ಕುಕ್ಕರ್ ಸೀಟಿ ಹೊಡೆದಾಗ ದಾಲ್ ನೀರೆಲ್ಲಾ ಹೊರಬರುತ್ತಿದೆಯೇ: ಈ ಸಮಸ್ಯೆ ತಪ್ಪಿಸಲು ಇಲ್ಲಿದೆ ಟಿಪ್ಸ್
Nov 16, 2024 09:44 AM IST
ಕುಕ್ಕರ್ ಸೀಟಿ ಹೊಡೆದಾಗ ದಾಲ್ ನೀರೆಲ್ಲಾ ಹೊರಬರುತ್ತಿದೆಯೇ: ಈ ಸಮಸ್ಯೆ ತಪ್ಪಿಸಲು ಇಲ್ಲಿದೆ ಟಿಪ್ಸ್
ಅಕ್ಕಿ, ತರಕಾರಿ, ಬೇಳೆ-ಕಾಳುಗಳನ್ನು ಕುದಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸಲಾಗುತ್ತದೆ. ಕುಕ್ಕರ್ ಬಂದ ಮೇಲೆ ಅಡುಗೆ ಮನೆಯ ಕೆಲಸ ಸುಲಭ ಆಗಿದೆ. ಆದರೆ, ಕುಕ್ಕರ್ ಬಳಸುವಾಗ ಕೆಲವೊಮ್ಮೆ ಸೀಟಿ ಹಾಕಿದ ಜಾಗದಿಂದ ನೀರು ಉಕ್ಕಿ ಹರಿಯುತ್ತದೆ. ಕುಕ್ಕರ್ ಸೀಟಿ ಹೊಡೆದಾಗ ದಾಲ್ ನೀರು ಹೊರಬರದಂತೆ ತಡೆಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗಂತೂ ಅಡುಗೆ ಮನೆಯಲ್ಲಿ ಎಲ್ಲರೂ ಪ್ರೆಶರ್ ಕುಕ್ಕರ್ ಬಳಸುತ್ತಿದ್ದಾರೆ. ಇದನ್ನು ಬಳಸುವುದರಿಂದ ಅವರ ಕೆಲಸ ತುಂಬಾ ಸುಲಭವಾಗುತ್ತದೆ. ಅನ್ನ, ತರಕಾರಿ, ಬೇಳೆ-ಕಾಳುಗಳು ಬೇಗನೆ ಬೇಯುವುದರಿಂದ ಅಡುಗೆ ಕೆಲಸಗಳು ಸರಾಗವಾಗಿ ಬಹಳ ಬೇಗನೆ ಮುಗಿಯುತ್ತದೆ. ಹೀಗಾಗಿ ಇಂದು ಬಹುತೇಕ ಮಂದಿ ಕುಕ್ಕರ್ ಅನ್ನ ಬಳಸುತ್ತಿದ್ದಾರೆ. ಆದರೆ, ಕುಕ್ಕರ್ ಬಳಕೆದಾರರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ಅಥವಾ ಅಕ್ಕಿ ಬೇಯಿಸುವಾಗ ನೀರು ಹೊರಬರುವ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಾರೆ. ಎರಡು, ಮೂರು ವಿಶಿಲ್ ಇದ್ದರಂತೂ ನೀರೆಲ್ಲಾ ಹೊರಬಂದು ಸ್ಟೌವ್ ಗಲೀಜಾಗುತ್ತದೆ. ಈ ರೀತಿ ನೀರು ಹೊರಬರುವುದರಿಂದ ದಾಲ್‌ನ ರುಚಿಯೂ ಬದಲಾಗುತ್ತದೆ.
ನೀವೂ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಹೆಚ್ಚು ತಲೆಬಿಸಿ ಮಾಡಿಕೊಳ್ಳಬೇಡಿ. ಹಳೆಯ ಕುಕ್ಕರ್‌ನಲ್ಲಿ ನೀವು ರುಚಿಕರವಾದ ದಾಲ್ ಅನ್ನು ಮಾಡಬಹುದು. ಬಾಣಸಿಗ ರಣವೀರ್ ಬ್ರಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನೇಕ ಪಾಕವಿಧಾನಗಳ ಜತೆಗೆ ಅಡುಗೆ ಸಲಹೆಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈ ವೇಳೆ ಕುಕ್ಕರ್‌ನಿಂದ ದಾಲ್ ನೀರು ಬರದಂತೆ ಹೇಗೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕುಕ್ಕರ್‌ನಿಂದ ದಾಲ್ ನೀರು ಬರದಂತೆ ಹೀಗೆ ನೋಡಿಕೊಳ್ಳಿ
ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಅಥವಾ ಬೇಳೆಕಾಳುಗಳನ್ನು ಬೇಯಿಸುವಾಗ ಅನೇಕ ಬಾರಿ ಅದರ ನೀರು ಕುಕ್ಕರ್‌ನಿಂದ ಹೊರಬರಲು ಪ್ರಾರಂಭಿಸುತ್ತದೆ. ನೀವು ಅಡುಗೆ ಮಾಡುವಾಗಲೂ ಇದೇ ರೀತಿ ಆಗಿದ್ದರೆ, ದಾಲ್ ಅಥವಾ ಅಕ್ಕಿ ನೀರಿಗೆ ಸ್ವಲ್ಪ ತುಪ್ಪ ಸೇರಿಸಿ ಮತ್ತು ಸೀಟಿಯ ಸುತ್ತಲೂ ತುಪ್ಪವನ್ನು ಅನ್ವಯಿಸಿ. ಈ ಸಲಹೆಯನ್ನು ಅನುಸರಿಸುವುದರಿಂದ ಒತ್ತಡದ ಕುಕ್ಕರ್‌ನಿಂದ ನೀರು ಸೋರಿಕೆಯಾಗುವುದನ್ನು ತಡೆಯುತ್ತದೆ.
ಕುಕ್ಕರ್‌ನಲ್ಲಿ ಅಕ್ಕಿ ಅಥವಾ ಬೇಳೆ ಬೇಯಿಸುವಾಗ, ಕುಕ್ಕರ್‌ಗೆ ಹೆಚ್ಚು ನೀರು ಹಾಕಬೇಡಿ. ಅಗತ್ಯವಿರುವಷ್ಟು ಮಾತ್ರ ನೀರು ಹಾಕಿ. ಹೆಚ್ಚು ನೀರು ಹಾಕುವುದರಿಂದ ಕುಕ್ಕರ್‌ನಿಂದ ನೀರು ಸೋರಿಕೆಯಾಗಬಹುದು. ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಬೇಡಿ. ಮಧ್ಯಮ ಉರಿಯಲ್ಲಿ ಬೇಯಿಸಿ. ಹೆಚ್ಚಿನ ಉರಿಯಲ್ಲಿ ಅಡುಗೆ ಮಾಡುವುದರಿಂದ ಕುಕ್ಕರ್ ಸೋರಿಕೆಯಾಗುತ್ತದೆ. ಹೀಗಾಗಿ ಯಾವಾಗಲೂ ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ.
ಕುಕ್ಕರ್ ಸೀಟಿಯನ್ನು ಪರಿಶೀಲಿಸಿ
ಕುಕ್ಕರ್‌ನಿಂದ ನೀರು ಹೊರಬಂದ ನಂತರ ಸೀಟಿಯನ್ನು ಪರಿಶೀಲಿಸುವುದು ಸಹ ಅಗತ್ಯ. ಕುಕ್ಕರ್ ಸೀಟಿಯಲ್ಲಿ ಆಹಾರವು ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ. ಹೀಗಾದಾಗ ಸೀಟಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಸೀಟಿ ಸರಿಯಾಗಿ ಕೆಲಸ ಮಾಡದಿದ್ದರೂ ದಾಲ್ ನೀರು ಸೋರಿಕೆಯಾಗುತ್ತದೆ.
ಮೇಲೆ ತಿಳಿಸಿದ ಟಿಪ್ಸ್‌ಗಳನ್ನು ಅನುಸರಿಸಿದರೆ ಕುಕ್ಕರ್‌ನಿಂದ ನೀರು ಹೆಚ್ಚು ಹೊರಬರದಂತೆ ತಡೆಯಬಹುದು. ಕೆಲಮೊಬ್ಬರು ಆಹಾರಗಳನ್ನು ಬೇಯಿಸಿದ ನಂತರ ಕುಕ್ಕರ್ ಸೀಟಿ ತೆಗೆಯದೆ ಹಾಗೆಯೇ ತೊಳೆಯುತ್ತಾರೆ. ಇದರಿಂದ ಸೀಟಿ ಒಳಗೆ ಆಹಾರಗಳು ಬ್ಲಾಕ್ ಆಗುತ್ತವೆ. ಕೆಲವೊಮ್ಮೆ ಇದು ಕುಕ್ಕರ್ ಬ್ಲಾಸ್ಟ್‌ಗೂ ಕಾರಣವಾಗಬಹುದು. ಈ ರೀತಿಯ ಘಟನೆಗಳು ಕೆಲವೆಡೆ ನಡೆದಿವೆ. ಕುಕ್ಕರ್ ಸೀಟಿ ತೆಗೆದು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಕುಕ್ಕರ್ ಮುಚ್ಚಳವನ್ನು ಸಹ ಚೆನ್ನಾಗಿ ತೊಳೆಯಬೇಕು. ಈ ರೀತಿ ಮುನ್ನೆಚ್ಚರಿಕೆ ವಹಿಸುವುದರಿಂದ ಆಗಬಹುದಾದ ಅನಾಹುತ ತಪ್ಪಲು ಸಾಧ್ಯ.
ವಿಭಾಗ