logo
ಕನ್ನಡ ಸುದ್ದಿ  /  ಜೀವನಶೈಲಿ  /  ನವಜಾತ ಶಿಶುವಿಗೆ ಮಸಾಜ್ ಮಾಡುವುದರ ಪ್ರಯೋಜನವೇನು: ಮಗುವಿಗೆ ಮಸಾಜ್ ಮಾಡುವ ಸರಿಯಾದ ಮಾರ್ಗ ಯಾವುದು, ಇಲ್ಲಿದೆ ಮಾಹಿತಿ

ನವಜಾತ ಶಿಶುವಿಗೆ ಮಸಾಜ್ ಮಾಡುವುದರ ಪ್ರಯೋಜನವೇನು: ಮಗುವಿಗೆ ಮಸಾಜ್ ಮಾಡುವ ಸರಿಯಾದ ಮಾರ್ಗ ಯಾವುದು, ಇಲ್ಲಿದೆ ಮಾಹಿತಿ

Priyanka Gowda HT Kannada

Oct 14, 2024 08:04 AM IST

google News

ನವಜಾತ ಶಿಶುವಿನ ಮಸಾಜ್‌ ಮಾಡುವುದರ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ.

  • ನವಜಾತ ಶಿಶುವಿನ ಮಸಾಜ್‌ ಮಾಡುವುದರ ಪ್ರಯೋಜನಗಳು ಏನೇನು ಎಂಬುದು ನಿಮಗೆ ತಿಳಿದಿದೆಯೇ. ಉತ್ತಮ ಆರೋಗ್ಯದಿಂದ ಗುಣಮಟ್ಟದ ನಿದ್ದೆ ಪಡೆಯುವವರೆಗೆ ಮಗುವಿಗೆ ಮಸಾಜ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ನವಜಾತ ಶಿಶುವಿನ ಮಸಾಜ್‌ ಮಾಡುವುದರ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ.
ನವಜಾತ ಶಿಶುವಿನ ಮಸಾಜ್‌ ಮಾಡುವುದರ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ. (Canva)

ಮಗು ಜನಿಸಿದ ಒಂದು ವಾರಕ್ಕೆಲ್ಲಾ ನವಜಾತ ಶಿಶುಗಳಿಗೆ ಅಜ್ಜಿಯಂದಿರ ಎಣ್ಣೆ ಮಸಾಜ್ ಶುರುವಾಗುತ್ತದೆ. ಭಾರತೀ.ರು ಬಹಳಷ್ಟು ಹಿಂದಿನಿಂದಲೂ ನವಜಾತ ಶಿಶುಗಳಿಗೆ ಎಣ್ಣೆ ಮಸಾಜ್ ಮಾಡಿಕೊಂಡು ಬರುತ್ತಿದ್ದಾರೆ. ಈ ಸಾಂಪ್ರದಾಯಿಕ ವಿಧಾನವು ನವಜಾತ ಶಿಶುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಗು ಜನಿಸಿದ ಆರನೇ ದಿನದಿಂದ 3 ರಿಂದ 4 ವರ್ಷಗಳವರೆಗೆ ಮಕ್ಕಳಿಗೆ ಮಸಾಜ್ ಮಾಡಲಾಗುತ್ತದೆ. ಕೆಲವರು ಒಂದು ವರ್ಷಕ್ಕೆ ನಿಲ್ಲಿಸುವವರು ಇದ್ದಾರೆ. ಸಾಮಾನ್ಯವಾಗಿ, ಆಲಿವ್, ಬಾದಾಮಿ, ತೆಂಗಿನೆಣ್ಣೆ ಅಥವಾ ಶುದ್ಧ ಸಾಸಿವೆ ಎಣ್ಣೆಯನ್ನು ಮಕ್ಕಳಿಗೆ ಮಸಾಜ್ ಮಾಡಲು ಬಳಸಲಾಗುತ್ತದೆ. ಶಿಶುಗಳಿಗೆ ಸರಿಯಾದ ಎಣ್ಣೆಯನ್ನು ಆರಿಸುವುದರ ಜೊತೆಗೆ, ಮಸಾಜ್‍ಗೆ ಸೂಕ್ತ ವಿಧಾನವನ್ನು ಅಳವಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ. ಮಸಾಜ್ ಮಾಡುವ ನಿಯಮಗಳು ಮತ್ತು ಮಗುವಿಗೆ ಅದರಿಂದ ಸಿಗುವ ಪ್ರಯೋಜನಗಳು ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಮಸಾಜ್ ಎಂದರೇನು?

ಮಸಾಜ್ ಎನ್ನುವುದು ತೈಲ ಹಚ್ಚಿ, ದೇಹದ ಸ್ನಾಯುಗಳನ್ನು ಕೈಗಳಿಂದ ಒತ್ತುವ ಪ್ರಕ್ರಿಯೆಯಾಗಿದೆ. ಒತ್ತಡವನ್ನು ನಿವಾರಿಸಲು, ವಿಶ್ರಾಂತಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಮಸಾಜ್ ಅನ್ನು ಅರೋಮಾಥೆರಪಿ ಸೇರಿದಂತೆ ವಿವಿಧ ವಿಧಾನಗಳಲ್ಲಿ ಮಾಡಬಹುದು.

ನವಜಾತ ಶಿಶುವಿಗೆ ಮಸಾಜ್ ಮಾಡುವ ಪ್ರಯೋಜನಗಳು

ಮಸಾಜ್ ಪ್ರಕ್ರಿಯೆಯು ಮಗುವಿನ ದೈಹಿಕ ಬೆಳವಣಿಗೆಯೊಂದಿಗೆ ಅನೇಕ ಭಾವನಾತ್ಮಕ ಅಂಶಗಳೊಂದಿಗೆ ಸಂಬಂಧಿಸಿದೆ. 2021 ರಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ, ಮಕ್ಕಳಲ್ಲಿ ಮಸಾಜ್ ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ:

- ಮಸಾಜ್ ಮಾಡುವುದರಿಂದ ಶಿಶುಗಳ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

- ಇದು ಕೈ ಮತ್ತು ಕಾಲುಗಳಲ್ಲಿ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ರಕ್ತದ ಹರಿವನ್ನು ಸುಧಾರಿಸುತ್ತದೆ

- ಇದು ಶಿಶುಗಳು ಚೆನ್ನಾಗಿ ನಿದ್ದೆ ಮಾಡಲು ಸಹ ಸಹಾಯ ಮಾಡುತ್ತದೆ.

- ನವಜಾತ ಶಿಶುವಿನೊಂದಿಗೆ ನಂಬಿಕೆ ಮತ್ತು ಸಂವಹನವನ್ನು ಬೆಳೆಸಲು ಪೋಷಕರಿಗೆ ಸಹಾಯ ಮಾಡುತ್ತದೆ. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಇದು ಚರ್ಮದ ಮೇಲೆ ಪದರವನ್ನು ರೂಪಿಸುತ್ತದೆ ಮತ್ತು ಅದನ್ನು ರಕ್ಷಿಸುತ್ತದೆ.

- ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳ ಹರಿವನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟದ ಮಾದರಿಗಳನ್ನು ಮತ್ತು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

- ಶಿಶುಗಳಲ್ಲಿ ಅನಿಲ ಸಮಸ್ಯೆ, ಸೆಳೆತ, ಉದರಶೂಲೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಗೂ ಪರಿಹಾರವಾಗಿದೆ.

- ಒಟ್ಟಾರೆ ಮಗುವಿನ ಬೆಳವಣಿಗೆಗೆ ಮಸಾಜ್ ಕೊಡುಗೆ ನೀಡುತ್ತದೆ.

ಮೇಲೆ ತಿಳಿಸಿದ ಪ್ರಯೋಜನಗಳ ಮೂಲಕ, ಶಿಶುಗಳ ಒಟ್ಟಾರೆ ಬೆಳವಣಿಗೆಯಲ್ಲಿ ಮಸಾಜ್ ಸಹಾಯಕವಾಗಿದೆ ಎಂಬುದನ್ನು ಸಾಬೀತುಪಡಿಸಬಹುದು. 2023 ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಇದು ಪೋಷಕರ ಬಾಂಧವ್ಯದ ಅರ್ಥವನ್ನು ಉತ್ತೇಜಿಸುತ್ತದೆ. ತಮ್ಮ ಮಗುವನ್ನು ಕಾಳಜಿ ವಹಿಸುವ ಮತ್ತು ಪೋಷಿಸುವ ಬಯಕೆಯನ್ನು ಉತ್ತೇಜಿಸುತ್ತದೆ. ಅಲ್ಲದೆ, ತಮ್ಮ ಮಗುವನ್ನು ಉತ್ತಮವಾಗಿ ನಿಭಾಯಿಸಬಲ್ಲೆವು ಮತ್ತು ಜೀವನದ ಜವಾಬ್ದಾರಿಗೆ ಸಿದ್ಧರಾಗಿದ್ದೇವೆ ಎಂಬ ವಿಶ್ವಾಸವನ್ನು ನೀಡುತ್ತದೆ.

ಮಸಾಜ್ ಮಾಡಲು ಸರಿಯಾದ ಮಾರ್ಗ

- ದಪ್ಪ ಎಣ್ಣೆಯ ಬದಲಿಗೆ ಹಗುರವಾದ ಎಣ್ಣೆಯನ್ನು ಬಳಸಬೇಕು ಏಕೆಂದರೆ ಇದು ಚರ್ಮದಿಂದ ಸುಲಭವಾಗಿ ಹೀರಲ್ಪಡುತ್ತದೆ.

- ಮಸಾಜ್ ಸಮಯದಲ್ಲಿ ಮಗು ಶಾಂತವಾಗಿರಬೇಕು ಮತ್ತು ಎಚ್ಚರವಾಗಿರಬೇಕು.

- ಮಸಾಜ್ ಮಾಡುವಾಗ, ಮಗುವಿನೊಂದಿಗೆ ಮಾತನಾಡುತ್ತಿರಬೇಕು ಅಥವಾ ಲಾಲಿ ಹಾಡಿ ಮಗುವನ್ನು ಖುಷಿಪಡಿಸಬೇಕು.

- ಮಗುವಿಗೆ ಮಸಾಜ್ ಮಾಡುವ ಮೊದಲು ಉಗುರುಗಳನ್ನು ಕತ್ತರಿಸಿ, ಕೈಗಳಿಂದ ಆಭರಣಗಳನ್ನು ತೆಗೆದುಹಾಕಿ.

- ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ ನಂತರ ಮಸಾಜ್ ಮಾಡಿ.

- ಅವಸರದಲ್ಲಿ ಎಂದಿಗೂ ಮಸಾಜ್ ಮಾಡಬೇಡಿ, ಎಣ್ಣೆ ಬಿಸಿ ಇರಬಾರದು.

- ಕೃತಕ ತೈಲ ಮತ್ತು ಲೋಷನ್ ಅನ್ನು ಬಳಸಬೇಡಿ.

- ಮಸಾಜ್ ಮಾಡಿದ ಸುಮಾರು ಎರಡು ಗಂಟೆಗಳ ನಂತರ ಮಗುವನ್ನು ಸ್ನಾನ ಮಾಡಿಸಿ.

- ಸ್ನಾನದ ನೀರು ಸ್ವಲ್ಪ ಉಗುರುಬೆಚ್ಚಗಾಗಿ ಇದ್ದರೆ ಸಾಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ