logo
ಕನ್ನಡ ಸುದ್ದಿ  /  ಜೀವನಶೈಲಿ  /  Etf Investment: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸುವಿರಾ, ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು, ಇಲ್ಲಿದೆ ವಿವರ

ETF Investment: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸುವಿರಾ, ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು, ಇಲ್ಲಿದೆ ವಿವರ

Praveen Chandra B HT Kannada

Aug 12, 2023 05:00 PM IST

google News

ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು

    • What is ETF Investment: ಇಟಿಎಫ್‌ ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌. ಷೇರುಪೇಟೆ ರೀತಿಯಲ್ಲಿ ಇವು ವ್ಯವಹರಿಸುತ್ತವೆ. ಹೀಗಾಗಿ ಇವು ಮ್ಯೂಚುಯಲ್‌ ಫಂಡ್‌ಗಳಿಗಿಂತ ಭಿನ್ನವಾಗಿ ವ್ಯವಹಾರ ನಡೆಸುತ್ತವೆ. ದೃಢೀಕರಿಸಲ್ಪಟ್ಟ ಷೇರು ವಿನಿಮಯ ಕೇಂದ್ರ ನೋಂದಾಯಿತ ಬ್ರೋಕ್‌ ಮೂಲಕ ಸಾಮಾನ್ಯವಾಗಿ ಇಟಿಎಫ್‌ ಖರೀದಿ ಅಥವಾ ಮಾರಾಟ ಮಾಡಲಾಗುತ್ತದೆ.
ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು
ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು

ಇಟಿಎಫ್‌ ಹೂಡಿಕೆ ಬಗ್ಗೆ ಬಹುತೇಕರಿಗೆ ತಿಳಿದಿರಬಹುದು. ಇದು ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನ ಸಂಕ್ಷಿಪ್ತ ರೂಪ. ನಿಮ್ಮ ಹಣವು ಸ್ವತ್ತಾಗಿ, ಕಮಾಡಿಟಿಯಾಗಿ ಕಾರ್ಯನಿರ್ವಹಿಸುತ್ತದೆ. ಷೇರುಗಳಂತೆ ಇಟಿಎಫ್‌ಗಳನ್ನು ಷೇರುಪೇಟೆಯಲ್ಲಿ ಟ್ರೇಡ್‌ ಮಾಡಲಾಗುತ್ತದೆ. ಇಲ್ಲಿ ಹೂಡಿಕೆದಾರರು ಈ ಇಟಿಎಫ್‌ ಅನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಷೇರುಪೇಟೆಯ ಇಟಿಎಫ್‌ ಟ್ರೇಡಿಂಗ್‌ ದಿನಪೂರ್ತಿ ಈ ಖರೀದಿ ಅಥವಾ ಮಾರಾಟ ಪ್ರಕ್ರಿಯೆ ಮಾಡಬಹುದು.

ಇಟಿಎಫ್‌ನಲ್ಲಿ ಹೂಡಿಕೆ- ಪ್ರಯೋಜನಗಳೇನು?

ಕಡಿಮೆ ಶುಲ್ಕ: ಈ ಇಟಿಎಫ್‌ ಫಂಡ್‌ಗಳು ಮ್ಯೂಚುಯಲ್‌ ಫಂಡ್‌ಗಳಿಗಿಂತ ಕಡಿಮೆ ಶುಲ್ಕ ಹೊಂದಿರುತ್ತವೆ. ಇಟಿಎಫ್‌ ಅನ್ನು ಪ್ಯಾಸಿವ್‌ ಆಗಿ ನಿರ್ವಹಿಸಲಾಗುತ್ತದೆ. ಷೇರು ಆಯ್ಕೆ ಮಾಡಲು ಮ್ಯಾನೇಜರ್‌ಗೆ ಯಾವುದೇ ಪಾವತಿ ಮಾಡುವ ಅಗತ್ಯವಿಲ್ಲ.

ಅತ್ಯುತ್ತಮ ಲಿಕ್ವಿಡಿಟಿ: ಮ್ಯೂಚುಯಲ್‌ ಫಂಡ್‌ಗಳಿಗಿಂತ ಹೆಚ್ಚು ಲಿಕ್ವಿಡ್‌ ಆಗಿ ಇಟಿಎಫ್‌ ಗುರುತಿಸಿಕೊಂಡಿದೆ. ಸುಲಭವಾಗಿ ಖರೀದಿ ಅಥವಾ ಮಾರಾಟ ಮಾಡಬಹುದು. ನಿಯಮಿತ ಷೇರುಗಳಂತೆ ಷೇರುಪೇಟೆಯಲ್ಲಿ ಖರೀದಿ ಅಥವಾ ಮಾರಾಟ ಮಾಡಬಹುದು.

ವೈವಿಧ್ಯೀಕರಣ: ಇಟಿಎಫ್‌ಗಳು ಬಹು ಸ್ವತ್ತುಗಳನ್ನು ಒಳಗೊಂಡಿರುವ ಸೂಚ್ಯಂಕವನ್ನು ಟ್ರ್ಯಾಕ್ ಮಾಡುವ ಮೂಲಕ ವೈವಿಧ್ಯೀಕರಣವನ್ನು ನೀಡುತ್ತವೆ. ಈ ವೈವಿಧ್ಯೀಕರಣವು ಒಟ್ಟಾರೆ ಹೂಡಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇಟಿಎಫ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಟಿಎಫ್‌ನಲ್ಲಿರುವ ಬಗೆಗಳು ಯಾವುವು

ಇಟಿಎಫ್‌ನಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ಕೆಲವು ಇಟಿಎಫ್‌ಗಳ ವಿವರ ಈ ಮುಂದಿನಂತೆ ಇದೆ.

ಇಂಡೆಕ್ಸ್‌ ಇಟಿಎಫ್‌ಗಳು: ನಿರ್ದಿಷ್ಟ ಸೂಚ್ಯಂಕದ ಕನ್ನಡಿಯಾಗಿ ಇವು ವರ್ತಿಸುತ್ತವೆ. ಉದಾಹರಣೆಗೆ ಎಸ್‌ಆಂಡ್‌ಪಿ 500 ಇಂಡೆಕ್ಸ್‌ ಅಥವಾ ಡೋಜಾನ್ಸ್‌ ಇಂಡಸ್ಟ್ರಿಯಲ್‌.

ಸಕ್ರಿಯವಾಗಿ ನಿರ್ವಹಿಸುವ ಇಟಿಎಫ್‌ಗಳು: ಸಕ್ರಿಯವಾಗಿ ನಿರ್ವಹಿಸಲಾದ ಇಟಿಎಫ್‌ಗಳಿಂದ ಉತ್ತಮ ಲಾಭ ತರಲು ವ್ಯವಸ್ಥಾಪಕರಿಂದ ಮೇಲ್ವಿಚಾರಣೆ ಮಾಡಲ್ಪಡುತ್ತವೆ.

ಕಮಾಡಿಟಿ ಇಟಿಎಫ್‌ಗಳು: ಚಿನ್ನ ಅಥವಾ ತೈಲದಂತಹ ಕಮಾಡಿಟಿಯ ಪರ್ಫಾಮೆನ್ಸ್‌ ಅನ್ನು ಈ ಕಮಾಡಿಟಿ ಇಟಿಎಫ್‌ಗಳು ಅನುಸರಿಸುತ್ತವೆ.

ಬಾಂಡ್‌ ಇಟಿಎಫ್‌ಗಳು: ಬಾಂಡ್‌ ಇಂಡೆಕ್ಸ್‌ ಆಗಿ ಕಾರ್ಯನಿರ್ವಹಿಸುತ್ತವೆ.

ಇಟಿಎಫ್‌ ಎಂದರೇನು?

ಇಟಿಎಫ್‌ ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌. ಷೇರುಪೇಟೆ ರೀತಿಯಲ್ಲಿ ಇವು ವ್ಯವಹರಿಸುತ್ತವೆ. ಹೀಗಾಗಿ ಇವು ಮ್ಯೂಚುಯಲ್‌ ಫಂಡ್‌ಗಳಿಗಿಂತ ಭಿನ್ನವಾಗಿ ವ್ಯವಹಾರ ನಡೆಸುತ್ತವೆ. ದೃಢೀಕರಿಸಲ್ಪಟ್ಟ ಷೇರು ವಿನಿಮಯ ಕೇಂದ್ರ ನೋಂದಾಯಿತ ಬ್ರೋಕ್‌ ಮೂಲಕ ಸಾಮಾನ್ಯವಾಗಿ ಇಟಿಎಫ್‌ ಖರೀದಿ ಅಥವಾ ಮಾರಾಟ ಮಾಡಲಾಗುತ್ತದೆ. ಇಟಿಎಫ್‌ ಯುನಿಟ್‌ ಅನ್ನು ಷೇರುಪೇಟೆಯಲ್ಲಿ ಲಿಸ್ಟ್‌ ಮಾಡಲಾಗುತ್ತದೆ. ಷೇರುಪೇಟೆಯ ಚಲನವಲನಗಳಿಗೆ ತಕ್ಕಂತೆ ಎನ್‌ಎವಿ ಬದಲಾಗುತ್ತದೆ. ಷೇರುಪೇಟೆಯಲ್ಲಿ ಮಾತ್ರ ಇವುಗಳನ್ನು ಲಿಸ್ಟ್‌ ಮಾಡುವುದರಿಂದ ಸಾಮಾನ್ಯ ಷೇರು ಫಂಡ್‌ ರೀತಿ ಇದನ್ನು ಖರೀದಿಸಲು ಸಾಧ್ಯವಿಲ್ಲ. ಎಕ್ಸ್‌ಚೇಂಜ್‌ ಮೂಲಕ ಖರೀದಿ ಅಥವಾ ಮಾರಾಟ ಮಾಡಲು ಯಾವುದೇ ಮಿತಿ ಇರುವುದಿಲ್ಲ. ಇಟಿಎಫ್‌ ಹೂಡಿಕೆದಾರರು ತಮಗೆ ಎಷ್ಟು ಬೇಕೋ ಅಷ್ಟು ಇಟಿಎಫ್‌ಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ