logo
ಕನ್ನಡ ಸುದ್ದಿ  /  ಜೀವನಶೈಲಿ  /  Jumpsuit: ಹಳೆ ಫ್ಯಾಷನ್‌ಗೆ ಹೊಸ ಟಚ್‌: ಬಾಲಿವುಡ್‌ ಬೆಡಗಿಯರೂ ಮೆಚ್ಚಿದ ಜಂಪ್‌ಸೂಟ್‌ ಇತಿಹಾಸ ಹೀಗಿದೆ!

Jumpsuit: ಹಳೆ ಫ್ಯಾಷನ್‌ಗೆ ಹೊಸ ಟಚ್‌: ಬಾಲಿವುಡ್‌ ಬೆಡಗಿಯರೂ ಮೆಚ್ಚಿದ ಜಂಪ್‌ಸೂಟ್‌ ಇತಿಹಾಸ ಹೀಗಿದೆ!

HT Kannada Desk HT Kannada

Mar 30, 2023 05:23 PM IST

google News

ಜಂಪ್‌ಸೂಟ್‌ ಫ್ಯಾಷನ್‌

  • ಫ್ಯಾಷನ್‌ ಜಗತ್ತಿನಲ್ಲಿ ದಿನಕ್ಕೊಂದು ಹೊಸತು ಕಾಣಿಸುತ್ತದೆ. ದಿನಕ್ಕೊಂದು ಹೊಸ ವಿನ್ಯಾಸ, ಬಣ್ಣ, ರೂಪದ ಉಡುಪುಗಳು ಫ್ಯಾಷನ್‌ ಮಾರುಕಟ್ಟೆಯನ್ನು ಅಲಂಕರಿಸುತ್ತವೆ. ಇದೀಗ ಜಂಪ್‌ಸೂಟ್‌ ಫ್ಯಾಷನ್‌ ಲಲನೆಯರ ನೆಚ್ಚಿನ ಉಡುಪಾಗಿದೆ. ಆದರೆ ಈ ಜಂಪ್‌ಸೂಟ್‌ 1919ರಲ್ಲೇ ವಿನ್ಯಾಸಗೊಂಡಿತ್ತು ಎಂದರೆ ನಂಬಲೇಬೇಕು. 

ಜಂಪ್‌ಸೂಟ್‌ ಫ್ಯಾಷನ್‌
ಜಂಪ್‌ಸೂಟ್‌ ಫ್ಯಾಷನ್‌

ಫ್ಯಾಷನ್‌ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಫ್ಯಾಷನ್‌ ಮಾರುಕಟ್ಟೆಯಲ್ಲಿ ಪುನರಾವರ್ತನೆ ಸಹಜ. ಕಳೆದ ಮೂರ್ನಾಲ್ಕು ವರ್ಷಗಳಿಂದ 70, 80ರ ದಶಕಗಳ ಉಡುಪುಗಳು ಹೊಸ ರೂಪ ಪಡೆದು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವುದನ್ನು ಕಾಣಬಹುದಾಗಿದೆ. ಈಗ ಈ ಸಾಲಿಗೆ ಸೇರುವ ಹೊಸ ಫ್ಯಾಷನ್‌ ಟ್ರೆಂಡ್‌ ಎಂದರೆ ʼಜಂಪ್‌ಸೂಟ್‌ʼ.

ಕುತ್ತಿಗೆಯಿಂದ ಕಾಲಿನವರೆಗೆ ಒಂದೇ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾಗಿರುವ ಜಂಪ್‌ಸೂಟ್‌ ಧರಿಸಲೂ ಸುಲಭ ಮಾತ್ರವಲ್ಲ, ಧರಿಸಿದವರಿಗೆ ಟ್ರೆಂಡಿ ಲುಕ್‌ ಸಿಗುವಂತೆ ಮಾಡುವುದೂ ಸುಳ್ಳಲ್ಲ. ವಿವಿಧ ಬಣ್ಣ, ವಿನ್ಯಾಸಗಳಲ್ಲಿ ಲಭ್ಯ ಇರುವ ಈ ಉಡುಪು ಮಿಲೇನಿಯಲ್‌ ಹುಡುಗಿಯರ ನೆಚ್ಚಿನ ಆಯ್ಕೆಯೂ ಹೌದು.

ಜಂಪ್‌ಸೂಟ್‌ ಇತಿಹಾಸ

ಇಂದು ಫ್ಯಾಷನ್‌ ಲಲನೆಯರ ಮನಸ್ಸು ಕದ್ದಿರುವ ಜಂಪ್‌ಸೂಟ್‌ 1919ರ ಕಾಲದಲ್ಲಿ ಮೊದಲ ಬಾರಿ ವಿನ್ಯಾಸಗೊಂಡಿತ್ತು. ಪ್ಯಾರಾಚೂಟರ್‌ಗಳಿಗಾಗಿ ಈ ಉಡುಪನ್ನು ವಿನ್ಯಾಸ ಮಾಡಲಾಗಿತ್ತು, ವಿಮಾನದಿಂದ ಹಾರಲು ಸುಲಭವಾಗಲಿ ಎಂಬ ಕಾರಣಕ್ಕೆ ಈ ಉಡುಪನ್ನು ವಿನ್ಯಾಸ ಮಾಡಲಾಗಿತ್ತು. ನಂತರೆದ ದಿನಗಳಲ್ಲಿ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಪುರುಷರು ಇದನ್ನು ಧರಿಸುತ್ತಿದ್ದರು. ಇದು ಸಂಪೂರ್ಣವಾಗಿ ದೇಹವನ್ನು ಮುಚ್ಚುವ ಕಾರಣ ಬಿಸಿಯ ಶಾಖದಿಂದ ಮುಚ್ಚಿಕೊಳ್ಳಲು ಈ ಉಡುಪು ಸೂಕ್ತವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಯುದ್ಧ ಸಾಮಗ್ರಿಗಳನ್ನು ತಯಾರಿಸುವ ಮಹಿಳಾ ಕೆಲಸಗಾರರು ಇದನ್ನು ತೊಡಲು ಆರಂಭಿಸಿದರು. ಹೀಗೆ ಜಂಪ್‌ಸೂಟ್‌ ಇತಿಹಾಸ ಬೆಳೆದು ಬಂದಿದೆ. ಇದು ಸ್ಲಿಮ್‌ ಫಿಟ್ಟಿಂಗ್‌ ಹಾಗೂ ಧರಿಸಲು ಆರಾಮ ಎಂಬ ಕಾರಣಕ್ಕೆ ಆ ಕಾಲದಲ್ಲಿ ಬಳಸುತ್ತಿದ್ದರು.

ಆರಾಮದಾಯಕ ಉಡುಪು

ಕುತ್ತಿಗೆಯಿಂದ ಕಾಲಿನವರೆಗೆ ಒಂದು ಬಟ್ಟೆಯಲ್ಲಿ ವಿನ್ಯಾಸ ಮಾಡಿರುವ ಜಂಪ್‌ಸೂಟ್‌ ಧರಿಸಲು ಆರಾಮದಾಯಕ ಎನ್ನಿಸುತ್ತದೆ. ಇದು ಎಲ್ಲ ರೀತಿಯ ದೇಹಾಕಾರವನ್ನು ಹೊಂದಿರುವವರಿಗೂ ಸೂಕ್ತವಾಗಿದ್ದು, ಬೇಸಿಗೆಗೆ ಹೆಚ್ಚು ಹೊಂದುತ್ತದೆ. ಬೇಸಿಗೆಯಲ್ಲಿ ಕಾಟನ್‌ ಜಂಪ್‌ಸೂಟ್‌ ಉತ್ತಮ.

ಮಿಲೇನಿಯಲ್‌ ಹುಡುಗಿಯರ ಅಚ್ಚುಮೆಚ್ಚು

ಮಿಲೇನಿಯಲ್‌ ಹುಡುಗಿಯರಿಗೆ ಜಂಪ್‌ಸೂಟ್‌ ಮೇಲೆ ವಿಶೇಷ ಒಲವು. ಕಚೇರಿ, ಪಾರ್ಟಿ, ಶಾಪಿಂಗ್‌ ಎಲ್ಲದ್ದಕ್ಕೂ ಹೊಂದುವ ಜಂಪ್‌ಸೂಟ್‌ ಸ್ಟೈಲ್‌ಗೂ ಹೇಳಿ ಮಾಡಿಸಿದ್ದು. ಇದನ್ನು ಧರಿಸಿದಾಗ ಮಾರ್ಡನ್‌ ಲುಕ್‌ ಸಿಗುತ್ತದೆ. ಧರಿಸಲು ಆರಾಮ ಎನ್ನಿಸುವ ಈ ಡ್ರೆಸ್‌ ಪ್ಯಾಂಟ್‌, ಟಾಪ್‌, ವೇಲ್‌ ಎಂಬ ಕಿರಿಕಿರಿ ಇಲ್ಲ.

ವಿನ್ಯಾಸ

ಜಂಪ್‌ಸೂಟ್‌ನಲ್ಲಿ ಬೇರೆ ಬೇರೆ ವಿನ್ಯಾಸಗಳಿದ್ದು ನಿಮ್ಮ ದೇಹಾಕಾರ ಹಾಗೂ ನಿಮ್ಮ ಅಂದಕ್ಕೆ ಒಪ್ಪುವಂತಹ ಜಂಪ್‌ಸೂಟ್‌ ಧರಿಸುವುದು ಉತ್ತಮ. ಡೆನಿಮ್‌ ಜಂಪ್‌ಸೂಟ್‌ ಕೂಡ ಈಗ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಸ್ಲೀವ್‌

ತೋಳಿಲ್ಲದ, ಅರ್ಧ ತೋಳಿನ, ತುಂಬು ತೋಳಿನ, ಪಫ್‌ ತೋಳಿನ ಹೀಗೆ ವಿವಿಧ ತೋಳಿನ ವಿನ್ಯಾಸವಿರುವ ಜಂಪ್‌ ಸೂಂಟ್‌ಗಳು ಫ್ಯಾಷನ್‌ ಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತಿದೆ. ಬೇಸಿಗೆಯಲ್ಲಿ ತೋಳಿಲ್ಲದ ಜಂಪ್‌ಸೂಟ್‌ ಧರಿಸುವುದು ಸೂಕ್ತ.

ಸೆಲೆಬ್ರಿಟಿಗಳಿಗೂ ಇಷ್ಟ

ಈ ಜಂಪ್‌ಸೂಟ್‌ ಕೇವಲ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು ಎಂದರೆ ನಂಬಲೇಬೇಕು. ದೀಪಿಕಾ ಪಡುಕೋಣೆ, ಅಲಿಯಾ ಭಟ್‌ರಿಂದ ಹಿಡಿದು ಅದಿತಿ ರಾವ್‌ ಹೈದರಿವರೆಗೆ ಬಾಲಿವುಡ್‌ ನಟಿಯರು ಜಂಪ್‌ಸೂಟ್‌ ಅನ್ನು ಮೆಚ್ಚಿಕೊಂಡಿದ್ದಾರೆ.

ಬಟ್ಟೆ ಆಯ್ಕೆ

ಕಾಟನ್‌, ಸಿಂಥೆಟಿಕ್‌, ಡೆನಿಮ್‌, ಲೆನಿನ್‌ ಹೀಗೆ ವಿವಿಧ ವಿಧದ ಬಟ್ಟೆಗಳಲ್ಲಿ ಜಂಪ್‌ಸೂಟ್‌ಗಳನ್ನು ವಿನ್ಯಾಸ ಮಾಡಲಾಗುತ್ತದೆ. ಎಲ್ಲಾ ಕಾಲಕ್ಕೂ ಹೊಂದುವಂತಹ ಉಡುಪು ಇದಾಗಿದ್ದು ನಿಮ್ಮ ದೇಹಕ್ಕೆ ಹೊಂದುವ ಬಟ್ಟೆಯನ್ನು ಖರೀದಿಸುವುದು ಮುಖ್ಯವಾಗುತ್ತದೆ.

ಜಂಪ್‌ಸೂಟ್‌ನಲ್ಲಿ ಮಿಂಚಿದ ತಾರೆಯರಿವರು

ಬಾಲಿವುಡ್‌ ದಿವಾಗಳಾದ ದೀಪಿಕಾ ಪಡುಕೋಣೆ, ಕರೀನಾ ಕಪೂರ್‌, ಪ್ರಿಯಾಂಕ ಚೋಪ್ರಾ, ಸನ್ನಿ ಲಿಯೋನ್‌, ಅನನ್ಯಾ ಪಾಂಡೆ ಮುಂತಾದವರು ಡೆನಿಮ್‌ ಜಂಪ್‌ಸೂಟ್‌ನಲ್ಲಿ ಮಿಂಚಿದ್ದರು. ಇವರಲ್ಲಿ ಹೆಚ್ಚಿನವರು ತಮ್ಮ ವಿಮಾನ ಪಯಾಣಕ್ಕೆ ಈ ಜಂಪ್‌ಸೂಟ್‌ ಅನ್ನು ಆಯ್ಕೆ ಮಾಡಿಕೊಂಡಿದ್ದರು.

ನಟಿ ಅಲಿಯಾ ಭಟ್‌ ಡಂಗ್ರಿ ಜಂಪ್‌ಸೂಟ್‌ನಲ್ಲಿ ಮುದ್ದಾದ ಸ್ಕೂಲ್‌ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ನಟಿ ಮಾಧುರಿ ದೀಕ್ಷಿತ್‌ ಕೆಂಪು ಬಣ್ಣದ ಜಂಪ್‌ಸೂಟ್‌ ಧರಿಸಿ ಫೋಟೊಗೆ ಪೋಸ್‌ ನೀಡಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ