ಮಗು ಎತ್ತರ ಆಗ್ತಿಲ್ಲ ಅಂತ ಚಿಂತೆ ಮಾಡ್ಬೇಡಿ, ಈ 5 ಬೀಜಗಳನ್ನು ಆಹಾರದಲ್ಲಿ ಸೇರಿಸಿ; ಉದ್ದ ಬೆಳೆಯುವ ಜತೆ ಆರೋಗ್ಯವೂ ಸುಧಾರಿಸುತ್ತೆ
ಕೆಲವು ಮಕ್ಕಳು ವಯಸ್ಸಿಗೆ ತಕ್ಕಂತೆ ಎತ್ತರಕ್ಕೆ ಬೆಳೆಯುವುದಿಲ್ಲ. ಇದು ಪೋಷಕರ ಚಿಂತೆಗೆ ಕಾರಣವಾಗುತ್ತದೆ. ಇದಕ್ಕಾಗಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ವಸ್ತುಗಳನ್ನು ತಂದು ನೀಡುತ್ತಾರೆ. ಆದರೂ ಮಕ್ಕಳು ಉದ್ದವಾಗುತ್ತಿಲ್ಲ ಅಂದ್ರೆ ಈ 5 ಬೀಜಗಳನ್ನು ಅವರ ಆಹಾದಲ್ಲಿ ಸೇರಿಸಿ ನೋಡಿ.
ಮಕ್ಕಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಹೊಂದಿಲ್ಲ ಅಂದ್ರೆ ಪೋಷಕರು ಚಿಂತೆ ಮಾಡುವುದು ಸಹಜ. ಅದಕ್ಕಾಗಿ ವೈದ್ಯರ ಬಳಿ ಸಲಹೆ ಪಡೆದು ಔಷಧಿಗಳನ್ನು ನೀಡುತ್ತಾರೆ. ಕೆಲವೊಮ್ಮೆ ಮನೆಮದ್ದುಗಳನ್ನು ಕೊಡುತ್ತಾರೆ. ಆದರೂ ಮಕ್ಕಳು ಎತ್ತರ ಬೆಳೆಯುವುದಿಲ್ಲ. ಮಕ್ಕಳ ಕುಳ್ಳಗೆ ಆದರೆ ಎನ್ನುವ ಭಯ ಪೋಷಕರನ್ನು ಕಾಡುತ್ತಿರುತ್ತದೆ.
ಎತ್ತರವು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ, ಇದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಆದರೆ ಎತ್ತರವಾಗಿ ಬೆಳೆಸುವುದು ಅಥವಾ ಮಕ್ಕಳ ಎತ್ತರವಾಗಿ ಬೆಳೆಯುವುದು ಪೋಷಕರು ಅಥವಾ ಮಕ್ಕಳ ಕೈಯಲ್ಲಿ ಇರುವುದಿಲ್ಲ. ದೇಹದ ಹಾರ್ಮೋನ್‌ಗಳ ಮೇಲೆ ಇದು ಅವಲಂಬಿತವಾಗಿರುತ್ತದೆ. ಆದರೆ ಪೋಷಕರು ಬಾಲ್ಯದಿಂದಲೇ ಮಕ್ಕಳ ಆಹಾರದ ವಿಚಾರದಲ್ಲಿ ಒಂದಿಷ್ಟು ಗಮನ ಹರಿಸಿದರೆ ಹಾಗೂ ಈ ಕೆಲವು ವಸ್ತುಗಳನ್ನು ಅವರ ಆಹಾರಕ್ರಮದಲ್ಲಿ ಸೇರಿಸುವುದರಿಂದ ಮಗುವಿನ ಬೆಳವಣಿಗೆ ವೃದ್ಧಿಯಾಗುತ್ತದೆ. ಮಗು ತಾನಾಗಿಯೇ ಎತ್ತರವಾಗಿ ಬೆಳೆಯುತ್ತದೆ. ಮಗು ಎತ್ತರವಾಗಿ ಬೆಳೆಯಲು ಸಹಾಯ ಮಾಡುವ 5 ಬೀಜಗಳು ಇಲ್ಲಿವೆ ನೋಡಿ.
ಚಿಯಾ ಬೀಜಗಳು
ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಚಿಯಾ ಬೀಜಗಳು ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಬಾಲ್ಯದಿಂದಲೂ ಮಕ್ಕಳಿಗೆ ಚಿಯಾ ಬೀಜಗಳನ್ನು ವಿವಿಧ ರೂಪದಲ್ಲಿ ಸೇವಿಸುವಂತೆ ಮಾಡಿದರೆ, ಅದರ ಸಕಾರಾತ್ಮಕ ಪರಿಣಾಮವು ಅವರ ಎತ್ತರ ಮತ್ತು ಆರೋಗ್ಯ ಎರಡರ ಮೇಲೂ ಕಂಡುಬರುತ್ತದೆ. ಈ ಆರೋಗ್ಯಕರ ಬೀಜವನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಚರ್ಮವು ಹೊಳೆಯುತ್ತದೆ.
ಸೋಯಾಬೀನ್ ಬೀಜಗಳು
ಸೋಯಾಬೀನ್ ನಮ್ಮ ದೇಹಕ್ಕೆ ತುಂಬಾ ಆರೋಗ್ಯಕರ ಎಂದು ನೀವು ಕೇಳಿರಬೇಕು. ಇದು ಹೆಚ್ಚಿನ ಪ್ರಮಾಣದ ಪ್ರೊಟೀನ್, ಕಾರ್ಬೋಹೈಡ್ರೇಟ್‌ಗಳು, ನಾರಿನಾಂಶ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರೊಂದಿಗೆ ಎತ್ತರವನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ. ಮಕ್ಕಳ ಉತ್ತಮ ಬೆಳವಣಿಗೆಗಾಗಿ, ಅವರು ದಿನಕ್ಕೆ ಕನಿಷ್ಠ 40 ಗ್ರಾಂ ಸೋಯಾಬೀನ್ ಬೀಜಗಳನ್ನು ಸೇವಿಸಬೇಕು.
ಎಳ್ಳು
ಎಳ್ಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಹಲವು ವಿಧಗಳಲ್ಲಿ ತಿನ್ನಬಹುದು. ಇದಲ್ಲದೆ, ಎಳ್ಳಿನ ಎಣ್ಣೆಯನ್ನು ಆಹಾರದಲ್ಲಿಯೂ ಬಳಸಲಾಗುತ್ತದೆ. ಎಳ್ಳಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ, ಇದು ದೇಹವನ್ನು ಬಲಪಡಿಸುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಎಳ್ಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಎಳ್ಳನ್ನು ನಿಯಮಿತವಾಗಿ ಸೇವಿಸುವುದರಿಂದ ಎತ್ತರವೂ ಹೆಚ್ಚಾಗುತ್ತದೆ.
ಕುಂಬಳಕಾಯಿ ಬೀಜಗಳು
ಕುಂಬಳಕಾಯಿಯನ್ನು ಬಹುತೇಕರು ತಮ್ಮ ಆಹಾರಕ್ರಮದಲ್ಲಿ ವಿವಿಧ ರೂಪಗಳಲ್ಲಿ ಬಳಸುತ್ತಾರೆ. ಆದರೆ ಕುಂಬಳಕಾಯಿ ಬೀಜಗಳ ಪ್ರಯೋಜನಗಳ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ವಾಸ್ತವವಾಗಿ, ಕುಂಬಳಕಾಯಿ ಬೀಜಗಳು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ, ಇದು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಇದಲ್ಲದೆ, ಕುಂಬಳಕಾಯಿ ಬೀಜಗಳು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಗಸೆ ಬೀಜಗಳು
ಅಗಸೆಬೀಜದಲ್ಲಿ ಪ್ರೊಟೀನ್, ನಾರಿನಾಂಶ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಹೇರಳವಾಗಿ ಕಂಡುಬರುತ್ತವೆ. ಇದು ನಮ್ಮ ದೇಹ, ತ್ವಚೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದಲ್ಲದೆ, ಬೆಳೆಯುವ ವಯಸ್ಸಿನ ಮಕ್ಕಳಿಗೆ ಅಗಸೆ ಬೀಜವು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸಲು ಅಥವಾ ಅದರ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದಾಗಲಿ, ಎರಡೂ ವಿಧಾನಗಳು ತುಂಬಾ ಪ್ರಯೋಜನಕಾರಿ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮಕ್ಕಳ ದೈಹಿಕ ಬೆಳವಣಿಗೆಯು ವೇಗವಾಗಿ ನಡೆಯುತ್ತದೆ.
ಏನೇ ತಿನ್ನಿಸಿದ್ರೂ ಮಕ್ಕಳು ಎತ್ತರವಾಗಿ ಬೆಳೆಯುತ್ತಿಲ್ಲ ಎಂದು ದೂರುವವರು ಈ ಬೀಜಗಳನ್ನು ಮಕ್ಕಳಿಗೆ ವಿವಿಧ ಆಹಾರ ಖಾದ್ಯಗಳ ಜೊತೆ ಬೆರೆಸಿ ತಿನ್ನಿಸಬೇಕು. ಇದರಿಂದ ಮಕ್ಕಳು ನಿಧಾನಕ್ಕೆ ಎತ್ತರಕ್ಕೆ ಬೆಳೆಯಲು ಆರಂಭಿಸುತ್ತಾರೆ. ಬಾಲ್ಯದಲ್ಲೇ ಮಕ್ಕಳ ಎತ್ತರವನ್ನ ಗಮನಿಸಿ ಕುಳ್ಳಗಿದ್ದಾರೆ ಅನ್ನಿಸಿದರೆ ಈ ಬೀಜಗಳನ್ನು ಸೇವಿಸಲು ಕೊಡಿ.