Kesari Phirni Recipe: ಅನ್ನಪೂರ್ಣಾ ದೇವಿಗೆ ಇಷ್ಟವಾದ ಕೇಸರಿ ಫಿರ್ಣಿ..ನೀವೂ ತಯಾರಿಸಿ ನೈವೇದ್ಯಕ್ಕೆ ಇಡಿ
Sep 29, 2022 07:50 AM IST
ಅನ್ನಪೂರ್ಣಾ ದೇವಿಗೆ ಇಷ್ಟವಾದ ಕೇಸರಿ ಫಿರ್ಣಿ
- ಅನ್ನಪೂರ್ಣೆಗೆ ಅಕ್ಕಿಯಿಂದ ಮಾಡಿದ ಕೇಸರಿ ಫಿರ್ಣಿಯನ್ನು ಸಿಹಿ ನೈವೇದ್ಯವಾಗಿ ಇಟ್ಟರೆ ದೇವಿ ಸಂತೃಪ್ತಳಾಗುತ್ತಾಳೆ. ಈ ಕೇಶರಿ ಫಿರ್ಣಿಯನ್ನು ಮಕ್ಕಳು ಹಾಗೂ ದೊಡ್ಡವರು ಬಹಳ ಇಷ್ಟಪಡುತ್ತಾರೆ.
ಇಂದು ನವರಾತ್ರಿಯ 4ನೇ ದಿನ. ಆಶ್ವಯುಜ ಮಾಸ ಶುಕ್ಲಪಕ್ಷ ಚೌತಿ ದಿನದಂದು ಬಹಳಷ್ಟು ಕಡೆ ದೇವಿಯನ್ನು ಕೂಷ್ಮಾಂಡಾದೇವಿ ರೂಪದಲ್ಲಿ ಪೂಜಿಸುತ್ತಾರೆ. ಆದರೆ ಕೆಲವೆಡೆ ಅನ್ನಪೂರ್ಣಾದೇವಿಯಾಗಿ ಆರಾಧಿಸುತ್ತಾರೆ.
ಅನ್ನಪೂರ್ಣೆಗೆ ಅಕ್ಕಿಯಿಂದ ಮಾಡಿದ ಕೇಸರಿ ಫಿರ್ಣಿಯನ್ನು ಸಿಹಿ ನೈವೇದ್ಯವಾಗಿ ಇಟ್ಟರೆ ದೇವಿ ಸಂತೃಪ್ತಳಾಗುತ್ತಾಳೆ. ಈ ಕೇಶರಿ ಫಿರ್ಣಿಯನ್ನು ಮಕ್ಕಳು ಹಾಗೂ ದೊಡ್ಡವರು ಬಹಳ ಇಷ್ಟಪಡುತ್ತಾರೆ. ಕೇಸರಿ ಫಿರ್ಣಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಕೇಸರಿ ಫಿರ್ಣಿ ಮಾಡಲು ಬೇಕಾಗುವ ಸಾಮಗ್ರಿಗಳು
ಅಕ್ಕಿ - 75 ಗ್ರಾಂ
ಹಾಲು - 300 ಮಿಲಿ
ಸಕ್ಕರೆ - 30 ಗ್ರಾಂ
ಕೇಸರಿ - ಸ್ವಲ್ಪ
ಏಲಕ್ಕಿ ಪುಡಿ - ಚಿಟಿಕೆ
ರೋಸ್ ವಾಟರ್ - ಕೆಲವು ಹನಿಗಳು
ಬಾದಾಮಿ, ಪಿಸ್ತಾ ಚೂರುಗಳು - ಅಲಂಕಾರಕ್ಕಾಗಿ
ಕೇಸರಿ ಫಿರ್ಣಿ ತಯಾರಿಸುವ ವಿಧಾನ
ಒಂದು ಸ್ಪೂನ್ ಹಾಲಿನಲ್ಲಿ ಕೇಸರಿ ಸೇರಿಸಿ ನೆನೆಯಲು ಬಿಡಿ
ಅಕ್ಕಿಯನ್ನು ಒಂದೆರಡು ಬಾರಿ ತೊಳೆದು ನೆನೆಯಲು ಬಿಡಿ
ನೆನೆಸಿದ ಅಕ್ಕಿಯಿಂದ ನೀರು ಶೋಧಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ
ಒಂದು ಪಾತ್ರೆಯಲ್ಲಿ ಹಾಲು, ಸಕ್ಕರೆ, ಅಕ್ಕಿ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ ಕುದಿಯಲು ಬಿಡಿ
ಮಿಶ್ರಣವು ಕೆನೆಯಂತೆ ಗಟ್ಟಿಯಾದಾಗ ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆರಡು ನಿಮಿಷ ಬೇಯಿಸಿ
ಇದರೊಂದಿಗೆ ನೆನೆಸಿದ ಕೇಸರಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಸ್ಟೋಫ್ ಆಫ್ ಮಾಡಿ
ರೋಸ್ ವಾಟರ್ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ ಕೊನೆಯಲ್ಲಿ ಬಾದಾಮಿ ಪಿಸ್ತಾ ಚೂರುಗಳಿಂದ ಗಾರ್ನಿಶ್ ಮಾಡಿ
ಕೇಸರಿ ಫಿರ್ಣಿಯನ್ನು ದೇವಿಗೆ ನೈವೇದ್ಯವಾಗಿ ಇಡಿ
ಈ ಸಿಹಿಯನ್ನು ನೀವು ತಿನ್ನುವ ಮೊದಲು ಕನಿಷ್ಠ 1 ಗಂಟೆ ಮೊದಲು ರೆಫ್ರಿಜರೇಟರ್‌ನಲ್ಲಿಡಿ. ಈ ಸಿಹಿ ಕೋಲ್ಡ್ ಇದ್ದರೆ ತಿನ್ನಲು ಮತ್ತಷ್ಟು ರುಚಿಯಾಗಿರುತ್ತದೆ.
ವಿಭಾಗ