logo
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಮಿಕ್ಸಿ ಬ್ಲೇಡ್‌ ಮಂದವಾಗಿ, ಸರಿಯಾಗಿ ರುಬ್ಬೋಕೆ ಆಗ್ತಿಲ್ವಾ? ಬ್ಲೇಡ್‌ ಹರಿತಗೊಳಿಸಲು ಇಲ್ಲಿದೆ ಸರಳ ವಿಧಾನ

Kitchen Tips: ಮಿಕ್ಸಿ ಬ್ಲೇಡ್‌ ಮಂದವಾಗಿ, ಸರಿಯಾಗಿ ರುಬ್ಬೋಕೆ ಆಗ್ತಿಲ್ವಾ? ಬ್ಲೇಡ್‌ ಹರಿತಗೊಳಿಸಲು ಇಲ್ಲಿದೆ ಸರಳ ವಿಧಾನ

Reshma HT Kannada

Aug 05, 2024 09:00 AM IST

google News

ಮಿಕ್ಸಿ ಬ್ಲೇಡ್‌ ಮಂದವಾಗಿ, ಸರಿಯಾಗಿ ರುಬ್ಬೋಕೆ ಆಗ್ತಿಲ್ವಾ? ಬ್ಲೇಡ್‌ ಹರಿತಗೊಳಿಸಲು ಇಲ್ಲಿದೆ ಸರಳ ವಿಧಾನ

  • Mixer Blade Sharpening: ಅಡುಗೆಮನೆಯ ಪ್ರಮುಖ ವಸ್ತುಗಳಲ್ಲಿ ಮಿಕ್ಸರ್‌ ಗ್ರೈಂಡರ್‌ ಕೂಡ ಒಂದು. ಮಿಕ್ಸಿ ಜಾರ್‌ಗೆ ಹಾಕಿದ ಮಸಾಲೆ ಸರಿಯಾಗಿ ರುಬ್ಬುತ್ತಿಲ್ಲ ಅಂದ್ರೆ ಬ್ಲೇಡ್‌ ವರ್ಕ್‌ ಮಾಡ್ತಾ ಇಲ್ಲ ಅಂತ ಅರ್ಥ. ಅದಕ್ಕೆ ನೀವು ಬ್ಲೇಡ್‌ ಬದಲಿಸುವ ಅಗತ್ಯವಿಲ್ಲ, ಈ ಟ್ರಿಕ್ಸ್‌ ಬಳಸಿದ್ರೆ ಸಾಕು ಮಿಕ್ಸಿ ಬ್ಲೇಡ್‌ ಶಾರ್ಪ್‌ ಆಗುತ್ತೆ, ಟ್ರೈ ಮಾಡಿ.

ಮಿಕ್ಸಿ ಬ್ಲೇಡ್‌ ಮಂದವಾಗಿ, ಸರಿಯಾಗಿ ರುಬ್ಬೋಕೆ ಆಗ್ತಿಲ್ವಾ? ಬ್ಲೇಡ್‌ ಹರಿತಗೊಳಿಸಲು ಇಲ್ಲಿದೆ ಸರಳ ವಿಧಾನ
ಮಿಕ್ಸಿ ಬ್ಲೇಡ್‌ ಮಂದವಾಗಿ, ಸರಿಯಾಗಿ ರುಬ್ಬೋಕೆ ಆಗ್ತಿಲ್ವಾ? ಬ್ಲೇಡ್‌ ಹರಿತಗೊಳಿಸಲು ಇಲ್ಲಿದೆ ಸರಳ ವಿಧಾನ

ಇತ್ತೀಚಿನ ದಿನಗಳಲ್ಲಿ ಬಹುತೇಕರು ಗ್ರೈಂಡರ್‌ಗಿಂತ ಮಿಕ್ಸಿ ಬಳಸುವುದು ಹೆಚ್ಚು. ಮಿಕ್ಸಿ ಬೇಗನೆ ರುಬ್ಬುತ್ತದೆ, ಇದರಿಂದ ಸಮಯ ಉಳಿತಾಯ ಮಾಡಬಹುದು ಎಂಬುದು ನಮ್ಮ ಭಾವನೆ. ಆದರೆ ತುಂಬಾ ದಿನಗಳ ಕಾಲ ನಿರಂತರವಾಗಿ ಮಿಕ್ಸಿ ಬಳಸುವುದರಿಂದ ಇದರ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅದರಲ್ಲೂ ಮಿಕ್ಸಿ ಬ್ಲೇಡ್‌ ಸರಿಯಿಲ್ಲ ಅಂದ್ರೆ ರುಬ್ಬಲು ಸಾಧ್ಯವಿಲ್ಲ.

ಮಸಾಲೆ, ಚಟ್ನಿ, ದೋಸೆ ಹೀಗೆ ಯಾವುದನ್ನೇ ಆಗಲಿ ರುಬ್ಬಲು ಮಿಕ್ಸಿಗೆ ಹಾಕಿದ ತಕ್ಷಣ ಸರಿಯಾಗಿ ರುಬ್ಬಲು ಆಗುತ್ತಿಲ್ಲ ಎಂದರೆ ಮಿಕ್ಸಿಯ ಬ್ಲೇಡ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಮಿಕ್ಸಿ ಜಾರ್‌ ಮಂದವಾದರೆ ನುಣ್ಣನೆ ರುಬ್ಬಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಕೇವಲ ಮಿಕ್ಸಿ ಜಾರನ್ನು ಅತಿಯಾಗಿ ಬಳಸುವುದರಿಂದ ಮಾತ್ರವಲ್ಲ, ಕಡಿಮೆ ಬಳಸುವುದರಿಂದ ಕೂಡ ಆಗುತ್ತದೆ. ಇಂತಹ ಸಂದರ್ಭದಲ್ಲಿ ಜನರು ಹೊಸ ಮಿಕ್ಸಿ ಖರೀದಿ ಮಾಡುತ್ತಾರೆ ಅಥವಾ ಮಿಕ್ಸಿ ಜಾರ್‌ನ ಬ್ಲೇಡ್‌ ಬದಲಿಸಲು ನೋಡುತ್ತಾರೆ. ಆದರೆ ಈ ಎರಡೂ ಖಂಡಿತ ಅಗತ್ಯವಿಲ್ಲ. ಅದರ ಬದಲು ಮನೆಯಲ್ಲೇ ಮಿಕ್ಸಿ ಜಾರ್‌ನ ಬ್ಲೇಡ್‌ಗಳನ್ನು ಸುಲಭವಾಗಿ ಹರಿತ ಮಾಡಿಕೊಳ್ಳಬಹುದು. ಅದಕ್ಕಾಗಿ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌ಗಳಿವೆ, ಅದನ್ನು ನೀವು ಅನುಸರಿಸಬೇಕು. ಹಾಗಾದ್ರೆ ಮಿಕ್ಸಿ ಜಾರ್‌ನ ಬ್ಲೇಡ್‌ ಶಾರ್ಪ್‌ ಆಗಲು ಏನು ಮಾಡಬೇಕು ನೋಡಿ.

ಉಪ್ಪು ಪುಡಿ ಮಾಡಿ

ಮಿಕ್ಸರ್ ಜಾರ್‌ನಲ್ಲಿ ಉಪ್ಪು ಹಾಕಿ ರುಬ್ಬಿ. ಸಾಮಾನ್ಯವಾಗಿ, ನೀವು ಯಾವುದೇ ಪಡಿತರ ಅಂಗಡಿಯಲ್ಲಿ ಕಲ್ಲು ಉಪ್ಪು ಅಥವಾ ಸಾಮಾನ್ಯ ಉಪ್ಪನ್ನು ಪಡೆಯುತ್ತೀರಿ. ನಿಮಗೆ ಕಲ್ಲು ಉಪ್ಪು ಸಿಗದಿದ್ದರೆ, ಮನೆಯಲ್ಲಿ ಬಳಸುವ ಸಾಮಾನ್ಯ ಉಪ್ಪನ್ನು ಮಿಕ್ಸರ್‌ನಲ್ಲಿ ಹಾಕಿ ಮತ್ತು ಮಿಕ್ಸಿ ಓಡಿಸಿ. ಹೀಗೆ ಮಾಡುವುದರಿಂದ ಮಿಕ್ಸರ್ ಜಾರ್‌ನ ಬ್ಲೇಡ್ ಮತ್ತೆ ನುಣ್ಣಗೆ ರುಬ್ಬಲು ಪ್ರಾರಂಭಿಸುತ್ತದೆ. ಬಳಕೆಗೆ ಕೆಲವು ದಿನಗಳ ಮೊದಲು ಈ ರೀತಿ ಉಪ್ಪು ಸೇರಿಸಿ ಮಿಕ್ಸಿ ಚಲಾಯಿಸುವುದರಿಂದ ಬ್ಲೇಡ್ ಕ್ರಮೇಣ ತೀಕ್ಷ್ಣವಾಗುತ್ತದೆ.

ಸ್ಯಾಂಡ್‌ ಪೇಪರ್‌ ಬಳಸಿ

ಮಿಕ್ಸರ್ ಜಾರ್‌ನ ಬ್ಲೇಡ ಅನ್ನು ನಿಧಾನವಾಗಿ ತೆಗೆಯಿರಿ. ನಂತರ ಈ ಬ್ಲೇಡ್ ಸುತ್ತಲಿನ ಕೊಳೆಯನ್ನು ಸ್ವಚ್ಛಗೊಳಿಸಿ ಮತ್ತು ಸ್ಯಾಂಡ್ ಪೇಪರ್ ಅನ್ನು ನಿಧಾನಕ್ಕೆ ಉಜ್ಜಿ. ಈ ರೀತಿ ಮಾಡುವಾಗ, ನಿಮ್ಮ ಕೈಗಳಿಗೆ ತಾಕದಂತೆ ನೋಡಿಕೊಳ್ಳಿ. ಆದ್ದರಿಂದ, ಕೈಗವಸುಗಳನ್ನು ಧರಿಸಿ ಈ ಕೆಲಸವನ್ನು ಮಾಡುವುದು ಉತ್ತಮ.

ಈ ಎರಡು ಸರಳ ವಿಧಾನಗಳ ಮೂಲಕ ಮಿಕ್ಸಿ ಜಾರ್‌ನ ಬ್ಲೇಡ್‌ ಅನ್ನು ಸುಲಭವಾಗಿ ಹರಿತಗೊಳಿಸಿಕೊಳ್ಳಬಹುದು. ನೀವು ಈ ವಿಧಾನ ಟ್ರೈ ಮಾಡಿ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ