ? ಹಾಗಾದ್ರೆ ನೀವು ಈ ಒಂದು ಕೆಲಸ ಮಾಡಿ. ನಿಮ್ಮ ಮನೆಯ ತುರಿಮಣೆ ತುಂಬಾ ಶಾರ್ಪ್‌ ಆಗುತ್ತದೆ. ಇದಂತು ತುರಿಯೋದೇ ಇಲ್ಲ. ಇದನ್ನು ಇನ್ನು ಬಿಸಾಡಬೇಕು ಎಂಬ ಆಲೋಚನೆ ಮಾಡುತ್ತಿದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. ಹಾಗಾದ್ರೆ ಇದನ್ನು ಶಾರ್ಪ್‌ ಮಾಡೋದಾದ್ರೂ ಹೇಗೆ ಎನ್ನುವ ಪ್ರಶ್ನೆ ಈಗ ನಿಮ್ಮ ತಲೆಗೆ ಬಂದಿರಬಹುದು. ಅದಕ್ಕೆ ಉತ್ತರ ನಾವು ನೀಡುತ್ತಿದ್ದೇವೆ ಗಮನಿಸಿ.

ಸ್ಟೋನ್ ಅಥವಾ ಶಾರ್ಪನಿಂಗ್ ಸ್ಟೀಲ್ ಬಳಸುವುದು
ನಿಮ್ಮ ಮನೆಯಲ್ಲಿ ರುಬ್ಬುವ ಕಲ್ಲು ಅಥವಾ ಮಸಾಲೆಗಳನ್ನು ಜಜ್ಜಲು ಎಂದು ನೀವು ಬಳಸುತ್ತಿರುವ ಕುಟ್ಟಾಣಿ ಇದ್ದರೆ ಅದರ ಕಲ್ಲನ್ನು ತೆಗೆದುಕೊಳ್ಳಿ. ನಂತರ ಆ ಕಲ್ಲನ್ನು ನೀವು ಈ ಚಿತ್ರದಲ್ಲಿ ನಾವು ತೋರಿಸಿದಂತೆ ಉಜ್ಜಿ. ನೀವು ತರಕಾರಿ ಹೇಗೆ ತುರಿಯುತ್ತೀರೋ ಅದರ ವಿರುದ್ಧ ದಿಕ್ಕಿನಲ್ಲಿ ಈ ಕಲ್ಲನ್ನು ಉಜ್ಜಿ. ಈ ರೀತಿ ಮಾಡುವುದರಿಂದ ತುರಿಮಣೆ ಸಂಪೂರ್ಣವಾಗಿ ಶಾರ್ಪ್‌ ಆಗುತ್ತದೆ.

ಸ್ಥಿರವಾದ ಮೇಲ್ಮೈಯಲ್ಲಿ ತುರಿಯುವ ಮಣೆ ಇರಿಸಿ. ಅದನ್ನು ಮಲಗಿಸಿ ಇಟ್ಟುಕೊಂಡು ಉಜ್ಜಿದರೂ ಆಗುತ್ತದೆ. ಆದರೆ ಇದನ್ನು ಮಾಡುವಾಗ ನಿಮ್ಮ ಕೈ ಬಗ್ಗೆ ನೀವು ಜಾಗ್ರತರಾಗಿರಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಕೈ ತುರಿದು ಹೋಗುತ್ತದೆ. ಇದನ್ನು ಮಾಡುವಾಗ ನಿಮಗೆ ಸಂಕಟ ಆಗಬಹುದು. ಅಥವಾ ಕಿರಿಕಿರಿ ಕೂಡ ಆಗಬಹುದು. ಯಾಕೆಂದರೆ ಇದನ್ನು ಮಾಡುವಾಗ ಒಂದು ರೀತಿಯ ಶಬ್ಧ ಬರುತ್ತದೆ. ಅದು ತುಂಬಾ ಇರಿಟೇಟ್ ಮಾಡುತ್ತದೆ.

ಗಾಜಿನ ಬೌಲ್‌
ಸ್ವಲ್ಪ ಗಟ್ಟಿಯಾಗಿರುವ ಗಾಜಿನ ಬೌಲ್‌ಗಳಿದ್ದರೆ ಅದನ್ನು ಸಹ ಇದೇ ರೀತಿ ಉಜ್ಜಿ ನೀವು ಸರಿ ಮಾಡಬಹುದು. ಇನ್ನುಆ ಗಾಜು ಪುಡಿಯಾಗಿ ಅಂಟಿಕೊಳ್ಳದ ರೀತಿ ಕಾಳಜಿ ಮಾಡಿ ಇಲ್ಲವಾದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.

ಚಾಕು ಶಾರ್ಪ್ ಮಾಡುವ ವಿಧಾನ
ನಿಮ್ಮ ಮನೆಯ ಚಾಕು ಶಾರ್ಪ್ ಇಲ್ಲ ಎಂದಾದರೆ ನೀವು ಒಂದು ಗಾಜಿನ ಬಳೆಯನ್ನು ತೆಗೆದುಕೊಳ್ಳಿ. ಆ ಬಳೆಯನ್ನು ಕಟ್ ಮಾಡಿದ ರೀತಿಯಲ್ಲಿ ಚಾಕುವನ್ನು ಅದಕ್ಕೆ ಉಜ್ಜಿ. ನಂತರ ಅದು ಶಾರ್ಪ್ ಆಗುತ್ತದೆ. ಇಲ್ಲವಾದರೆ ಯಾವುದಾದರೂ ಗಾಜಿನ ಮಗ್ ಇದೆ ಎಂದಾದರೆ ಅದಕ್ಕೆ ನೀವು ಚಾಕುವನ್ನು ಉಜ್ಜಿ ಕೂಡ ಶಾರ್ಪ್ ಮಾಡಿಕೊಳ್ಳಬಹುದು.

ಈ ಎಲ್ಲಾ ವಿಧಾನವನ್ನು ಅನುಸರಿಸಿ ಇದು ತುಂಬಾ ಸಹಾಯಕ್ಕೆ ಬರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ