logo
ಕನ್ನಡ ಸುದ್ದಿ  /  ಜೀವನಶೈಲಿ  /  Chicken Curry: ಸಿಂಪಲ್ಲಾಗಿ ಒಂದು ಚಿಕನ್‌ ಕರಿ ರೆಸಿಪಿ...ಮಸಾಲೆ ರುಬ್ಬುವ ಅವಶ್ಯಕತೇನೆ ಇಲ್ಲ

Chicken Curry: ಸಿಂಪಲ್ಲಾಗಿ ಒಂದು ಚಿಕನ್‌ ಕರಿ ರೆಸಿಪಿ...ಮಸಾಲೆ ರುಬ್ಬುವ ಅವಶ್ಯಕತೇನೆ ಇಲ್ಲ

HT Kannada Desk HT Kannada

Aug 22, 2022 06:55 PM IST

google News

ಚಿಕನ್‌ ಕರಿ

    • ಮಸಾಲೆ ರುಬ್ಬದೆ ಕೂಡಾ ಸಿಂಪಲ್‌ ಆಗಿ ಕಡಿಮೆ ಸಮಯದಲ್ಲಿ ಚಿಕನ್‌ ಕರಿ ತಯಾರಿಸಬಹುದು. ಇದು ತಿನ್ನಲು ಕೂಡಾ ಬಹಳ ರುಚಿಯಾಗಿರುತ್ತದೆ.
ಚಿಕನ್‌ ಕರಿ
ಚಿಕನ್‌ ಕರಿ (PC: Freepik̤com)

ಚಿಕನ್‌ನಿಂದ ಬಹಳಷ್ಟು ರೀತಿಯ ವೆರೈಟಿಗಳನ್ನು ತಯಾರಿಸಬಹುದು. ಆದರೆ ಕೆಲವೊಮ್ಮೆ ಚಿಕನ್‌ ತಿನ್ನಬೇಕು ಎನಿಸಿದರೂ ಅದನ್ನು ತಯಾರಿಸಿಕೊಳ್ಳಲು ಸಮಯ ಇರುವುದಿಲ್ಲ. ಮನೆಯಲ್ಲಿ ಚಿಕನ್‌ ಇದ್ದರೂ ಅದಕ್ಕಾಗಿ ಮಸಾಲೆ ರುಬ್ಬಬೇಕು, ಗಂಟೆಗಟ್ಟಲೆ ಕುಕ್‌ ಆಗುವರೆಗೂ ಕಾಯುವ ತಾಳ್ಮೆ ಇರುವುದಿಲ್ಲ.

ಆದರೆ ನೀವು ಮಸಾಲೆ ರುಬ್ಬದೆ ಕೂಡಾ ಸಿಂಪಲ್‌ ಆಗಿ ಕಡಿಮೆ ಸಮಯದಲ್ಲಿ ಚಿಕನ್‌ ಕರಿ ತಯಾರಿಸಬಹುದು. ಇದು ತಿನ್ನಲು ಕೂಡಾ ಬಹಳ ರುಚಿಯಾಗಿರುತ್ತದೆ. ಬನ್ನಿ ಹೆಚ್ಚು ಮಸಾಲೆ ಇಲ್ಲದೆ ಹೇಗೆ ಚಿಕನ್‌ ಕರಿ ತಯಾರಿಸೋದು, ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ನೋಡೋಣ.

ಬೇಕಾಗುವ ಸಾಮಗ್ರಿಗಳು

ಚಿಕನ್‌ - 1/2 ಕಿಲೋ

ಅಚ್ಚ ಖಾರದ ಪುಡಿ - 2 ಟೇಬಲ್‌ ಸ್ಪೂನ್‌

ಅರಿಶಿನ - 1 ಟೀ ಸ್ಪೂನ್‌

ಚಿಕನ್‌ ಮಸಾಲೆ ಪುಡಿ - 1 ಟೇಬಲ್‌ ಸ್ಪೂನ್‌

ಪುದೀನಾ - ಒಂದು ಹಿಡಿ

ಹಸಿಮೆಣಸಿನಕಾಯಿ - 2

ಈರುಳ್ಳಿ - 3

ಟೊಮ್ಯಾಟೋ - 2

ಗಟ್ಟಿ ಮೊಸರು - 2 ಟೇಬಲ್‌ ಸ್ಪೂನ್‌

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 2 ಟೇಬಲ್‌ ಸ್ಪೂನ್‌

ಚೆಕ್ಕೆ, ಲವಂಗ, ಏಲಕ್ಕಿ - ತಲಾ 2

ಎಣ್ಣೆ - 1/2 ಕಪ್

ಕಸೂರಿ ಮೇಥಿ - 1 ಟೇಬಲ್‌ ಸ್ಪೂನ್‌

ಕೊತ್ತಂಬರಿ ಸೊಪ್ಪು - ಒಂದು ಹಿಡಿ

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಚಿಕನ್‌ ಚೆನ್ನಾಗಿ ತೊಳೆದು ಅದರೊಂದಿಗೆ ಖಾರದ ಪುಡಿ, ಅರಿಶಿನ, ಚಿಕನ್ ಮಸಾಲೆ ಪುಡಿ, ಪುದೀನಾ, ಗಟ್ಟಿ ಮೊಸರು, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ಎಲ್ಲಾ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ

ಚಿಕನ್‌ ಮಿಶ್ರಣವನ್ನು ಸುಮಾರು 10 ನಿಮಿಷ ಮ್ಯಾರಿನೇಶನ್ ಆಗಲು ಬಿಡಿ

‌ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಚೆಕ್ಕೆ, ಲವಂಗ, ಏಲಕ್ಕಿ ಸೇರಿಸಿ

ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕಂದು ಬಣ್ಣ ಆಗುವರೆಗೂ ಫ್ರೈ ಮಾಡಿ

ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕಸೂರಿ ಮೇಥಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಹುರಿಯಿರಿ

ನಂತರ ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಸೇರಿಸಿ ಫ್ರೈ ಮಾಡಿ

2 ನಿಮಿಷದ ನಂತರ ಮ್ಯಾರಿನೇಡ್‌ ಮಾಡಿದ ಚಿಕನ್‌ ಸೇರಿಸಿ ಮಿಕ್ಸ್‌ ಮಾಡಿ, ಹಸಿ ಮಸಾಲೆ ವಾಸನೆ ಹೋಗುವರೆಗೂ ಫ್ರೈ ಮಾಡಿ

ಒಂದೆರಡು ಗ್ಲಾಸ್‌ ನೀರು, ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ ಕುಕ್ಕರ್‌ ಮುಚ್ಚಳ ಮುಚ್ಚಿ ಒಂದು ಸೀಟಿ ಬರಿಸಿ ಬೇಯಿಸಿದರೆ ಚಿಕನ್‌ ಕರಿ ರೆಡಿ

ಈ ಚಿಕನ್‌ ಕರಿ ದೋಸೆ, ಅನ್ನ, ರಾಗಿಮುದ್ದೆ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ