logo
ಕನ್ನಡ ಸುದ್ದಿ  /  ಜೀವನಶೈಲಿ  /  Ramadan Special Drink : ರಂಜಾನ್ ಇಫ್ತಾರ್ ಕೂಟಕ್ಕೆ ಹೇಳಿ ಮಾಡಿಸಿದಂತಹ ರುಚಿ ರುಚಿಯಾದ ಪಾನೀಯಗಳಿವು; ತಯಾರಿಸುವುದು ಬಹಳ ಸಿಂಪಲ್‌

Ramadan Special Drink : ರಂಜಾನ್ ಇಫ್ತಾರ್ ಕೂಟಕ್ಕೆ ಹೇಳಿ ಮಾಡಿಸಿದಂತಹ ರುಚಿ ರುಚಿಯಾದ ಪಾನೀಯಗಳಿವು; ತಯಾರಿಸುವುದು ಬಹಳ ಸಿಂಪಲ್‌

HT Kannada Desk HT Kannada

Apr 04, 2024 07:18 AM IST

ರಂಜಾನ್‌ ವಿಶೇಷ ಪಾನೀಯಗಳು

  • Ramadan special drink recipes: ರಂಜಾನ್ ಹಬ್ಬಕ್ಕೂ ಮುನ್ನ ಮುಸ್ಲಿಂ ಭಾಂದವರು ಒಂದು ತಿಂಗಳ ಉಪವಾಸದಲ್ಲಿರುತ್ತಾರೆ. ಸೂರ್ಯಾಸ್ತದ ಬಳಿಕ ರೋಜಾ ಮುರಿದು ಇಫ್ತಾರ್ ಆಯೋಜಿಸುವ ಸಂದರ್ಭದಲ್ಲಿ ಮಾಡಬಹುದಾದ ಸರಳವಾದ ಹಾಗೂ ರುಚಿಕರವಾದ ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ರಂಜಾನ್‌ ವಿಶೇಷ ಪಾನೀಯಗಳು
ರಂಜಾನ್‌ ವಿಶೇಷ ಪಾನೀಯಗಳು

ರಂಜಾನ್‌ ವಿಶೇಷ ಪಾನೀಯಗಳು: ಮುಸ್ಲಿಂ ಬಾಂಧವರು ಸದ್ಯ ರಂಜಾನ್ ತಿಂಗಳ ಉಪವಾಸದಲ್ಲಿದ್ದಾರೆ. ರೋಜಾ ಆಚರಿಸುವ ಸಂದರ್ಭದಲ್ಲಿ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ಸೇವಿಸುವಂತಿಲ್ಲ. ದ್ರವ ರೂಪದ ಆಹಾರವನ್ನು ಕೂಡಾ ಸೇವಿಸುವಂತಿಲ್ಲ. ಮುಸ್ಸಂಜೆ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರೋಜಾ ಅಥವಾ ರಂಜಾನ್ ಉಪವಾಸವನ್ನು ಮುರಿಯುತ್ತಾರೆ. ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ರಾತ್ರಿ ಇಫ್ತಾರ್‌ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್ ನಾನಾ ರೀತಿಯ ಪಾನೀಯಗಳು ಹೀಗೆ ಸಾಕಷ್ಟು ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

Personality Test: ಚಿತ್ರದಲ್ಲಿ ಮೊದಲು ಕಂಡಿದ್ದೇನು? ನೀವು ನೇರ ಸ್ವಭಾವದವರಾ, ಮೌನಪ್ರೇಮಿಯೇ, ನಿಮ್ಮ ವ್ಯಕ್ತಿತ್ವ ತಿಳಿಸುವ ಚಿತ್ರವಿದು

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

ರೋಜಾ ಸಂದರ್ಭದಲ್ಲಿ ಇಡೀ ದಿನ ಮುಸ್ಲಿಮರು ಉಪವಾಸ ಇರುವುದರಿಂದ ಇಫ್ತಾರ್‌ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶ ಹೆಚ್ಚಿಸಲು ವಿವಿಧ ರೀತಿಯ ಪಾನೀಯಗಳನ್ನು ತಯಾರಿಸಿ ಕುಡಿಯುವುದು ಉತ್ತಮ. ಇಫ್ತಾರ್ ಕೂಟದಲ್ಲಿ ನೀವು ಮಾಡಬಹುದಾದ ರುಚಿ ರುಚಿಯಾದ ಹಾಗೂ ನೋಡಲೂ ಅತ್ಯಂತ ಮನಮೋಹಕ ಎನಿಸುವ ವಿವಿಧ ಪಾನೀಯಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

1. ಬ್ಲೂ ಮೂನ್ : ಹೆಸರೇ ಹೇಳುವಂತೆ ಈ ಪಾನೀಯವು ನೀಲಿ ಬಣ್ಣದಲ್ಲಿ ಇರುತ್ತದೆ. ಇವುಗಳನ್ನು ತಯಾರಿಸುವುದು ಹೇಗೆ..? ಬೇಕಾಗುವ ಸಾಮಗ್ರಿಗಳೇನು ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು

ಲಿಚಿ ಹಣ್ಣಿನ ರಸ 150 ಮಿಲೀ

ನಿಂಬು ರಸ 30 ಮಿಲೀ

ಮಾರುಕಟ್ಟೆಯಲ್ಲಿ ಸಿಗುವ ನೀಲಿ ಕುರಾಕೋ 60 ಮಿಲೀ

ಮಾರುಕಟ್ಟೆಗಳಲ್ಲಿ ಸಿಗುವ ಸಿಂಪಲ್ ಸಿರಪ್ 30 ಮಿಲೀ

ಮಾಡುವ ವಿಧಾನ : ಲಿಚಿ ಜ್ಯೂಸ್, ನಿಂಬೂ ರಸ , ನೀಲಿ ಕುರಾಕೋ ಹಾಗೂ ಸಿಂಪಲ್ ಸಿರಪನ್ನು ಒಂದು ಪಾತ್ರೆಗೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇವುಗಳನ್ನು ಈಗ ಗಾಜಿನ ಲೋಟಕ್ಕೆ ಹಾಕಿ ಅನಾನಸ್ ಹಣ್ಣಿನ ತುಂಡಿನಿಂದ ಲೋಟವನ್ನು ಅಲಂಕರಿಸಿ ಸವಿಯಲು ನೀಡಿ.

2. ಕಾಲಾ ನೂರ್ (ಕಪ್ಪು ವಜ್ರ) : ಇಫ್ತಾರ್ ಕೂಟದಲ್ಲಿ ತಯಾರಿಸಬಹುದಾದ ಮತ್ತೊಂದು ಬಗೆಯ ಜ್ಯೂಸ್ ಮಾಡುವ ವಿಧಾನ ಇಲ್ಲಿದೆ ನೋಡಿ

ಬೇಕಾಗುವ ಸಾಮಗ್ರಿಗಳು

ಬ್ಲಾಕ್ ಸಾಲ್ಟ್ 1 ಟೇಬಲ್ ಚಮಚ

ಅಡುಗೆಗೆ ಬಳಸುವ ಉಪ್ಪು 3 ಗ್ರಾಂ

ಹುರಿದ ಜೀರಿಗೆ ಪುಡಿ 1 ಗ್ರಾಂ

ಕಾಳು ಮೆಣಸು 2 ಗ್ರಾಂ

ನಿಂಬೆ ರಸ 20 ಮಿಲೀ

ರುಚಿ ಇರುವ ಸೋಡಾ 130 ಮಿಲೀ

ಮಾರುಕಟ್ಟೆಯಲ್ಲಿ ಸಿಗುವ ಕಾಲಾ ನೂರ್ ಮಸಾಲಾ 1 ಚಮಚ

ಮಾಡುವ ವಿಧಾನ : ಕಾಲಾ ನೂರ್ ಮಸಾಲಾ ಹಾಗೂ ನಿಂಬು ರಸ ಸೇರಿದಂತೆ ಇನ್ನುಳಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಕೊನೆಯಲ್ಲಿ ಸೋಡಾ ಸೇರಿಸಿ ಸವಿಯಲು ನೀಡಿ.

3. ಪಾನ್ ಬಹಾರ್

ಬೇಕಾಗುವ ಸಾಮಗ್ರಿಗಳು

ಮೊಸರು 150 ಮಿಲೀ

ಮಾರುಕಟ್ಟೆಯಲ್ಲಿ ಸಿಗುವ ಸಿಂಪಲ್ಸ್ ಸಿರಪ್ 60 ಮಿಲೀ

ಸ್ವೀಟ್ ಪಾನ್ ಗಿಲೋರಿ 2 (ಮಾರುಕಟ್ಟೆಯಲ್ಲಿ ಸಿಗುತ್ತದೆ)

ಮಾಡುವ ವಿಧಾನ : ಮೊಸರು, ಪಾನ್ ಗಿಲೋರಿ ಸ್ವೀಟ್, ಸಿಂಪಲ್ ಸಿರಪ್ ಹಾಗೂ ಪುದೀನಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಇದನ್ನು ಚಂದನೆಯ ಗಾಜಿನ ಲೋಟದಲ್ಲಿ ಹಾಕಿ ಸವಿಯಲು ನೀಡಿ.

4.ಗುಲ್ಮರ್ಗ್

ಬೇಕಾಗುವ ಸಾಮಗ್ರಿಗಳು : ಎಲ್ಲಾ ಹಣ್ಣುಗಳ ಮಿಶ್ರಣದ ಜ್ಯೂಸ್ 120 ಮಿಲೀ

ಹಾಲು 80 ಮಿಲೀ

ಸ್ಟ್ರಾಬೆರಿ ರಸ 60 ಮಿಲೀ

ಮಾಡುವ ವಿಧಾನ : ಎಲ್ಲಾ ಹಣ್ಣುಗಳ ಮಿಶ್ರಣದ ಜ್ಯೂಸ್, ಹಾಲು ಹಾಗೂ ಸ್ಟ್ರಾಬೆರಿ ರಸವನ್ನು ಮಿಕ್ಸ್ ಮಾಡಿ ಸವಿಯಲು ನೀಡಿ.

    ಹಂಚಿಕೊಳ್ಳಲು ಲೇಖನಗಳು