logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ಮಗಳು ಹಸ್ತ ಮೈಥುನದ ಕೆಟ್ಟ ಚಟಕ್ಕೆ ಬಿದ್ದಿದ್ದಾಳೆ, ಮ್ಯಾಮ್ 'ಹೆಣ್ಣು ಮತ್ತು ಹಸ್ತ ಮೈಥುನ'; ಗಿರಿಜಾ ಹೆಗಡೆ ಬರಹ

Parenting: ಮಗಳು ಹಸ್ತ ಮೈಥುನದ ಕೆಟ್ಟ ಚಟಕ್ಕೆ ಬಿದ್ದಿದ್ದಾಳೆ, ಮ್ಯಾಮ್ 'ಹೆಣ್ಣು ಮತ್ತು ಹಸ್ತ ಮೈಥುನ'; ಗಿರಿಜಾ ಹೆಗಡೆ ಬರಹ

Raghavendra M Y HT Kannada

Apr 27, 2024 07:34 PM IST

'ಹೆಣ್ಣು ಮತ್ತು ಹಸ್ತ ಮೈಥುನ' ಬಗ್ಗೆ ಗಿರಿಜಾ ಹೆಗಡೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬರಹವನ್ನು ಪೋಷಕರು ಓದಬೇಕು.

  • ಹದಿಹರೆಯದ ಮಕ್ಕಳಲ್ಲಿ ಕಂಡು ಬರುವ ಸಹಜ ವಿದ್ಯಮಾನಗಳು ಕೆಲವು ಸಲ ಅಸಹಜ ಎನ್ನುವಂತೆ ಬಿಂಬಿತವಾಗಿ ಆಕ್ಷೇಪಕ್ಕೆ ಗುರಿಯಾಗುತ್ತವೆ. ಇಂಥ ಪ್ರಕರಣಗಳಲ್ಲಿ ಮಕ್ಕಳು ಅವಮಾನ, ಕೀಳರಿಮೆ ಅನುಭವಿಸುತ್ತಾರೆ. ಹಸ್ತ ಮೈಥುನದ ಬಗ್ಗೆ ಹೆಣ್ಣುಮಕ್ಕಳು ಮತ್ತು ನಮ್ಮ ಸಮಾಜ ತಿಳಿದಿರಬೇಕಾದ ಹಲವು ಸಂಗತಿಗಳು ಈ ಬರಹದಲ್ಲಿದೆ.

'ಹೆಣ್ಣು ಮತ್ತು ಹಸ್ತ ಮೈಥುನ' ಬಗ್ಗೆ ಗಿರಿಜಾ ಹೆಗಡೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬರಹವನ್ನು ಪೋಷಕರು ಓದಬೇಕು.
'ಹೆಣ್ಣು ಮತ್ತು ಹಸ್ತ ಮೈಥುನ' ಬಗ್ಗೆ ಗಿರಿಜಾ ಹೆಗಡೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬರಹವನ್ನು ಪೋಷಕರು ಓದಬೇಕು.

ಹೆಣ್ಣು ಮತ್ತು ಹಸ್ತ ಮೈಥುನ: ವಯೋ ಸಹಜವಾಗಿ ದೇಹದಲ್ಲಿ ಆಗುವ ಬದಲಾವಣೆಗಳು, ಹದಿಹರೆಯದ ಕುತೂಹಲಗಳನ್ನು ಮಡಿ-ಮೈಲಿಗೆ ದೃಷ್ಟಿಕೋನದಿಂದ ನೋಡಿದರೆ ಅನಾಹುತಗಳೇ ಆಗುತ್ತವೆ. ಈ ವಯಸ್ಸಿನ ಮಕ್ಕಳಿಗೆ ಬೇಕಾದ್ದು ತಿಳಿವಳಿಕೆ ಮತ್ತು ಜ್ಞಾನ. ಅವರಲ್ಲಿ ಜಾಗೃತಿ ಮೂಡಿಸಿದರೆ ಎಷ್ಟೋ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಆದರೆ ತಿಳಿವಳಿಕೆ ಕೊರತೆಯಿಂದಾಗಿ ಮಕ್ಕಳ ವರ್ತನೆಯನ್ನು ಅರ್ಥೈಸುವಲ್ಲಿ ಹೆತ್ತವರು ಸೋಲುತ್ತಾರೆ. ಸಮಾಜದ ಇತರರಂತೆ ಅವರೂ ಸಹ ತಮ್ಮ ಮಕ್ಕಳನ್ನೇ ಹೀಗಳೆದು ಮಾನಸಿಕ ಹಿಂಸೆ ಕೊಡುತ್ತಾರೆ. ಇಂಥ ನಡವಳಿಕೆಗಳಿಂದ ಕಂಗಾಲಾದ ಹೆಣ್ಣುಮಗಳೊಬ್ಬಳ ಬದುಕನ್ನು ಸುಧಾರಣೆಯ ಹಾದಿಗೆ ತಂದ ವಿವರ ಈ ಕಥನದಲ್ಲಿದೆ. ಗಿರಿಜಾ ಹೆಗಡೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ ಈ ಪೋಸ್ಟ್‌ ಇದೀಗ ವೈರಲ್ ಆಗಿದೆ. ಸುಮಾರು 1,000 ಮಂದಿ ಈ ಪೋಸ್ಟ್ ಲೈಕ್ ಮಾಡಿದ್ದರೆ, 150 ಮಂದಿ ಕಾಮೆಂಟ್ ಮಾಡಿದ್ದಾರೆ. 250 ಮಂದಿ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನ ಮೌಲಿಕ ಬರಹವು ಹೆಚ್ಚು ಜನರನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಯಥಾವತ್ತಾಗಿ ಮರು ಪ್ರಕಟಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

World Lupus Day: ದೇಹದ ಅಂಗಾಂಗಗಳನ್ನು ಕಾಡುವ ಲೂಪಸ್‌; ಏನಿದು ವಿಚಿತ್ರ ಕಾಯಿಲೆ, ಇದರಿಂದ ಪಾರಾಗೋದು ಹೇಗೆ?

West Nile Fever: ಕೇರಳದಾದ್ಯಂತ ವೆಸ್ಟ್‌ ನೈಲ್‌ ಜ್ವರದ ಭೀತಿ; ಈ ಜ್ವರ ಹರಡುವ ಬಗೆ, ರೋಗಲಕ್ಷಣಗಳ ಬಗ್ಗೆ ತಿಳಿಯಿರಿ

ಮಿಲನವೆಂಬ ಶುಷ್ಕ ದೈಹಿಕ ಕರ್ತವ್ಯ: ನಿಮಗೂ ಹೀಗನ್ನಿಸುತ್ತಿದ್ದರೆ ಗಂಡ-ಹೆಂಡತಿ ಮಧ್ಯೆ 'ಪ್ರೊಟೆಸ್ಟ್ ಪೊಲ್ಕಾ' ಬಂದಿದೆ ಎಂದು ಅರ್ಥ -ಕಾಳಜಿ

ದೃಷ್ಟಿ ಚುರುಕಾಗುವುದರಿಂದ ನೆನಪಿನ ಶಕ್ತಿ ಹೆಚ್ಚುವವರೆಗೆ; ಮಾವಿನಹಣ್ಣು ತಿನ್ನುವುದರಿಂದ ಮಕ್ಕಳಿಗಾಗುವ ಪ್ರಯೋಜನಗಳಿವು

ಹೆಣ್ಣು ಮತ್ತು ಹಸ್ತ ಮೈಥುನ ಕುರಿತು ಗಿರಿಜಾ ಹೆಗಡೆ ಬರಹ

ಈ ಪೋಸ್ಟ್ ಖಂಡಿತಾ ಮಡಿವಂತರು ಓದುವಂಥದ್ದಲ್ಲ"ಹೆಣ್ಣು ಮತ್ತು ಹಸ್ತ ಮೈಥುನ" "ನಮ್ಮ ಮಗಳು ಹಸ್ತ ಮೈಥುನದ ಕೆಟ್ಟ ಚಟಕ್ಕೆ ಬಿದ್ದಿದ್ದಾಳೆ, ಮ್ಯಾಮ್...ಹೇಳ್ಕೊಳಕ್ಕೆ ತುಂಬಾ ನಾಚ್ಕೆ ಆಗತ್ತೆ. ಈಗಿತ್ತಲಾಗಿ ತುಂಬಾ ಮಂಕಾಗಿರ್ತಾಳೆ... ಅವ್ಳಿಗೆ ಆ ಭಾಗದಲ್ಲಿ ಏನೋ ನೋವಾಗಿದೆ ಅನ್ಸತ್ತೆ..ಡಾಕ್ಟರ್ ಹತ್ರ ಹೋಗೋಣ ಅಂದ್ರೂ ಬರಲ್ಲ... ನೀವಾದರೂ ಮಾತಾಡಿ ಮ್ಯಾಮ್ pls... ಹೇಗೆ ಬಿಡಿಸೋದು, ಏನು ಮಾಡೋದು ಗೊತ್ತಾಗ್ತಾ ಇಲ್ಲ".. ತಾಯಿ ನನ್ನತ್ರ ಮಾತಾಡ್ತಾ ಇದ್ರೆ, ತಂದೆ ನನ್ನ ಚೇoಬರ್ ಹೊರಗಡೆ, ಒಳಗಡೆ ನಡೀತಿರಬಹುದಾದ ಮಾತುಕತೆಯ ವಿಷಯದ ಸಲುವಾಗಿ ತುಂಬಾ ಆತಂಕ ಮತ್ತು ನಾಚಿಕೆಯಿಂದ ತಲೆ ತಗ್ಗಿಸಿ ಕೂತಿದ್ರು.

ವಿವರಗಳನ್ನು ತಿಳಿದುಕೊಂಡು, ಅವರ ಮಗಳ ಹತ್ತಿರ ಇಂಥ ಒಂದು ತುಂಬಾ ಪ್ರೈವೇಟ್ ಅನ್ನಬಹುದಾದ ವಿಷಯದ ಕುರಿತು ನಾನು ಮಾತನಾಡಬಹುದು ಎಂದು ಒಂದು ಪರ್ಮಿಶನ್ ಲೆಟರ್ ಬರೆಸಿಕೊಂಡು ಸೈನ್ ಹಾಕಿಸಿಕೊಂಡು ಕಳಿಸಿಕೊಟ್ಟೆ.

ಒಂಭತ್ತನೇ ಕ್ಲಾಸಿನಲ್ಲಿರುವ ಆ ಮಗುವನ್ನು ಗಮನಿಸುತ್ತಾ ಬಂದೆ. ಪ್ರತಿ ಪೀರಿಯಡ್ ಬ್ರೇಕ್ ನಲ್ಲಿ ಟಾಯ್ಲೆಟ್ ಗೆ ಹೋಗೋಕೆ ಪರ್ಮಿಶನ್ ಕೇಳ್ತಾಳೆ ಎಂಬ ಕಂಪ್ಲೇಂಟ್ ಟೀಚರ್ಸ್ ಕಡೆಯಿಂದ ಬಂತು. ಗೇಮ್ಸ್ , ಫಿಸಿಕಲ್ ಎಜುಕೇಷನ್ ಪೀರಿಯಡ್ ತಪ್ಪಿಸಿ ಹುಷಾರಿಲ್ಲ ಎಂದು ಕೂರುವ ಬಗ್ಗೂ ಗಮನಕ್ಕೆ ಬಂತು. ಗೆಳತಿಯರೆಲ್ಲ ಅವಳ ಜೊತೆ ಮಾತು ಬಿಟ್ಟ ಬಗ್ಗೂ ಸುದ್ದಿ ಬಂತು. ಒಂದು ವಾರದ ನಂತರ ಲಂಚ್ ಅವರ್ ನಲ್ಲಿ ಊಟದ ಡಬ್ಬಿ ತಗೊಂಡು ನನ್ನ ಚೇoಬರ್ಗೆ ಬಾ, ಇಬ್ಬರೂ ಊಟ ಮಾಡೋಣ ಅಂದೆ, ಮಗು ಡಬ್ಬಿಯ ಜೊತೆ ಬಂತು.

ನಿದ್ದೆಗೆಟ್ಟ ಮುಖ, ಕಳಾಹೀನ ಗುಳಿಬಿದ್ದ ಕಣ್ಣು...ನಳನಳಿಸಿ ನಲಿಯಬೇಕಾದ ವಯದಲ್ಲಿ ಮುಖದಲ್ಲಿ ಆತಂಕ ಮನೆಮಾಡಿತ್ತು... "ಸೋನು..( ಹೆಸರು ಬದಲಿಸಿದೆ) ... ಹೇಳು ಮಗಳೇ...ಎಂತಾ ಆಗಿದೆ ನಿಂಗೆ...ಯಾಕೆ ಪದೇ ಪದೇ ಟಾಯ್ಲೆಟ್ ಗೆ ಪರ್ಮಿಶನ್? Any health problems?" ತಲೆದಡವಿ ಕೇಳಿದೆ.....ಬಂತು ನೋಡಿ ಅಳುವಿನ ಮಹಾ ಪ್ರವಾಹ...

ಅಳಲು ಬಿಟ್ಟು ಕೈಹಿಡಿದು ತಬ್ಬಿ ಕೂತೆ...

" ಮ್ಯಾಮ್...ನಾನು ಕೆಟ್ಟೋಳು..ನನ್ನ ಯಾರೂ ಮಾತಾಡ್ಸಲ್ಲ..."

"ಯಾಕೆ ಪುಟ್ಟ, ಅಂಥದ್ದೇನು ಮಾಡಿದೆ?"

"ನನ್ನ ಅಮ್ಮ ನಿಮ್ಗೆ ಎಲ್ಲಾ ಹೇಳಿರ್ತಾಳೆ ನಂಗೊತ್ತು..." "ಹುo ಸೋನು... ಅಮ್ಮ ನೀ ಮಾಡೋದನ್ನ ಹೇಳಿದ್ರು...ಅದ್ರಲ್ಲಿ ಕೆಟ್ಟದ್ದೇನಿಲ್ಲ...ಆದ್ರೆ ಅದೇ ಜಾಸ್ತಿ ಆಗಿ ನಿನ್ನ ಗಮನವೆಲ್ಲ ಅದರ ಕಡೆಯೇ ಹೋಗಿ, ನೀನು ಊಟ - ನಿದ್ದೆ ಬಿಟ್ಟು ನಿನ್ನ ಆರೋಗ್ಯ ಕೆಡಿಸ್ಕೋಬಾರದಲ್ಲ. They are worried about you spending a lot of time locking yourself in your room...your teachers are worried about your visit to toilet too many times... What is happening with you? "

" ಮ್ಯಾಮ್ , ಅಲ್ಲಿ ಗಾಯ ಆಗಿದೆ...ಉರಿಯಿಂದಾಗಿ I hv to wash myself often... My freinds saw me rubbing myself in the classroom...I hv become a laughing stock... I can't go to games... ನಂಗೆ ತೊಡೆಯ ಮಧ್ಯೆ ಗಾಯ ಇರೋದ್ರಿಂದ ಸರಿಯಾಗಿ ನಡೆಯೋಕಾಗಲ್ಲ...but ನಂಗೆ ಹಾಗೆ ಮಾಡ್ಕೋಬೇಕು ಅಂತ ಅನಿಸಿದ ಕೂಡಲೇ ಎಲ್ಲೇ ಇದ್ರೂ ಒಂದು ಜಾಗ ಹುಡುಕ್ಕೊಂಡು ಮಾಡಲೇಬೇಕು ಅನ್ಸತ್ತೆ... ನಂಗೆ ಈಗ ನನ್ನ ಮೇಲೆ ಕಂಟ್ರೋಲ್ ಇಲ್ಲ... ಅಷ್ಟು ಉರಿ ಆದ್ರೂ ಅದು ಬೇಕು ಅನ್ಸತ್ತೆ...ಇದು ಹುಡುಗಿಯಾಗಿ ನಾನು ಮಾಡೋದು ತಪ್ಪು".... ಅಳು, ಬಿಕ್ಕಳಿಕೆಗಳ ಮಧ್ಯವೇ ಬಂತು ಇದೆಲ್ಲ ವಿಷಯ. ತಬ್ಬಿ ಕೂತೆ...ತಲೆ ಸವರಿ, ಹಣೆಗೆ ಮುತ್ತು ಕೊಟ್ಟೆ...ಅಳು ಭೋರ್ಗರೆಯಿತು...

"What did you insert sonu? ಎಂತಾ ಹಾಕ್ಕೊಂಡೆ ?"

ಅಳುವಿನ ಮಧ್ಯೆ ಮುಜುಗರದಿಂದ ಉತ್ತರ ಬಂತು

"ಕ್ಯಾರೆಟ್... ಒಳಗಡೆ ಸುಲಿದ ಹಾಗೆ ಆಗಿ ಊದ್ಕೊಂಡಿದೆ" .

ಮುಂದೆ ಹಲವು ದಿನಗಳ ಕಾಲ ಹಸ್ತ ಮೈಥುನದ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿ, ಆ ಮಗು ಒಂದು ಕಂಟ್ರೋಲಿಗೆ ಬಂದು, ಗೆಳತಿಯರ ಹತ್ತಿರವೂ ಆ ವಿಷಯದ ಬಗ್ಗೆ ಆಪ್ತವಾಗಿ ಮಾತಾಡಿ, ಅವರೆಲ್ಲರೂ ಅವಳನ್ನು ಮತ್ತೆ ಮಾತಾಡಿಸಿ, ಅವಳ ಕಳೆದ ಡಿಗ್ನಿಟಿ ಮತ್ತೆ ಮರಳಿಬಂತು.

ಹಸ್ತ ಮೈಥುನ ಅಂದ ತಕ್ಷಣ ಅದು ಗಂಡಸರಿಗೆ ಸಂಬಂಧಿಸಿದ ವಿಷಯ ಎನ್ನುವ ಧೋರಣೆ ನಮ್ಮದು. ಮದುವೆಯವರೆಗೂ ಹೆಣ್ಣುಮಕ್ಕಳು ತಮ್ಮ sexual need ಅನ್ನು ಮುಚ್ಚಿಡುವುದು, ಅದರ ಬಗ್ಗೆ ತಮಗೇನೂ ಗೊತ್ತೇ ಇಲ್ಲ ಎನ್ನುವುದು ಎಲ್ಲಾ ಕಾಮನ್ ನಟನೆ. ಈಗ ಕಾಲ ಬದಲಾಗಿದೆ. ಹೆಣ್ಣುಮಕ್ಕಳು ಕೂಡ ತಮ್ಮ ದೈಹಿಕ ಅಗತ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಹೆಣ್ಣಿನ sexual need ಎನ್ನುವುದು ಒಂದು ಹಾಸ್ಯ ಮಾಡುವ ಸಂಗತಿಯೇ ಆಗಿ ಮುಂದುವರೆದಿದೆ... ಒಂದೋ ಚೀಪ್ ಪಾರ್ನುಗಳಲ್ಲಿ ಕಾಮಕ್ಕಾಗಿ ಹಪಹಪಿಸುವ ಆಂಟಿ, ಭಾಭಿಗಳಾಗಿ ಚಿತ್ರಿಸುತ್ತಾರೆ ಇಲ್ಲ, ಕಾಮದ ಕಲ್ಪನೆಯೂ ತಾರದ ದೇವಿ ತಾಯಿ ಅಮ್ಮ ಎಂಬ ಪಟ್ಟ ಕಟ್ಟುತ್ತಾರೆ.

ಗಂಡು ಮಕ್ಕಳ ಬಗ್ಗೆ, ಅವರ search history ಬಗ್ಗೆ ಇರುವ ಕಾಳಜಿ, ಹೆಣ್ಣುಮಕ್ಕಳ ಮೇಲೂ ಇರಲಿ. ಮತ್ತೂ ಆ ಕುತೂಹಲ ಹದಿಹರಯದ ಸಹಜ ಭಾಗ ಎನ್ನುವುದೂ ತಿಳಿದಿರಲಿ. ಹುಡುಗಿಯಾಗಿ ನೀನು ಹಾಗೆ ಮಾಡ್ತೀಯ? ನಿನ್ನ ( ನಮ್ಮ) ಮರ್ಯಾದೆಯ ಗತಿ ಏನು ಎಂದು ಪಾಲಕರು ಕೇಳದಿರಲಿ. ಆತ್ಮೀಯತೆ, ಆಪ್ತ ಮಾತುಕತೆ, ಮಕ್ಕಳೊಟ್ಟಿಗೆ ಕಳೆಯುವ ಕ್ವಾಲಿಟಿ ಟೈಮ್ ಅನ್ನು, ದುಡ್ಡು, ಆಟಿಕೆ, ದುಬಾರಿ ಗಿಫ್ಟ್ ಗಳ ರೂಪದಲ್ಲಿ ರಿಪ್ಲೇಸ್ ಮಾಡದಿರಲಿ.

ಕೊನೆಯದಾಗಿ, ಹೆಣ್ಣು ಮಕ್ಕಳ ತಂದೆ ತಾಯಿಯರಲ್ಲಿ ಒಂದು ಬಿನ್ನಹ

ಹೆಣ್ಣಿಗೂ ಗಂಡಿನಷ್ಟೇ ದೈಹಿಕ ಅಗತ್ಯಗಳಿವೆ. ಗಂಡನ್ನು ಕಾಡುವಷ್ಟೇ ಹೆಣ್ಣನ್ನೂ ಕಾಡುತ್ತದೆ ಕಾಮ. "ಮಿಡಲ್ ಫಿಂಗರ್ ನಲ್ಲಿ ಇವಳಿಗೆ ಉಗುರು ಯಾಕೆ ಚಿಕ್ಕದಿದೆ ಹೇಳಿ " ಎಂಬ ಅರ್ಥ ಬರುವ ಚಿತ್ರಗಳನ್ನು ಹಾಕಿ ಹೆಣ್ಣಿನ sexual need ನ ಉಡಾಫೆ ಮಾಡಲಾಗತ್ತೆ. ಅದು ನಗುವವರ ಕರ್ಮ! ಆದರೆ ನಿಮ್ಮ ಹೆಣ್ಣುಮಗು ಹಸ್ತ ಮೈಥುನದಲ್ಲಿ ತೊಡಗಿಕೊಂಡಿದ್ದರೆ, ಗಂಡುಮಗುವನ್ನು ಯಾವ ರೀತಿ ತಾತ್ಸಾರವಿಲ್ಲದೆ ಹಸ್ತ ಮೈಥುನ ಗಂಡಿಗೆ ಸಹಜ ಎನ್ನುವ ರೀತಿಯಲ್ಲಿ ನಡೆದುಕೊಳ್ತೀರೋ, ಹೆಣ್ಣು ಮಕ್ಕಳಿಗೂ ಅದು ಸಹಜ ಎನ್ನುವ ಕಾಳಜಿಯಲ್ಲಿ ನಡೆಸಿಕೊಳ್ಳಿ. ಅದು ಅವರ self respect ಅನ್ನು ಉಳಿಸುತ್ತದೆ.

(Last but most important thing - masturbation could have saved a number of marriages too...nothing wrong in it... Male or female, the need is the same)‘ಓದಿದ್ದಕ್ಕೆ ಥ್ಯಾoಕ್ಸ್

ವಿಭಾಗ

    ಹಂಚಿಕೊಳ್ಳಲು ಲೇಖನಗಳು