logo
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವ, ನಿಮಗೆಷ್ಟು ಧೈರ್ಯ ಎನ್ನುವುದನ್ನೂ ತೋರಿಸುತ್ತೆ

Personality Test: ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವ, ನಿಮಗೆಷ್ಟು ಧೈರ್ಯ ಎನ್ನುವುದನ್ನೂ ತೋರಿಸುತ್ತೆ

HT Kannada Desk HT Kannada

Apr 27, 2024 08:17 PM IST

ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವಕ್ಕೂ ಸೂಚಕ

    • ನೀವು ನಿಮ್ಮ ಟೂತ್‌ಪೇಸ್ಟ್‌ ಟ್ಯೂಬ್‌ ಹೇಗೆ ಬಳಸ್ತೀರಿ ಎನ್ನುವುದು ನಿಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವುದನ್ನೂ ಸೂಚಿಸುತ್ತದೆ. ಸಾಮಾನ್ಯವಾಗಿರುವ 5 ಟೂತ್‌ಪೇಸ್ಟ್‌ ಬಳಕೆಯ ಶೈಲಿಗಳ ವಿವರ ಇಲ್ಲಿದೆ. ನಿಮ್ಮ ಶೈಲಿ ಯಾವುದು ಯೋಚಿಸಿ, ಇಲ್ಲಿರುವ ವಿವರ ನಿಮ್ಮ ವ್ಯಕ್ತಿತ್ವಕ್ಕೆ ಹೊಂದುತ್ತಾ ಚೆಕ್ ಮಾಡಿಕೊಳ್ಳಿ.
ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವಕ್ಕೂ ಸೂಚಕ
ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವಕ್ಕೂ ಸೂಚಕ

ಟೂತ್‌ಪೇಸ್ಟ್ ಮತ್ತು ನಿಮ್ಮ ವ್ಯಕ್ತಿತ್ವ: ನಮ್ಮ ದಿನಚರಿಯ ಒಟ್ಟು ನಡವಳಿಕೆಗಳಲ್ಲಿ ಪ್ರಜ್ಞಾಪೂರ್ವಕ ಆಯ್ಕೆಗಳಿಗಿಂತಲೂ ಅಭ್ಯಾಸಗಳೇ ಹೆಚ್ಚು ಇರುತ್ತವೆ. ಒಂದು ದಿನದ ನಮ್ಮ ಎಲ್ಲ ಚಟುವಟಿಕೆಗಳ ಪೈಕಿ ಇಂಥ ಅಭ್ಯಾಸಗಳು ಶೇ 40 ರಷ್ಟು ನಡವಳಿಕೆಗಳಿಗೆ ಕಾರಣವಾಗುತ್ತವೆ. ಇಂಥ ಅಭ್ಯಾಸಗಳು ನಿಮ್ಮ ವ್ಯಕ್ತಿತ್ವದ ಬಗ್ಗೆಯೂ ಸಾಕಷ್ಟು ಗುಟ್ಟುಬಿಡುಕೊಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇಂಥ ನಡವಳಿಕೆಗಳೇ ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಇಂದಿನ ವರ್ತನೆಯನ್ನೂ ರೂಪಿಸಿರುತ್ತವೆ. 'ಅಭ್ಯಾಸಗಳು ಮನುಷ್ಯನನ್ನು ರೂಪಿಸುತ್ತವೆ' ಎನ್ನುವ ಮಾತು ಇಂದಿಗೂ, ಎಂದೆಂದಿಗೂ ನಿಜವೇ ಆಗಿದೆ.

ಟ್ರೆಂಡಿಂಗ್​ ಸುದ್ದಿ

Personality Test: ಯಾವ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ? ನಿಮ್ಮ ವ್ಯಕ್ತಿತ್ವದ ಜೊತೆ ಮೆದುಳಿನ ಸಾಮರ್ಥ್ಯ ತಿಳಿಸುತ್ತೆ ಈ ಚಿತ್ರ

Brain Teaser: 22=40, 81=97 ಆದ್ರೆ 89 = ಎಷ್ಟು? ಈ ಸುಲಭ ಗಣಿತಕ್ಕೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ?

ಯಾವ ದೇಶಕ್ಕೆ ಹೋದರೂ ಕರ್ಮ ತಪ್ಪಿದ್ದಲ್ಲ, ಯಾಕಂದ್ರೆ ಹಣೆಬರಹ ಅನ್ನೋದು ವಿಶ್ವವ್ಯಾಪಿ; ಐರೋಪ್ಯ ದೇಶಗಳ ನಂಬಿಕೆಗಳಿವು -ರಂಗ ನೋಟ

Mutton Tikka Biryani: ಒಂದೇ ರುಚಿಯ ಬಿರಿಯಾನಿ ತಿಂದು ಬೇಸರ ಆಗಿದ್ರೆ ಮಟನ್‌ ಟಿಕ್ಕಾ ಬಿರಿಯಾನಿ ಟ್ರೈ ಮಾಡಿ; ತಯಾರಿಸುವ ವಿಧಾನ ಇಲ್ಲಿದೆ

ಪ್ರತಿದಿನ ನಿಮ್ಮ ದಿನಚರಿಯ ಭಾಗವಾಗಿರುವ ಹಲವು ಅಭ್ಯಾಸಗಳು ನಿಮಗೇ ತಿಳಿಯದಂತೆ ನಿಮ್ಮ ವ್ಯಕ್ತಿತ್ವದ ಮಾದರಿಯನ್ನೂ ರೂಪಿಸುತ್ತವೆ. ಅಂಥದ್ದೇ ಒಂದು ಸರಳ ವಿಚಾರವನ್ನು ಇಂದು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಹಲ್ಲಿದ್ದವರೆಲ್ಲರೂ ಪ್ರತಿದಿನ ಹಲ್ಲುಜ್ಜುತ್ತಾರೆ ತಾನೆ. ಈ ವಾಕ್ಯ ಓದಿದ ತಕ್ಷಣ ನಿಮಗೂ ನಗು ಬಂತಾ? ಹಲ್ಲು ಕಾಣಿಸ್ತಿದೆ ನೋಡಿ. ಹಲ್ಲುಜ್ಜಲು ನೀವು ಬಳಸುವ ಟೂತ್‌ಪೇಸ್ಟ್‌ ಅನ್ನು ಹೇಗೆ ಹಿಂಡುತ್ತೀರಿ? ಇದೆಂಥಾ ಪ್ರಶ್ನೆ, ಅದರಲ್ಲೇನು ವಿಶೇಷ ಅಂದ್ರಾ?

ಟೂತ್‌ಪೇಸ್ಟ್‌ ಹಿಂಡುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವೂ ತಿಳಿಯುತ್ತೆ

1) ಮೇಲಿನಿಂದ ಹಿಸುಕುವುದು ನಿಮ್ಮ ಶೈಲಿಯಾಗಿದ್ದರೆ

ಟೂತ್‌ಪೇಸ್ಟ್‌ ಟ್ಯೂಬ್‌ ಅನ್ನು ಮೇಲಿನಿಂದ ಕ್ಯಾಪ್ ಕಡೆಗೆ ಹಿಸುಕುವುದು ನಿಮ್ಮ ಶೈಲಿಯಾಗಿದ್ದರೆ, ನಿಮ್ಮದು ಮೊಂಡುತನದ ಸ್ವಭಾವ ಎಂದು ಅರ್ಥ. ನಿಮಗೆ ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ತುಂಬಾ ಮುಖ್ಯ ಎನಿಸುತ್ತದೆ. ಏಕಾಗ್ರತೆಗೆ ಹೆಚ್ಚು ಗಮನ ಕೊಡುತ್ತೀರಿ. ನೀವು ಜನರನ್ನು ಸುಲಭವಾಗಿ ನಂಬುವುದಿಲ್ಲ. ನಿಮ್ಮ ಗುರಿಯನ್ನು ತಲುಪಲು ನಿಮಗೆ ಸಹಾಯ ಮಾಡಲು ಅಗತ್ಯವಿರುವ ವಿಧಾನಗಳನ್ನು ಬಳಸುತ್ತೀರಿ. ನಿಮ್ಮ ನಿರ್ಧಾರಗಳು, ಇಚ್ಛಾಶಕ್ತಿ ಪ್ರಬಲವಾಗಿದ್ದರೂ, ಸಿನಿಕತೆ ಇರುತ್ತದೆ. ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತೀರಿ. ಇತರರ ಮೇಲೆ ಅವಲಂಬಿತರಾಗಲು ಹಿಂಜರಿಯುತ್ತೀರಿ. ಆದರೆ ಅನಿವಾರ್ಯ ಸಂದರ್ಭದಲ್ಲಿ ಕುತಂತ್ರ ಮಾಡಲು ಹಿಂಜರಿಯುವುದಿಲ್ಲ. ನಿಮ್ಮ ಮುನ್ನಡೆಗಾಗಿ ಇತರರಿಗೆ ಸಿಗಬೇಕಾದ ಲಾಭವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು.

2) ಮಧ್ಯದಿಂದ ಹಿಸುಕುವುದು ನಿಮ್ಮ ಶೈಲಿಯಾಗಿದ್ದರೆ

ಟೂತ್‌ಪೇಸ್ಟ್‌ ಟ್ಯೂಬ್‌ ಅನ್ನು ಮಧ್ಯದಿಂದ ಹಿಸುಕುವುದು ನಿಮ್ಮ ಶೈಲಿಯಾಗಿದ್ದರೆ ನೀವು ಪ್ರಾಯೋಗಿಕ, ಸಕ್ರಿಯ ವ್ಯಕ್ತಿ ಎಂದು ಅರ್ಥ. ಆದರೆ ಆತುರ ತುಸು ಹೆಚ್ಚು. ಅಚ್ಚುಕಟ್ಟಾಗಿ ಬದುಕು ಸಂಘಟಿತ ವ್ಯಕ್ತಿತ್ವ ನಿಮ್ಮದಲ್ಲ. ಆದರೆ ಒಮ್ಮೆ ಸಮಸ್ಯೆ ಉದ್ಭವಿಸಿದರೆ, ನಿಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಿಹಾರವನ್ನು ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುತ್ತೀರಿ. ಮಾತು ತುಸು ಹೆಚ್ಚು ಎನಿಸುವಷ್ಟೇ ಆಡುತ್ತೀರಿ. ನೀವು ಸಾರ್ವಜನಿಕವಾಗಿ, ಜನರ ಮಧ್ಯೆ, ಜನರ ಗುಂಪಿನಲ್ಲಿ ಇರುವುದನ್ನು ಆನಂದಿಸುತ್ತೀರಿ. ನಿಮ್ಮ ಸ್ನೇಹಿತರ ಸಂಖ್ಯೆಯೂ ಹೆಚ್ಚು. ನಿಮ್ಮ ವೈಯಕ್ತಿಕ ಬದುಕು ಮತ್ತು ಗೆಳೆಯರ ನಡುವೆ ಭಾವನಾತ್ಮಕ ಸಮತೋಲನ ಸಾಧಿಸಲು ಪ್ರಯತ್ನಿಸುತ್ತೀರಿ.

3) ಟೂತ್‌ಪೇಸ್ಟ್ ಹಿಸುಕಿದರೂ ಅದರ ಆಕಾರ ಯಥಾವತ್ತು ಉಳಿಸಿಕೊಳ್ಳಲು ಆಸೆಪಡ್ತೀರಿ

ನೀವು ಇನ್ನೊಬ್ಬರ ವಿಚಾರಕ್ಕೆ ಹೋಗುವುದನ್ನು ಇಷ್ಟಪಡುವುದಿಲ್ಲ. ನಿಮ್ಮಷ್ಟಕ್ಕೆ ನೀವು ಇರಬೇಕು ಎನ್ನುವುದು ನಿಮ್ಮ ಮಂತ್ರ. ಕೆಲವರಿಗೆ ನಿಮ್ಮ ವರ್ತನೆಯು 'ಅತಿ' ಎನಿಸಬಹುದು. ಆದರೆ ವೈಯಕ್ತಿಕವಾಗಿ ನೀವು ಸೃಜನಶೀಲರು. ನಿಮ್ಮ ಆಲೋಚನೆಗಳು ನಿಮ್ಮ ಅಸ್ತಿತ್ವದ ಪ್ರತೀಕವಾಗಿರುತ್ತವೆ. ನೀವು ಸ್ವಭಾವತಃ ಮೃದು, ಸೌಮ್ಯ, ಸೌಹಾರ್ದ ಮನೋಭಾವದವರು. ಸಹನೆ ನಿಮ್ಮ ವ್ಯಕ್ತಿತ್ವದ ಇನ್ನೊಂದು ಮುಖ್ಯ ಗುಣವಾಗಿರುತ್ತದೆ. ಸಮಾಜ ಅಥವಾ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಏನು ಗಮನಿಸುತ್ತೀರೋ ಅಂಥವನ್ನು ಉಳಿದವರೊಂದಿಗೂ ಹಂಚಿಕೊಳ್ಳಲು ಇಷ್ಟಪಡುತ್ತೀರಿ.

4) ಟೂತ್‌ಪೇಸ್ಟ್‌ನ ಕೆಳಗಿನಿಂದ ಹಿಸುಕುವವರು ನೀವಾಗಿದ್ದರೆ

ನೀವು ಟೂತ್‌ಪೇಸ್ಟ್‌ ಅನ್ನು ಕೆಳಗಿನಿಂದ ಹಿಸುಕಿ, ಅದು ಮುಗಿದಂತೆ ಮಡಚುವ ಸ್ವಭಾವ ರೂಢಿಸಿಕೊಂಡಿದ್ದರೆ ನೀವು 'ಸ್ಪೆಷಲ್' ಎಂದು ಅರ್ಥ. ಟೂತ್‌ಪೇಸ್ಟ್‌ನ ಸದ್ಬಳಕೆಗೆ ಇದು ಅತ್ಯುತ್ತಮ ವಿಧಾನ. ಆದರೂ ಬಹುತೇಕ ಜನರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸುತ್ತಾರೆ. ಈ ಸ್ವಭಾವ ರೂಢಿಸಿಕೊಂಡಿದ್ದರೆ ನೀವು ಅತ್ಯಂತ ಸಂಘಟಿತ ವ್ಯಕ್ತಿ ಮತ್ತು ಪರ್ಫೆಕ್ಷನಿಸ್ಟ್ (ಪರಿಪೂರ್ಣತಾವಾದಿ) ಎಂದು ಅರ್ಥ. ಎಂಥದ್ದೇ ಪ್ರತಿಕೂಲ ಪರಿಸ್ಥಿತಿಯಲ್ಲಿದ್ದರೂ ನೀವು ತರ್ಕಬದ್ಧವಾಗಿ ಯೋಚಿಸುತ್ತೀರಿ. ವಿವೇಕಯುತವಾಗಿ ಆಲೋಚಿಸಿ ಸಮಸ್ಯೆ ಪರಿಹರಿಸುತ್ತೀರಿ. ಯಾವುದನ್ನೂ ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಕೆಲಸವನ್ನು ಪೂರ್ಣಗೊಳಿಸಲು ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುತ್ತೀರಿ. ಅತ್ಯಂತ ಎಚ್ಚರಿಕೆಯಿಂದ ತಯಾರಿ ಮಾಡಿಕೊಳ್ಳುತ್ತೀರಿ. ಸಂಘಟನೆಯೊಂದಿಗೆ ನೀವು ಅದೇ ರೀತಿಯ ಶಿಸ್ತುಬದ್ಧ ಜೀವನಶೈಲಿಯನ್ನು ನಡೆಸುತ್ತೀರಿ. ನೀವು ಸಾಕಷ್ಟು ಪ್ರಯತ್ನವನ್ನು ಮಾಡುತ್ತೀರಿ ಮತ್ತು ವಿಶ್ವಾಸಾರ್ಹ ವ್ಯಕ್ತಿ ಎಂದು ಅರ್ಥ.

5) ಟೂತ್‌ಪೇಸ್ಟ್‌ ಮಧ್ಯದಿಂದ ಹಿಸುಕುವವರು ನೀವಾಗಿದ್ದಾರೆ

ನೀವು ಟೂತ್‌ಪೇಸ್ಟ್ ಟ್ಯೂಬ್‌ ಅನ್ನು ಮಧ್ಯದಿಂದ ಹಿಂಡುವುದನ್ನು ರೂಢಿಸಿಕೊಂಡಿದ್ದರೆ ಆತುರದ ವ್ಯಕ್ತಿ ಎಂದು ಅರ್ಥ. ಅಚ್ಚುಕಟ್ಟಾಗಿ ಬದುಕುವ ಸಂಘಟಿತ ವ್ಯಕ್ತಿ ಅಲ್ಲದಿದ್ದರೂ ನಿಮ್ಮನ್ನು ಯಾರೂ ಸುಲಭವಾಗಿ ಮಣಿಸಲು ಸಾಧ್ಯವಾಗುವುದಿಲ್ಲ. ಸಮಸ್ಯೆ ಉದ್ಭವಿಸಿದಾಗ, ನೀವು ಅದಕ್ಕೆ ಬೆನ್ನು ತೋರಿ ಓಡುವುದಿಲ್ಲ. ಬದಲಿಗೆ ಎದೆಯೊಡ್ಡಿ ಪರಿಹರಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಗೆಳೆಯರ ಬಳಗವೂ ದೊಡ್ಡದಿರುತ್ತದೆ. ಭಾವನಾತ್ಮಕವಾಗಿ ಎಲ್ಲರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಯತ್ನಿಸುತ್ತೀರಿ. ಸಾಮಾಜಿಕವಾಗಿ ಉತ್ತಮ ಸಂವಹನ ನಿಮ್ಮ ಮತ್ತೊಂದು ಮುಖ್ಯ ಸಾಮರ್ಥ್ಯವಾಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು