Kitchen Tips: ಅಡುಗೆಮನೆಯ ಈ 5 ವಸ್ತುಗಳನ್ನು ಎಂದಿಗೂ ನಿಂಬೆಹಣ್ಣಿನಿಂದ ಸ್ವಚ್ಛ ಮಾಡ್ಬೇಡಿ, ಯಾಕೆ ಅಂತ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಅಡುಗೆಮನೆಯ ಈ 5 ವಸ್ತುಗಳನ್ನು ಎಂದಿಗೂ ನಿಂಬೆಹಣ್ಣಿನಿಂದ ಸ್ವಚ್ಛ ಮಾಡ್ಬೇಡಿ, ಯಾಕೆ ಅಂತ ನೋಡಿ

Kitchen Tips: ಅಡುಗೆಮನೆಯ ಈ 5 ವಸ್ತುಗಳನ್ನು ಎಂದಿಗೂ ನಿಂಬೆಹಣ್ಣಿನಿಂದ ಸ್ವಚ್ಛ ಮಾಡ್ಬೇಡಿ, ಯಾಕೆ ಅಂತ ನೋಡಿ

ನಿಂಬೆಹಣ್ಣಿಗೆ ಎಲ್ಲಾ ಕಾಲದಲ್ಲೂ ಬೇಡಿಕೆ ಇರುತ್ತದೆ. ಆಯುರ್ವೇದದಲ್ಲೂ ನಿಂಬೆಗೆ ವಿಶೇಷ ಸ್ಥಾನವಿದೆ. ನಿಂಬೆಹಣ್ಣು ದಾಹ ತಣಿಸುವುದು ಮಾತ್ರವಲ್ಲ ಸ್ವಚ್ಛತೆಗೂ ಹೇಳಿ ಮಾಡಿಸಿದ್ದು. ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನ ಸ್ವಚ್ಛ ಮಾಡಲು ಇದನ್ನು ಬಳಸಲಾಗುತ್ತದೆ. ಆದರೆ ಈ 5 ವಸ್ತುಗಳನ್ನ ಎಂದಿಗೂ ನಿಂಬೆಹಣ್ಣು ಬಳಸಿ ಕ್ಲೀನ್‌ ಮಾಡಬೇಡಿ. (ಬರಹ: ಪ್ರಿಯಾಂಕ.ಪಿ)

ಅಡುಗೆ ಮನೆಯಲ್ಲಿನ ಈ 5 ವಸ್ತುಗಳನ್ನು ನಿಂಬೆ ರಸದಿಂದ ತೊಳೆಯದಿರಿ.
ಅಡುಗೆ ಮನೆಯಲ್ಲಿನ ಈ 5 ವಸ್ತುಗಳನ್ನು ನಿಂಬೆ ರಸದಿಂದ ತೊಳೆಯದಿರಿ.

ನಿಂಬೆಯು ಪಾನಕವಾಗಿ ಕುಡಿಯಲು ಮಾತ್ರವಲ್ಲ, ಇವುಗಳಲ್ಲಿರುವ ಆಮ್ಲೀಯತೆ ಗುಣ ಹಾಗೂ ತಾಜಾ ಸುಗಂಧದ ಕಾರಣದಿಂದ ಇದನ್ನು ಅಡುಗೆ ಮನೆಯ ಶುಚಿಗೊಳಿಸುವಿಕೆಗೂ ಬಳಸಲಾಗುತ್ತದೆ. ಅಡುಗೆ ಮನೆಯಲ್ಲಿ ಕೊಳಕು ಆಹಾರದ ವಾಸನೆಯಿದ್ದರೆ ಅದನ್ನು ಹೋಗಲಾಡಿಸಲು ಈ ನಿಂಬೆ ಹಣ್ಣು ಸಹಕಾರಿ. ಅಲ್ಲದೆ, ನಿಂಬೆಯಿಂದ ಸ್ವಚ್ಛಗೊಳಸಿದರೆ ಗ್ಯಾಸ್ ಸ್ಟೌವ್, ಮೈಕ್ರೋವೇವ್, ಸಿಂಕ್ ಇತ್ಯಾದಿ ಫಳಫಳನೇ ಹೊಳೆಯುತ್ತದೆ. ಈ ಕಾರಣದಿಂದ ಬಹುತೇಕರು ಅಡುಗೆ ಮನೆಯ ಕ್ಲೀನಿಂಗ್‍ಗೆ ನಿಂಬೆ ಬಳಸುತ್ತಾರೆ.

ಆದರೆ, ಅಡುಗೆ ಮನೆಯಲ್ಲಿಕರುವ ಎಲ್ಲಾ ವಸ್ತುಗಳ ಕ್ಲೀನಿಂಗ್‍ಗೆ ನಿಂಬೆಯನ್ನು ಬಳಸುವುದು ಉತ್ತಮವಲ್ಲ. ಇದರಿಂದ ಸ್ವಚ್ಛಗೊಳಿಸಿದರೆ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ ಅನ್ನೋದು ನಿಜ. ತಾಮ್ರ ಸೇರಿದಂತೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸಬಹುದು. ಹಾಗಂತ ಎಲ್ಲದಕ್ಕೂ ನಿಂಬೆ ಹಣ್ಣನ್ನು ಬಳಸಿ ಕ್ಲೀನ್ ಮಾಡುವುದು ಅಷ್ಟು ಉತ್ತಮವಲ್ಲ. ಅದು ಯಾಕೆ ಅಂತೀರಾ? ಮುಂದೆ ಓದಿ..

ಅಡುಗೆಮನೆಯಲ್ಲಿನ ಈ ವಸ್ತುಗಳನ್ನು ನಿಂಬೆಹಣ್ಣಿನಿಂದ ಎಂದಿಗೂ ಸ್ವಚ್ಛಗೊಳಿಸದಿರಿ

ಮಾರ್ಬಲ್ ಮತ್ತು ಗ್ರಾನೈಟ್ ಕೌಂಟರ್‌ಟಾಪ್‌ (ಕಿಚನ್ ಸ್ಲ್ಯಾಬ್): ಅಡುಗೆ ಮನೆಯಲ್ಲಿರುವ ಮಾರ್ಬಲ್ ಅಥವಾ ಗ್ರಾನೈಟ್ ಕೌಂಟರ್‌ಟಾಪ್‌ (ಕಿಚನ್ ಸ್ಲ್ಯಾಬ್) ಗಳು ಅಡುಗೆಮನೆಯ ಸೊಬಗನ್ನು ಹೆಚ್ಚಿಸುತ್ತವೆ. ಆದರೆ, ಅವು ನಿಂಬೆ ರಸದಂತಹ ಆಮ್ಲೀಯ ಪದಾರ್ಥಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುವುದಿಲ್ಲ. ಕಿಚನ್ ಸ್ಲ್ಯಾಬ್‍ಗಳು ಹೊಳೆಯುತ್ತಿರುತ್ತವೆ. ಇದರ ಅಂದವನ್ನು ನಿಂಬೆ ಕೆಡಿಸಬಹುದು. ಯಾಕೆಂದರೆ ನಿಂಬೆಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ. ಕಾಲಾನಂತರದಲ್ಲಿ ಕಿಚನ್ ಸ್ಲ್ಯಾಬ್‍ಗಳು ಸರಿಪಡಿಸಲಾರದ ರೀತಿಯಲ್ಲಿ ಹಾನಿಯಾಗಿರುತ್ತದೆ. ನಿಂಬೆ ರಸದ ಬದಲು pH- ನ್ಯೂಟ್ರಲ್ ಕ್ಲೀನರ್ ಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

ಕಬ್ಬಿಣದ ಪ್ಯಾನ್‌ಗಳು: ಕಬ್ಬಿಣದ ಪ್ಯಾನ್‌ಗಳು ಅವುಗಳ ಬಾಳಿಕೆಗೆ ಜನಪ್ರಿಯತೆ ಪಡೆದಿದೆ. ಅವುಗಳನ್ನು ಎಂದಿಗೂ ನಿಂಬೆಯಿಂದ ಸ್ವಚ್ಛಗೊಳಿಸಬಾರದು. ನಿಂಬೆಹಣ್ಣಿನಲ್ಲಿರುವ ಆಮ್ಲೀಯತೆಯ ಗುಣವು ತುಕ್ಕು ಮತ್ತು ಅಂಟಿಕೊಳ್ಳುವಿಕೆಯನ್ನು ತಡೆಯುವ ತೈಲದ ರಕ್ಷಣಾತ್ಮಕ ಪದರವನ್ನು ತೆಗೆದುಹಾಕುತ್ತದೆ. ಕಬ್ಬಿಣದ ಪ್ಯಾನ್‍ಗೆ ಎಂದಿಗೂ ನಿಂಬೆ ರಸ ಬಳಸಬೇಡಿ. ಅವುಗಳನ್ನು ಬ್ರಷ್ ಮತ್ತು ಬಿಸಿನೀರನ್ನು ಬಳಸಿ ಸ್ವಚ್ಛಗೊಳಿಸಿ. ಆದರೆ, ಸೋಪ್ ಅನ್ನು ಕೂಡ ಬಳಸದಿರಿ.

ಚಾಕುಗಳು: ಅಡುಗೆ ಮನೆಯಲ್ಲಿ ತರಕಾರಿ ಇತ್ಯಾದಿ ಕತ್ತರಿಸಲು ಚಾಕು ಬೇಕೆ ಬೇಕು. ಅವುಗಳ ಬಾಳಿಕೆಗಾಗಿ ಉತ್ತಮ ಸ್ಥಿತಿಯಲ್ಲಿಡುವುದು ಬಹಳ ಮುಖ್ಯ. ನಿಂಬೆ ರಸವು ಸೋಂಕು ನಿವಾರಕ ಗುಣಗಳನ್ನು ಹೊಂದಿದೆ. ಆದರೆ, ಇದು ಚಾಕುಗಳನ್ನು ಹಾನಿಗೊಳಿಸುತ್ತದೆ. ನಿಂಬೆ ಬದಲಿಗೆ ಪಾತ್ರೆ ಸೋಪ್ ಮತ್ತು ನೀರನ್ನು ಬಳಸಿ ತೊಳೆಯಿರಿ. ತುಕ್ಕು ಹಿಡಿಯದಿರಲು ಕೂಡಲೇ ಚಾಕುವನ್ನು ಬಟ್ಟೆಯಿಂದ ಒರೆಸಿ. ಇದರಿಂದ ಬ್ಲೇಡ್‌ಗಳನ್ನು ತೀಕ್ಷ್ಣವಾಗಿರಿಸುತ್ತದೆ.

ಮರದ ವಸ್ತುಗಳು: ಮರದ ಪಾತ್ರೆಗಳು, ಮರದ ಕಟ್ಟಿಂಗ್ ಬೋರ್ಡ್‌ಗಳು ಇತ್ಯಾದಿಗಳನ್ನು ಹೊಂದಿದ್ದರೆ ಅವುಗಳನ್ನು ಎಂದಿಗೂ ನಿಂಬೆಯಿಂದ ಸ್ವಚ್ಛಗೊಳಿಸದಿರಿ. ಆಮ್ಲೀಯತೆಯ ಗುಣ ಮರದ ವಸ್ತುಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಬ್ಯಾಕ್ಟೀರಿಯಾವನ್ನು ಆಶ್ರಯಿಸುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಬದಲಾಗಿ, ಪಾತ್ರೆ ತೊಳೆಯುವ ಸಾಬೂನು ಮತ್ತು ನೀರನ್ನು ಬಳಸಿ ತೊಳೆದು ಬಟ್ಟೆಯಿಂದ ಒರೆಸಿ.

ಅಲ್ಯೂಮಿನಿಯಂ ಪಾತ್ರೆಗಳು: ಅಲ್ಯೂಮಿನಿಯಂ ಪಾತ್ರೆಗಳು ಹೆಚ್ಚಿಗೆ ಬಾಳಿಕೆ ಬರುತ್ತವೆ. ಆದರೆ ನಿಂಬೆಯಿಂದ ಅವುಗಳನ್ನು ಸ್ವಚ್ಛಗೊಳಿಸುವುದು ಹಾನಿಕಾರಕವಾಗಿದೆ. ಆಮ್ಲೀಯತೆಯು ಬಣ್ಣ ಮತ್ತು ಹೊಳಪನ್ನು ಕಳೆದುಕೊಳ್ಳಬಹುದು. ಇದರಿಂದ ಮೇಲ್ಮೈಯಲ್ಲಿ ಸಣ್ಣ ರಂಧ್ರಗಳು ಸಹ ಉಂಟಾಗಬಹುದು. ಕಲೆಗಳನ್ನು ತೆಗೆದುಹಾಕಲು, ಸ್ಪಾಂಜ್ ಮತ್ತು ಡಿಶ್ ಸೋಪ್ ಬಳಸಿ.

Whats_app_banner