logo
ಕನ್ನಡ ಸುದ್ದಿ  /  ಜೀವನಶೈಲಿ  /  Christmas Gifts: ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿಯ ಕ್ರಿಸ್ಮಸ್ ಉಡುಗೊರೆ ನೀಡಿದರೆ ಸಖತ್ ಖುಷಿ ಪಡ್ತಾರೆ

Christmas Gifts: ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿಯ ಕ್ರಿಸ್ಮಸ್ ಉಡುಗೊರೆ ನೀಡಿದರೆ ಸಖತ್ ಖುಷಿ ಪಡ್ತಾರೆ

Raghavendra M Y HT Kannada

Dec 16, 2024 11:21 AM IST

google News

ಕ್ರಿಸ್ಮಸ್ ಹಬ್ಬದ ನಿಮಿತ್ತ ನಿಮ್ಮ ಪ್ರೀತಿಪಾತ್ರರಿಗೆ ಯಾವ ರೀತಿಯ ಉಡುಗೊರೆಗಳನ್ನು ಕೊಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

    • ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ವರ್ಷ ಕ್ರಿಸ್‌ಮಸ್ ಅನ್ನು ಹೆಚ್ಚು ವಿಶೇಷವಾಗಿಸಲು ಸ್ನೇಹಿತರು ಅಥವಾ ಸಂಬಂಧಿಕರಿಗೆ ಕೆಲವು ವಿಶೇಷ ಉಡುಗೊರೆಗಳನ್ನು ನೀಡಬಹುದು. ಗಿಫ್ಟ್ ಗಳಿಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ನಿಮಗಾಗಿ ಇಲ್ಲಿವೆ.
ಕ್ರಿಸ್ಮಸ್ ಹಬ್ಬದ ನಿಮಿತ್ತ ನಿಮ್ಮ ಪ್ರೀತಿಪಾತ್ರರಿಗೆ ಯಾವ ರೀತಿಯ ಉಡುಗೊರೆಗಳನ್ನು ಕೊಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.
ಕ್ರಿಸ್ಮಸ್ ಹಬ್ಬದ ನಿಮಿತ್ತ ನಿಮ್ಮ ಪ್ರೀತಿಪಾತ್ರರಿಗೆ ಯಾವ ರೀತಿಯ ಉಡುಗೊರೆಗಳನ್ನು ಕೊಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

ಭಾರತ ಸೇರಿದಂತೆ ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಆಚರಿಸುವ ಏಕೈಕ ಹಬ್ಬ ಕ್ರಿಸ್ಮಸ್ ಗೆ ಇನ್ನ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲೆಡೆ ಕ್ರಿಸ್ಮಸ್ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಚರ್ಚ್ ಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಕ್ರಿಶ್ಚಿಯನ್ ಸಮುದಾಯ ಹಬ್ಬದ ಸಿದ್ಧತೆಯಲ್ಲಿ ಮುಳುಗಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಂತೋಷದಿಂದ ಕಳೆಯುತ್ತಾರೆ. ಅನೇಕ ಜನರು ಕ್ರಿಸ್‌ಮಸ್‌ನಲ್ಲಿ ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಾರೆ. ಹೀಗಾಗಿ ವಿಶೇಷ ರೀತಿಯಲ್ಲಿ ಗಿಫ್ಟ್ ಗಳನ್ನು ಕೊಡಲೆಂದೇ ಒಂದಷ್ಟು ಹಣ, ಸಮಯವನ್ನು ಮೀಸಲಿಡುತ್ತಾರೆ. ನಾವು ಖರೀದಿಸುವ ಉಡುಗೊರೆ ಇತರರಿಗೆ ಉಪಯುಕ್ತವಾಗಿದ್ದರೆ ಉತ್ತಮ. ಯಾವಾಗಲೂ ನೆನಪಿರುವಂತಹ ಗಿಫ್ಟ್ ಗಳನ್ನು ಕೊಡಲು ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಯಾವ ಗಿಫ್ಟ್ ಕೊಡಬೇಕು ಎಂಬ ಗೊಂದಲ ಶುರುವಾಗುತ್ತದೆ. ಇಲ್ಲಿವೆ ಕೆಲವು ಕ್ರಿಸ್ಮಸ್ ಗಿಫ್ಟ್ ಐಡಿಯಾಗಳಿವೆ.

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಮೇಕ್ಅಪ್ ಅನ್ನು ಹೆಚ್ಚು ಇಷ್ಟಪಟ್ಟರೆ ಇದು ಖಂಡಿತವಾಗಿಯೂ ಅವರಿಗೆ ಉತ್ತಮ ಉಡುಗೊರೆಯಾಗುತ್ತದೆ. ಮಾರುಕಟ್ಟೆಯಲ್ಲಿ ಅನೇಕ ಬ್ರ್ಯಾಂಡ್‌ಗಳು ಕ್ರಿಸ್ಮಸ್‌ಗಾಗಿ ಅತ್ಯುತ್ತಮ ಉತ್ಪನ್ನಗಳೊಂದಿಗೆ ಬಂದಿವೆ. ಇದು ಕ್ರಿಸ್ಮಸ್ ಗೆ ಅತ್ಯುತ್ತಮ ಕೊಡುಗೆಯಾಗಿರುತ್ತದೆ. ನಿಮ್ಮಲ್ಲಿನ ಆರ್ಥಿಕ ಶಕ್ತಿಯ ಆಧಾರದ ಮೇಲೆ ಇವುಗಳನ್ನು ಖರೀದಿಸಬಹುದು. ನಿಮ್ಮ ಪ್ರೀತಿಪಾತ್ರರಿಗೆ ನೀವು ಮೇಕ್ಅಪ್ ಕಿಟ್ ಅನ್ನು ಉಡುಗೊರೆಯಾಗಿ ನೀಡಬಹುದು.

ಮನೆಯಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಮೇಣದಬತ್ತಿಗಳು ಅತ್ಯುತ್ತಮ ಕೊಡುಗೆಯಾಗಿದೆ. ಈ ಮೇಣದಬತ್ತಿಗಳು ಲ್ಯಾವೆಂಡರ್, ಮೊಗ್ರಾ, ಗುಲಾಬಿ, ವೆನಿಲ್ಲಾ ಹಾಗೂ ಚಾಕೊಲೇಟ್‌ನಂತಹ ವಿವಿಧ ಪರಿಮಳಗಳಲ್ಲಿ ಲಭ್ಯವಿದೆ. ಇದು ಮನೆಯ ವಾತಾವರಣವನ್ನು ಆಹ್ಲಾದಕರಗೊಳಿಸುತ್ತದೆ. ಈ ಉಡುಗೊರೆ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ.

ಸಿಹಿತಿಂಡಿ ಇಲ್ಲದೆ ಯಾವುದೇ ಹಬ್ಬ ಪೂರ್ಣವಾಗುವುದಿಲ್ಲ. ಅದು ಎಲ್ಲರಿಗೂ ಗೊತ್ತಿರುವಂತ ವಿಚಾರ. ಈ ಕ್ರಿಸ್‌ಮಸ್‌ನಲ್ಲಿ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಒಂದು ಬಾಕ್ಸ್ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಅವರ ಕ್ರಿಸ್‌ಮಸ್ ಆಚರಣೆಯ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.

ನಿಮ್ಮ ನೆಚ್ಚಿನ ಪುಸ್ತಕವನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಇದು ಅವರಿಗೂ ತುಂಬಾ ಉಪಯುಕ್ತವಾಗಬಹುದು. ಪುಸ್ತಕಗಳನ್ನು ಓದುವುದು ಒಳ್ಳೆಯ ಅಭ್ಯಾಸ. ಯಾವ ವಿಷಯ ಚೆನ್ನಾಗಿದೆ ಎಂದು ಟಿಪ್ಪಣಿ ಬರೆದು ಅದೇ ಪುಸ್ತಕದಲ್ಲಿ ಹಾಕಿದರೆ ಉತ್ತಮ.

ಈ ಬಾರಿಯ ಕ್ರಿಸ್‌ಮಸ್‌ನಲ್ಲಿ ಯಾರಿಗಾದರೂ ಉಡುಗೊರೆಯನ್ನು ನೀಡಲು ಪ್ಲಾನ್ ಮಾಡುತ್ತಿದ್ದರೆ ಸ್ಮಾರ್ಟ್ ಸ್ಪೀಕರ್ ಕೂಡ ಉತ್ತಮ ಆಯ್ಕೆಯಾಗಿದೆ. ಈ ಗಿಫ್ಟ್ ನಿಮ್ಮನ್ನು ನೆನಪಿಸುತ್ತದೆ. ಇತರ ಗೃಹೋಪಯೋಗಿ ವಸ್ತುಗಳನ್ನು ಹಬ್ಬಕ್ಕೆ ಉಡುಗೊರೆಯಾಗಿ ನೀಡಬಹುದು.

ಸ್ಮಾರ್ಟ್‌ವಾಚ್‌ಗಳು ಜೀವನದಲ್ಲಿ ಫಿಟ್‌ನೆಸ್ ರಿಮೈಂಡರ್ ಸಾಧನಗಳಾಗಿವೆ. ಇವು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಗೆಟುಕುವಂತಿದೆ. ಸ್ಮಾರ್ಟ್ ವಾಚ್ ಫಿಟ್‌ನೆಸ್ ಟ್ರ್ಯಾಕಿಂಗ್, ಹೃದಯ ಬಡಿತ ಮಾನಿಟರಿಂಗ್ ಮತ್ತು ಮುನ್ಸೂಚನೆಗಳಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ. ಕ್ರಿಸ್‌ಮಸ್ ದಿನದಂದು ನೀವು ನೀಡಲು ಇದನ್ನು ಉತ್ತಮ ಕೊಡುಗೆಯಾಗಿದೆ.

ವಿವಿಧ ಬಗೆಯ ದಿಂಬುಗಳು, ಎಲ್ಇಡಿ ದೀಪಗಳು ಮತ್ತು ಟೀ ಕಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಿಮ್ಮ ಪ್ರೀತಿಪಾತ್ರರ ಫೋಟೋಗಳನ್ನು ನೀವು ಅವುಗಳ ಮೇಲೆ ಮುದ್ರಿಸಬಹುದು. ಎರಡರಿಂದ ಮೂರು ಗಂಟೆಗಳಲ್ಲಿ ಉಡುಗೊರೆ ನಿಮಗೆ ಸಿದ್ಧವಾಗಲಿದೆ. ನೀವು ಯಾವುದೇ ಸಂದೇಶವನ್ನು ಉಡುಗೊರೆಯಾಗಿ ಬರೆಯಬಹುದು. ಪ್ರತಿಯೊಬ್ಬರೂ ಖಂಡಿತವಾಗಿಯೂ ಅದನ್ನು ಇಷ್ಟಪಡುತ್ತಾರೆ.

(ಗಮನಿಸಿ: ಕೆಲವೊಂದು ಮಾಧ್ಯಮಗಳ ಮತ್ತು ವರದಿಗಳನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ